logo
ಕನ್ನಡ ಸುದ್ದಿ  /  ಮನರಂಜನೆ  /  Jaggesh: ಹೊಸ ವರ್ಷಕ್ಕೆ ನಟ ಜಗ್ಗೇಶ್‌ಗೆ ಉಡುಗೊರೆಯಾಗಿ ಸಿಕ್ತು ಅನಾರೋಗ್ಯ! ‌ ಹಾಸಿಗೆ ಹಿಡಿದು ಮನವಿ ಮಾಡಿದ ನವರಸ ನಾಯಕ

Jaggesh: ಹೊಸ ವರ್ಷಕ್ಕೆ ನಟ ಜಗ್ಗೇಶ್‌ಗೆ ಉಡುಗೊರೆಯಾಗಿ ಸಿಕ್ತು ಅನಾರೋಗ್ಯ! ‌ ಹಾಸಿಗೆ ಹಿಡಿದು ಮನವಿ ಮಾಡಿದ ನವರಸ ನಾಯಕ

Dec 31, 2023 02:36 PM IST

google News

Jaggesh: ಹೊಸ ವರ್ಷಕ್ಕೆ ನಟ ಜಗ್ಗೇಶ್‌ಗೆ ಉಡುಗೊರೆಯಾಗಿ ಸಿಕ್ತು ಅನಾರೋಗ್ಯ! ‌ ಹಾಸಿಗೆ ಹಿಡಿದು ಮನವಿ ಮಾಡಿದ ನವರಸ ನಾಯಕ

    • ನಟ ಜಗ್ಗೇಶ್‌ಗೆ ಹೊಸ ವರ್ಷದ ಹೊಸ್ತಿಲಲ್ಲಿಯೇ ಗಿಫ್ಟ್‌ ಸಿಕ್ಕಿದೆ. ಅನಾರೋಗ್ಯದ ಗಿಫ್ಟ್‌ ಪಡೆದುಕೊಂಡು, ಜನರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ ಅವರು. ಹೀಗಿದೆ ನವರಸ ನಾಯಕನ ಮಾತು. 
Jaggesh: ಹೊಸ ವರ್ಷಕ್ಕೆ ನಟ ಜಗ್ಗೇಶ್‌ಗೆ ಉಡುಗೊರೆಯಾಗಿ ಸಿಕ್ತು ಅನಾರೋಗ್ಯ! ‌ ಹಾಸಿಗೆ ಹಿಡಿದು ಮನವಿ ಮಾಡಿದ ನವರಸ ನಾಯಕ
Jaggesh: ಹೊಸ ವರ್ಷಕ್ಕೆ ನಟ ಜಗ್ಗೇಶ್‌ಗೆ ಉಡುಗೊರೆಯಾಗಿ ಸಿಕ್ತು ಅನಾರೋಗ್ಯ! ‌ ಹಾಸಿಗೆ ಹಿಡಿದು ಮನವಿ ಮಾಡಿದ ನವರಸ ನಾಯಕ

Jaggesh: ಸ್ಯಾಂಡಲ್‌ವುಡ್‌ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಸಿನಿಮಾಗಳಿಂದ ಕೊಂಚ ದೂರವೇ ಉಳಿದಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಬಳಿಕ, ಅವರ ಬೇರಾವ ಚಿತ್ರದ ಬಗ್ಗೆ ಸುದ್ದಿಯಿಲ್ಲ. ಹಾಗಂತ ಚಿತ್ರರಂಗದಿಂದ ಅವರು ದೂರವಾಗಿಲ್ಲ. ರಾಜಕೀಯದ ಕಡೆಗೆ ಹೆಚ್ಚು ವಾಲಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ರಾಜಕೀಯ ವಿಚಾರಗಳ ಬಗ್ಗೆಯೇ ಹೆಚ್ಚು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ರಾಮಮಂದಿರ ಉದ್ಘಾಟನೆಗೆ ಸಮಯ ಹತ್ತಿರ ಬರುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ಪೋಸ್ಟ್‌ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಆರೋಗ್ಯ ಸರಿಯಿಲ್ಲ ಎಂಬುದನ್ನೂ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ ಜಗ್ಗೇಶ್.‌

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿರುವ ನವರಸ ನಾಯಕ ಜಗ್ಗೇಶ್‌, ಅನಾರೋಗ್ಯಕ್ಕೆ ತುತ್ತಾದ ವಿಚಾರವನ್ನು ಹೇಳಿಕೊಂಡು ಎಲ್ಲರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ. ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ಹೊರಗಡೆ ಬರಬೇಡಿ, ಬೇರೆಯವರಿಗೂ ಅಂಟಿಸಬೇಡಿ ಎಂದಿದ್ದಾರೆ.

ಜಗ್ಗೇಶ್‌ ಹೇಳಿದ್ದೇನು?

"ನಿಮ್ಮ ಮೇಲೆ ನನಗೆ ಪ್ರೀತಿ ಹೆಚ್ಚಿದೆ. ಹಾಗಾಗಿ ಧೈರ್ಯವಾಗಿಯೇ ಹೇಳುತ್ತೇನೆ. ಜ್ವರ, ಕೆಮ್ಮು, ನೆಗಡಿ ಬಂದಾಗ ದಯವಿಟ್ಟು ಮಾಸ್ಕ್‌ ಹಾಕಿಕೊಳ್ಳುವುದನ್ನು ಕಲಿತುಕೊಳ್ಳಿ. ಬೇರೆಯವ್ರಿಗೂ ತೊಂದರೆ ಆಗದೇ ಇರೋ ಥರ ಇರಲು ಟ್ರೈ ಮಾಡಿ. ಮಾಮೂಲಿ ಜ್ವರ ನೆಗಡಿ ಕೆಮ್ಮೂ ಬಂದ್ರೂ ಸಹ, ಅದನ್ನು ಎಲ್ಲರಿಗೂ ಅಂಟಿಸುವ ಕೆಲಸ ಮಾಡಬೇಡಿ. ದಯವಿಟ್ಟು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆಯಿರಿ"

"ಅನಾರೋಗ್ಯ ಇದ್ದರೂ ಸಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇತರರಿಗೂ ಅನಾರೋಗ್ಯವನ್ನು ಹರಡಬೇಡಿ. ಮಾಸ್ಕ್ ಹಾಕಿಕೊಳ್ಳುವುದನ್ನು ಕಲಿತುಕೊಳ್ಳಿ, ನಿಮ್ಮ ಆರೋಗ್ಯದ ಜತೆಗೆ ಬೇರೆಯವ್ರ ಬಗ್ಗೆಯೂ ಕಾಳಜಿವಹಿಸಿ. ಮಾಮೂಲಿಯಾಗಿ ಜ್ವರ ನೆಗಡಿ ಬಂದರೂ ಶುಚಿಯಾಗಿರಿ. ಎಲ್ಲರಿಗೂ ಹರಡಿಸುವ ಕೆಲಸ ಮಾಡಬೇಡಿ"

‘‘ನನ್ನನ್ನು ಗೀತಾ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಅಲ್ಲಿಗೆ ಹೋಗಿದ್ದೆ. ತುಂಬಾ ಜನ ಪ್ರೀತಿಯಿಂದ ಫೋಟೊ ತೆಗೆಸಿಕೊಳ್ಳಲು ಬಂದರು. ಬೇಡ ಅನ್ನೋಕೆ ಆಗಲ್ಲ. ಬೇಡ ಅಂದರೆ ಬೇಜಾರು ಮಾಡಿಕೊಳ್ತಾರೆ. ಮಾಸ್ಕ್ ಹಾಕಿಕೊಂಡ್ರೆ ದುರಹಂಕಾರ ಅಂದುಕೊಳ್ಳುತ್ತಾರೆ ಎಂದು ಮಾಸ್ಕ್ ತೆಗೆದು ನಾರ್ಮಲ್‌ ಆಗಿ ಫೋಟೊ ತೆಗೆಸಿಕೊಂಡೆ"

"ಯಾರೋ ಪುಣ್ಯಾತ್ಮರು ನನಗೂ ಅವನ ಅನಾರೋಗ್ಯವನ್ನು ಪ್ರಸೆಂಟೇಷನ್‌ ಕೊಟ್ಟಿದ್ದಾನೆ. ನಾನು ಏಳು ದಿನವಾಯ್ತು ಎದ್ದೇಳಲೂ ಆಗುತ್ತಿಲ್ಲ. ಅನಾರೋಗ್ಯಕ್ಕೆ ಈಡಾಗಿ, ಬೆಡ್​ನಿಂದ ಏಳುವುದಕ್ಕೂ ಆಗ್ತಿಲ್ಲ. ಮಾತ್ರೆ ಔಷಧಿ ತೆಗೆದುಕೊಂಡು ಮಲಗಿದ್ದೀನಿ. ಒಂದು ಸಣ್ಣ ವಿನಂತಿ ಪ್ಲೀಸ್.‌ ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ಬೇರೆಯವರಿಗೆ ಅಂಟಿಸಬೇಡಿ" ಎಂದು ಮನವಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ