logo
ಕನ್ನಡ ಸುದ್ದಿ  /  ಮನರಂಜನೆ  /  Small Screen: ಡ್ರಾಮಾ ಜ್ಯೂನಿಯರ್ಸ್‌ 4ನೇ ಸೀಸನ್‌ಗೆ ತೆರೆ...ಸಮೃದ್ಧಿ ಮೊಗವೀರ ಈ ಬಾರಿಯ ವಿನ್ನರ್‌

Small Screen: ಡ್ರಾಮಾ ಜ್ಯೂನಿಯರ್ಸ್‌ 4ನೇ ಸೀಸನ್‌ಗೆ ತೆರೆ...ಸಮೃದ್ಧಿ ಮೊಗವೀರ ಈ ಬಾರಿಯ ವಿನ್ನರ್‌

HT Kannada Desk HT Kannada

Aug 22, 2022 11:58 AM IST

google News

ಸಮೃದ್ಧಿ ಮೊಗವೀರ

    • ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮ ಮೊದಲ ಬಾರಿಗೆ 2016ರಲ್ಲಿ ಪ್ರಸಾರಗೊಂಡಿತ್ತು. ಮೊದಲ ಸೀಸನ್‌ನಲ್ಲಿ ಪುಟ್ಟರಾಜು ಹೂಗಾರ್‌ ಹಾಗೂ ಚೈತ್ರಾಲಿ ತೇಜ್‌ಪಾಲ್‌ ಇಬ್ಬರೂ ವಿಜೇತರಾಗಿದ್ದರು. ಎರಡನೇ ಸೀಸನ್‌ನಲ್ಲಿ ಅಮಿತ್‌ ಹಾಗೂ ವಂಶಿ ಮೊದಲ ಸ್ಥಾನ ಪಡೆದಿದ್ದರು. ಮೂರನೇ ಸೀಸನ್‌ಲ್ಲಿ ಸ್ವಾತಿ ವಿಜೇತರಾಗಿದ್ದರು. ಹಾಗೂ ಇದೀಗ ನಾಲ್ಕನೇ ಸೀಸನ್‌ನಲ್ಲಿ ಸಮೃದ್ಧಿ ಗೆಲುಗು ಸಾಧಿಸಿದ್ದಾರೆ.
ಸಮೃದ್ಧಿ ಮೊಗವೀರ
ಸಮೃದ್ಧಿ ಮೊಗವೀರ (PC: Drama Junior Samrudhi Kundapura)

ಜೀ ಕನ್ನಡದ ಖ್ಯಾತ ರಿಯಾಲಿಟಿ ಶೋಗಳಲ್ಲಿ ಡ್ರಾಮಾ ಜ್ಯೂನಿಯರ್ಸ್‌ ಕೂಡಾ ಒಂದು. ಇತ್ತೀಚೆಗಷ್ಟೇ ಸೀಸನ್‌ 4 ಮುಗಿದಿದೆ. ಈ ಬಾರಿ ವಿನ್ನರ್‌ ಯಾರಾಗಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮೃದ್ಧಿ ಎಸ್. ಮೊಗವೀರ ಈ ಬಾರಿಯ ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌ 4ರ ವಿಜೇತರಾಗಿದ್ದಾರೆ.

ವಿಭಿನ್ನ ಹಾಗೂ ವಿಶಿಷ್ಟ ಸ್ಕಿಟ್‌ಗಳಿಂದ, ತಮ್ಮ ಅಭಿನಯದಿಂದಲೇ ವೀಕ್ಷಕರ ಗಮನ ಸೆಳೆದಿದ್ದ ಸಮೃದ್ಧಿ ಮೂಲತ: ಕುಂದಾಪುರದ ಪ್ರತಿಭೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿ ನಡೆಸುತ್ತಿದ್ದ ಕನ್ನಡದ ಕಣ್ಮಣಿ ಕಾರ್ಯಕ್ರಮದಲ್ಲಿ ಸಮೃದ್ಧಿ ರನ್ನರ್‌ ಅಪ್‌ ಆಗಿದ್ದರ್. ಸಮೃದ್ಧಿ ತಂದೆ ಶ್ರೀಧರ ಮೊಗವೀರ, ತಾಯಿ ಭಾರತಿ. ಸಮೃದ್ಧಿ ಸದ್ಯಕ್ಕೆ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ನೇ ತರಗತಿ ಓದುತ್ತಿದ್ದಾರೆ. ಓದಿನಲ್ಲಿ ಹಾಗೂ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಸಮೃದ್ಧಿ ಸದಾ ಮುಂದೆ. ಡ್ರಾಮಾ ಜ್ಯೂನಿಯರ್ಸ್‌ ವಿಜೇತರಾಗಿರುವ ಸಮೃದ್ಧಿಗೆ ಕಿರುತೆರೆ ಪ್ರಿಯರು ಶುಭ ಕೋರಿದ್ದಾರೆ. ಇನ್ನು ಈ ಬಾರಿ ಡ್ರಾಮಾ ಜ್ಯೂನಿಯರ್ಸ್‌ ವೇದಿಕೆಯಲ್ಲಿ ಸಾನಿಧ್ಯ ಆಚಾರ್ಯ ರನ್ನರ್ ಅಪ್ ಪಟ್ಟ ಗಳಿಸಿದ್ದರೆ, ವೇದಿಕ್ ಕೌಶಲ್ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮ ಮೊದಲ ಬಾರಿಗೆ 2016ರಲ್ಲಿ ಪ್ರಸಾರಗೊಂಡಿತ್ತು. ಮೊದಲ ಸೀಸನ್‌ನಲ್ಲಿ ಪುಟ್ಟರಾಜು ಹೂಗಾರ್‌ ಹಾಗೂ ಚೈತ್ರಾಲಿ ತೇಜ್‌ಪಾಲ್‌ ಇಬ್ಬರೂ ವಿಜೇತರಾಗಿದ್ದರು. ಎರಡನೇ ಸೀಸನ್‌ನಲ್ಲಿ ಅಮಿತ್‌ ಹಾಗೂ ವಂಶಿ ಮೊದಲ ಸ್ಥಾನ ಪಡೆದಿದ್ದರು. ಮೂರನೇ ಸೀಸನ್‌ಲ್ಲಿ ಸ್ವಾತಿ ವಿಜೇತರಾಗಿದ್ದರು. ಹಾಗೂ ಇದೀಗ ನಾಲ್ಕನೇ ಸೀಸನ್‌ನಲ್ಲಿ ಸಮೃದ್ಧಿ ಗೆಲುಗು ಸಾಧಿಸಿದ್ದಾರೆ.

ಹಿರಿಯ ನಟಿ ಲಕ್ಷ್ಮಿ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಈ ಬಾರಿಯ ತೀರ್ಪುಗಾರರಾಗಿದ್ದರೆ ಮಾಸ್ಟರ್‌ ಆನಂದ್‌ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಈ ಬಾರಿ ಸುಮಾರು 31 ಜಿಲ್ಲೆಗಳಲ್ಲಿ ನಡೆದ ಆಡಿಷನ್‌ನಲ್ಲಿ 15 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ 15 ಮಕ್ಕಳು ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದರು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ