logo
ಕನ್ನಡ ಸುದ್ದಿ  /  ಮನರಂಜನೆ  /  Shankar Ashwath: ನಟ, ಉಬರ್ ಚಾಲಕ ಶಂಕರ್‌ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನ; ಉದ್ಧಟತನ ಮೆರೆದವರಿಗೆ ತಕ್ಕ ಪಾಠ ಕಲಿಸಿದ ಹಿರಿಯ ಕಲಾವಿದ

Shankar Ashwath: ನಟ, ಉಬರ್ ಚಾಲಕ ಶಂಕರ್‌ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನ; ಉದ್ಧಟತನ ಮೆರೆದವರಿಗೆ ತಕ್ಕ ಪಾಠ ಕಲಿಸಿದ ಹಿರಿಯ ಕಲಾವಿದ

Jun 08, 2023 06:28 PM IST

google News

ನಟ‌, ಉಬರ್ ಚಾಲಕ ಶಂಕರ್‌ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನ; ಉದ್ಧಟತನ ಮೆರೆದವರಿಗೆ ತಕ್ಕ ಪಾಠ ಕಲಿಸಿದ ಹಿರಿಯ ಕಲಾವಿದ

    • ಉಬರ್‌ ಚಾಲಕರಾಗಿರುವ ಹಿರಿಯ ನಟ ಶಂಕರ್ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನವಾಗಿದೆ. ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹೇಳಿಕೊಂಡು, ಅವರಿಗೆ ತಕ್ಕ ಪಾಠ ಕಲಿಸಿದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ನಟ‌, ಉಬರ್ ಚಾಲಕ ಶಂಕರ್‌ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನ; ಉದ್ಧಟತನ ಮೆರೆದವರಿಗೆ ತಕ್ಕ ಪಾಠ ಕಲಿಸಿದ ಹಿರಿಯ ಕಲಾವಿದ
ನಟ‌, ಉಬರ್ ಚಾಲಕ ಶಂಕರ್‌ ಅಶ್ವತ್ಥ್‌ಗೆ ಪ್ರವಾಸಿಗರಿಂದ ಅವಮಾನ; ಉದ್ಧಟತನ ಮೆರೆದವರಿಗೆ ತಕ್ಕ ಪಾಠ ಕಲಿಸಿದ ಹಿರಿಯ ಕಲಾವಿದ

Shankar Ashwath: ಕನ್ನಡ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದವರಲ್ಲಿ ಹಿರಿಯ ನಟ ಕೆ. ಎಸ್‌ ಅಶ್ವಥ್‌ ಕೂಡ ಒಬ್ಬರು. ಅವರ ಪುತ್ರ ಶಂಕರ್‌ ಅಶ್ವತ್ಥ್‌ ಸಹ ಸಿನಿಮಾ ರಂಗದಲ್ಲಿಯೇ ಹೆಸರು ಮಾಡಿದವರು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣ ಅವರು ಉಬರ್‌ ಕಾರ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸ್ವತಃ ಶಂಕರ್‌ ಅಶ್ವತ್ಥ್‌ ಹೇಳಿಕೊಂಡಿದ್ದೂ ಇದೆ. ಈಗ ಇದೇ ಶಂಕರ್‌ ಅಶ್ವಥ್‌, ಕಾರು ಚಾಲನೆ ವೇಳೆ ಹೊರ ರಾಜ್ಯದ ಪ್ರವಾಸಿಗರಿಂದ ಅವಮಾನಕ್ಕೀಡಾಗಿದ್ದಾರೆ!

ಇದನ್ನೂ ಓದಿ: ದುಡ್ಡು ಕೊಟ್ಟು ಟ್ರೋಲ್‌ ಮಾಡಿಸಿ, ಮಾನ ಹರಾಜು ಹಾಕಿದ್ದು ಆ ಸ್ಟಾರ್‌ ನಟನೇ; ಮೌನ ಮುರಿದ ನಟಿ ಅನುಸೂಯಾ ಭಾರದ್ವಾಜ್‌

ಶಂಕರ್ ಅಶ್ವತ್ಥ್‌ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪೋಷಕ ಕಲಾವಿದ. ಆಗೊಂದು ಈಗೊಂದು ಸಿನಿಮಾಗಳು, ಕಿರುತೆರೆಯಲ್ಲಿಯೂ ಇವರು ಕಾಣಿಸಿಕೊಳ್ಳುತ್ತಿರುತ್ತಾರೆ. ಕಳೆದ ವರ್ಷ ಬಿಗ್‌ಬಾಸ್‌ ಸೀಸನ್‌8ರಲ್ಲಿಯೂ ಸ್ಪರ್ಧಿಯಾಗಿ ‌ಶಂಕರ್ ಅಶ್ವತ್ಥ್‌ ಬಿಗ್‌ ಮನೆ ಪ್ರವೇಶ ಪಡೆದಿದ್ದರು. ಉಬರ್‌ ಚಾಲಕರಾಗಿ ಕೆಲಸ ಮಾಡಿದ್ದನ್ನು ಕಂಡು, ನಟ ದರ್ಶನ್‌ ಅವರ ಯಜಮಾನ ಸಿನಿಮಾದಲ್ಲಿಯೂ ಪ್ರಮುಖ ಪೋಷಕ ಪಾತ್ರ ನೀಡಲಾಗಿತ್ತು. ಅದಾದ ಬಳಿಕ ಕೆಲ ಧಾರಾವಾಹಿಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ಜತೆಗೆ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೀಗಿರುವಾಗ, ಇತ್ತೀಚೆಗೆ ಪ್ರವಾಸಿಗರಿಂದ ಆದ ಅವಮಾನವನ್ನು ಸ್ವತಃ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಕಲಿಸಿದ ಪಾಠವನ್ನೂ ಹೇಳಿಕೊಂಡಿದ್ದಾರೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು?

ಇದನ್ನೂ ಓದಿ: ಫಹಾದ್‌ ಫಾಸಿಲ್‌ ಧೂಮಂ ಟ್ರೇಲರ್‌ನಲ್ಲೂ ಕೆಜಿಎಫ್‌ ಹವಾ; ಮತ್ತೊಂದು ‌ಥ್ರಿಲ್ಲರ್‌ ಜಾಡು ಹಿಡಿದು ಬಂದ ಪವನ್‌ ಕುಮಾರ್

ಶಂಕರ್ ಅಶ್ವತ್ಥ್‌ ಪಾಠ

"ಇತ್ತೀಚಿನ ದಿನಗಳಲ್ಲಿ ನಾನು ಹೋದ ಕಡೆಗಳಲ್ಲಿ ನನ್ನನ್ನು ಗುರುಗಳೇ, ಗುರುಗಳೇ ಎಂದು ಎಲ್ಲರೂ ತುಂಬ ಆತ್ಮೀಯವಾಗಿ ಮಾತನಾಡಿಸ್ತಾರೆ. ಹಾಗಂತ ನಾನು ಯಾರಿಗೂ ಪಾಠ ಕಲಿಸಿಲ್ಲ, ಯಾರಿಂದಲೂ ಗುರುದಕ್ಷಿಣೆ ತೆಗೊಂಡಿಲ್ಲ. ಆದರೆ, ಇವತ್ತೊಂದು ಅನುಭವ ಆಯ್ತು. ಯಾರೋ ಹೊರ ರಾಜ್ಯದಿಂದ ಬಂದವರು, ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ಬಂದರು. ಅವರಿಗೆ ಸುಲಭವಾಗಲಿ ಎಂದು ಅವರ ಭಾಷೆಯಲ್ಲಿಯೇ ಮಾತನಾಡುತ್ತ, ಇಂಗ್ಲೀಷ್‌ನಲ್ಲಿ ಮಾತನಾಡ್ತಾ, ಶಾರ್ಟ್‌ ಕಟ್‌ನಲ್ಲಿ ಬರುತ್ತಿದೆ. ನ್ಯಾವಿಗೇಷನ್‌ ಬಿಟ್ಟು ನೀವು ಸುತ್ತಿ ಬಳಸಿ ಬೇರೆ ಬೇರೆ ಕಡೆಗಳಲ್ಲಿ ಹೋಗ್ತಿದ್ದೀರಲ್ಲ? ಎಂದ. ಅವರ ಭಾಷೆಯಲ್ಲಿ ನಾನೊಬ್ಬ 420 ಎಂಬರ್ಥದಲ್ಲಿ ಮಾತನಾಡುತ್ತಿದ್ದರು"

ಮುಂದುವರಿದು, "ಹಾಗಾಗಿ ನಾನೇನು ಮಾಡಿದೆ ಎಂದರೆ, ಎಲ್ಲಿಯವರೆಗೂ ನ್ಯಾವಿಗೇಷನ್‌ ತೋರಿಸುತ್ತೋ ಅಲ್ಲಿಯವರೆಗೂ ನಾನು ಹೋದೆ. ಆಮೇಲೆ ನಾನು ದೇವರ ದರ್ಶನ ಮಾಡಿಕೊಂಡು ಬಂದೆ. ಸಾಮಾನ್ಯವಾಗಿ ನಾನು ನನ್ನ ಕಾರು ಏರಿದವರೆಲ್ಲರನ್ನು ದೇವಸ್ಥಾನದ ಬಾಗಿಲವರೆಗೂ ತಲುಪಿಸಿ ದರ್ಶನ ಮಾಡಿಸಿ ಕರೆತಂದು ಬಿಡುತ್ತಿದ್ದೆ. ಆದರೆ, ಇವತ್ತು ಅವರಿಗೆ ಪಾಠ ಕಲಿಸಬೇಕು ಎಂದುಕೊಂಡು, ಹೊರಗಡೆನೇ ನಿಲ್ಲಿಸಿಬಿಟ್ಟು, ಮುಕ್ಕಾಲು ಕಿಲೋ ಮೀಟರ್‌ ನಡೀರಿ ಅಂತ ಕೈ ಬಿಟ್ಟು ನಾನು ಹೋಗಿ ದರ್ಶನ ಮಾಡಿಕೊಂಡು ಬಂದೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ