Mia Malkova : ನೀಲಿ ಚಿತ್ರತಾರೆ ಮಿಯಾ ಮಲ್ಕೋವಾ ನಟನೆಯ ಚಿತ್ರವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ ರಾಮ್‌ಗೋಪಾಲ್ ವರ್ಮಾ!
Sep 04, 2022 04:52 PM IST
ನೀಲಿ ಚಿತ್ರತಾರೆ ಮಿಯಾ ಮಲ್ಕೋವಾ ನಟನೆಯ ಚಿತ್ರವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ ರಾಮ್‌ಗೋಪಾಲ್ ವರ್ಮಾ!
- ಈ ಹಿಂದೆ ಆರ್‌ಜಿವಿ ನಿರ್ದೇಶನ ಮಾಡಿದ್ದ ಕ್ಲೈಮ್ಯಾಕ್ಸ್ ಸಿನಿಮಾವನ್ನು ಇದೀಗ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಪೋರ್ನ್ ಸ್ಟಾರ್ ಮಿಯಾ ಮಲ್ಕೋವಾ ನಟಿಸಿದ್ದಾರೆ.
ಸಿನಿಮಾ ನಿರ್ಮಾಣದ ಫ್ಯಾಕ್ಟರಿ ಎಂದೇ ಕರೆಸಿಕೊಳ್ಳುವ ವಿವಾದಾತ್ಮಕ ನಿರ್ದೇಶಕ ಎಂಬ ಹಣೆಪಟ್ಟಿಯನ್ನೂ ಹೊಂದಿರುವ ರಾಮ್‌ಗೋಪಾಲ್ ವರ್ಮಾ, ಸದಾ ಟ್ರೆಂಡಿಂಗ್‌ನಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರದ ಬಗ್ಗೆ ಅವರು ಕಮೆಂಟ್ ಮಾಡುತ್ತಲೇ ಇರುತ್ತಾರೆ. ಅದು ಬಾಲಿವುಡೇ ಆಗಿರಲಿ, ಕನ್ನಡ, ತೆಲುಗು, ತಮಿಳು ಚಿತ್ರವೇ ಆಗಿರಲಿ.
ಇದೀಗ ವಿಷ್ಯಕ್ಕೆ ಬರುವುದಾದರೆ ರಾಮ್‌ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದ ಸಿನಿಮಾ "ಕ್ಲೈಮ್ಯಾಕ್ಸ್" ಇದೀಗ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಈ ಹಿಂದೆ RGVWorld.in ವೆಬ್‌ಸೈಟ್‌ನಲ್ಲಿ ಪೇ ಫಾರ್ ವ್ಯೂವ್ ಆಧಾರದ ಮೇಲೆ ಸ್ಟ್ರೀಮಿಂಗ್ ಆಗಿತ್ತು. ಈ ಚಿತ್ರದಲ್ಲಿ ಇಂಗ್ಲಿಷ್‌ನ ಪೋರ್ನ್ ಸ್ಟಾರ್ ಮಿಯಾ ಮಲ್ಕೋವಾ ಅವರನ್ನು ಕರೆತಂದಿದ್ದರು. 2020ರ ಜೂನ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿತ್ತು. ಇದೀಗ ಇದೇ ಸಿನಿಮಾವನ್ನು ರಾಮ್‌ಗೋಪಾಲ್ ವರ್ಮಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ. ಈ ವಿಚಾರವನ್ನು ಸ್ವತಃ ಆರ್‌ಜಿವಿ ಹೇಳಿಕೊಂಡಿದ್ದಾರೆ.
ಯಾರು ಈ ಮಿಯಾ ಮಲ್ಕೋವಾ..
ನೀಲಿ ಸಿನಿಮಾಗಳ ಜಗತ್ತಿನಲ್ಲಿ ಮಿಯಾ ಮಲ್ಕೋವಾ ಅವರದ್ದು ದೊಡ್ಡ ಹೆಸರು. ಕ್ಲೈಮ್ಯಾಕ್ಸ್ ಸಿನಿಮಾಕ್ಕೂ ಮೊದಲು ರಾಮ್ ಗೋಪಾಲ್ ವರ್ಮಾ ಜತೆ ಸಾಕ್ಷ್ಯಚಿತ್ರವೊಂದರಲ್ಲಿಯೂ ಮಿಯಾ ನಟಿಸಿದ್ದರು. 'God, S*x and Truth' ಶೀರ್ಷಿಕೆಯ ಆ ಸಾಕ್ಷ್ಯ ಚಿತ್ರದ ಪೋಸ್ಟರ್‌ಗಳೂ ವೈರಲ್ ಆಗಿದ್ದವು. ಅದಾದ ಮೇಲೆ ಇದೇ ನಿರ್ದೇಶಕ ಮತ್ತು ನಟಿಯ ಜೋಡಿ :ಕ್ಲೈಮ್ಯಾಕ್ಸ್"ನಲ್ಲಿ ಒಂದಾಗಿತ್ತು. ಇನ್ನು ಈ ಮೂಲಕ ಸನ್ನಿ ಲಿಯೋನ್ ಬಳಿಕ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟ ಎರಡನೇ ನೀಲಿತಾರೆ ಎಂಬ ಖ್ಯಾತಿಗೆ ಮಿಯಾ ಪಾತ್ರರಾಗುತ್ತಿದ್ದಾರೆ.
ಈ ಹಿಂದೆ "ಹುಡುಗಿ" ಸಿನಿಮಾ ಮೂಲಕ ಬಂದಿದ್ದ ಆರ್‌ಜಿವಿ...
ಇತ್ತೀಚಿನ ಕೆಲ ದಿನಗಳಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ಸಿನಿಮಾ ಮಾಡುವ ವೈಖರಿಯೇ ಬದಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಸೆಕ್ಸ್, ಗ್ಲಾಮರ್, ಮಾದಕತೆಗೇ ಹೆಚ್ಚು ಒತ್ತು ಕೊಟ್ಟಂತಿದೆ. ಅದಕ್ಕೆ ಉದಾಹರಣೆ ಎಂಬಂತೆ ಅವರ ಇತ್ತೀಚಿನ ಸಿನಿಮಾಗಳು ಗೋಚರಿಸುತ್ತಿವೆ. ಜತೆಗೆ ಹೊಸ ಹೊಸ ನಟಿಯರೂ ಅವರ ಸಿನಿಮಾ ಮೂಲಕ ಪರಿಚಿತಗೊಳ್ಳುತ್ತಿದ್ದಾರೆ. ಅವರನ್ನು ಸಿನಿಮಾದಲ್ಲಿಯೂ ಅಷ್ಟೇ ಗ್ಲಾಮರಸ್ ಆಗಿಯೇ ತೋರಿಸುತ್ತಿದ್ದಾರೆ. ಅದೇ ರೀತಿ ಜುಲೈನಲ್ಲಿ ಬಿಡುಗಡೆ ಆಗಿದ್ದ "ಹುಡುಗಿ" ಚಿತ್ರದ ಮೂಲಕ ಪೂಜಾ ಭಾಲೇಕರ್ ಅವರನ್ನು ಪರಿಚಯಿಸಿದ್ದರು.
ಪೂಜಾ ಓರ್ವ ಸಮರಕಲೆ ಪಾರಂಗತೆ. ಈ ವರೆಗೂ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಪದಕ ಬಾಚಿಕೊಂಡಿದ್ದಾರೆ. 2004ರಿಂದಲೇ ಅವರ ಈ ಜರ್ನಿ ಆರಂಭವಾಗಿದೆ. ಅಲ್ಲಿಂದ 2014ರ ವರೆಗೂ ದೇಶದ ವಿವಿಧ ಕಡೆಗಳಲ್ಲಿ ನಡೆದ ಮಾರ್ಷಲ್ ಆರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.