ಕುಂದಾಪ್ರ ಭಾಷೆಯಲ್ಲಿ ಶಿವಣ್ಣ ಹಾಡು, ಅಪ್ಪುನ ನೆನಪಿಸಿಕೊಂಡ್ರು ಫ್ಯಾನ್ಸ್; ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ - ಇಲ್ಲಿದೆ Lyrics
Aug 23, 2024 01:40 PM IST
Shivanna: ಕುಂದಾಪ್ರ ಭಾಷೆಯಲ್ಲಿ ಶಿವರಾಜ್ ಕುಮಾರ್ ಹಾಡು
- ಕನ್ನಡ ನಟ ಶಿವರಾಜ್ ಕುಮಾರ್ ಕುಂದಾಪುರ ಭಾಷೆಯಲ್ಲಿ ಸಿಂಗಾರ್ ಹೂ ಎಂಬ ಹಾಡು ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದ ಸುಬ್ಬಿ ನಿನ್ನ ಅಬ್ಬಿ ನನ್ನ, ಮಾಯಿಯಾದಂಗೆ. ಕನ್ಸ್ ಬಿತ್ತ್ ನಿಂಗೆ ನಾನ್, ತಾಳಿ ಕಟ್ದಂಗೆ ಹಾಡಿಗೆ ಶಿವಣ್ಣ ಮತ್ತು ಸಂಗೀತಾ ರವೀಂದ್ರನಾಥ್ ಮಧುರವಾಗಿ ಹಾಡಿದ್ದಾರೆ.
ಬೆಂಗಳೂರು: ಹ್ಯಾಟ್ರಿಕ್‌ಹೀರೋ ಶಿವರಾಜ್ ಕುಮಾರ್ ಅವರಿಗೆ ನಟನೆ ಜತೆಗೆ ಹಾಡುವುದೂ ಇಷ್ಟ. ಇದೀಗ ರವಿ ಬಸ್ರೂರ್ ಸಂಗೀತ ನೀಡಿರುವ ಕುಂದಾಪ್ರ ಭಾಷೆಯ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ. ಯಡ್ರಾ ಪಡ್ರಾ ಎಂದು ಚಿಂದಿ ಉಡಾಯಿಸಿದಂತೆ ಹಾಡಿದ್ದಾರೆ. ಸಿಂಗಾರ್ ಹೂ... ಸಿಂಗಾರ್ ಹೂ... ನನ್ನ ಬದುಕಿಗೆ ನೀನೇ ಸಿಂಗಾರ್ ಹೂವು ಎಂದು ಹಾಡಿದ್ದಾರೆ.
ಕುಂದಾಪುರ ಭಾಷೆಯ ಹಾಡು ಹಾಡಿದ ಶಿವಣ್ಣ
ರವಿ ಬಸ್ರೂರು ಸಾಹಿತ್ಯ ಮತ್ತು ಸಂಗೀತವಿರುವ ಸಿಂಗಾರ್ ಹೂ ಎಂಬ ಹಾಡಿಗೆ ಶಿವರಾಜ್ ಕುಮಾರ್ ಮತ್ತು ಸಂಗೀತಾ ರವೀಂದ್ರನಾಥ್ ಧ್ವನಿ ನೀಡಿದ್ದಾರೆ. ಶಿವಣ್ಣ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ಹಾಡುಗಾರ ಎಂದು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಿಂಗಾರ್ ಹೂ ಹಾಡಿನ ಲಿರಿಕ್ಸ್
ಶಿವರಾಜ್ ಕುಮಾರ್ ಧ್ವನಿ
ಸುಬ್ಬಿ ನಿನ್ನ ಅಬ್ಬಿ ನನ್ನ | ಮಾಯಿಯಾದಂಗೆ
ಕನ್ಸ್ ಬಿತ್ತ್ ನಿಂಗೆ ನಾನ್ | ತಾಳಿ ಕಟ್ದಂಗೆ
ಸಂಗೀತಾ ರವೀಂದ್ರನಾಥ್ ಧ್ವನಿ
ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ
ಸತ್ಯ ಆಯ್ದೆ ಇರ್ಲಿ ಕನ್ಸ್ ನೀನ್ ಕಂಡಂಗೆ
ಶಿವರಾಜ್ ಕುಮಾರ್ ಧ್ವನಿ
ನಾನೆ ಬೇಕ್ ಅಂದ್ಕ ಕೊಣ್ದೆ ನೀನ್
ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್
ಸಂಗೀತಾ ರವೀಂದ್ರನಾಥ್ ಧ್ವನಿ
ಯಡ್ರ ಬಡ್ರ ಚಂಡಿ ಕಂಬ್ಳಿ ಬರಿ ದೌಲತ್ತ್
ನಿಗಂಟ್ ಇದ್ರೆ ಮೀಸಿ ತಿಪ್ಪಿ ತೋರ್ಸ್ ಸವ್ಲತ್ತ್
ಶಿವರಾಜ್ ಕುಮಾರ್ ಧ್ವನಿ
ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್
ಸಿಂಗಾರ್ ಹೂ ಸಿಂಗಾರ್ ಹೂ
ನನ್ನ ಬದಕೀಗೆ ನೀನೆ ಸಿಂಗಾರ್ ಹೂ
ಶಣ್ಣಿಂದ ಒಂದ್ ನಮನಿ ಚೊಣ್ಕಿ ನಂಗೆ
ನಿನ್ನ್ ಕಾಂತಾ ವಾರಾಂತ್ ಗುಂಗೆ
ಗೊತ್ತಿದ್ದೂ ನನ್ನಹಿಂದೆ ನೊಸಿತ ಬಂದೆ
ದಿಂಡ್ ಕಲ್ ಹಾಂಗ್ ಗರಬಡ್ದ್ ನಿಂತೆ
ತೊಕ್ಕ್ ಹಾಯ್ಕೊ ಒಂದ್ ಸರಿ ನನ್ನ ಬಂಗಾರ
ಜೀವ್ನ ಪೂರ್ತಿ ಕಾಂತ ಕೂರ್ತೆ ನಿನ್ನ ಸಿಂಗಾರ
ಸಂಗೀತಾ ರವೀಂದ್ರನಾಥ್ ಧ್ವನಿ
ಹಿಂಗಿಂದ್ ಮಾತ್ ಆಡಿ ನನ್ನ ಕೆಡ್ದೆ ಮಾರಾಯಾ
ಹೀಂಗೆ ನನ್ನ ಚಂದ ಮಾಡಿ ಕಂಡ್ಕೊ ಮರಾಯಾ
ಶಿವರಾಜ್ ಕುಮಾರ್ ಧ್ವನಿ
ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್
ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್
ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್
ಸಿಂಗಾರ್ ಹೂ ಸಿಂಗಾರ್ ಹೂ
ನನ್ನ ಬದಕೀಗೆ ನೀನೆ ಸಿಂಗಾರ್ ಹೂ
ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ
ಕನ್ಸ್ ಬಿತ್ತ್ ನಿಂಗೆ ನಾನ್ ತಾಳಿ ಕಟ್ದಂಗೆ
ಸಂಗೀತಾ ರವೀಂದ್ರನಾಥ್ ಧ್ವನಿ
ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ
ಸತ್ಯ ಆಯಿ ಬಿಡ್ಲಿ ಕನ್ಸ್ ನೀನ್ ಕಂಡಂಗೆ...
ಶಿವರಾಜ್ ಕುಮಾರ್ ಧ್ವನಿ
ನಾನೆ ಬೇಕ್ ಅಂದ್ಕ ಕೊಣ್ದೆ ನೀನ್
ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್
ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್
ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್
ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್
ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್
ಸಿಂಗಾರ್ ಹೂ ಸಿಂಗಾರ್ ಹೂ
ನನ್ನ ಬದಕೀಗೆ ನೀನೆ ಸಿಂಗಾರ್ ಹೂ
ಶಿವಣ್ಣ ಹಾಡಿರುವ ಸಿಂಗಾರ್ ಹೂ ಹಾಡಿನ ವಿಡಿಯೋ ಇಲ್ಲಿದೆ ನೋಡಿ
ಅಭಿಮಾನಿಗಳ ಪ್ರತಿಕ್ರಿಯೆ
"ಈ ಹಾಡ್ ಪುನೀತ್ ರಾಜಕುಮಾರ್ ಸರ್ ಹಾಡಿದ್ರೆ ಎಸ್ಟ್ ಚೆಂದ ಇರುತಿತ್ತು ಅಲ್ವಾ ಮಿಸ್ ಯು ಪುನೀತ್ ರಾಜಕುಮಾರ್ ಸರ್" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. "ಶಿವಣ್ಣ ಧ್ವನಿ ಸೂಪರ್ ಗುರು, ನಿನಗೆ age ಆಗಲ್ಲ ಶಿವಣ್ಣ... ರವಿ ಸರ್ gud ಮ್ಯೂಸಿಕ್.... Keep ರಾಕಿಂಗ್..." "ಈ ಹಾಡು ನಮ್ಮ ಅಪ್ಪು ಬಾಸ್ ಹಾಡ್ಬೇಕಿತ್ತು ಆದ್ರೆ ಏನ್ ಮಾಡೇೂದೂ ವಿಧಿ ಆಟ ಆದ್ರೂ ಶಿವಣ್ಣ ತುಂಬಾ ಚೆನ್ನಾಗಿ ಹಾಡಿದ್ದಾರೆ" ಎಂದೆಲ್ಲ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಶಿವಣ್ಣ ನಟನೆಯ ಹಲವು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸ್ಯಾಂಡಲ್‌ವುಡ್‌ನ ಬಿಝಿನಟ ಶಿವರಾಜ್ ಕುಮಾರ್ ಕೊಂಚ ಬಿಡುವು ಮಾಡಿಕೊಂಡು ರವಿ ಬಸ್ರೂರು ಸಾಹಿತ್ಯದ ಸಿಂಗಾರ್ ಹೂ ಹಾಡನ್ನು ಹಾಡಿದ್ದಾರೆ. ರವಿ ಬಸ್ರೂರು ಅವರು ವೀರ ಚಂದ್ರಹಾಸ ಎಂಬ ಯಕ್ಷಗಾನ ಪರಿಕಲ್ಪನೆಯ ಸಿನಿಮಾ ಮಾಡುತ್ತಿದ್ದಾರೆ.