logo
ಕನ್ನಡ ಸುದ್ದಿ  /  ಮನರಂಜನೆ  /  She Will Rise: ಅಯ್ಯೋ ಅಮೃತ ಅಯ್ಯಂಗಾರ್‌ ಕಣ್ಣಿಗೆ ಏನಾಯ್ತು? ಅವಳು ಮತ್ತೆ ಎದ್ದೇಳುತ್ತಾಳೆ ಅಂದ್ರು ಮಾಲಾಶ್ರೀ

She Will Rise: ಅಯ್ಯೋ ಅಮೃತ ಅಯ್ಯಂಗಾರ್‌ ಕಣ್ಣಿಗೆ ಏನಾಯ್ತು? ಅವಳು ಮತ್ತೆ ಎದ್ದೇಳುತ್ತಾಳೆ ಅಂದ್ರು ಮಾಲಾಶ್ರೀ

Praveen Chandra B HT Kannada

Sep 28, 2024 12:57 PM IST

google News

ಮಹಿಳೆಯರ ವಿರುದ್ಧದ ದೌರ್ಜನ್ಯದ ಕುರಿತು ಎಚ್ಚರಮೂಡಿಸುವ ಐ ಎಂಬ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ.

    • ಕನ್ನಡ ನಟಿ ಅಮೃತ ಅಯ್ಯಂಗಾರ್‌ ಕಣ್ಣಿಗೆ ಗಾಯವಾದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಧ್ವನಿ ಎತ್ತುವ ಐ ಎಂಬ ಹಾಡಿನ ದೃಶ್ಯ. ಈ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ.
ಮಹಿಳೆಯರ ವಿರುದ್ಧದ ದೌರ್ಜನ್ಯದ ಕುರಿತು ಎಚ್ಚರಮೂಡಿಸುವ  ಐ ಎಂಬ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ.
ಮಹಿಳೆಯರ ವಿರುದ್ಧದ ದೌರ್ಜನ್ಯದ ಕುರಿತು ಎಚ್ಚರಮೂಡಿಸುವ ಐ ಎಂಬ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ.

ಬೆಂಗಳೂರು: ಕನ್ನಡ ನಟಿ ಅಮೃತ ಅಯ್ಯಂಗಾರ್‌ ಕಣ್ಣಿಗೆ ಗಾಯವಾದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಯ್ಯೋ ಅಮೃತ ಅಯ್ಯಂಗಾರ್‌ ಕಣ್ಣಿಗೆ ಏನಾಯ್ತು ಎಂದು ಅಭಿಮಾನಿಗಳು ಒಂದು ಬಾರಿ ಆತಂಕಕ್ಕೆ ಒಳಗಾಗುವುದು ಸಹಜ. ಇದು ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಧ್ವನಿ ಎತ್ತುವ ಐ ಎಂಬ ಹಾಡಿನ ದೃಶ್ಯ. ಈ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ. ಸೆಪ್ಟೆಂಬರ್‌ 26ರಂದು ಬಿಡುಗಡೆಯಾದ ಈ ಹಾಡು ಯೂಟ್ಯೂಬ್‌ನಲ್ಲಿ ಟಾಪ್‌ 15ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಧೈರ್ಯವಂತ ಹೆಣ್ಣು ಮಕ್ಕಳಿಗೆ ಈ ಹಾಡು ಸಮರ್ಪಣೆ ಎಂದು ಆಲ್‌ ಓಕೆ ತಂಡ ಈ ಹಾಡು ಬಿಡುಗಡೆ ಮಾಡಿದೆ. ಈ ರಾಪ್‌ ಹಾಡು ಈಗಾಗಲೇ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದಾರೆ.

ಅತ್ಯಾಚಾರ- ಪ್ರತಿಕಾರದ ಹಾಡು

ಈ ಐ ಎಂಬ ರಾಮ್‌ ಹಾಡಿಗೆ ಲಿರಿಕ್ಸ್‌, ಮ್ಯೂಸಿಕ್‌, ಕಾನ್ಸೆಪ್ಟ್‌ ನಿರ್ದೇಶನ ಎಲ್ಲವೂ "ಆಲ್‌ ಓಕೆ" ತಂಡದ್ದು. ಈ ಹಾಡಿನ ದೃಶ್ಯಗಳಲ್ಲಿ ವಿಶೇಷ ಪಾತ್ರಗಳಲ್ಲಿ ಲೇಡಿ ಸೂಪರ್‌ ಸ್ಟಾರ್‌ ಮಾಲಾಶ್ರೀ ರಾಮು, ನಟಿ ಅಮೃತ ಅಯ್ಯಂಗಾರ್‌, ಮೋನಿಕಾ ಕಲ್ಲೂರಿ ಮತ್ತು ತಂಡ, ಆಲ್‌ ಓಕೆ ಲೈವ್‌ ಬ್ಯಾಂಡ್‌ ತಂಡ, ಡಿಜೆ ವಿಜೆ ಸೇರಿದಂತೆ ಸಾಕಷ್ಟು ಜನರು ಇದ್ದಾರೆ. ಈ ಹಾಡು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತಾಗಿದೆ. ನಟಿ ಅಮೃತಾ ಅಯ್ಯಂಗಾರ್‌ ಅವರನ್ನು ಒಂದಿಷ್ಟು ಜನರು ಓಡಿಸಿಕೊಂಡು ಬರುತ್ತಾರೆ. ಈಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಬಳಿಕ ಅತ್ಯಾಚಾರಿಗಳ ವಿರುದ್ಧ ಮಾಲಾಶ್ರೀ ನೆರವಿನಿಂದ ಪ್ರತಿಕಾರ ತೀರಿಸುವ ದೃಶ್ಯವಿದೆ. ಈ ಸಮಯದಲ್ಲಿ ಇನ್ನಷ್ಟು ಮಹಿಳೆಯರು ನಾವೇ ಕೊಂದದ್ದು ಎನ್ನುವಂತೆ ಕೈ ಎತ್ತುತ್ತಾರೆ. ಈ ಮೂಲಕ ದೌರ್ಜನ್ಯ ನಡೆದರೆ ಸುಮ್ಮನಿರಬೇಡಿ. ಧ್ವನಿ ಎತ್ತಿ ಎಂಬ ಸಂದೇಶವನ್ನು ಈ ಹಾಡಿನ ಮೂಲಕ ನೀಡಲಾಗಿದೆ.

"ನಮ್ಮ ಹೊಸ ಹಾಡು 'i' ಬಿಡುಗಡೆ ಮಾಡುತ್ತಿದ್ದೇನೆ – ನೋವು, ಶಕ್ತಿ ಮತ್ತು ಮರುಜೀವನದ ಕಥೆಯನ್ನು ಹೊತ್ತಿರುವ ಈ ಹಾಡು. 'She Will Rise' ಎಂಬುದು ಕೇವಲ ಒಂದು ಜಾಹೀರಾತು ಮಾತ್ರವಲ್ಲ, ಅದು ಒಂದು ಪ್ರತಿಜ್ಞೆ. ಧೈರ್ಯದ ಹೆಣ್ಣುಮಕ್ಕಳಿಗೆ ಸಮರ್ಪಿತವಾದ ಈ ಹಾಡು, ನ್ಯಾಯ ಮತ್ತು ಬದಲಾವಣೆಗೆ ಕಿರುಚುವ ಸ್ವರವಾಗಿದೆ. ಬನ್ನಿ, ಒಟ್ಟಾಗಿ ನಿಲ್ಲೋಣ, ಯಾವುದೇ ಸ್ವರ ಮೌನವಾಗದಂತೆ ನೋಡಿಕೊಳ್ಳೋಣ" ಎಂದು ಆಲ್‌ ಓಕೆ ಓ ಹಾಡನ್ನು ಹಂಚಿಕೊಂಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಹಾಡಿನ ಭಾಗವಾಗಲು ಅವಕಾಶ ನೀಡಿದ್ದಕ್ಕೆ ಅಮೃತ ಅಯ್ಯಂಗಾರ್‌ ಥ್ಯಾಂಕ್ಸ್‌ ಹೇಳಿದ್ದಾರೆ. "ನಿಮ್ಮ ಜತೆ ಕೆಲಸ ಮಾಡಿದ್ದಕ್ಕೆ ಧನ್ಯವಾದ" ಎಂದು ಆಲ್‌ ಓಕೆ ತಂಡಕ್ಕೆ ಥ್ಯಾಂಕ್ಸ್‌ ಹೇಳಿದ್ದಾರೆ. "ನಿಮ್ಮ ಸಿನಿಮಾ ನೋಡುತ್ತ ಬೆಳೆದವಳು ನಾನು. ನಿಮ್ಮ ಜತೆ ಹಾಡಿನಲ್ಲಿ ನಟಿಸುವ ಅವಕಾಶ ದೊರಕಿದ್ದು ಅಮೋಘ ಅವಕಾಶ" ಎಂದು ಮಾಲಾಶ್ರೀ ರಾಮುಗೆ ತಿಳಿಸಿದ್ದಾರೆ. ಇದೇ ಸಮಯದಲ್ಲಿ ನನಗೆ ಈ ಪ್ರಾಜೆಕ್ಟ್‌ನಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಸುನಯನ ಸುರೇಶ್‌ಗೂ ಥ್ಯಾಂಕ್ಸ್‌ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ