‘ಮಸಣದ ಹೂವು ಚಿತ್ರದಿಂದ ಪುಟ್ಟಣ್ಣ ಕಣಗಾಲ್ ಅಂತ್ಯವಾಯ್ತು, ಅದೇ ರೀತಿ ದರ್ಶನ್‌ಗೆ ಡೆವಿಲ್ ಚಿತ್ರವೇ ಕಂಟಕ!’
Jul 30, 2024 04:35 PM IST
‘ಮಸಣದ ಹೂವು ಚಿತ್ರದಿಂದ ಪುಟ್ಟಣ್ಣ ಕಣಗಾಲ್ ಅಂತ್ಯವಾಯ್ತು, ಅದೇ ರೀತಿ ದರ್ಶನ್‌ಗೆ ಡೆವಿಲ್ ಚಿತ್ರವೇ ಕಂಟಕ!’
- ಡೆವಿಲ್ ಸಿನಿಮಾ ಶೀರ್ಷಿಕೆಯಲ್ಲಿಯೇ ಒಂದು ನೆಗೆಟಿವ್ ವೈಬ್ರೇಷನ್ ಕಾಣಿಸುತ್ತಿದೆ. ಅದರಿಂದಲೇ ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಮಸಣದ ಹೂವು ಚಿತ್ರದಿಂದ ಪುಟ್ಟಣ್ಣ ಕಣಗಾಲ್ ಅವರ ವೃತ್ತಿ ಜೀವನವೇ ಕೊನೆಯಾಯ್ತು ಎಂದಿದ್ದಾರೆ ಕಾಳಿ ಮಾತೆ ಉಪಾಸಕಿ ಚಂದಾ ಪಾಂಡೇ.
Kali Upasaki Chanda Pandey: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರುತ್ತಿದ್ದಂತೆ, ಅವರ ಬಗ್ಗೆ ನೂರಾರು ಮಂದಿ ನೂರಾರು ಥರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜ್ಯೋತಿಷಿಗಳು, ಸ್ವಾಮೀಜಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದೇ ರೀತಿ ಕಳೆದೊಂದು ವಾರದಿಂದ ಕಾಳಿ ಮಾತೆಯ ಉಪಾಸಕಿ ಚಂದಾ ಪಾಂಡೇ ದರ್ಶನ್ ಅವರ ಬಗ್ಗೆ ಅಚ್ಚರಿ ಎನಿಸುವ ಬಗೆಬಗೆ ವಿಚಾರಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸುತ್ತಿದ್ದಾರೆ. ದರ್ಶನ್ ಅವರ ಹೊಸ ಹೇರ್‌ಸ್ಟೈಲ್‌ನಿಂದ ಹಿಡಿದು, ಕೈ ಮೂಳೆ ಮುರಿತದ ಸೂಚನೆಯ ಬಗ್ಗೆಯೂ ಮಾತನಾಡಿದ್ದರು.
ಇದೀಗ ಇದಕ್ಕಿಂತ ಒಂದು ಕೈ ಮೇಲೆ ಹೋಗಿ, ನಟ ದರ್ಶನ್ ಅವರಿಗೆ ಈ ಪರಿಸ್ಥಿತಿ ಬರಲು ಸದ್ಯ ಒಪ್ಪಿಕೊಂಡಿರುವ ಡೆವಿಲ್ ಸಿನಿಮಾದ ಶೀರ್ಷಿಕೆಯೇ ಕಾರಣ ಎಂದಿದ್ದಾರೆ ಕಾಳಿ ಮಾತೆಯ ಉಪಾಸಕಿ ಚಂದಾ ಪಾಂಡೇ. "ನಾನು ವಾಸ್ತವವನ್ನು ಬಿಟ್ಟು ಬೇರೆ ಮಾತನಾಡುವುದಿಲ್ಲ. ಅದೇನೆಂದರೆ ಕೆಲವೊಂದು ಸಿನಿಮಾ ಟೈಟಲ್‌ಗಳೂ ಇಂಥ ದುರಂತಗಳನ್ನು ಮಾಡಿಸುತ್ತದೆ. ಬಹಳ ದಿನಗಳ ಮುಂಚೆ ಪುಟ್ಟಣ್ಣ ಕಣಗಾಲ್ ಅವರ ಕೊನೇ ಸಿನಿಮಾ ಮಸಣದ ಹೂವು ಸಿನಿಮಾ ಮಾಡಿದಾಗ, ಅವರದೇ ದುರಂತ ಅಂತ್ಯವಾಯ್ತು. ಇದೇ ಥರ ನಾವು ನೋಡಿದರೆ, ಸಾಕಷ್ಟು ಸಿನಿಮಾಗಳ ಶೀರ್ಷಿಕೆಗಳನ್ನು ಗಮನಿಸಿದರೆ, ಆ ಚಿತ್ರಗಳ ಪ್ರಮುಖ ಪಾತ್ರಧಾರಿಗಲಿರಬಹುದು, ಆ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಅನಾಹುತಗಳು ಸಂಭವಿಸಿದ ಉದಾಹರಣೆಗಳಿವೆ"
ಡೆವಿಲ್ ಟೈಟಲ್ಲೇ ಸರಿಯಿಲ್ಲ, ಅದು ನೆಗೆಟಿವ್ ವೈಬ್ರೇಷನ್
"ಅದೇ ರೀತಿ ದರ್ಶನ್ ಅವರದ್ದು ಡೆವಿಲ್ ಅನ್ನೋ ಸಿನಿಮಾ ಸಹ ನಡೆಯುತ್ತಿತ್ತು. ಆ ಸಿನಿಮಾದ ಬಜೆಟ್ ಅದೂ ಇದೂ ಅದನ್ನೆಲ್ಲ ಪಕ್ಕಕ್ಕಿಟ್ಟರೆ, ಟೈಟಲ್ ಏನು ರೂಲ್ ಮಾಡುತ್ತದೆ ಎಂಬುದನ್ನೂ ನಾವು ಗಮನ ಹರಿಸಬೇಕಾಗುತ್ತದೆ. ಈ ಹೆಸರು ಏನಾದ್ರೂ ಮಾಡಿಬಿಡುತ್ತಾ? ಅನ್ನೋ ವಿತಂಡವಾದ ಮಾಡುವವರೂ ಇದ್ದಾರೆ. ಆದರೆ, ಈ ಡೆವಿಲ್ ಏನು ಸೂಚಿಸುತ್ತದೆ. ಡೆವಿಲ್ ಅಂದ್ರೆ ನೆಗೆಟಿವ್ ಶಬ್ದ. ಡೆವಿಲ್ ಅಂದ್ರೆ ಭೂತ ಅಂತ ಅರ್ಥ. ಹಾಗಾಗಿ ಕೆಲವು ಸಿನಿಮಾ ಶೀರ್ಷಿಕೆಗಳು ಇಂಥ ದುರಂತ ತರುವ ಸಾಧ್ಯತೆಗಳಿರುತ್ತವೆ. ಆ ವೈಬ್ರೇಷನ್ ಅಲ್ಲಿರುತ್ತದೆ. ಡೆವಿಲ್ ಎನ್ನುತ್ತ ಅಟ್ಟಹಾಸದ ನಗುವೂ ಟೀಸರ್‌ನಲ್ಲಿದೆ. ಅದೂ ಕೂಡ ಇದಕ್ಕೆ ಕಾರಣವಾಗುತ್ತೆ. ಶೇ 80 ಪ್ರತಿಷತದಷ್ಟು ಈ ಪ್ರಕರಣದಲ್ಲಿ ನಾವು ಇದನ್ನು ಪರಿಗಣಿಸುತ್ತೇವೆ" ಎಂದಿದ್ದಾರೆ ಚಂದಾ ಪಾಂಡೇ.
ಶರೀರ ರಚನೆ ಮೇಲೆ ಜ್ಯೋತಿಷ್ಯ ನುಡಿಯಬಹುದು..
"ನಾವು ಫೇಲ್ಯೂರ್ ಆದಾಗ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಬರೆಯುವಾಗ ಒಂದು ಅಕ್ಷರ ಸೇರಿಸಿಕೊಂಡು ಬರೆಯುತ್ತಿದ್ದಾರೆ. ಕೆಲವೊಂದು ಶಾಸ್ತ್ರಗಳಲ್ಲಿ ಇದು ಉಂಟು ಅಂದಾಗ, ಇದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು. ಶನಿದಶಾ, ಅಷ್ಟಮ ಶನಿ, ಭುಕ್ತಿ, ಪಂಚಮ ಶನಿ, ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಅವರ ಜಾತಕ ನಾನು ನೋಡಿಲ್ಲ. ಅವರ ಶರೀರ ರಚನೆ, ಮಾನವ ಶರೀರ ರಚನೆ ನೋಡಿ ಜೋತಿಷ್ಯವನ್ನು ನುಡಿಯಬಹುದು. ಹೇಗೆ ಎಂದರೆ, ವ್ಯಕ್ತಿ ಹುಟ್ಟಿದ ನಂತರ, ಹುಟ್ಟಿದ ಸಮಯದಿಂದ ಜಾತಜ ನಿರ್ಧಾರವಾಗುತ್ತದೆ" ಎಂದಿದ್ದಾರೆ.
ಕಂಟಕದ ಬಗ್ಗೆ ಮೊದಲೇ ಸೂಚನೆ
"ಸಾಕಷ್ಟು ಸೆಲೆಬ್ರಿಟಿಗಳು ಈಗಲೂ ವಿಗ್ ಹಾಕಿದ್ದಾರೆ. ಆದರೆ, ಅವರು ಜನ್ಮದತ್ತವಾಗಿ ಬಂದ ಕೇಶ ರಚನೆ ಹೇಗಿತ್ತೋ ಅದನ್ನೇ ವಿಗ್ ರೂಪದಲ್ಲಿ ಧರಿಸಿದ್ದಾರೆ. ಆದರೆ, ದರ್ಶನ್ ಮಾತ್ರ ಅದನ್ನು ಮಾಡಿಲ್ಲ. ಮೇಲ್ಮುಖವಾಗಿ ವಿಗ್ ಮಾಡಿಸಿಕೊಂಡಿದ್ದಾರೆ. ಇನ್ನು 2018ರಲ್ಲಿ ದರ್ಶನ್ ದಸರಾದಲ್ಲಿ ಕಾರ್ ರೇಸ್‌ಗೆ ಹೋಗುವವಿದ್ದರು. ಆ ಬಗ್ಗೆ ಕೇಳಲು ಅವರ ಆಪ್ತರೊಬ್ಬರು ನನ್ನ ಬಳಿ ಬಂದಿದ್ದರು. ಆಗ ನಾನು ಹೋಗುವುದು ಬೇಡ, ದರ್ಶನ್ ಅವರಿಗೆ ಗಂಡಾಂತರವಿದೆ ಅಂತ ಹೇಳಿದ್ದೆ. ಆದರೂ ಕೇಳಿರಲಿಲ್ಲ. ರೇಸ್‌ಗೆ ಹೋದರು. ಅಪಘಾತದಲ್ಲಿ ಕೈ ಮುರಿಯಿತು. ಅದಾದ ಬಳಿಕ ಆಸ್ಪತ್ರೆಯಿಂದ ನನ್ನ ಬಳಿ ಬಂದರು. ಆದರೆ, ಮುಂದೆ ಇನ್ನು ಸಾಕಷ್ಟು ಗಂಡಾಂತರಗಳಿವೆ ಎಂದೂ ಹೇಳಿದ್ದೆ. ಆದರೆ, ಅದನ್ನು ಅವರು ಫಾಲೋ ಮಾಡಲಿಲ್ಲ" ಎಂದಿದ್ದಾರೆ.