ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್; ತಲೇಲಿ ಬುದ್ಧಿ ಇಲ್ವಾ ಎಂದು ತಿವಿದ ನೆಟ್ಟಿಗರು, ಟೀಕೆಯ ಸುರಿಮಳೆ
Oct 01, 2023 01:57 PM IST
ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್; ತಲೇಲಿ ಬುದ್ಧಿ ಇಲ್ವಾ ಎಂದು ತಿವಿದ ನೆಟ್ಟಿಗರು, ಟೀಕೆಯ ಸುರಿಮಳೆ
- ನಟ ಪ್ರೇಮ್ ಕಾವೇರಿ ನೀರು ವಿಚಾರವಾಗಿ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಅದರ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಶೇರ್ ಮಾಡಿದ್ದಾರೆ. ನಟನ ಈ ಪೋಸ್ಟ್‌ಗೆ ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Nenapirali Prem: ಕಾವೇರಿ ನದಿ ನೀರು ಹಂಚಿಕೆ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಮಾಡಿದರೂ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಮತ್ತೊಂದು ಕಡೆ ಇದೇ ಕಾವೇರಿ ಹೋರಾಟಕ್ಕೆ ಕನ್ನಡದ ಸಿನಿಮಾ ಮಂದಿ ಬೆಂಬಲ ಸೂಚಿಸಿದ್ದಾರೆ. ಬಹುತೇಕ ಚಿತ್ರೋದ್ಯಮ ಈ ಕಾರ್ಯಕ್ಕೆ ಕೈ ಜೋಡಿಸಿ ಕಾವೇರಿ ನಮ್ಮದು ಎಂದಿದೆ. ಈ ನಡುವೆಯೇ ನಟ ನೆನಪಿರಲಿ ಪ್ರೇಮ್ ಒಂದು ಹೆಜ್ಜೆ ಮುಂದೆ ಹೋಗಿ ರಕ್ತದಲ್ಲಿಯೇ ಕಾವೇರಿ ನಮ್ಮದು ಎಂದು ಪತ್ರ ಬರೆದಿದ್ದಾರೆ.
ಕಾವೇರಿ ಹೋರಾಟ ಭುಗಿಲೆದ್ದ ಬಳಿಕ ಬಹುತೇಕ ಕನ್ನಡದ ಸಿನಿಮಾ ನಟ, ನಟಿಯರು ಕಾವೇರಿಗಾಗಿ ಜೀವ ಕೊಡಲೂ ಸಿದ್ಧ, ಕಾವೇರಿ ನಮ್ಮದು ಎಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇದೀಗ ನಟ ನೆನಪಿರಲಿ ಪ್ರೇಮ್, ತಮ್ಮ ರಕ್ತದಲ್ಲಿ ಕಾವೇರಿ ನಮ್ಮದು ಎಂದು ಬರೆದು, ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ರವಾನಿಸಿದ್ದಾರೆ. ನಟನ ಈ ಅಭಿಮಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಜತೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಪ್ರೇಮ್ ರಕ್ತದಲ್ಲಿ ಬರೆದ ಪತ್ರದಲ್ಲೇನಿದೆ?
ಗೆ, ನರೇಂದ್ರ ಮೋದಿಜೀ, ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ, ದಯಮಾಡಿ ಕಾವೇರಿಗೆ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಿ. ಕಾವೇರಿ ನಮ್ಮದು. ನೆನಪಿರಲಿ, ಪ್ರೇಮ್ ಚಿತ್ರನಟ ಎಂದು ಬರೆದು, ತಮ್ಮ ಅಂಗೈಗೂ ರಕ್ತ ಹಚ್ಚಿಕೊಂಡು ಕೈ ಗುರುತು ಹಾಕಿ ಮೋದಿಗೆ ರವಾನಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ
ನಟ ಪ್ರೇಮ್ ಹೀಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ರಕ್ತದಲ್ಲಿ ಬರೆದ ಪತ್ರವನ್ನು ಹಂಚಿಕೊಳ್ಳುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ನಟನ ಪೋಸ್ಟ್‌ಗೆ ನೆಗೆಟಿವ್ ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ಆಯ್ದ ಕೆಲವರು ಪ್ರತಿಕ್ರಿಯೆ ಇಲ್ಲಿವೆ.
- ತಲೆಲಿ ಬುದ್ಧಿ ಇದ್ದವರು ಇಲ್ಲಿಯ ಸರ್ಕಾರನ ಕೇಳಬೇಕು, ಮೋದಿನ ಮಧ್ಯ ಯಾಕೆ ತರ್ತಿರಿ ಹಾ, ಊಟ ಬೇಕಾದರೆ ಹೋಟೆಲ್ಗೆ ಹೋಗಬೇಕು ಜುವೆಲ್ಲರಿ ಶಾಪ್‌ಗೆ ಅಲ್ಲ....
- ತಪ್ಪಿರೋದು ರಾಜ್ಯ ಸರ್ಕಾರದ್ದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿ ಮೊದಲು
- ಸಿದ್ರಾಮಯ್ಯ ನನ್ನ ಕೇಳಿ ಮೊದಲು. 60 ವರ್ಷ ಕೇಂದ್ರ 45 ವರ್ಷ ರಾಜ್ಯದಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್, ಕಾವೇರಿ ನೀರಿನ ಸಮಸ್ಯೆ ಯಾಕೆ ಬಗೆಹರಿಸಲಿಲ್ಲ. ಈ ನಾಟಕಗಳನ್ನೆಲ್ಲ ಬಿಟ್ಟು ಮೊದಲು ಕರ್ನಾಟಕ ಸಿದ್ದರಾಮಯ್ಯನನ್ನು ಸ್ಟಾಲಿನ್‌ಗೆ ಸ್ನೇಹದಿಂದ ಬಿಟ್ಟಿರೋ ನೀರನ್ನು ವಾಪಾಸ್ ತರಕ್ ಆಗುತ್ತಾ. ಮೋದಿನ ಸೋಲಿಸಬೇಕು ಅಂತ ಸಿದ್ದರಾಮಯ್ಯ ಮತ್ತು ಸ್ಟಾಲಿನ್ ಇಬ್ಬರು ಸೇರ್ಕೊಂಡು ಕಾವೇರಿ ನೀರನ್ನು ಕುಡಿತಿದ್ದಾರೆ. ರಾಜ್ಯದ ಜನ ಬುದ್ಧಿ ಕಲಿಯಿರಿ. ಇನ್ನಾದರೂ ಇಂತಹ ಗೋಮುಖ ವ್ಯಾಘ್ರ ಗಳನ್ನ ದೂರವಿಡಿ. ಜೈ ಹಿಂದ್ ಜೈ ಮೋದಿಜಿ ಜೈ ಬಿಜೆಪಿ
- ಇದೊಂದು ಕಾಮನ್ ಸೆನ್ಸ್ ಇರುವ ವಿಚಾರ. ಇದು ಎರಡು ರಾಜ್ಯಗಳ ನಡುವಿನ ವಿಚಾರ. ಆದರೆ ನಿಮ್ಮಂಥವರು ಇದರ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿದ್ದೀರಿ.
- ಅಣ್ಣ ನಾನು ನಿಮ್ಮ ಅಭಿಮಾನಿ. ಯಾಕೆ ಅಣ್ಣ ಎಲ್ಲಾರೂ ಮೋದಿ ಕೊಡಿ ಅಂತೀರಾ. "ಹಾಕ್ರಿ ಹೇ ಸಿಎಂ ಸಿದ್ದ ತಾಕತ್ ಇದ್ರೆ ನೀರ್ ಬಿಡಬೇಡ ಕಣೋ" ಅಂತ ಪತ್ರ ಬರೀರಿ ಅಣ್ಣ. ಡಿಕೆಗೂ ಪತ್ರ ಹಾಕ್ರಿ.
- ಮೋದಿಗಲ್ಲ ಸಿದ್ದುಗ ಕೇಳು .... ಉಪೇಂದ್ರ ಅವರ ಮಾತು ಒಮ್ಮೆ ಕೇಳು ಗೊತ್ತಾಗುತ್ತೆ ಎಲ್ಲಿ ಹೇಳಿದ್ರೆ ಪ್ರಾಬ್ಲಂ ಸಾಲ್ವ ಆಗುತ್ತೆ ಅಂತ.
- ನಿಮ್ಮನ್ನು ನೋಡುತ್ತಿದ್ದರೆ ಅಸಹ್ಯ ಆಗುತ್ತಿದೆ. ಯಾರನ್ನ ಕೇಳಬೇಕು ಯಾರನ್ನ ಕೇಳ್ತಾ ಇದ್ದೀರಾ. ಸಿನಿಮಾದವರು ಕಾಂಗ್ರೆಸ್ ಏಜೆಂಟ್ ಡಿಕೆ ಶಿವಕುಮಾರ್ ಏಜೆಂಟ್‌ಗಳಂತೆ ವರ್ತಿಸುವುದು ನಿಲ್ಲಿಸಿ.
- ಸರ್ ನೀವೇ ಈ ಥರ ಹುಚ್ಚಾಟ ಮಾಡಿದ್ರೆ ಪಬ್ಲಿಕ್ ಕಥೆ ಏನು ಸರ್. ಸಿಎಂಗೆ ಹೇಳೋಕೆ ಆಗದೇ ಇರೋರು ಪಿಎಂಗೆ ಏನ್ ಹೇಳ್ತಿರಾ ನೀವು. ನಮ್ ಸಿಎಂ ಸ್ಟ್ರಾಂಗ್ ಇದ್ದಾರೆ. ಯಾವ್ ಪಿಎಂ ಏನ್ ಮಾಡೋಕೆ ಸಾಧ್ಯ ಆಗುತ್ತೆ. ನಾನು ನೀರು ಬಿಡಲ್ಲ ಅಂತ ಅನ್ನಲಿ. ನೀವು ಸೆಲೆಬ್ರಿಟೀಸ್ ಇಂಗಹೆ ಮಾಡಿದ್ರೆ, ನಿಮ್ಮನ್ನ ನೋಡಿ ನಿಮ್ಮ ಫಾಲೋವರ್ಸ್ ಇನ್ನು ಜಾಸ್ತಿ ಮಾಡ್ತಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ