logo
ಕನ್ನಡ ಸುದ್ದಿ  /  ಮನರಂಜನೆ  /  ಸಂಸತ್‌ ಭವನದ ತುಂಬಾ ಸಾಧು ಸಂತರು, ಇದು ಭವಿಷ್ಯದ ಸಾಧ್ಯತೆ; ಪ್ರಕಾಶ್‌ ರಾಜ್‌ ಹೊಸ ಟ್ವೀಟ್‌

ಸಂಸತ್‌ ಭವನದ ತುಂಬಾ ಸಾಧು ಸಂತರು, ಇದು ಭವಿಷ್ಯದ ಸಾಧ್ಯತೆ; ಪ್ರಕಾಶ್‌ ರಾಜ್‌ ಹೊಸ ಟ್ವೀಟ್‌

HT Kannada Desk HT Kannada

Sep 04, 2023 06:02 PM IST

google News

ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರನ್ನು ಗುರಿಯಾಗಿಸಿ ಪ್ರಕಾಶ್‌ ರಾಜ್‌ ಟ್ವೀಟ್‌ ( ಸಂಗ್ರಹ ಚಿತ್ರ: 'ಡಮರುಗಂ' ತೆಲುಗು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಪ್ರಕಾಶ್‌ ರಾಜ್)

  • ಪ್ರೀತಿಯ ಪ್ರಜೆಗಳೇ, ಇದು ಭವಿಷ್ಯದ ಸಾಧ್ಯತೆ, #ತನಾತನಿ ಸಂಸತ್ತು ನಿಮಗಿದು ಒಪ್ಪಿಗೆಯೇ? ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ. ಸಂಸತ್‌ ಭವನದಲ್ಲಿ ಭವಿಷ್ಯದಲ್ಲಿ ಸಾಧು ಸಂತರು ತುಂಬಿರುತ್ತಾರೆ ಎಂಬರ್ಥದಲ್ಲಿ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರನ್ನು ಗುರಿಯಾಗಿಸಿ ಪ್ರಕಾಶ್‌ ರಾಜ್‌ ಟ್ವೀಟ್‌ ( ಸಂಗ್ರಹ ಚಿತ್ರ: 'ಡಮರುಗಂ' ತೆಲುಗು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಪ್ರಕಾಶ್‌ ರಾಜ್)
ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರನ್ನು ಗುರಿಯಾಗಿಸಿ ಪ್ರಕಾಶ್‌ ರಾಜ್‌ ಟ್ವೀಟ್‌ ( ಸಂಗ್ರಹ ಚಿತ್ರ: 'ಡಮರುಗಂ' ತೆಲುಗು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಪ್ರಕಾಶ್‌ ರಾಜ್) (PC: Prakash Raj Facebook)

ಪ್ರಕಾಶ್‌ ರಾಜ್‌ ಪ್ರತಿದಿನ ಒಂದಲ್ಲಾ ಒಂದು ವಿವಾದಾತ್ಮಕ ಟ್ವೀಟ್‌ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಇಸ್ರೋ ವಿಜ್ಞಾನಿಗಳ ಬಗ್ಗೆ ಅಪಹಾಸ್ಯ ಮಾಡಿದ್ದ ಪ್ರಕಾಶ್‌ ರಾಜ್‌, ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ತಮ್ಮ ಟ್ವೀಟ್‌ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ಲೇಟ್‌ ಬದಲಿಸಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಹೊಗಳಿಸಿದ್ದರು.

ಹಿಂದೂಗಳು ಸನಾತನಿಗಳಲ್ಲ‌ ಎಂದ ಪ್ರಕಾಶ್‌ ರಾಜ್

ಇದೀಗ ಪ್ರಕಾಶ್‌ ರಾಜ್‌ ಸನಾತನ ಧರ್ಮದ ಬಗ್ಗೆ ಮತ್ತೊಂದು ಟ್ವೀಟ್‌ ಮಾಡಿ ಮತ್ತೆ ವಿವಾದಕ್ಕೆ ಒಳಗಾಗಿದ್ಧಾರೆ. ಇತ್ತಿಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಪುತ್ರ, ನಟ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಪ್ರಕಾಶ್‌ ರಾಜ್‌ ಕೂಡಾ ಟ್ವೀಟ್‌ ಮಾಡಿ, ''ಹಿಂದೂಗಳು ಸನಾತನಿಗಳಲ್ಲ, ಸನಾತನಿಗಳು ಮಾನವ ವಿರೋಧಿಗಳು, ನಿಮಗೆ ಒಪ್ಪಿಗೆ ಎನಿಸಿದಲ್ಲಿ ರೀಟ್ವೀಟ್‌ ಮಾಡಿ'' ಎಂದು ಟ್ವೀಟ್‌ ಮಾಡಿದ್ದರು. ಈ ಪೋಸ್ಟ್‌ಗೆ ನೆಟಿಜನ್ಸ್‌ ಪ್ರಕಾಶ್‌ ರಾಜ್‌ ಟ್ರೋಲ್‌ ಮಾಡಿ ಕಾಮೆಂಟ್‌ ಮಾಡಿದ್ದರು. ಇಂದು ಮತ್ತೊಂದು ಟ್ವೀಟ್‌ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾಧು ಸಂತರನ್ನು ಟೀಕಿಸಿದ್ದಾರೆ.

ಸಂಸತ್‌ ಭವನದದಲ್ಲಿ ಸಾಧು ಸಂತರು

ಹೊಸ ಸಂಸತ್‌ ಭವನ ಉದ್ಘಾಟನೆ ಸಮಯದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಾಧು ಸಂತರು ತೆಗೆಸಿಕೊಂಡಿದ್ದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರಕಾಶ್‌ ರಾಜ್‌, ''ಪ್ರೀತಿಯ ಪ್ರಜೆಗಳೇ, ಇದು ಭವಿಷ್ಯದ ಸಾಧ್ಯತೆ, #ತನಾತನಿ ಸಂಸತ್ತು ನಿಮಗಿದು ಒಪ್ಪಿಗೆಯೇ?'' ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ. ಸಂಸತ್‌ ಭವನದಲ್ಲಿ ಭವಿಷ್ಯದಲ್ಲಿ ಸಾಧು ಸಂತರು ತುಂಬಿರುತ್ತಾರೆ ಎಂಬರ್ಥದಲ್ಲಿ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ನೆಟಿಜನ್ಸ್‌ ವಿರೋಧ

ಪ್ರಕಾಶ್‌ ರಾಜ್‌ ಹೀಗೆ ಪ್ರತಿ ಬಾರಿಯೂ ಅಸಂಬದ್ಧ ಹೇಳಿಕೆ ನೀಡುತ್ತಾ ಪೋಸ್ಟ್‌ ಹಂಚಿಕೊಳ್ಳುವುದು ನೆಟ್ಟಿಗರನ್ನು ಕೆರಳಿಸಿದೆ. ಇಂಥಹ ಪೋಸ್ಟ್‌ಗಳನ್ನು ಹಂಚಿಕೊಂಡರೆ ಜನರು ವಿರೋಧಿಸುತ್ತಾರೆ ಎಂದು ತಿಳಿದೂ ಈ ರೀತಿ ಏಕೆ ಮಾಡುತ್ತಿದ್ದೀರಿ? ನಟನಾಗಿ ಸಿನಿಮಾಗಳತ್ತ ಗಮನ ಹರಿಸಿ, ನೀವೂ ಕೂಡಾ ಹಿಂದೂ ಆಗಿ ಈ ರೀತಿ ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪ್ರಕಾಶ್‌ ರಾಜ್‌ ಫೋಟೋವನ್ನು ವಿಧ ವಿಧವಾಗಿ ಎಡಿಟ್‌ ಮಾಡುವ ಮೂಲಕ ಟ್ರೋಲ್‌ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ