RamGopalVarma: ನಾನು ಸಲಿಂಗಿ ಅಲ್ಲ... ಆದ್ರೂ ನಾಯಕನೊಬ್ಬನಿಗೆ ಕಿಸ್ ಮಾಡಬೇಕೆಂಬ ಆಸೆ ಇತ್ತು..ವರ್ಮಾ ಹೇಳಿದ್ದು ಯಾರ ಬಗ್ಗೆ..?
Jul 14, 2022 02:36 PM IST
ರಾಮ್ ಗೋಪಾಲ್ ವರ್ಮಾ
- ಹಾಗೆ ಮತ್ತೊಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ನಾನು ಸಲಿಂಗಿ ಅಲ್ಲ, ಆದರೂ ಬ್ರೂಸ್ ಲಿ ಗೆ ಮುತ್ತು ಕೊಡಬೇಕು ಎಂದುಕೊಂಡಿದ್ದ ಏಕೈಕ ನಾಯಕ ಬ್ರೂಸ್ ಲೀ, ಅಷ್ಟರ ಮಟ್ಟಿಗೆ ಅವರು ನನ್ನನ್ನು ಸೆಳೆದಿದ್ದರು ಎಂದು ರಾಮ್ಗೋಪಾಲ್ ವರ್ಮಾ ತಾವು ಬ್ರೂಸ್ ಲೀಯನ್ನು ಎಷ್ಟು ಇಷ್ಟಪಡುತ್ತಾರೆ ' ಎಂದು ಹೇಳಿಕೊಂಡಿದ್ದಾರೆ.
ಸಿನಿಪ್ರಿಯರಿಗೆ ರಾಮ್ ಗೋಪಾಲ್ ವರ್ಮಾ ಹೆಸರು ಬಹಳ ಚಿರಪರಿಚಿತ. ಅವರ ಸಿನಿಮಾಗಳಿಂದ ಅಲ್ಲದಿದ್ದರೂ, ವಿವಾದಾತ್ಮಕ ಮಾತುಗಳಿಂದ ಅವರು ಬಹಳ ಫೇಮಸ್ ಆಗಿದ್ದಾರೆ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ರಾಮ್ ಗೋಪಾಲ್ ವರ್ಮಾ ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಟ್ಟವರು. ಆದರೆ ಈಗ ಅವರು ಫುಲ್ ಉಲ್ಟಾ. ಈಗ ಅವರು ನಿರ್ದೇಶಿಸುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಎಕ್ಸ್ಪೋಸ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಅವರಿಗೆ ಒಬ್ಬ ನಟನಿಗೆ ಮುತ್ತು ಕೊಡಬೇಕು ಎಂಬ ಆಸೆ ಇತ್ತಂತೆ. ಈ ವಿಚಾರವನ್ನು ಅವರೇ ಸ್ವತ: ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾವೊಂದು ಜುಲೈ 15 ರಂದು ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಸಿನಿಮಾಗೆ ಕನ್ನಡದಲ್ಲಿ 'ಹುಡುಗಿ', ಇಂಗ್ಲೀಷ್ನಲ್ಲಿ 'ಲೇಡಿ' ಹಿಂದಿಯಲ್ಲಿ 'ಲಡ್ಕಿ' ಹಾಗೂ ತೆಲುಗಿನಲ್ಲಿ 'ಅಮ್ಮಾಯಿ' ಎಂದು ಹೆಸರಿಡಲಾಗಿದೆ. ಇದೊಂದು ವುಮನ್ ಓರಿಯಂಟಡ್ ಆ್ಯಕ್ಷನ್ ಸಿನಿಮಾವಂತೆ. ಇತ್ತೀಚೆಗೆ ಹೈದಾರಾಬಾದ್ನಲ್ಲಿ ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಅವರು ಒಂದು ಆಸಕ್ತಿಕರ ವಿಚಾರವನ್ನು ಹೇಳಿಕೊಂಡಿದ್ದಾರೆ.
''ಈ ಸಿನಿಮಾ ನನಗೆ ಬಹಳ ಎಮೋಷನಲಿ ಕನೆಕ್ಟ್ ಆಗಿದೆ. ನನಗೆ ಬ್ರೂಸ್ ಲಿ ಎಂದರೆ ಬಹಳ ಇಷ್ಟ. ಪ್ರಪಂಚದಲ್ಲಿ ಎಷ್ಟೊ ಮಂದಿ ಫೈಟರ್ಗಳಿದ್ದಾರೆ, ಎಷ್ಟೋ ಮಂದಿ ಮಾರ್ಷಲ್ ಆರ್ಟ್ ಕಲಿತಿದ್ದಾರೆ. ಆದರೆ ಆತನಷ್ಟು ನನಗೆ ಇನ್ಫ್ಲುಯೆನ್ಸ್ ಮಾಡಿದ್ದು ಬೇರೆ ಯಾರೂ ಇಲ್ಲ. ಬ್ರೂಸ್ ಲಿ ಅಭಿನಯದ ರಿಟನ್ ಆಫ್ ದಿ ಡ್ರ್ಯಾಗನ್ ಚಿತ್ರವನ್ನು ನಾನು ತೆಲುಗಿನಲ್ಲಿ ಶಿವ ಎಂದು ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಆದರೆ ಈ ಚಿತ್ರದಲ್ಲಿ ಮಾರ್ಷಲ್ ಆರ್ಟ್ ಇಲ್ಲ, ಆದರೂ ಬ್ರೂಸ್ ಲಿ ಆಟಿಟ್ಯೂಡ್ ನಾಯಕನಿಗೆ ಅಳವಡಿಸಲಾಗಿತ್ತು. ತುಂಬಾ ಜನಕ್ಕೆ ಇದು ತಿಳಿದಿಲ್ಲ. ಅದಾದ ನಂತರ ಬಹುತೇಕ ಸಿನಿಮಾಗಳಲ್ಲಿ ನಾನು ಬ್ರೂಸ್ ಲಿ ಫೈಟ್ ಅಳವಡಿಸಿಕೊಂಡಿದ್ದೇನೆ. ಆದರೆ ಮಾರ್ಷಲ್ ಆರ್ಟ್ ಸಿನಿಮಾ ಮಾಡಬೇಕೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಕೊನೆಗೂ ಅದು ಸಾಧ್ಯವಾಯ್ತು.''
''ನನ್ನ ಸಿನಿಮಾ ಇಗ ಚೈನಾದಲ್ಲಿ ಕೂಡಾ ಬಿಡುಗಡೆಯಾಗುತ್ತಿದೆ. ಇದು ನನಗೆ ಬಹಳ ಎಮೊಷನಲ್ ಆದಂತ ವಿಚಾರ. ಹಾಗೆ ಮತ್ತೊಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ನಾನು ಸಲಿಂಗಿ ಅಲ್ಲ, ಆದರೂ ಬ್ರೂಸ್ ಲಿ ಗೆ ಮುತ್ತು ಕೊಡಬೇಕು ಎಂದುಕೊಂಡಿದ್ದ ಏಕೈಕ ನಾಯಕ ಬ್ರೂಸ್ ಲೀ, ಅಷ್ಟರ ಮಟ್ಟಿಗೆ ಅವರು ನನ್ನನ್ನು ಸೆಳೆದಿದ್ದರು ಎಂದು ರಾಮ್ಗೋಪಾಲ್ ವರ್ಮಾ ತಾವು ಬ್ರೂಸ್ ಲೀಯನ್ನು ಎಷ್ಟು ಇಷ್ಟಪಡುತ್ತಾರೆ ' ಎಂದು ಹೇಳಿಕೊಂಡಿದ್ದಾರೆ.
ಚೀನಾದಲ್ಲಿ ದಾಖಲೆ ಬರೆಯುತ್ತಿರುವ 'ಲಡ್ಕಿ'
'ಲಡ್ಕಿ-ಡ್ರಾಗನ್ ಗರ್ಲ್' ಹೆಸರಿನ ಈ ಸಿನಿಮಾ ಜುಲೈ 15ರಂದು ಭಾರತ ಹಾಗೂ ವಿದೇಶಗಳಲ್ಲಿ ಕೂಡಾ ತೆರೆಗೆ ಬರುತ್ತಿದೆ. ವಿಶೇಷ ಏನೆಂದರೆ, ಚೀನಾದಲ್ಲಿ ಅಲ್ಲಿನ ಚೀನಿ ಭಾಷೆಯಲ್ಲಿಯೇ ಬರೋಬ್ಬರಿ 40 ಸಾವಿರ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈವರೆಗೂ ಭಾರತದ ಯಾವ ಸಿನಿಮಾ ಕೂಡಾ ಇಷ್ಟು ದೊಡ್ಡ ಮಟ್ಟದ ಸ್ಕ್ರೀನ್ಗಳನ್ನು ಚೀನಾದಲ್ಲಿ ಗಿಟ್ಟಿಸಿಕೊಂಡಿರಲಿಲ್ಲ. ಇದೀಗ ಆ ಎಲ್ಲ ದಾಖಲೆಗಳನ್ನು 'ಲೇಡಿ' ಸಿನಿಮಾ ಮುರಿದಿದೆ.