logo
ಕನ್ನಡ ಸುದ್ದಿ  /  ಮನರಂಜನೆ  /  Actor Surya: ತಂದೆ ಜೊತೆ ಮನಸ್ತಾಪ.. ಚೆನ್ನೈ ತೊರೆದು ಪತ್ನಿ, ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ರಾ ನಟ ಸೂರ್ಯ..?

Actor Surya: ತಂದೆ ಜೊತೆ ಮನಸ್ತಾಪ.. ಚೆನ್ನೈ ತೊರೆದು ಪತ್ನಿ, ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ರಾ ನಟ ಸೂರ್ಯ..?

HT Kannada Desk HT Kannada

Mar 03, 2023 07:44 PM IST

google News

ಸೂರ್ಯ, ಜ್ಯೋತಿಕಾ

    • ಸೂರ್ಯ ಮತ್ತು ಜ್ಯೋತಿಕಾ ಇಬ್ಬರದ್ದೂ ಪ್ರೇಮ ವಿವಾಹ. ತಮ್ಮ ಪ್ರೀತಿಯ ವಿಚಾರವನ್ನು ಸೂರ್ಯ, ತಂದೆ ಶಿವಕುಮಾರ್‌ಗೆ ತಿಳಿಸಿದಾಗ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮದುವೆ ಆದ ನಂತರ ಜ್ಯೋತಿಕಾ ನಟನೆಯಿಂದ ದೂರ ಉಳಿದರೆ ಮದುವೆಗೆ ಒಪ್ಪುತ್ತೇನೆ ಎಂದು ಕಂಡಿಷನ್‌ ಹಾಕುತ್ತಾರೆ. ಅದರಂತೆ ಜ್ಯೋತಿಕಾ ಹಾಗೂ ಸೂರ್ಯ ಒಪ್ಪುತ್ತಾರೆ. 2006ರಲ್ಲಿ ಈ ಜೋಡಿ ಮದುವೆ ಆಗುತ್ತಾರೆ.
ಸೂರ್ಯ, ಜ್ಯೋತಿಕಾ
ಸೂರ್ಯ, ಜ್ಯೋತಿಕಾ

ಯಾವುದೇ ಸಂಬಂಧದಲ್ಲಿ ಜಗಳ, ಮುನಿಸು ಇದ್ದೇ ಇರುತ್ತದೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಇದು ಸಾಮಾನ್ಯ. ಇದೀಗ ತಮಿಳು ನಟ ಸೂರ್ಯ ಮನೆಯಲ್ಲಿ ಕೂಡಾ ತಂದೆ ಹಾಗೂ ಮಗನ ನಡುವೆ ಮನಸ್ತಾಪ ಉಂಟಾಗಿದ್ದು ಸೂರ್ಯ ಚೆನ್ನೈ ಬಿಟ್ಟು ಮುಂಬೈಗೆ ಹೋಗಿ ನೆಲೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸೂರ್ಯ ಹಾಗೂ ತಂದೆ ಶಿವಕುಮಾರ್ ನಡುವೆ ಪ್ರಮುಖ ವಿಚಾರವೊಂದಕ್ಕೆ ಜಗಳ ಉಂಟಾಗಿ ಕುಟುಂಬದಿಂದ ದೂರ ಉಳಿಯಲು ಮುಂಬೈಗೆ ಹೋಗಿ ನೆಲೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸುದ್ದಿ ಕೆಲವು ದಿನಗಳಿಂದ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ತಮಿಳು ನಟ ಪೈಲ್ವಾನ್ ರಂಗನಾಥನ್ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಸುದ್ದಿಯನ್ನು ರಿವೀಲ್‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ರೀತಿ ಮನಸ್ತಾಪ ಏರ್ಪಡಲು ಒಂದು ಪ್ರಮುಖ ಕಾರಣ ಇದೆಯಂತೆ.

ಸೂರ್ಯ ಮತ್ತು ಜ್ಯೋತಿಕಾ ಇಬ್ಬರದ್ದೂ ಪ್ರೇಮ ವಿವಾಹ. ತಮ್ಮ ಪ್ರೀತಿಯ ವಿಚಾರವನ್ನು ಸೂರ್ಯ, ತಂದೆ ಶಿವಕುಮಾರ್‌ಗೆ ತಿಳಿಸಿದಾಗ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮದುವೆ ಆದ ನಂತರ ಜ್ಯೋತಿಕಾ ನಟನೆಯಿಂದ ದೂರ ಉಳಿದರೆ ಮದುವೆಗೆ ಒಪ್ಪುತ್ತೇನೆ ಎಂದು ಕಂಡಿಷನ್‌ ಹಾಕುತ್ತಾರೆ. ಅದರಂತೆ ಜ್ಯೋತಿಕಾ ಹಾಗೂ ಸೂರ್ಯ ಒಪ್ಪುತ್ತಾರೆ. 2006ರಲ್ಲಿ ಈ ಜೋಡಿ ಮದುವೆ ಆಗುತ್ತಾರೆ. ಮದುವೆ ಆದಾಗಿನಿಂದ ಮಕ್ಕಳು ಜನಿಸುವವರೆಗೂ ಕೆಲವು ವರ್ಷಗಳ ಕಾಲ ಜ್ಯೋತಿಕಾ ಸಿನಿಮಾದಿಂದ ದೂರ ಉಳಿದಿದ್ದರು. ಆದರೆ 2015 ರಿಂದ ಒಳ್ಳೆ ಸ್ಕ್ರಿಪ್ಟ್‌ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ವರ್ಷಕ್ಕೆ 1 ಅಥವಾ 2 ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಆದರೆ ಈಗ ಮಕ್ಕಳು ಬೆಳೆದು ಶಾಲೆಗೆ ಹೋಗುತ್ತಿರುವ ಕಾರಣ, ಜ್ಯೋತಿಕಾ ಮತ್ತೆ ನಟನೆಯತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ 2ಡಿ ಎಂಟರ್ಟೈನ್ಮೆಂಟ್‌ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಆದರೆ ಜ್ಯೋತಿಕಾ ಮತ್ತೆ ನಟಿಸಲು ಆರಂಭಿಸಿದ್ದು ಅವರ ತಂದೆ ಶಿವಕುಮಾರ್‌ಗೆ ಇಷ್ಟವಾಗಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ತಂದೆ ಹಾಗೂ ಮಗ, ಸೊಸೆ ನಡುವೆ ಜಗಳ ನಡೆಯುತ್ತಿದ್ದು, ಸೂರ್ಯ ತಮ್ಮ ಕುಟುಂಬದೊಂದಿಗೆ ಮನೆ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಹಾಗೇ ಶಿವಕುಮಾರ್‌ ಪುತ್ರ ಕಾರ್ತಿ, ತಂದೆ ಪರವಾಗಿ ನಿಂತಿದ್ದು, ಸೂರ್ಯ ಹಾಗೂ ಕಾರ್ತಿ ನಡುವೆ ಕೂಡಾ ಮನಸ್ತಾಪ ಏರ್ಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ಸೂರ್ಯ ಆಗಲೀ, ಜ್ಯೋತಿಕಾ ಆಗಲೀ ಪ್ರತಿಕ್ರಿಯಿಸಿಲ್ಲ.

ಮತ್ತಷ್ಟು ಮನರಂಜನೆ ಸುದ್ದಿಗಳು

ಆಸ್ಕರ್‌ ವಿಜೇತರಿಗೆ ಪ್ರಶಸ್ತಿ ಅರ್ಪಿಸಲಿದ್ದಾರೆ ದೀಪಿಕಾ... ಈ ಗೌರವ ಪಡೆದ ಎರಡನೇ ಭಾರತೀಯ ನಟಿಯಾಗಿ ದಾಖಲೆ!

ಆಸ್ಕರ್‌ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇನ್ನು 10 ದಿನಗಳಲ್ಲಿ ಆಸ್ಕರ್‌ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುತ್ತದೆ. ಸಮಾರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ನಾಮಿನೇಟ್‌ ಆಗಿರುವ ಸಿನಿಮಾ ತಂಡ ಈಗಾಗಲೇ ಅಮೆರಿಕ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ಧಾರೆ. ಪೂರ್ತಿ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಎ. ಹರ್ಷ.. ಗೋಪಿಚಂದ್‌ ಚಿತ್ರಕ್ಕೆ ನಿರ್ದೇಶನ

ಎ. ಹರ್ಷ ಹೆಣೆದ ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಗೋಪಿಚಂದ್‌, ಹೊಸ ಅವತಾರದಲ್ಲಿ ತೆರೆ ಮೇಲೆ ಬರ್ತಿದ್ದಾರೆ. ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ ಇದಾಗಿದ್ದು, ಕೆ.ರಾಧಾ ಮೋಹನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ