logo
ಕನ್ನಡ ಸುದ್ದಿ  /  ಮನರಂಜನೆ  /  Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್

Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್

Praveen Chandra B HT Kannada

Aug 12, 2024 02:28 PM IST

google News

Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್

    • Kaadadeye Hegirali Song Lyrics: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡಿನ ಬಳಿಕ "ಕಾಡದೆಯೇ ಹೇಗಿರಲಿ" ಬಿಡುಗಡೆಯಾಗಿದೆ. ಈ ಹಾಡು ಕೂಡ ಹಸಿಬಿಸಿ ಕನಸುಗಳಿವೆ ನವಿರಾಗಿ ಎನ್ನುತ್ತ ಪ್ರೇಮಿಗಳನ್ನು ಕಾಡುವಂತೆ ಇಂದೆ. ಈ ಹಾಡಿನ ಲಿರಿಕ್ಸ್‌ ಇಲ್ಲಿದೆ.
Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್
Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್

Krishnam Pranaya sakhi Movie: ಆಗಸ್ಟ್‌ 15ರಂದು ಬಿಡುಗಡೆಯಾಗಲಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ತನ್ನ ಮಧುರವಾದ ಹಾಡುಗಳಿಂದಲೇ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ದ್ವಾಪರ ದಾಟಲು ಹಾಡು ಈಗಾಗಲೇ ಟ್ರೆಂಡಿಂಗ್‌ನಲ್ಲಿದೆ. ಇದೇ ಸಮಯದಲ್ಲಿ ಚಿತ್ರತಂಡ ಇನ್ನೊಂದು ಹಾಡನ್ನು ಬಿಡುಗಡೆ ಮಾಡಿದೆ. "ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ ಜೀವದಲ್ಲಿ ಏನೇನೋ... ಹಸಿಬಿಸಿ ಕನಸುಗಳಿವೆ ನವಿರಾಗಿ" ಎಂಬ ಹಾಡು ಈಗ ಸಂಗೀತಪ್ರಿಯರನ್ನು ಮೋಡಿ ಮಾಡುತ್ತಿದೆ.

ಕಾಡದೆಯೇ ಹೇಗಿರಲಿ ಹಾಡು

ಈ ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯವಿದೆ. ಪೃಥ್ವಿ ಭಟ್‌ ಧ್ವನಿಯಲ್ಲಿ ಕಾಡುವಂತಹ ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಇದೇ ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್‌ 15ರ ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಗಣೇಶ್‌ ನಟನೆಯ ಮತ್ತೊಂದು ಮುಂಗಾರು ಮಳೆಯಂತಹ ಸಿನಿಮಾವನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ಕಾಡದೆಯೇ ಹೇಗಿರಲಿ ಹಾಡಿನ ಕನ್ನಡ ಲಿರಿಕ್ಸ್‌

ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲ್ಲಿ ಏನೇನೋ…
ಹಸಿಬಿಸಿ ಕನಸುಗಳಿವೆ ನವಿರಾಗಿ

ತೀರದಲಿ ಮೈಮರೆತೇ
ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ
ಬಯಕೆಯ ಬಲೆಯಲಿ ಬಿಗಿಯಾಗಿ

ಮನಸಿದು ಈಗ ಸಿಹಿಮಧುಶಾಲೆ
ನೆನಪಿನ ದಾಳಿಗೆ ಸಿಲುಕಿದ ಮೇಲೆ|
ಪ್ರತಿಸಲ ಒಲಿಯುವೆ

ಕಾಡದೆಯೇ ಹೇಗಿರಲಿ
ಹೃದಯವು ಕಳೆದಿದೆ ನಿನಗಾಗಿ
ಜೀವದಲ್ಲಿ ಏನೇನೋ…
ಹಸಿಬಿಸಿ ಕನಸಿವೆ ನವಿರಾಗಿ

ಮರಳಿನಲಿ ಬರೆಯದಿರೋ…
ಅರೆ ಮರುಳಲಿ ಜೊತೆ ಜೊತೆ ಹೆಸರನು…
ಅರಿವಿರದ... ಅಲೆಗಳು ತಾ ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ ಪ್ರತಿಫಲಿಸುತ ಒಲವನು ನಯನವು

ಗುರುತೆ ನಿನ್ನಾ ಮರೆತಿರುವೇ…
ತಿಳಿಸಿಬಿಡು ನಾ ಯಾರು?

ಸಹಜ ಸಡಗರವಿದೆ ಮಧುರ ಮುಜುಗರವಿದೆ
ನಿಲ್ಲಾಲಾರೆ ಅಲ್ಲೂ ಇನ್ನೂ ಮರೆಯಾಗಿ

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.
ಕಾಡದೆಯೇ ಹೇಗಿರಲಿ ಜೀವದಲಿ.. ಏನೇನೋ...

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ... ಏನೇನೋ... ಹಸಿ-ಬಿಸಿ ಕನಸಿವೆ ನವಿರಾಗಿ.

ಕಾಡದೆಯೇ ಹೇಗಿರಲಿ ಹಾಡಿನ ಲಿರಿಕ್ಸ್‌ ವಿಡಿಯೋ

 

ಕಾಡದೆಯೇ ಹೇಗಿರಲಿ ಹಾಡಿಗೆ ಅಭಿಮಾನಿಗಳ ಪ್ರತಿಕ್ರಿಯೆ

ಈ ಹಾಡಿಗೆ ನೂರಾರು ಸಕಾರಾತ್ಮಕ ಪ್ರತಿಕ್ರಿಯೆಗಳು ಯೂಟ್ಯೂಬ್‌ ಕಾಮೆಂಟ್‌ ಬಾಕ್ಸ್‌ನಲ್ಲಿ ಬಂದಿವೆ. "ಮುಂಗಾರು ಮಳೆ ಚಿತ್ರದ ನಂತರ ಗಣೇಶ್ ಕೆರಿಯರ್ ನಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ" "ಏನ್ ಗುರು ಮೂವಿ ಇದು ಬರಿ ಹಾಡುಗಳಲ್ಲೇ ಎಲ್ಲರ ಮನಸ್ಸು ಗೆಲ್ಲುತ್ತಿದೆ" "19 ವರ್ಷಗಳ ನಂತರ ಮತ್ತೆ ನನ್ನ ಎರಡು ಕಿವಿಗಳಿಗೆ ಇಂಪಾಗಿ ಕೇಳುತ್ತಿರುವುದು ಈಗ ಅದು ಕೃಷ್ಣಂ ಪ್ರಣಯ ಸಖಿಯೊಂದಿಗೆ" "ಏನ್ ಸಾಂಗ್ ಗುರು ಈ ಫಿಲ್ಮ್ ಸಾಹಿತ್ಯ ಮಾತ್ರ ಅದ್ಬುತ. ಥಿಯೇಟರ್‌ನಲ್ಲಿ ಕೇಳ್ತಾ ಇದ್ರೆ ಮೈ ಮರೆಯೋದು ಪಕ್ಕ"  "ಗಣೇಶ್ ಸರ್ ಈ ಮೂವಿಯಲ್ಲಿ ಹಾಡುಗಳ ರಸದೌತಣ ಹಬ್ಬ ಮಾಡ್ತಾವೆ ಸೂಪರು ಸೂಪರ್" "ಜಯಂತ್ ಕಾಯ್ಕಿಣಿ ರವರ ಸಾಹಿತ್ಯದಲ್ಲಿ ಬರುವ ಎಲ್ಲಾ ಹಾಡುಗಳು ಅದ್ಬುತ ಹಾಗೂ ತುಂಬಾ ಅರ್ಥಗರ್ಬಿತವಾದವು . ನಾನು ಯಾವಾಗಲೂ ಕಾಯುತ್ತಿರುವೇ ಇವರ ಸಾಹಿತ್ಯದ ಹಾಡುಗಳಿಗೆ. ಸೂಪರ್" ಹೀಗೆ ಫ್ಯಾನ್ಸ್‌ ಕಾಮೆಂಟ್‌ಗಳ ಮುಂಗಾರು ಮಳೆಯನ್ನೇ ಹರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ