logo
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಅಭಿಮಾನಿಗಾಗಿ ಕನ್ನಡ ಭಾಷೆ ಮಾತನಾಡಿದ ರಶ್ಮಿಕಾ ಮಂದಣ್ಣ, ಅದರಲ್ಲೂ ತೆಲುಗು ಮಿಶ್ರಣ ಇದೆ ಎಂದ ನೆಟಿಜನ್ಸ್‌; ವಿಡಿಯೋ ನೋಡಿ

Rashmika Mandanna: ಅಭಿಮಾನಿಗಾಗಿ ಕನ್ನಡ ಭಾಷೆ ಮಾತನಾಡಿದ ರಶ್ಮಿಕಾ ಮಂದಣ್ಣ, ಅದರಲ್ಲೂ ತೆಲುಗು ಮಿಶ್ರಣ ಇದೆ ಎಂದ ನೆಟಿಜನ್ಸ್‌; ವಿಡಿಯೋ ನೋಡಿ

Rakshitha Sowmya HT Kannada

Jul 10, 2023 03:42 PM IST

google News

ರಶ್ಮಿಕಾ ಮಂದಣ್ಣ

  • ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಅದರೆ ಅದರಲ್ಲೂ ತೆಲುಗು ಮಿಕ್ಸ್‌ ಇದೆ ಎಂದು ನೆಟಿಜನ್ಸ್‌ ರಶ್ಮಿಕಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೇ ಸೆಟಲ್‌ ಆಗಿದ್ದಾರೆ. ಪೊಗರು ಸಿನಿಮಾ ನಂತರ ರಶ್ಮಿಕಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ, ತೆಲುಗು ಹಾಗೂ ಹಿಂದಿ ಸಿನಿಮಾಗಳ ಕಡೆಗೆ ಹೆಚ್ಚು ಫೋಕಸ್‌ ಮಾಡುತ್ತಿದ್ದಾರೆ. ಕನ್ನಡ ಮಾತನಾಡದ ವಿಚಾರಕ್ಕೆ ಆಗ್ಗಾಗ್ಗೆ ಟ್ರೋಲ್‌ ಆಗುವ ರಶ್ಮಿಕಾ ಮಂದಣ್ಣ, ಈಗ ಕನ್ನಡದಲ್ಲೇ ಮಾತನಾಡಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್‌, ಟಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು. ಅಂಜನಿಪುತ್ರ, ಚಮಕ್‌ ಸಿನಿಮಾ ನಂತರ 2018ರಲ್ಲಿ ಚಲೋ ಸಿನಿಮಾ ಮೂಲಕ ತೆಲುಗಿಗೆ ಹೋದ ರಶ್ಮಿಕಾ ಲಕ್‌ ಸಂಪೂರ್ಣ ಬದಲಾಯ್ತು. ಅಲ್ಲಿಂದ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಳಿಸುತ್ತಿದ್ದಂತೆ ಅವರ ಫ್ಯಾನ್‌ ಫಾಲೋಯಿಂಗ್ ಕೂಡಾ ಹೆಚ್ಚಿತು, ಕ್ರಮೇಣ ಉತ್ತರದಲ್ಲಿ ಕೂಡ್ ರಶ್ಮಿಕಾ ಮಂದಣ್ಣ ಕ್ರೇಜ್‌ ಶುರು ಆಯ್ತು. ಆಲ್ಬ ಹಾಡೊಂದರ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಿಷನ್‌ ಮಜ್ನು ಸಿನಿಮಾದೊಂದಿಗೆ ಅಲ್ಲಿ ಕೂಡಾ ಕರಿಯರ್‌ ಆರಂಭಿಸಿದರು.

ಸದ್ಯಕ್ಕೆ ರಶ್ಮಿಕಾ ಕೈಯ್ಯಲ್ಲಿ ಒಂದು ಹಿಂದಿ ಎರಡು ತೆಲುಗು ಸಿನಿಮಾಗಳಿವೆ. ಜೊತೆಗೆ ಅವರು ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇಷ್ಟೆಲ್ಲಾ ಹೆಸರು ಮಾಡಿರುವ ರಶ್ಮಿಕಾ ಅನೇಕ ಬಾರಿ ಕನ್ನಡ ಮಾತನಾಡದ ವಿಚಾರಕ್ಕೆ ಟ್ರೋಲ್‌ ಆಗಿದ್ದಾರೆ. ಜೊತೆಗೆ ತಮಗೆ ಬದುಕು ಕೊಟ್ಟ ಕಿರಿಕ್‌ ಪಾರ್ಟಿ ಸಿನಿಮಾ ಹೆಸರು ಹೇಳಲು ಹಿಂಜರಿದು ಆ ವಿಚಾರಕ್ಕೂ ಸುದ್ದಿಯಾಗಿದ್ದರು. ಇದೀಗ ಅವರು ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

ತೆಲುಗು ಮಿಕ್ಸ್‌ ಕನ್ನಡ ಎಂದ ನೆಟಿಜನ್ಸ್

ಇತ್ತೀಚೆಗೆ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್‌ ಜೊತೆ ಚಿಟ್‌ ಚಾಟ್‌ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆಯ್ದು ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸಿದ್ದಾರೆ. ನಿಮ್ಮ ಹ್ಯಾಂಡ್‌ರೈಟಿಂಗ್‌ ಹೇಗಿದೆ ಎಂದು ಕೇಳಿದ್ದಕ್ಕೆ ರಶ್ಮಿಕಾ ಇಂಗ್ಲೀಷ್‌ನಲ್ಲಿ ಒಂದು ಲೈನ್‌ ಬರೆದು ತೋರಿಸಿದ್ದಾರೆ. ನೀವು ಇದುವರೆಗೂ ಓದಿರುವ ಪುಸ್ತಕದಲ್ಲಿ ಬೆಸ್ಟ್‌ ಯಾವುದು ಎಂದು ಅಭಿಮಾನಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ತಮಿಳಿನಲ್ಲಿ ಮಾತನಾಡಿ ಎಂಬ ಬೇಡಿಕೆಗೆ ಸ್ಪಂದಿಸಿದ್ದಾರೆ. ಅದೇ ರೀತಿ ಅಭಿಮಾನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಲು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ, ಎಲ್ರಿಗೂ ಹಾಯ್‌, ಹೇಗಿದ್ದೀರ? ಚೆನ್ನಾಗಿದ್ದೀರ, ಯಾವಾಗಲೂ ನವ್ತಾ ಇರಿ, ನಾನು ನಿಮ್ಮ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ, ಯಾವಾಗಲೂ ಯೋಚನೆ ಮಾಡ್ತಾ ಇರ್ತೀನಿ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ಕಳಿಸುತ್ತಿದ್ದೇನೆ ಎಂದು ರಶ್ಮಿಕಾ ವಿಡಿಯೋದಲ್ಲಿ ಮಾತನಾಡಿದ್ದಾರೆ.

ರಶ್ಮಿಕಾ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕೆ ಕನ್ನಡದಲ್ಲಿ ಮಾತನಾಡಿದ್ದು ಕೆಲವರಿಗೆ ಖುಷಿ ಆದರೆ, ಇನ್ನೂ ಕೆಲವರು ಅದು ನಗುತ್ತಾ ಇರಿ, ನವ್ತಾ ಇರಿ ಅನ್ನೋದು ತೆಲುಗು, ನೀವು ಕನ್ನಡ ಕಲಿಯುವುದು ಸಾಕಷ್ಟಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ