ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್
May 16, 2024 02:55 PM IST
ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್
- ಬಹುಭಾಷಾ ನಟ ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ಜತೆಗೆ ರಾಜಕೀಯ ಮತ್ತು ಪ್ರಸಕ್ತ ಆಗುಹೋಗುಗಳ ಬಗ್ಗೆ ಅರಿತು, ಅಷ್ಟೇ ಸೂಕ್ಷ್ಮವಾಗಿಯೇ ಆಗಾಗ ಸ್ಪಂದಿಸುತ್ತಿರುತ್ತಾರೆ. ಅದರಲ್ಲೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಸದಾ ಹರಿಹಾಯುತ್ತಲೇ ಇರುತ್ತಾರೆ. ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
Kishore on Pm Modi: ಸ್ಯಾಂಡಲ್‌ವುಡ್ ಸೇರಿ ಬಹುಭಾಷೆಯ ಸಿನಿಮಾಗಳಲ್ಲೂ ಗುರುತಿಸಿಕೊಂಡಿರುವ ನಟ ಕಿಶೋರ್ (Actor Kishore) ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ಅದರಲ್ಲೂ ರಾಜಕೀಯದ ಜತೆಗೆ ಪ್ರಸಕ್ತ ಆಗುಹೋಗುಗಳ ಬಗ್ಗೆ ಅರಿತು, ಅಷ್ಟೇ ಸೂಕ್ಷ್ಮವಾಗಿಯೇ ಸ್ಪಂದಿಸುತ್ತಾರೆ. ಅದರಲ್ಲೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ (PM Narendra Modi) ವಿರುದ್ಧ ಸದಾ ಹರಿಹಾಯುತ್ತಲೇ ಇರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ನೇರವಾಗಿ ಮೋದಿಯನ್ನೇ ಗುರಿಯಾಗಿಸಿಕೊಂಡು, ನಿಮ್ಮ ದಶಕಗಳ ಸಾಧನೆ ಏನು ಎಂಬುದನ್ನು ಹೇಳಿ ಎಂದು ಚಾಟಿ ಬೀಸಿದ್ದಾರೆ. ಜತೆಗೆ ಕೊಂಚ ಬಿರುಸಾಗಿಯೇ ತಮ್ಮ ಆಕ್ರೋಶವನ್ನು ಪದಗಳ ಮೂಲಕ ಹೊರಹಾಕಿದ್ದಾರೆ.
ಕಿಶೋರ್ ಪೋಸ್ಟ್‌ನಲ್ಲೇನಿದೆ?
"ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ .. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ, ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ, ಅತೀ ಅಪಾಯಕಾರಿ, ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ.
ಮೋದಿ ವಿರುದ್ಧ ಚಾಟಿ ಬೀಸಿದ ಕಿಶೋರ್
10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ.. ಬರೀ ಸುಳ್ಳು, ದ್ವೇಷ ಕಾರುವುದು. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕೀಸ್ಥಾನವಂತೆ, ರೂಮು ಕಿತ್ಕೊತಾರಂತೆ, ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ, ಮಂದಿರಕ್ಕೆ ಬೀಗವಂತೆ … ಬರೀ ತಲೆಬುಡವಿಲ್ಲದ ಮಾತುಗಳು. ಮುಸ್ಲಿಂ ಬಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ" ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಮೋದಿ ಗ್ಯಾರಂಟಿಯನ್ನೂ ಟೀಕಿಸಿದ್ದ ನಟ
ಕಳೆದ ವಾರ ಮೋದಿ ಗ್ಯಾರಂಟಿ ವಿಚಾರವಾಗಿಯೂ ನಟ ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಹೀಗಿದೆ ಅವರ ಬರಹ. "ತಾನೂ ಕೆಲಸ ಮಾಡದೆ , ದೇಶದ ಯುವ ಜನತೆಯನ್ನೂ, ಏನು ಮಾಡುತ್ತಿದ್ದೇವೆ ಎಂದೇ ಗೊತ್ತಿಲ್ಲದ ತಮ್ಮ ಒಳಿತು ಕೆಡುಕು ತಿಳಿಯದ ಓದು ಬರಹ ಕೂಡ ಸರಿಯಾಗಿ ತಿಳಿಯದ ಮೂರ್ಖ ದೊಂಬಿಯಾಗಿ ಮಾರ್ಪಡಿಸಿದ ಮೋದಿ ಮಾಡೆಲ್. ಐಐಟಿಯಲ್ಲಿ ಓದಿದರೂ ಕೆಲಸವಿಲ್ಲದ, ಸೇನಾಕಾಂಕ್ಷಿಗಳನ್ನು ಕೂಲಿ ಯೋಧರನ್ನಾಗಿ ಮಾಡಿದ ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಪ್ರಶ್ನೆಕೇಳದೆ.. ಆ ಭ್ರಷ್ಠರ ಕೈಗೊಂಬೆಯಾಗಿ ಇಲ್ಲದ ಅನುವಂಶಿಕ ತೆರಿಗೆಯ ವಿರುದ್ಧ, ಅಧಿಕಾರಕ್ಕೆ ಬಂದರೆ ಆ ಯುವಜನತೆಗೇ ವರ್ಷಕ್ಕೆ 1 ಲಕ್ಷ ಸಂಬಳದ ಜೊತೆಗೆ ಕೆಲಸದ ತರಬೇತಿಯ ಹಕ್ಕು ಕೊಡುತ್ತೇವೆಂದು ಹೇಳುವ ಅಧಿಕಾರದಲಿಲ್ಲದ ವಿರೋಧ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸುವ ಮೂರ್ಖತನಕ್ಕೆ ತಳ್ಳುವ ಒಬ್ಬ ಮಹಾನ್ ಸುಳ್ಳನ ಮಾತನ್ನು ಅಂಧಭಕ್ತಿಯಲ್ಲಿ ನಂಬಿದರೆ ನಿಮ್ಮ ಮಕ್ಕಳ ಗತಿ ಏನಾಗಬಹುದು ಯೋಚಿಸಿ" ಎಂದಿದ್ದರು.