logo
ಕನ್ನಡ ಸುದ್ದಿ  /  ಮನರಂಜನೆ  /  ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಿ ಸಾರ್ವಜನಿಕರ ಹಣ ಏಕೆ ವ್ಯರ್ಥ ಮಾಡ್ತೀರಿ; ಸರ್ಕಾರಕ್ಕೆ ಚೇತನ್‌ ಅಹಿಂಸಾ ಪ್ರಶ್ನೆ

ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಿ ಸಾರ್ವಜನಿಕರ ಹಣ ಏಕೆ ವ್ಯರ್ಥ ಮಾಡ್ತೀರಿ; ಸರ್ಕಾರಕ್ಕೆ ಚೇತನ್‌ ಅಹಿಂಸಾ ಪ್ರಶ್ನೆ

Jun 08, 2024 05:31 PM IST

google News

ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಿ ಸಾರ್ವಜನಿಕರ ಹಣ ಏಕೆ ವ್ಯರ್ಥ ಮಾಡ್ತೀರಿ; ಸರ್ಕಾರಕ್ಕೆ ಚೇತನ್‌ ಅಹಿಂಸಾ ಪ್ರಶ್ನೆ

    • ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಅವರ ಸ್ಮಾರಕ ನಿರ್ಮಿಸಲು 10 ಗುಂಟೆ ಜಾಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗಷ್ಟೇ ವಜಾಗೊಳಿಸಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಿ ಸಾರ್ವಜನಿಕರ ಹಣ ಏಕೆ ವ್ಯರ್ಥ ಮಾಡ್ತೀರಿ; ಸರ್ಕಾರಕ್ಕೆ ಚೇತನ್‌ ಅಹಿಂಸಾ ಪ್ರಶ್ನೆ
ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಿ ಸಾರ್ವಜನಿಕರ ಹಣ ಏಕೆ ವ್ಯರ್ಥ ಮಾಡ್ತೀರಿ; ಸರ್ಕಾರಕ್ಕೆ ಚೇತನ್‌ ಅಹಿಂಸಾ ಪ್ರಶ್ನೆ

Chetan Ahimsa about Vishnuvardhan Memorial: ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಆಗಾಗ ತಮ್ಮ ನೇರ ಮತ್ತು ನಿಷ್ಠುರ ಮಾತುಗಳಿಂದಲೇ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುತ್ತಾರೆ. ಅನಿಸಿದ್ದನ್ನು ನೇರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹೇಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಮಾತ್ರವಲ್ಲದೆ, ಸಿನಿಮಾ ಸೇರಿ ಹತ್ತು ಹಲವು ವಿಚಾರಗಳ ಬಗ್ಗೆಯೂ ಮಾತನಾಡುತ್ತಿರುತ್ತಾರೆ. ಇದೀಗ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ವಿಚಾರದ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ್ದಾರೆ ಚೇತನ್.‌

ಸಾಹಸ ಸಿಂಹ ದಿವಂಗತ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಅವರ ಸ್ಮಾರಕ ನಿರ್ಮಿಸಿ, ಅದನ್ನೇ ಪುಣ್ಯಭೂಮಿಯಾಗಿ ಪರಿವರ್ತಿಸಲು 10 ಗುಂಟೆ ಜಾಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗಷ್ಟೇ ವಜಾಗೊಳಿಸಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕರ ದುಡ್ಡಿಂದ ಸ್ಮಾರಕ ನಿರ್ಮಾಣ ಬೇಕಾ?

“ಚಿತ್ರರಂಗದ ತಾರೆಯೊಬ್ಬರಿಗೆ 10 ಗುಂಟೆ ಸ್ಮಾರಕ ನಿರ್ಮಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು 'ನ್ಯಾಯಾಲಯದ ಸಮಯದ ವ್ಯರ್ಥ’ ಎಂದು ಕರೆದಿದೆ. ಇದು ನ್ಯಾಯಾಲಯಗಳ ಅತ್ಯಂತ ಅಗತ್ಯವಾದ ದೂರದೃಷ್ಟಿಯ ಕ್ರಮವಾಗಿದೆ. ಸರ್ಕಾರಗಳು ಈಗಾಗಲೇ ಇಂತಹ ಚಲನಚಿತ್ರ ತಾರೆಯರ ಅನಗತ್ಯ ಸ್ಮಾರಕಗಳು ಮತ್ತು ಐತಿಹಾಸಿಕ ವ್ಯಕ್ತಿಗಳಿಗೆ ಅನುಪಯುಕ್ತ ಪ್ರತಿಮೆಗಳನ್ನು ನಿರ್ಮಿಸಲು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿವೆ” ಎಂದಿದ್ದಾರೆ.

ಬರೀ ಇದಷ್ಟೇ ಅಲ್ಲದೇ ಇತ್ತೀಚಿನ ಕೆಲ ದಿನಗಳಿಂದ ಇನ್ನೂ ಹಲವು ವಿಚಾರಗಳ ಬಗ್ಗೆ ನಟ ಚೇತನ್‌ ಅಹಿಂಸಾ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಹಮಾರಾ ಬಾರಾಹ್‌ ಚಿತ್ರ ನಿಷೇಧಕ್ಕೆ ವಿರೋಧ

"ಮುಸ್ಲಿಂ ಗುಂಪುಗಳು ಮತ್ತು ಇತರರು ಚಿತ್ರ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 'ಹಮಾರೇ ಬಾರಾಹ್' ಚಿತ್ರವನ್ನು ನಿಷೇಧಿಸಿದೆ. ಇದು 19ನೇ ವಿಧಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಿದ್ದರಾಮಯ್ಯ ಸರ್ಕಾರದ ನೇರ ದಾಳಿಯಾಗಿದೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ಇತರರ ಮೇಲೆ ಬೆರಳು ತೋರಿಸಲು ಇಷ್ಟಪಡುತ್ತದೆ ಆದರೆ ಅದು ಅಧಿಕಾರದಲ್ಲಿದ್ದಾಗ ಅಸಂವಿಧಾನಿಕವಾಗಿ ವರ್ತಿಸುತ್ತದೆ. ಈ ಚಿತ್ರದ ಸಂದೇಶವನ್ನು ಇಷ್ಟಪಡದವರಿಗೆ ತಮ್ಮದೇ ಆದ ಚಲನಚಿತ್ರವನ್ನು ಮಾಡುವ ಸಂಪೂರ್ಣ ಹಕ್ಕಿದೆ!"

ವಾಲ್ಮಿಕಿ ನಿಗಮದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ

"ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಗರಣದಲ್ಲಿ ಎಸ್ಟಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಸ್ವಾಗತಾರ್ಹ ಕ್ರಮವಾಗಿದ್ದರೂ, ಕಾಣೆಯಾದ ಹಣವನ್ನು ಮರಳಿ ಪಡೆಯುವುದು ಮುಖ್ಯ ಗುರಿಯಾಗಬೇಕು. ಈ ಹಗರಣದಲ್ಲಿ ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್ ಅಧ್ಯಕ್ಷರನ್ನು ಬಂಧಿಸಿರುವುದರಿಂದ, ಇದು ರಾಜ್ಯ ಮೀರಿದ ಸಮಸ್ಯೆಯಾಗಿದೆ; ಹೀಗಾಗಿ, ರಾಜ್ಯದ ಎಸ್ಐಟಿಯೊಂದಿಗೆ ತನಿಖೆ ನಡೆಸುವ ಬದಲು ಇದನ್ನು ಕೇಂದ್ರದ ಸಿಬಿಐಗೆ ಒಪ್ಪಿಸುವುದು ಉತ್ತಮ ಆಯ್ಕೆಯಾಗಿದೆ"

ಉಪೇಂದ್ರ ನೀವು ಬುದ್ಧಿವಂತರಲ್ಲ

"ಉಪೇಂದ್ರ ಹೇಳ್ತಾರೆ: ‘ಈ ದಡ್ ನನ್ ಮಗಂಗೆ ಇನ್ಮೆಲೆ ಬುದ್ಧಿವಂತ ಅಂದ್ರೆ ಅಷ್ಟೆ’ ನಿಜ ಹೇಳಬೇಕೆಂದರೆ, ನೀವು ಎಂದಿಗೂ ಬುದ್ಧಿವಂತರಾಗಿರಲಿಲ್ಲ— ನಿಮ್ಮ ಅಸಂಬದ್ಧ ಕಲ್ಪನೆಯ ಭ್ರಮೆ ಅಷ್ಟೇ"

ಕಂಗನಾಗೆ ಕಪಾಳಮೋಕ್ಷ ಬಗ್ಗೆ ಚೇತನ್‌ ಏನಂದ್ರು

"ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್ ಗೆ ಸಿಐಎಸ್ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ರೈತರ ಪ್ರತಿಭಟನೆಯ ಸಮಯದಲ್ಲಿ ರನೌತ್ ಅವರ ಅನುಚಿತ ಹೇಳಿಕೆಗಳ ಬಗ್ಗೆ ನಿಲುವು ತೆಗೆದುಕೊಂಡ ಕಾನ್ಸ್ಟೇಬಲ್ ಅವರನ್ನು ನಾನು ಗೌರವಿಸುತ್ತೇನೆ ಆದರೆ ಕಪಾಳಮೋಕ್ಷ ಮಾಡುವ ಮೂಲಕ ಅವರ ಹೋರಾಟದ ಅಭಿವ್ಯಕ್ತಿಯ ವಿಧಾನವು ಸ್ವೀಕಾರಾರ್ಹವಲ್ಲ ಮತ್ತು ವೈಭವೀಕರಣಕ್ಕೆ ಅರ್ಹವಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ