logo
ಕನ್ನಡ ಸುದ್ದಿ  /  ಮನರಂಜನೆ  /  Rajyotsava The Anthem: ನವೆಂಬರ್‌ ಮಾಸಾಂತ್ಯಕ್ಕೆ ಬಂತು ರಾಗಿಣಿ ರಾಜ್ಯೋತ್ಸವ ಹಾಡು; ಶ್ರೀಮುರಳಿಯಿಂದ ಬಿಡುಗಡೆ

Rajyotsava The Anthem: ನವೆಂಬರ್‌ ಮಾಸಾಂತ್ಯಕ್ಕೆ ಬಂತು ರಾಗಿಣಿ ರಾಜ್ಯೋತ್ಸವ ಹಾಡು; ಶ್ರೀಮುರಳಿಯಿಂದ ಬಿಡುಗಡೆ

HT Kannada Desk HT Kannada

Dec 01, 2023 05:18 PM IST

google News

Rajyotsava The Anthem: ನವೆಂಬರ್‌ ಮಾಸಾಂತ್ಯಕ್ಕೆ ಬಂತು ರಾಗಿಣಿ ರಾಜ್ಯೋತ್ಸವ ಹಾಡು; ಶ್ರೀಮುರಳಿಯಿಂದ ಬಿಡುಗಡೆ

    • ಕನ್ನಡದ ತಿಂಗಳು ನವೆಂಬರ್‌ ತಿಂಗಳ ಕೊನೆಯಲ್ಲಿ ರಾಜ್ಯೋತ್ಸವ ಹೆಸರಿನ ಹಾಡು ರಿಲೀಸ್‌ ಆಗಿದೆ. ರಾಗಿಣಿ ದ್ವಿವೇದಿ ಕಾಣಿಸಿಕೊಂಡಿರುವ ಈ ಹಾಡನ್ನು ನಟ ಶ್ರೀಮುರಳಿ ರಿಲೀಸ್‌ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. 
Rajyotsava The Anthem: ನವೆಂಬರ್‌ ಮಾಸಾಂತ್ಯಕ್ಕೆ ಬಂತು ರಾಗಿಣಿ ರಾಜ್ಯೋತ್ಸವ ಹಾಡು; ಶ್ರೀಮುರಳಿಯಿಂದ ಬಿಡುಗಡೆ
Rajyotsava The Anthem: ನವೆಂಬರ್‌ ಮಾಸಾಂತ್ಯಕ್ಕೆ ಬಂತು ರಾಗಿಣಿ ರಾಜ್ಯೋತ್ಸವ ಹಾಡು; ಶ್ರೀಮುರಳಿಯಿಂದ ಬಿಡುಗಡೆ

Rajyotsava The Anthem: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಶುಭದಿನ. ಇಡೀ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಆಚರಿಸುವ ವಾಡಿಕೆ ಇದೆ. ಈ ಕನ್ನಡ ಮಾಸದ ಕೊನೆಯ ದಿನ ನವೆಂಬರ್ 30ರಂದು ರಾಗಿಣಿ ದ್ವಿವೇದಿ ಅಭಿನಯದ ರಾಜ್ಯೋತ್ಸವ ದಿ ಆಂಥಮ್ ಎಂಬ ವಿಡಿಯೋ ಸಾಂಗ್ ಐಪ್ಲೆಕ್ಸ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ಪುನೀತ್ ರಾಜ್‍ಕುಮಾರ್ ಅಭಿನಯದ ವಂಶಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ವಿಜಯ್ ಕೌಂಡಿನ್ಯ ಅವರ ಸಹೋದರ ವಿಕ್ರಮ್ ಶೀನಿವಾಸ್ ಈ ವಿಡಿಯೋ ಸಾಂಗ್ ನಿರ್ಮಾಣ‌ ಮಾಡಿದ್ದಾರೆ. ವಿಕ್ರಮ್ ಅವರ ತಂದೆ ಶ್ರೀನಿವಾಸ್ ಅವರು ಕೂಡ ಡಾ. ರಾಜಕುಮಾರ್ ಅವರ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

ಈಗ ವಿಕ್ರಮ್ ಶ್ರೀನಿವಾಸ್ ಟ್ವೆಲ್ವ್‌ 12 ಎಂಟರ್ಟೈನ್ಮೆಂಟ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಆ ಸಂಸ್ಥೆ ಮೂಲಕ ಮೊದಲ ಪ್ರಯತ್ನವಾಗಿ ರಾಜ್ಯೋತ್ಸವ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನನ್ನ ಸಹೋದರ ವಿಕ್ರಮ್ ಶ್ರೀನಿವಾಸ್ ಟ್ವೆಲ್ವ್‌ 12 ಎಂಟರ್ಟೈನ್ಮೆಂಟ್ ಎಂಬ ನೂತನ ಸಂಸ್ಥೆ ಆರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ರಾಜ್ಯೋತ್ಸವ ಎಂಬ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಧನ್ಯವಾದ. ಮುಂದೆ ಅನೇಕ ಗೀತೆಗಳನ್ನು ಹಾಗೂ ಚಿತ್ರಗಳನ್ನು ನಿರ್ಮಾಣ‌ ಮಾಡುವ ಇರಾದೆ ವಿಕ್ರಮ್ ಶ್ರೀನಿವಾಸ್ ಅವರಿಗಿದೆ ಎಂದು ವಿಜಯ್ ಕೌಂಡಿನ್ಯ ತಿಳಿಸಿದರು.

ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಎಂದು ಮಾತು ಆರಂಭಿಸಿದ ನಟಿ ರಾಗಿಣಿ ದ್ವಿವೇದಿ, "ನನ್ನನ್ನು ಎಲ್ಲರೂ ಗುರುತಿಸುತ್ತಿದ್ದಾರೆ ಎಂದರೆ ಅದು ಕನ್ನಡ ಚಿತ್ರಗಳಿಂದ. ನಾನು ಎಲ್ಲೇ ಹೋದರು ಕನ್ನಡತಿಯಾಗಿಯೇ ಗುರುತಿಸಿಕೊಳ್ಳುತ್ತೇನೆ‌. ವಿಕ್ರಮ್ ಶ್ರೀನಿವಾಸ್ ನಿರ್ಮಾಣ ಮಾಡಿರುವ ಈ ಹಾಡಿನಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಹಾಗೂ ಐಪ್ಲೆಕ್ಸ್ ಸಂಸ್ಥೆಗೆ ಧನ್ಯವಾದ ಎಂದರು.

ನಮ್ಮ ಐಪ್ಲೆಕ್ಸ್ ಸಂಸ್ಥೆ ಇಪ್ಪತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ ಮ್ಯೂಸಿಕ್ ಸಂಸ್ಥೆ ಕೂಡ ಆರಂಭಿಸಿದ್ದೇವೆ‌. "ರಾಜ್ಯೋತ್ಸವ"ದ ಹಾಡು ಚೆನ್ನಾಗಿದೆ ಎಂದರು ಐಪ್ಲೆಕ್ಸ್ ಸಂಸ್ಥೆಯ ಮುಖ್ಯಸ್ಥ ಗಿರೀಶ್ ಕುಮಾರ್. ಸಂಗೀತ ನೀಡಿರುವ ಕಿಶನ್ ಮೂರ್ತಿ ಹಾಗೂ ಹಾಡಿನ ನಿರ್ಮಾಣಕ್ಕೆ ಸಾಕಷ್ಟು ಸಲಹೆ ನೀಡಿರುವ ಕೃಷ್ಣ ಚೈತನ್ಯ ಅವರು ರಾಜ್ಯೋತ್ಸವದ ಹಾಡಿನ ಬಗ್ಗೆ ಮಾತನಾಡಿದರು. ಮಧು ಅವರು ಬರೆದಿರುವ ಈ ಹಾಡಿಗೆ ಮೇಘನಾ ಭಟ್ ಧ್ವನಿ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ