ಕನಸಿನ ಮನೆಗೆ ಕಾಲಿಡಲಿದ್ದಾರೆ ರಣಬೀರ್, ಆಲಿಯಾ; ದೀಪಾವಳಿಗೆ ಹೊಸ ಮನೆ ಸೇರುತ್ತಾ ಕಪೂರ್ ಕುಟುಂಬ
Oct 21, 2024 10:16 PM IST
ಕನಸಿನ ಮನೆಗೆ ಕಾಲಿಡಲಿದ್ದಾರೆ ರಣಬೀರ್, ಆಲಿಯಾ
- ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಹೊಸ ಮನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಶಿಫ್ಟ್ ಆಗಲಿದ್ದಾರೆ. ಬಂಗಲೆಯ ವಿನ್ಯಾಸವು ಅತ್ಯಾಧುನಿಕ ಶೈಲಿಯಲ್ಲಿದೆ. ನೀತು ಕಪೂರ್ ಸಹ ಆಸ್ತಿಯ ಸಹ-ಮಾಲೀಕತ್ವ ಹೊಂದಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೊಸ ಮನೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಮನೆ ತುಂಬಾ ಸುಂದರವಾಗಿ ಮೂಡಿ ಬಂದಿದೆ ಎಂದು ಛಾಯಾಗ್ರಾಹಕ ವೈರಲ್ ಭಯಾನಿ ಹಂಚಿಕೊಂಡ ವಿಡಿಯೋ ನೋಡಿದರೆ ತಿಳಿಯುತ್ತದೆ. ಈ ಭವ್ಯವಾದ ಬಂಗಲೆಗೆ ಇದೇ ದೀಪಾವಳಿಯಲ್ಲಿ ರಣಬೀರ್ ಕುಟುಂಬ ಶಿಫ್ಟ್ ಆಗುವ ಸಾಧ್ಯತೆ ಕೂಡ ಇದೆ. ವಿಡಿಯೋದಲ್ಲಿ ಬಹುತೇಕ ಪೂರ್ಣಗೊಂಡ ಬಹುಮಹಡಿ ನಿವಾಸ ಕಾಣುತ್ತಿದ್ದು ಫೈನಲ್ ಟಚ್ ಮಾತ್ರ ಬಾಕಿ ಉಳಿದಿವೆ. 2024 ರ ದೀಪಾವಳಿಯ ವೇಳೆಗೆ ದಂಪತಿ ಸ್ಥಳಾಂತರಗೊಳ್ಳಬಹುದು ಎಂದು ಎಲ್ಲರೂ ಊಹೆ ಮಾಡುತ್ತಿದ್ದಾರೆ. ಇನ್ನು ಪುತ್ರಿ ರಾಹಾಗೂ ಈ ಹೊಸ ಮನೆಯೊಂದು ಬಾಲ್ಯದ ನೆನಪಿನ ಉಡುಗೊರೆಯಾಗಲಿದೆ.
ರಣಬೀರ್ ಅವರ ದಿವಂಗತ ಅಜ್ಜಿ ಕೃಷ್ಣ ರಾಜ್ ಕಪೂರ್ ಅವರ ಹೆಸರಿನ ಆರು ಅಂತಸ್ತಿನ ಕಟ್ಟಡವು ಕಪೂರ್ ಕುಟುಂಬಕ್ಕೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ. ನೀತು ಕಪೂರ್ ಜೊತೆಗೆ ರಣಬೀರ್ ಮತ್ತು ಆಲಿಯಾ ಇಬ್ಬರೂ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಸೈಟ್‌ಗೆ ಭೇಟಿ ನೀಡುತ್ತಿದ್ದರಂತೆ, ಪ್ರತಿಯೊಂದು ವಿವರವೂ ಅವರು ಹೇಳಿದಂತೆ ಆಗಿದೆ ಎಂಬ ಸುದ್ದಿ ಇದೆ.
ಬಂಗಲೆಯ ವಿನ್ಯಾಸವು ಅತ್ಯಾಧುನಿಕ ಶೈಲಿಯಲ್ಲಿದ್ದು ಬೂದು ಮತ್ತು ಬಿಳಿ ಬಣ್ಣದ ಪೇಟಿಂಗ್ ಹೊಂದಿದೆ. ಬೆಳಕು ಮತ್ತು ಗಾಳಿಗಾಗಿ ಸಾಕಷ್ಟು ಜಾಗ ಬಿಡಲಾಗಿದೆ. ಸೊಬಗು ಮತ್ತು ಸುರಕ್ಷತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಈ ಬಂಗಲೆಯನ್ನು ನಿರ್ಮಾಣ ಮಾಡಲಾಗಿದೆ. ದಿವಂಗತ ಅಜ್ಜಿ ಕೃಷ್ಣ ರಾಜ್ ಕಪೂರ್ ಅವರ ಗೌರವಾರ್ಥವಾಗಿ ಕೃಷ್ಣ ರಾಜ್ ಬಂಗಲೆಗೆ ಹೆಸರಿಡಲಾಗಿದೆ. ಬಂಗಲೆಯನ್ನು 250 ಕೋಟಿ ರೂಗಳಷ್ಟು ಹಣ ವ್ಯಯಿಸಿ ನಿರ್ಮಿಸಲಾಗಿದೆ. ನೀತು ಕಪೂರ್ ಸಹ ಆಸ್ತಿಯ ಸಹ-ಮಾಲೀಕತ್ವ ಹೊಂದಿದ್ದಾರೆ.
ವೃತ್ತಿಪರವಾಗಿ, ಆಲಿಯಾ ಮತ್ತು ರಣಬೀರ್ ಇಬ್ಬರೂ ಅಭಿವೃದ್ಧಿ ಹೊಂದುತ್ತಿದ್ದಾರೆ. ನಿತೇಶ್ ತಿವಾರಿಯವರ ಮಹತ್ವಾಕಾಂಕ್ಷೆಯ ' ರಾಮಾಯಣ'ದಲ್ಲಿ ರಣಬೀರ್ ಭಗವಾನ್ ರಾಮನ ಪಾತ್ರ ಮಾಡುತ್ತಿದ್ದಾರೆ. ಆಲಿಯಾ ಕೂಡ ಮದುವೆ ಆದ ನಂತರವೂ ಸಿನಿಮಾಗಳಲ್ಲಿ ನಟಿಸಿದ್ದಾರೆ.