logo
ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾಸ್ವಾಮಿ ಪತ್ನಿಗೆ ಜನಿಸಿದ ಗಂಡು ಮಗು; ಇಷ್ಟು ದಿನ ಮಸಣದಂತಿದ್ದ ಮನೆಯಲ್ಲಿ ಇದೀಗ ಸಂತಸದ ವಾತಾವರಣ

ರೇಣುಕಾಸ್ವಾಮಿ ಪತ್ನಿಗೆ ಜನಿಸಿದ ಗಂಡು ಮಗು; ಇಷ್ಟು ದಿನ ಮಸಣದಂತಿದ್ದ ಮನೆಯಲ್ಲಿ ಇದೀಗ ಸಂತಸದ ವಾತಾವರಣ

Suma Gaonkar HT Kannada

Oct 16, 2024 11:04 AM IST

google News

ರೇಣುಕಾಸ್ವಾಮಿ ಮದುವೆಯ ಸಂದರ್ಭ

    • ರೇಣುಕಾಸ್ವಾಮಿ ಪತ್ನಿ ಸಹನಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧಿಯಾಗಿರುವಾಗಲೇ ಇತ್ತ ಮೃತ ರೇಣುಕಾಸ್ವಾಮಿ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಇದು ರೇಣುಕಾಸ್ವಾಮಿ ಮನೆಯವರ ಸಂತಸಕ್ಕೆ ಕಾರಣವಾಗಿದೆ. 
ರೇಣುಕಾಸ್ವಾಮಿ ಮದುವೆಯ ಸಂದರ್ಭ
ರೇಣುಕಾಸ್ವಾಮಿ ಮದುವೆಯ ಸಂದರ್ಭ

ಇಂದು ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆಯಾಗುವಾಗಲೇ ಅವರ ಪತ್ನಿ ಗರ್ಭಿಣಿಯಾಗಿದ್ದರು. ಇದೀಗ ಅವರಿಗೆ ಮಗು ಹುಟ್ಟಿದೆ. ಮನೆಯಲ್ಲಿ ಮಗ ಇಲ್ಲ ಎಂಬ ಬೇಸರ ತಂದೆ, ತಾಯಿಯರಿಗಿದ್ದರೂ ಇದೀಗ ಮೊಮ್ಮಗನನ್ನು ನೋಡಿ ಸಂತಸದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದು ಈಗಾಗಲೇ 4 ತಿಂಗಳು ಕಳೆದಿದೆ. ಇಂದು ಅಕ್ಟೋಬರ್‌ 16ರ ಬೆಳಿಗ್ಗೆ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೆಸಿಆರ್ ಬಡಾವಣೆಯ ಕೀರ್ತಿ ಆಸ್ಪತ್ರೆಯಲ್ಲಿ ಇವರಿಗೆ ಮಗುವಾಗಿದೆ.

ಮಗನನ್ನು ಕಳೆದುಕೊಂಡ ಮೃತ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಇಷ್ಟು ದಿನ ಬರಿ ನೋವೇ ಕಾದಿತ್ತು. ಆದರೆ ಈಗ ಮನೆಗೆ ಮತ್ತೊಬ್ಬ ಮಗ ಬಂದಿದ್ದಾನೆ ಎಂಬ ಸಂತಸ ಇದೆ. ಕೊಲೆ ನಡೆದು ತಿಂಗಳುಗಳೇ ಕಳೆದರು ಮನೆಯವರಿಗೆ ಮಗನ ಸಾವು ಕಾಡುತ್ತಿತ್ತು, ಹೀಗಿರುವಾಗ ಇದೀಗ ಮೊಮ್ಮಗ ಬಂದ ಕಾರಣ ಸಂತಸದ ವಾತಾವರಣ ಮೂಡಿದೆ.

ಎರಡು ದಿನಗಳ ಹಿಂದೆಯಷ್ಟೇ ರೇಣುಕಾಸ್ವಾಮಿ ತಂದೆ ಕಾಶಿನಾಥ್‌ ಅವರು ತುಂಬಾ ದುಃಖದಲ್ಲಿ ಮಾತನಾಡಿದ್ದರು. ಕೋರ್ಟ್‌ ನೀಡಿದ ತೀರ್ಪಿಗೆ ಸ್ವಾಗತ ಎಂದು ತಿಳಿಸಿದ್ದರು. ಅವರು ಮಾತನಾಡುವಾಗ ಅವರ ಧ್ವನಿಯಲ್ಲಿ ನೋವು ಎದ್ದು ಕಾಣುತ್ತಿತ್ತು.

ಕೊಲೆ ಆರೋಪ ಹೊತ್ತಿರುವ ದರ್ಶನ್‌ ಇನ್ನೂ ಜೈಲಿನಲ್ಲೇ ಇದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್‌ ಇನ್ನು ಮುಂದಿನ ದಿನಗಳಲ್ಲೂ ಅಲ್ಲೇ ಇರಬೇಕಾದ ಪ್ರಸಂಗ ಎದುರಾಗಿದೆ. ಯಾಕೆಂದರೆ ದರ್ಶನ್‌ಗೆ ಸಹ ಬೇಲ್ ಸಿಕ್ಕಿಲ್ಲ. ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ.

ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ. ಮತ್ತೆ ದರ್ಶನ್‌ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ರವಿಶಂಕರ್ ಹಾಗೂ ದೀಪಕ್ ಈ ಇಬ್ಬರಿಗೆ ಈಗ ಜಾಮೀನು ಸಿಕ್ಕಿದೆ. 57ನೇ ಸಿಟಿ ಸಿವಿಲ್ ಕೋರ್ಟ್‌ನಿಂದ ಈ ಆದೇಶ ಹೊರಬಂದಿದೆ. ಎಂಟನೇ ಆರೋಪಿ ರವಿಶಂಕರ್‌ ಅಲಿಯಾಸ್‌ ರವಿಗೆ ಜಾಮೀನು ಮಂಜೂರಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತು ಕಳೆದ ನೂರಿಪ್ಪತ್ತು ದಿನಗಳಿಂದ ಜೈಲಿನಲ್ಲಿದ್ದ ಎ-2 ಚಿತ್ರ ನಟ ದರ್ಶನ್ ಮತ್ತು ಎ-1 ಆಗಿದ್ದ ಪವಿತ್ರಾ ಗೌಡಗೆ ಜಾಮೀನು ನಿರಾಕರಿಸಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದೀಪಕ್ ಮತ್ತು ರವಿಶಂಕರ್ ಗೆ ಜಾಮೀನು ನೀಡಲಾಗಿದೆ. ಇತರ ಆರೋಪಿಗಳಾದ ಲಕ್ಷ್ಮಣ್, ನಾಗರಾಜು ಅವರಿಗೂ ಜಾಮೀನು ನಿರಾಕರಿಸಲಾಗಿದೆ. ಸದ್ಯ ದರ್ಶನ್ ಬಾರಿ ಜೈಲು ಮತ್ತು ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ