logo
ಕನ್ನಡ ಸುದ್ದಿ  /  ಮನರಂಜನೆ  /  ಕಳಕಳಿ ಇಲ್ಲ.. ಗಾಂಚಾಲಿ ಇದೆ! Rcb ಮ್ಯಾನೇಜ್‌ಮೆಂಟ್‌ ನಡೆಯನ್ನು ಕಟುವಾಗಿಯೇ ಕುಟುಕಿದ ಖ್ಯಾತ ಚಿತ್ರ ನಿರ್ದೇಶಕ

ಕಳಕಳಿ ಇಲ್ಲ.. ಗಾಂಚಾಲಿ ಇದೆ! RCB ಮ್ಯಾನೇಜ್‌ಮೆಂಟ್‌ ನಡೆಯನ್ನು ಕಟುವಾಗಿಯೇ ಕುಟುಕಿದ ಖ್ಯಾತ ಚಿತ್ರ ನಿರ್ದೇಶಕ

Nov 29, 2024 01:58 PM IST

google News

ಕಳಕಳಿ ಇಲ್ಲ.. ಗಾಂಚಾಲಿ ಇದೆ! RCB ಮ್ಯಾನೇಜ್‌ಮೆಂಟ್‌ ನಡೆ ವಿರುದ್ಧ ಕಟುವಾಗಿಯೇ ಕುಟುಕಿದ ಖ್ಯಾತ ಚಿತ್ರ ನಿರ್ದೇಶಕ

    • ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ಟೀಕೆ ಟಿಪ್ಪಣಿಗಳು ಕೇಳಿಬರುತ್ತಿವೆ. ಬೇಕಿರುವವರನ್ನು ಬಿಟ್ಟು, ಬೇಡವಾದ್ದನ್ನೇ ಖರೀದಿಸಿ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಟೀಕೆಗಳು ಕೇಳಿ ಬರುತ್ತಿವೆ. ಆರ್‌ಸಿಬಿಯ ಕಟ್ಟಾ ಅಭಿಮಾನಿಯಾದ ಖ್ಯಾತ ಸಿನಿಮಾ ನಿರ್ದೇಶಕ ಸಿಂಪಲ್‌ ಸುನಿ, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಳಕಳಿ ಇಲ್ಲ.. ಗಾಂಚಾಲಿ ಇದೆ! RCB ಮ್ಯಾನೇಜ್‌ಮೆಂಟ್‌ ನಡೆ ವಿರುದ್ಧ ಕಟುವಾಗಿಯೇ ಕುಟುಕಿದ ಖ್ಯಾತ ಚಿತ್ರ ನಿರ್ದೇಶಕ
ಕಳಕಳಿ ಇಲ್ಲ.. ಗಾಂಚಾಲಿ ಇದೆ! RCB ಮ್ಯಾನೇಜ್‌ಮೆಂಟ್‌ ನಡೆ ವಿರುದ್ಧ ಕಟುವಾಗಿಯೇ ಕುಟುಕಿದ ಖ್ಯಾತ ಚಿತ್ರ ನಿರ್ದೇಶಕ

Simple Suni Lashed Out at RCB Management: ಈ ಸಲದ ಐಪಿಎಲ್‌ನಲ್ಲಿ ಬಹುತೇಕ ತಂಡಗಳು ತಮ್ಮಲ್ಲಿನ ಆಟಗಾರರನ್ನು ರಿಲೀಸ್‌ ಮಾಡಿ, ಬೇರೆ ಬೇರೆ ಆಟಗಾರರನ್ನು ಖರೀದಿಸಿವೆ. ಆ ಪೈಕಿ, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಈ ಸಲ ಖರೀದಿಸಿರುವ ಆಟಗಾರರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಟಾಕ್‌ ಕ್ರಿಯೇಟ್‌ ಆಗಿದೆ. ಕೈಯಲ್ಲಿರುವ ಮುತ್ತುಗಳನ್ನು ಬಿಟ್ಟು, ಬೇಕಿರುವುದನ್ನೂ ಪಡೆದುಕೊಳ್ಳದೇ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಟೀಕೆಗಳು ಕೇಳಿ ಬರುತ್ತಿವೆ. ಅದರಲ್ಲೂ ಆರ್‌ಸಿಬಿಯ ಕಟ್ಟಾ ಅಭಿಮಾನಿಯಲ್ಲೊಬ್ಬರಾದ ಖ್ಯಾತ ಸಿನಿಮಾ ನಿರ್ದೇಶಕ ಸಿಂಪಲ್‌ ಸುನಿ, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.

ತಮ್ಮ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಸುದೀರ್ಘ ಬರಹವನ್ನು ಪೋಸ್ಟ್‌ ಮಾಡಿಕೊಂಡಿರುವ ಸಿಂಪಲ್‌ ಸುನಿ, ಆರ್‌ಸಿಬಿಯ ಆರಂಭದ ದಿನಗಳಿಂದ ಇಲ್ಲಿಯವರೆಗೆನ ಬದಲಾವಣೆಗಳನ್ನು ತಾವು ಕಂಡಂತೆ ವಿವರಿಸಿದ್ದಾರೆ. ಇಡೀ ತಂಡ ಒಂದು ದೇಹದಂತೆ ಕಾಣಿಸಿದರೆ, ಅಲ್ಲಿರುವ ಪ್ರತಿ ಭಾಗವೂ ಒಬ್ಬೊಬ್ಬ ಆಟಗಾರನ ಕಥೆ ಹೇಳುತ್ತದೆ ಎಂದಿದ್ದಾರೆ. ಎಲ್ಲ ಅಂಗಗಳು ಸೇರಿದ ಬಳಿಕವೇ ದೇಹ ರಚನೆಯಾಗಿ ಚಲಿಸುತ್ತದೆ ಎನ್ನುವ ಮೂಲಕ ಆರ್‌ಸಿಬಿಯ ಈ ಸಲದ ಮ್ಯಾನೇಜ್‌ಮೆಂಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿರ್ದೇಶಕ ಸಿಂಪಲ್‌ ಸುನಿ ಕೆಂಡಾಮಂಡಲ

RCB ಒಂದು ದೇಹ ಇದ್ದ ಹಾಗೆ ಮಲ್ಯ ಜೀವ ಕೊಟ್ಟರು .. ಕೊಹ್ಲಿ FACE OF THE TEAM ಆದರು .. ABD ಹೃದಯವಾದರು .. KUMBLE.. DRAVID.. robbie.. manish GAYLE.. ROSS.. KALLIS CHAHAL.. SIRAJ, FAF, MAXI, JACKS ಹೀಗೆ ಹತ್ತು ಹಲವು ಅಂಗಗಳಿಂದ ದೇಹ ರಚನೆಯಾಗಿ ಚಲಿಸುತ್ತಿದ್ದರೆ.. ನಮ್ಮ MANAGEMENT ಕೂಡ ಇದೇ ದೇಹದ "ತಿ*" ಆಗಿದ್ದಾರೆ .. #EMOTIONS ಇಲ್ಲ ..MOTION ಇದೆ .. ಕಳಕಳಿ ಇಲ್ಲ .. ಗಾಂಚಲಿ ಇದೆ ..ತಿ* ಗಾಂಚಲಿ ಇದೆ ಈ ಅಂಗ ಕೂಡ ಬದುಕಿರಲು (ತಂಡ ಆಡಲು ) ಅತ್ಯಗತ್ಯ ... ಪ್ರತಿ ಬಿಡ್ಡಿಂಗ್ ನಲ್ಲೂ OH SHIT ಅಂದುಕೊಳ್ಳಬೇಕು ಹಾಗೆ ನೋಡಿಕೊಳ್ಳುತ್ತಾರೆ.. ಬರಿಯ RC team ತಗೊಂಡಿದ್ದರೆ.. ಅವರಿಷ್ಟ ಎಂದು ಸುಮ್ಮನಿರಬಹುದಿತ್ತು.. ಆದರೆ RCಗೆ ಬೆಲೆ ಬಂದಿದೆ B ಬೆಂಗಳೂರಿಗರಿಂದ.. ಹಾಗಾಗಿ ಅವರು ಬೆಂಗಳೂರಿಗರನ್ನು ಅವರ feelings ಅನ್ನು ಕಡೆಗಣಿಸುವಂತಿಲ್ಲ... ನಾಮಕಾವಸ್ಥೆಗೆ ಸುಮ್ಮನೆ ಒಬ್ಬಿಬ್ಬರನ್ನು ಬೆಂಚು ಕಾಯಿಸಲು ಕೂರಿಸಿ.. ನಮ್ಮನ್ನು ಕುರಿ ಮಾಡುವ ಸಂಸ್ಕೃತಿ ಈ ಬಾರಿಯೂ ಮುಂದುವರಿಸುತ್ತಿದ್ದಾರೆ..

ಬರಿಯ ಕನ್ನಡಿಗರೆಂದೇ ಅಲ್ಲ ..ಇಂದಿಗೂ ಚಾಹಲ್ ಗೆ replacement ಸಿಕ್ಕಿಲ್ಲ.. Siraj ನ ಬಿಡುವ ಅಗತ್ಯವಿರಲಿಲ್ಲ .. ABD ಯನ್ನು COACH ಮಾಡುತ್ತಿಲ್ಲ.. ಜಿತೇಶ್ ಶರ್ಮ ಅನ್ನು 11ಕೋಟಿಗೆ ಬಿಡ್ ಮಾಡುವ RCB... KLಅನ್ನು 10 ಕೋಟಿಗೆ DROP ಆಗುವ ಪರಿ ಆಪೇಕ್ಷಣೀಯ .. ಕೃನಾಲ್ ಇಂದ ತನ್ನ ಕ್ರಿಕೆಟ್ ಕೆರಿಯರ್ ಹಾಳಾಯಿತು.. ರಾಜ್ಯ ತೊರೆದು ಬೇರೆ ರಾಜ್ಯಕ್ಕೆ ಆಡಿ ಕ್ರಿಕೆಟ್ ಅಸ್ತಿತ್ವ ಉಳಿಸಿಕೊಳ್ಳಬೇಕಾಯಿತು ಎಂದು SWAPNIL ಹೇಳಿದರು. ನಂತರ ಅವರಿಬ್ಬರನ್ನು ಒಂದೇ ತಂಡಕ್ಕೆ ಖರೀದಿಸಿದ್ದು ಮಾತ್ರ ಒಂಚೂರು ರಿಸರ್ಚ್ ಇಲ್ಲದ ಬೇಜವಾಬ್ದಾರಿತನ ತೋರಿಸುತ್ತದೆ.. ಈ ರೀತಿಗಳು ಇದ್ದಾಗ ತಂಡದ ಸ್ವಾಸ್ತ್ಯ ಹೇಗೆ ಚೆನ್ನಾಗಿರುತ್ತದೆ ..

ಅಭಿನವ್ ಮನೋಹರ್.. ಶ್ರೇಯಸ್ ಗೋಪಾಲ್ ಶ್ರೀಜಿತ್.. ಮನೀಷ್.. ಇವರೆಲ್ಲರ ಖರೀದಿಗೆ ಕಿಂಚಿತ್ತೂ ಆಸಕ್ತಿ ತೋರಿಸದಿರುವುದು.. ವಿದ್ವತ್ ಕಾವೇರಪ್ಪ ಕೌಶಿಕ್ ಬೌಲಿಂಗ್ ಸ್ಟಾಟ್ಸ್ ಅನ್ನು ಗುರುತಿಸದಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ..

@RCBTweets ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿರುವ ತಂಡ.. ENGLISHನಲ್ಲಿ ವ್ಯವಹರಿಸುವುದು ಪಕ್ವತೆ . ಕನ್ನಡ ಪುಟ ತೆಗೆದೆದ್ದು .. ಹುಟ್ಟಿದ ಊರಿನ ಹೆಸರಿಗೂ ಹಾಗೂ ಆಡುವ ಈ ಮಣ್ಣಿಗೆ ಗೌರವ.. ಆದರೆ ಈಗ ಹಿಂದಿಯೊಂದು ತೆಗೆದದ್ದೂ ತಗಾದೆಗೆ .. ಹಾಗಾದರೆ rcb ಪುಟಗಳು ಪ್ರತಿ ಭಾಷೆಯಲ್ಲೂ ಬರಲಿ ... ಚೆನ್ನೈಆಂಧ್ರ ಲ್ಲೂ ಸೋತರು ಗೆದ್ದರೂ RCB ಅನ್ನೋ ಅಭಿಮಾನಿಗಳಿದ್ದಾರೆ

#goGREEN.. ಕೆರೆ ಅಭಿವೃದ್ಧಿ.. bangalore ಅನ್ನು bengaluru ಮಾಡಿದ್ದು ಮುಂತಾದ ಕಾರ್ಯಗಳಿಗೆ ನಮ್ಮ ಮೆಚ್ಚುಗೆ ಇದೆ.. ಆದರೆ ನೀವು local playersಗೆ ತೋರೋ ಮಲತಾಯಿ ಧೋರಣೆ ಮಾತ್ರ ಸಹಿಸಲಾಗುತ್ತಿಲ್ಲ .. ಆದರು ಇದು ನಮ್ಮ ದೇಹ... ಹೃದಯ, ತಿ* ಇದ್ದರು ನಮ್ಮವರೇ ಇರುವ ದೇಹ .. ಇದು ಬೆಂಗಳೂರಿನ ದೇಹ ಯಾರೇ ಬರಲಿ .. ಎಷ್ಟೇ ಸೋಲಲಿ ನಾವು ಸದಾ ಬೆಂಬಲಿಸುವ ದೇಹ..

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ