logo
ಕನ್ನಡ ಸುದ್ದಿ  /  ಮನರಂಜನೆ  /  ‘ಕಷ್ಟಪಟ್ಟು ಸಿನಿಮಾ ಮಾಡಿದೀವಿ, ಒಟಿಟಿಗೆ ಕಾಯ್ಬೇಡಿ, ಥಿಯೇಟರ್‌ಗೆ ಬನ್ರಪ್ಪಾ’; ‘ಶಾಖಾಹಾರಿ’ ಸಲುವಾಗಿ ರಂಗಾಯಣ ರಘು ಮನವಿ

‘ಕಷ್ಟಪಟ್ಟು ಸಿನಿಮಾ ಮಾಡಿದೀವಿ, ಒಟಿಟಿಗೆ ಕಾಯ್ಬೇಡಿ, ಥಿಯೇಟರ್‌ಗೆ ಬನ್ರಪ್ಪಾ’; ‘ಶಾಖಾಹಾರಿ’ ಸಲುವಾಗಿ ರಂಗಾಯಣ ರಘು ಮನವಿ

Feb 24, 2024 11:15 AM IST

google News

‘ಕಷ್ಟಪಟ್ಟು ಸಿನಿಮಾ ಮಾಡಿದೀವಿ, ಒಟಿಟಿಗೆ ಕಾಯ್ಬೇಡಿ, ಥಿಯೇಟರ್‌ಗೆ ಬನ್ರಪ್ಪಾ’; ‘ಶಾಖಾಹಾರಿ’ ಸಲುವಾಗಿ ರಂಗಾಯಣ ರಘು ಮನವಿ

    • ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿನ ಶಾಖಾಹಾರಿ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಪೂರ್ಣಾಂಕ ಪಡೆದುಕೊಂಡಿದೆ. ಆದರೆ, ಸಿನಿಮಾ ವೀಕ್ಷಣೆಗೆ ಪ್ರೇಕ್ಷಕ ಮಾತ್ರ ಚಿತ್ರಮಂದಿರಕ್ಕೆ ಆಗಮಿಸುತ್ತಿಲ್ಲ. ಈ ಬೇಸರವನ್ನು ಹೇಳಿಕೊಳ್ಳಲೆಂದೇ ಮಾಧ್ಯಮದ ಮುಂದೆ ಬಂದಿತ್ತು ಇಡೀ ಚಿತ್ರತಂಡ. 
‘ಕಷ್ಟಪಟ್ಟು ಸಿನಿಮಾ ಮಾಡಿದೀವಿ, ಒಟಿಟಿಗೆ ಕಾಯ್ಬೇಡಿ, ಥಿಯೇಟರ್‌ಗೆ ಬನ್ರಪ್ಪಾ’; ‘ಶಾಖಾಹಾರಿ’ ಸಲುವಾಗಿ ರಂಗಾಯಣ ರಘು ಮನವಿ
‘ಕಷ್ಟಪಟ್ಟು ಸಿನಿಮಾ ಮಾಡಿದೀವಿ, ಒಟಿಟಿಗೆ ಕಾಯ್ಬೇಡಿ, ಥಿಯೇಟರ್‌ಗೆ ಬನ್ರಪ್ಪಾ’; ‘ಶಾಖಾಹಾರಿ’ ಸಲುವಾಗಿ ರಂಗಾಯಣ ರಘು ಮನವಿ

Shakhahaari: ಶಾಖಾಹಾರಿ ಒಳ್ಳೆ ಸಿನಿಮಾ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಒಟಿಟಿಗೆ ಬಂದ್ಮೇಲೆ ಮೆಚ್ಚಿಕೊಳ್ತಾರೆ ಗೊತ್ತಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಅಲ್ಲಿ ಬರುವುದಕ್ಕೂ ಮುನ್ನ ಥಿಯೇಟರ್‌ಗೆ ಬನ್ರಪ್ಪಾ ಎಂದು ಮನವಿ ಮಾಡಿಕೊಂಡಿದ್ದಾರೆ ಚಿತ್ರದ ಮುಖ್ಯಭೂಮಿಕೆ ನಿಭಾಯಿಸಿರುವ ರಂಗಾಯಣ ರಘು.

ಸ್ಯಾಂಡಲ್‌ವುಡ್‌ ನಟ ರಂಗಾಯಣ ರಘು ನಟನೆಯ ಶಾಖಾಹಾರಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಶಾಖಾಹಾರಿ ಸಿನಿಮಾ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿದೆ.

ಕೊಟ್ಟ ಕಾಸಿಗೆ ಒಳ್ಳೆ ಎಂಟರ್ಟೈನ್ಮೆಂಟ್ ಸಿಗಬೇಕು. ಪ್ರೇಕ್ಷಕರು ಬಯಸೋದು ಇದನ್ನೇ. ಚಿತ್ರ ಚೆನ್ನಾಗಿರಬೇಕು. ಆ ಪ್ರತಿಕ್ರಿಯೆ ಶಾಖಾಹಾರಿ ಸಿನಿಮಾದಿಂದ ಸಿಕ್ಕಿದೆ. ಆದ್ರೆ ಪ್ರೇಕ್ಷಕಪ್ರಭು ಥಿಯೇಟರ್‌ನತ್ತ ಹೆಜ್ಜೆ ಇಡುತ್ತಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರಲಿ ಅನ್ನುವ ಆಶಯವನ್ನು ಹೇಳಿಕೊಳ್ಳುವ ಉದ್ದೇಶಕ್ಕೆ ಮಾಧ್ಯಮದ ಮುಂದೆ ಬಂದಿತ್ತು ಇಡೀ ತಂಡ.

ಕೊಳ್ಳೆಗಾಲಕ್ಕೆ ಹೋಗಿ ಮಾಟ ಮಾಡಿಸ್ಕೊಂಡು ಬರ್ಬೇಕು

"ದೊಡ್ಡ ದೊಡ್ಡವರ ಸಿನಿಮಾ ಎಂದಾಗ ಕೋಟಿ ಕೋಟಿ ಹಾಕುವ ನಿರ್ಮಾಪಕರು ಸಾಕಾಗುವುದಿಲ್ಲ. ಅದಕ್ಕೆ ಇದ್ದಾರೆ ಅವ್ರು ಮಾಡ್ತಾರೆ. ಆದರೆ ಸಣ್ಣ ಸಿನಿಮಾಗಳಿಗೆ ಇರಬೇಕಲ್ಲ. ಸಣ್ಣ ಸಣ್ಣವರು ಮಾಡಿದಾಗ ಅದು ಸಮುದ್ರವಾಗುತ್ತದೆ. ನದಿ ಹರಿವೇ ಇಲ್ಲ ಅಂದರೆ ಸಮುದ್ರಕ್ಕೆ ಕಷ್ಟವಾಗುತ್ತದೆ. ಶಿವಮೊಗ್ಗದ ನದಿ ಇದು. ಹರಿದುಕೊಂಡು ಹೋಗುತ್ತದೆ ಎಂದುಕೊಂಡರೆ, ಆದರೆ ಅವರು ಹೇಳಿದ್ದು ಕೇಳಿ ಬೇಜಾರ್ ಆಯ್ತು. ನಾವು ಕೊಳ್ಳೆಗಾಲಕ್ಕೆ ಹೋಗಬೇಕಾಗುತ್ತದೋ ಗೊತ್ತಿಲ್ಲ. ಏನು ಮಂತ್ರ ಮಾಡಬೇಕೋ. ಒಟಿಟಿಗೆ ಬಂದ್ಮೇಲೆ ಮೆಚ್ಚಿಕೊಳ್ತಾರೆ ಗೊತ್ತಿಲ್ಲ. ಹಾಗಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ರಪ್ಪ" ಎಂದರು ರಂಗಾಯಣ ರಘು.

ಕ್ಲಾಸ್‌ ಸಿನಿಮಾ ಪಟ್ಟ ಬೇಡ..

"ಯೋಗರಾಜ್ ಭಟ್‌ ಅವರಿಂದ ಶುರುವಾಗಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ದುನಿಯಾ ವಿಜಯ್, ಸೃಜನ್ ಲೋಕೇಶ್, ನವೀನ್ ಹೀಗೆ ಎಲ್ಲರೂ ಮೆಚ್ಚಿದ್ದಾರೆ. ನಮ್ಮ ಸಿನಿಮಾದವರು. ಹೊರಗಿನವರು ಬಂದು ಎಲ್ಲರೂ ಚೆನ್ನಾಗಿ ಆಗಿದೆ ಅಂದರು. ಹಾಗಂತ ಶಾಖಾಹಾರಿ ಕ್ಲಾಸ್ ಸಿನಿಮಾ ಎಂಬುದನ್ನು ನಾನು ಒಪ್ಪುವುದಿಲ್ಲ. ಒಳ್ಳೆ ಸಿನಿಮಾ ಎಂದು ಹೇಳುತ್ತೇನೆ. ಕ್ಲಾಸ್ ಮಾಸ್ ಹೋಗಿ ತುಂಬಾ ದಿನ ಆಗಿದೆ. ಒಳ್ಳೆ ಸಿನಿಮಾ ಅಷ್ಟೇ ಈಗ ಉಳಿದಿರೋದು" ಎಂದರು ರಂಗಾಯಣ ರಘು.

ರೆಸ್ಪಾನ್ಸ್‌ ಚೆನ್ನಾಗಿದೆ ಜನ ಬರ್ತಿಲ್ಲ..

"ಇಷ್ಟು ಪಬ್ಲಿಸಿಟಿ ಮಾಡಿದರೂ ಯಾಕೆ ಜನಕ್ಕೆ ರೀಚ್ ಆಗುತ್ತಿಲ್ಲ. ನಾವು ಕ್ಲಾಸ್ ಸಿನಿಮಾ ಎಂದುಕೊಂಡು ಒಂದಷ್ಟು ಸೀಮಿತ ಜನಕ್ಕೆ ನಮ್ಮದೇ ಆದ ಒಂದು ಟಾರ್ಗೆಟ್ ಆಡಿಯನ್ಸ್ ಮಾಡಿಕೊಂಡೆವು. ಅದು ರಿಲೀಸ್ ಆದ್ಮೇಲೆ ಅದು ತೆಗೆದುಕೊಂಡ ವಿಸ್ತಾರ, ಜನರಿಗೆ ರೀಚ್ ಆಗಿದ್ದು ಇರಬಹುದು. ಬಿಕೆಟಿ ಸೆಂಟರ್‌ಗಳಲ್ಲಿ ಜನ ತುಂಬಿ ಎಂಜಾಯ್ ಮಾಡಿದರು. ನಾವು ಅದನ್ನು ಮುಂಚಿನಿಂದಲೇ ಟಾರ್ಗೆಟ್ ಮಾಡಿಕೊಂಡು ಬಂದಿದ್ದರೆ ಬಹುಶಃ ಈ ಸಣ್ಣ ಸಮಸ್ಯೆ ಎದುರುರಾಗ್ತಿರಲಿಲ್ಲ ಎನಿಸಿತು. ನಮ್ಮ ಸುತ್ತ ವಲಯದಲ್ಲಿ ಹೆಚ್ಚು ರೀಚ್ ಆಗಿದೆ. ಅದು ಬಿಟ್ಟು ಹೋಗಿಲ್ಲ ಎಂಬ ಕೊರಗು ಇತ್ತು. ಇದಾದ ಮೇಲೆ ಇತ್ತೀಚೆಗೆ ಬಂದ ವಿಮರ್ಶೆ ಆಗಿರಬಹುದು. ಥಿಯೇಟರ್ ಫಿಲ್ಲಿಂಗ್ ಇರಬಹುದು. ಈಗಲೂ 50 ರಿಂದ 60% ಆಕ್ಯೂಪೆನ್ಸಿ ಇದೆ. ನಿಮ್ಮ ಮೂಲಕ ಇನ್ನೂ ಹೆಚ್ಚು ಜನರಿಗೆ ರೀಚ್ ಆಗಬಹುದು. ನಿಮ್ಮ ಬೆಂಬಲ ಇರಬೇಕು. ನಮಗೆ ಎಲ್ಲಾ ಒಟಿಟಿ ಕಡೆಯಿಂದ ಆಫರ್ ಬಂದಿದೆ ಎಂದರು ನಿರ್ದೇಶಕ ಸಂದೀಪ್ ಸುಂಕದ್.

ಏನಿದು ಕಥೆ?

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ಟ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್‌ನ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು. ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರಕ್ಕೆ ವಿಶ್ವಜಿತ್ ರಾವ್ ಕ್ಯಾಮರಾ, ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ನೀಡಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ, ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ