logo
ಕನ್ನಡ ಸುದ್ದಿ  /  ಮನರಂಜನೆ  /  Prakash Raj: ನಾನು ಹುಟ್ಟಿದ್ದು ನಮ್ಮ ಅಪ್ಪ, ಅಮ್ಮನಿಗೆ ಹೊರತು ಸನಾತನ ಧರ್ಮಕ್ಕಲ್ಲ; ಪ್ರಕಾಶ್‌ ರಾಜ್‌

Prakash Raj: ನಾನು ಹುಟ್ಟಿದ್ದು ನಮ್ಮ ಅಪ್ಪ, ಅಮ್ಮನಿಗೆ ಹೊರತು ಸನಾತನ ಧರ್ಮಕ್ಕಲ್ಲ; ಪ್ರಕಾಶ್‌ ರಾಜ್‌

HT Kannada Desk HT Kannada

Sep 06, 2023 06:05 AM IST

google News

Prakash Raj: ನಾನು ಹುಟ್ಟಿದ್ದು ನಮ್ಮ ಅಪ್ಪ, ಅಮ್ಮನಿಗೆ ಸನಾತನ ಧರ್ಮಕ್ಕಲ್ಲ; ಪ್ರಕಾಶ್‌ ರಾಜ್‌ ಹೇಳಿಕೆ

    • ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ. ನಾನು ನನ್ನ ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆಯೇ ಹೊರತು ಸನಾತನ ಧರ್ಮಕ್ಕಲ್ಲ ಎಂದಿದ್ದಾರೆ.
Prakash Raj: ನಾನು ಹುಟ್ಟಿದ್ದು ನಮ್ಮ ಅಪ್ಪ, ಅಮ್ಮನಿಗೆ ಸನಾತನ ಧರ್ಮಕ್ಕಲ್ಲ; ಪ್ರಕಾಶ್‌ ರಾಜ್‌ ಹೇಳಿಕೆ
Prakash Raj: ನಾನು ಹುಟ್ಟಿದ್ದು ನಮ್ಮ ಅಪ್ಪ, ಅಮ್ಮನಿಗೆ ಸನಾತನ ಧರ್ಮಕ್ಕಲ್ಲ; ಪ್ರಕಾಶ್‌ ರಾಜ್‌ ಹೇಳಿಕೆ

Prakash Raj: ಕಳೆದ ಎರಡು ದಿನಗಳಿಂದ ಸನಾತನ ಧರ್ಮದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ, ನಟ ಪ್ರಕಾಶ್‌ ರಾಜ್‌ ಹೇಳಿಕೆ ನೀಡಿದ್ದಾರೆ. ನಾನು ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದೆನೆಯೇ ಹೊರತು ಸನಾತನ ಧರ್ಮಕ್ಕಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್‌ ವತಿಯಿಂದ ನಡೆದ, ಗೌರಿ ಲಂಕೇಶ್‌ ಅವರ 6ನೇ ಹುತಾತ್ಮ ದಿನದ ಅಂಗವಾಗಿ ನಡೆದ ಸರ್ವಾಧಿಕಾರದ ಕಾಲದಲ್ಲಿ ಭಾರತದ ಮರು ಕಲ್ಪನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ.

“ನಿಮಗೆ ಗೊತ್ತಿರಲಿ, ನಾವು ಗೌರಿಯನ್ನು ಹೂಳಲಿಲ್ಲ. ಬಿತ್ತಿದ್ದೇವೆ. ಆ ಒಂದು ಧ್ವನಿಯನ್ನು ಅಡಗಿಸಿದ್ದಕ್ಕೆ, ನೂರಾರು ಗೌರಿಯರಾಗಿ ನಾವು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ ನಾವು ಮೌನವಾಗಿರುವುದು ಸರಿಯಲ್ಲ. ಅದು ಇಡೀ ದೇಶವನ್ನೇ ಸುಡುತ್ತದೆ. ಮೊದಲು ನಾವು ಧ್ವನಿ ಎತ್ತಬೇಕು. ಪ್ರಶ್ನೆ ಮಾಡಬೇಕು. ಹಾಗೆ ಪ್ರಶ್ನೆ ಮಾಡಿದರೆ ಕೆಲವರು ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಹಾಗೆ ಬರುವವರು ಧೀರರಲ್ಲ, ಹೇಡಿಗಳು” ಎಂದು ಪ್ರಕಾಶ್‌ ಹೇಳಿದ್ದಾರೆ.

“ಇದೇ ವೇಳೆ ನಾನು ಇಲ್ಲಿಗೆ ಬರುವ ಮುನ್ನ ಖಾಸಗಿ ಚಾನೆಲ್​ನಲ್ಲಿ ಸಂದರ್ಶನಕ್ಕೆ ಹೋಗಿದ್ದೆ, ಅಲ್ಲಿ ಅದಾಲತ್​ ನಡೆಸುತ್ತೇವೆ ಎಂದು ಹೇಳಿದ್ದರು. ಸುಮಾರು 30 ಮಂದಿ ಇದ್ದರು, ಅವರೆಲ್ಲರು ಕಾವಿ ಧರಿಸಿದ್ದರು. ಅದರಲ್ಲೊಬ್ಬ ನೀವು ಕಾಂಗ್ರೆಸ್​​ನವರ ಎಂದ, ಅದಕ್ಕೆ ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ಮತ್ತೊಬ್ಬ ನೀವು ಸನಾತನ ಧರ್ಮ ಅಲ್ವಾ ಎಂದು ಪ್ರಶ್ನೆ ಕೇಳಿದಾ, ಅದಕ್ಕೆ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ” ಎಂದು ಪ್ರಕಾಶ್​ ರಾಜ್ ಹೇಳಿಕೆ ನೀಡಿದ್ದಾರೆ.

ಎಲ್ಲಿಂದ ಶುರು?

ಇತ್ತೀಚೆಗಷ್ಟೇ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಬಹಿರಂಗ ವೇದಿಕೆಯಲ್ಲಿ ಸನಾತನ ಧರ್ಮದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದರು. ಅದನ್ನು ವಿರೋಧಿಸುವುದಕ್ಕಿಂತ ನಿರ್ಮೂಲನೆ ಮಾಡಬೇಕು ಎಂದಿದ್ದರು. ಈ ಹೇಳಿಕೆ ಎಲ್ಲೆಡೆ ವೈರಲ್‌ ಆಗಿ ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ