Rashmika Mandanna: ಒಂದೇ ಮನೆಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ವಾಸ... ಶೀಘ್ರದಲ್ಲೇ ಗುಡ್ ನ್ಯೂಸ್ ಎಂದವರಿಗೆ ರಶ್ಮಿಕಾ ಹೇಳಿದ್ದಿಷ್ಟು
Jul 14, 2023 08:33 AM IST
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
- ವಿಜಯ್ ದೇವರಕೊಂಡ ಇಷ್ಟಪಟ್ಟು ಧರಿಸುತ್ತಿದ್ದ ರಿಂಗ್ ಈಗ ರಶ್ಮಿಕಾ ಕೈ ಬೆರಳಿನಲ್ಲಿದೆ. ಇಬ್ಬರೂ ಒಂದೇ ಮನೆಯಲ್ಲಿ ಒಂದೇ ರೂಮ್‌ನಲ್ಲಿ ವಾಸವಾಗಿದ್ದಾರೆ. ಖಂಡಿತ ಶೀಘ್ರದಲ್ಲೇ ನಾವೊಂದು ಒಳ್ಳೆ ಸುದ್ದಿ ಕೇಳಲಿದ್ದೇವೆ.
'ಗೀತ ಗೋವಿಂದ' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು. ಒಂದೆಡೆ ಸಿನಿಮಾ ಹಿಟ್ ಆದ್ರೆ ಮತ್ತೊಂದೆಡೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ ಶುರುವಾಗಿದೆ ಅನ್ನೋ ಸುದ್ದಿ ಹರಡಿತು. ಇದೇ ಸಮಯಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಬ್ರೇಕಪ್ ಕೂಡಾ ಆಗಿ ರಶ್ಮಿಕಾ ಪಕ್ಕಾ ಮುಂದಿನ ದಿನಗಳಲ್ಲಿ ವಿಜಯ್ ಕೈ ಹಿಡಿಯುತ್ತಾರೆ ಎಂಬ ಮಾತುಗಳು ಶುರುವಾಯ್ತು.
ರಶ್ಮಿಕಾ ಬಾಲಿವುಡ್‌ಗೆ ಹೋದ ನಂತರ, ವಿಜಯ್ ದೇವರಕೊಂಡ ಅವರನ್ನು ಬಿಟ್ಟಿದ್ದಾರೆ ಎನ್ನಲಾದರೂ ನಂತರ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ ಹೋಗಿದ್ದಾರೆ ಎನ್ನಲಾಗಿತ್ತು. ಈ ಮಾತಿಗೆ ಪೂರಕ ಎನ್ನುವಂತೆ ಇಬ್ಬರು ಒಂದೇ ಲೊಕೇಶನ್‌ನಲ್ಲಿ ಬೇರೆ ಬೇರೆ ಫೋಟೋ ತೆಗೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಶ್ಮಿಕಾ ಲೈವ್ ಮಾಡುವಾಗ ಹಿನ್ನೆಲೆಯಲ್ಲಿ ವಿಜಯ್ ದೇವರಕೊಂಡ ಯಾರೊಂದಿಗೋ ಫೋನಿನಲ್ಲಿ ಮಾತನಾಡಿದ್ದು ಕೇಳಿ ನೆಟಿಜನ್ಸ್ ಇನ್ವೆಷ್ಟಿಗೇಷನ್ ಶುರು ಮಾಡಿದ್ದರು. ಕೆಲವು ದಿನಗಳ ಹಿಂದೆ ಮತ್ತೆ ಈ ಜೋಡಿ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ, ಇವರಿಬ್ಬರೂ ಜೊತೆಯಲ್ಲಿ ಸುತ್ತಾಡುವುದು ಮಾತ್ರವಲ್ಲದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು South Digital Media ಹೆಸರಿನ ಟ್ವಿಟ್ಟರ್ ಪೇಜ್ ಅನುಮಾನಪಟ್ಟಿದ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.
''ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಎಂಬುದು ಸಾಬೀತಾಗಿದೆ. ನಿಜಕ್ಕೂ ಇದು ಸೀರಿಯಸ್ ವಿಚಾರ. ವಿಜಯ್ ದೇವರಕೊಂಡ ಇಷ್ಟಪಟ್ಟು ಧರಿಸುತ್ತಿದ್ದ ರಿಂಗ್ ಈಗ ರಶ್ಮಿಕಾ ಕೈ ಬೆರಳಿನಲ್ಲಿದೆ. ಇಬ್ಬರೂ ಒಂದೇ ಮನೆಯಲ್ಲಿ ಒಂದೇ ರೂಮ್‌ನಲ್ಲಿ ವಾಸವಾಗಿದ್ದಾರೆ. ಖಂಡಿತ ಶೀಘ್ರದಲ್ಲೇ ನಾವೊಂದು ಒಳ್ಳೆ ಸುದ್ದಿ ಕೇಳಲಿದ್ದೇವೆ'' ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರಿಗೂ ಟ್ಯಾಗ್ ಮಾಡಲಾಗಿದೆೆ.
ಸೌತ್ ಡಿಜಿಟಲ್ ಮೀಡಿಯಾ ಹಂಚಿಕೊಂಡ ಈ ಪೋಸ್ಟ್‌ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ''ಅಯ್ಯೋ ಬಾಬು ಓವರ್ ಥಿಂಕ್ ಮಾಡಬೇಡಪ್ಪಾ'' ಎಂದು ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ರಿಪ್ಲೇಗೆ ನೆಟಿಜನ್ಸ್ ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮಬ್ಬರದ್ದೂ ಗೊತ್ತಿರುವ ವಿಚಾರ. ನಿಜ ಒಪ್ಪಿಕೊಳ್ಳಿ. ಆಗ ಮಾಲ್ಡೀವ್ಸ್‌ನಲ್ಲಿ ನೀವು ಪ್ರತ್ಯೇಕವಾಗಿ ಹಂಚಿಕೊಂಡ ಫೋಟೋಗಳು ಹೊಂದಾಣಿಕೆ ಆಗುತ್ತಿತ್ತು. ಈಗ ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಸೀಲಿಂಗ್ ಮ್ಯಾಚ್ ಆಗುತ್ತಿದೆ. ನೀವಿಬ್ಬರೂ ಒಂದೇ ಮನೆಯಲ್ಲಿರುವುದು ನಿಜ ಎಂದಿದಾರೆ.
ಇನ್ನೂ ಕೆಲವರು ಕಾಮೆಂಟ್ ಮಾಡಿ ಅವರಿಬ್ಬರೂ ಗುಡ್ ಫ್ರೆಂಡ್ಸ್ ಅಷ್ಟೇ. ಜೊತೆಯಾಗಿ ಸುತ್ತಾಡಿದ ಮಾತ್ರಕ್ಕೆ ಲವ್ ಆಗುವುದಿಲ್ಲ. ಅವರಿಬ್ಬರೂ ಒಂದೇ ಮನೆಯಲ್ಲಿದ್ದಾರೆ ಎಂದು ನಿಮಗೆ ಯಾರು ಹೇಳಿದ್ದರು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ-ವಿಜಯ್‌ದೇವರಕೊಂಡ ವಿಚಾರ ಹಲವು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಇದಕ್ಕೆ ಯಾವಾಗ ಫುಲ್ ಸ್ಟಾಪ್ ಬೀಳಲಿದೆಯೂ ಗೊತ್ತಿಲ್ಲ.