logo
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ದಿವಾನ್‌ ಮನೆಯ ಯುಜಮಾನಿಕೆ ಹಂಚಿಕೆಯಾಯ್ತು, ಅಜ್ಜಮ್ಮ ಕೊಟ್ಟ ಟ್ವಿಸ್ಟ್‌ಗೆ ಶಕುಂತಲಾ ಟೀಮ್‌ಗೆ ಆಘಾತ- ಅಮೃತಧಾರೆ ಸೀರಿಯಲ್‌ ಸ್ಟೋರಿ

ಗೌತಮ್‌ ದಿವಾನ್‌ ಮನೆಯ ಯುಜಮಾನಿಕೆ ಹಂಚಿಕೆಯಾಯ್ತು, ಅಜ್ಜಮ್ಮ ಕೊಟ್ಟ ಟ್ವಿಸ್ಟ್‌ಗೆ ಶಕುಂತಲಾ ಟೀಮ್‌ಗೆ ಆಘಾತ- ಅಮೃತಧಾರೆ ಸೀರಿಯಲ್‌ ಸ್ಟೋರಿ

Praveen Chandra B HT Kannada

Jun 26, 2024 07:27 AM IST

google News

ಅಮೃತಧಾರೆ ಸೀರಿಯಲ್‌ ಸ್ಟೋರಿ

    • Amruthadhaare serial Yesterday episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಮ್ಮ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಮನೆಯ ಕೀಲಿಕೈಯನ್ನು ಶಕುಂತಲಾ ಮೂಲಕ ಭೂಮಿಕಾಳಿಗೆ ನೀಡಿಸಿ ಜಾಣತನ ತೋರಿದ್ದಾರೆ.
ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday episode: ಜೈದೇವ್‌ ತನ್ನ ನೋವನ್ನು ಶಕುಂತಲಾದೇವಿ ಮುಂದೆ ತೋಡಿಕೊಳ್ಳುತ್ತಾನೆ. ನಾನು ಏನೂ ಮಾಡಿದರೂ ಯಶಸ್ವಿಯಾಗುತ್ತಿಲ್ಲ ಎಂದು ಹೇಳುತ್ತಾನೆ. "ನಮಗೂ ಒಳ್ಳೆಯ ಜೀವನ ಬರುತ್ತದೆ. ನಿನಗೆ ಏನಾದರೂ ಅಪಾಯವಾದರೆ ಎಂದು ಭಯವಾಗುತ್ತದೆ. ಧೈರ್ಯ ತಂದುಕೋ. ನಾನು ಬದುಕಿರುವುದೇ ನಿಮಗಾಗಿ, ಏನಾದರೂ ಮಾಡಿಯೇ ಮಾಡ್ತಿನಿ" ಎಂದು ಶಕುಂತಲಾದೇವಿ ಹೇಳುತ್ತಾಳೆ. ಝೀ ಕನ್ನಡ ವಾಹಿನಿಯ ಅಮೃತಧಾರೆಯ ನಿನ್ನೆಯ ಸಂಚಿಕೆಯಲ್ಲಿ ಪ್ರಮುಖ ವಿದ್ಯಮಾನವೊಂದು ನಡೆದಿದೆ. ಅಜ್ಜಮ್ಮ ತನಗೆ ಸೂಕ್ತವಾದ ವ್ಯಕ್ತಿಗೆ ಮನೆಯ ಯುಜಮಾನಿಕೆ ಹಸ್ತಾಂತರ ಮಾಡಿದ್ದಾರೆ.

ಅಮೃತಧಾರೆ ಯುಜಮಾನಿಕೆ ಪಟ್ಟಾಭಿಷೇಕ

ಅಜ್ಜಮ್ಮ ಎಲ್ಲರನ್ನೂ ಕರೆಯುತ್ತಾರೆ. ಮನೆಯ ಯುಜಮಾನಿಕೆ ಪಟ್ಟಾಭಿಷೇಕದ ಸಮಯವಿದು. ಶಕುಂತಲಾ ಈ ಪಟ್ಟಕ್ಕಾಗಿ ಕಾಯುತ್ತಿದ್ದಾಳೆ. "ನಾನು ಗಮನಿಸಿದ ಪ್ರಕಾರ ಶಕುಂತಲಾದೇವಿ ಈ ಮನೆಯ ಜವಾಬ್ದಾರಿ ನಿಭಾಯಿಸಿದ್ದಾಳೆ" ಎಂದು ಅಜ್ಜಮ್ಮ ಹೇಳಿದಾಗ ಶಕುಂತಲಾದೇವಿಗೆ ಸ್ವರ್ಗಕ್ಕೆ ಮೂರೇ ಗೇಣು. "ಈ ಮನೆಯನ್ನು ನಿಭಾಯಿಸಿದ ರೀತಿ, ತನ್ನ ಮಕ್ಕಳನ್ನು ಬೆಳೆಸಿದ ರೀತಿಯನ್ನು ನೋಡುವಾಗ ಶಾಕುಂತಲ ಈ ಮನೆಗೆ ತಕ್ಕುದಾದ ಯುಜಮಾನಿ ಎಂದು ನನಗೆ ಅನಿಸಿತ್ತು. ಆದರೆ, ಆ ಸಮಯ ಕೂಡಿ ಬಂದಿರಲಿಲ್ಲ. ಶಕುಂತಲಾ ಬಾ ಇಲ್ಲಿಗೆ" ಎಂದು ಅಜ್ಜಮ್ಮ ಕರೆದಾಗ ಶಕುಂತಲಾದೇವಿ ಖುಷಿಯಿಂದ ವಿಧೇಯ ಶಿಷ್ಯೆಯಂತೆ ಹೋಗುತ್ತಾಳೆ. ಇದಾದ ಬಳಿಕ ಅಜ್ಜಮ್ಮ ತನ್ನ ಮಡಿಲಿನಿಂದ ಕೀಲಿಗಳ ಗೊಂಚಲನ್ನ ತೆಗೆದು ಶಕುಂತಲಾ ದೇವಿಯ ಕೈಯಲ್ಲಿ ಇಡುತ್ತಾಳೆ. ಎಲ್ಲರೂ ಖುಷಿಯಾಗುತ್ತಾರೆ. "ಇದಕ್ಕೋಸ್ಕರನೇ ನಾನು ಇಷ್ಟು ವರ್ಷ ಕಾದೆ. ಇನ್ನು ಮುಂದೆ ಈ ಮನೆಯಲ್ಲಿ ನನ್ನದೇ ರಾಜ್ಯಭಾರ" ಎಂದು ಶಕುಂತಲಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಯುಜಮಾನಿ ಶಕುಂತಲಾ ಅಥವಾ ಭೂಮಿಕಾ?

ಏನು ಎಲ್ಲರೂ ಸುಮ್ಮನಿದ್ದಾರೆ. ಎಲ್ಲರೂ ಚಪ್ಪಾಳೆ ತಟ್ಟಿ ಎಂದು ಮನೆಹಾಳ ಮಾವ ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಲು ಮುಂದಾಗುತ್ತಾರೆ. ಆಗ ಅಜ್ಜಮ್ಮ "ಹೇ ದಂಡಪಿಂಡ, ಸ್ವಲ್ಪ ಸುಮ್ಮನೆ ನಿಂತ್ಕೋ" ಎಂದು ಹೇಳುತ್ತಾರೆ. "ನನಗೆ ನನ್ನ ಸೊಸೆ ಬಗ್ಗೆ ಹೇಗೆ ಅಭಿಪ್ರಾಯ ಇದೆಯೋ, ಅದೇ ರೀತಿ ಶಕುಂತಲಾ ದೇವಿ ಮನಸ್ಸಲ್ಲೂ ತನ್ನ ಸೊಸೆ ಭೂಮಿಕಾಳ ಬಗ್ಗೆ ಕೆಲವು ಅಭಿಪ್ರಾಯಗಳು ಇರುತ್ತವೆ. ಅದನ್ನ ಅವಳ ಬಾಯಿಯಿಂದ ಕೇಳಿ ತಿಳಿದುಕೊಂಡರೆ ಒಳ್ಳೆಯದಲ್ವ" ಎಂದು ಅಜ್ಜಮ್ಮ ಹೇಳುತ್ತಾಳೆ. "

ಭೂಮಿಕಾಳ ಬಗ್ಗೆ ನಿನ್ನ ಅಭಿಪ್ರಾಯವೇನು" ಎಂದು ಕೇಳಿದಾಗ ಶಕುಂತಲಾ ನಾಟಕೀಯವಾಗಿ "ಅತ್ತೆ ನಿಮಗೆ ನನ್ನ ಮೇಲೆ ಏನು ಅಭಿಪ್ರಾಯವಿದೆಯೋ ಆ ಅಭಿಪ್ರಾಯವೇ ನನಗೆ ಭೂಮಿಕಾಳ ಮೇಲೆ ಇದೆ" ಎಂದು ಹೇಳುತ್ತಾಳೆ. "ಎಲ್ಲಾ ನಿಭಾಯಿಸಿಕೊಂಡು ಹೋಗುವ ಶಕ್ತಿ ಅವಳಿಗೆ ಇದೆ. ಎಷ್ಟೇ ಆದ್ರೂ ಟೀಚರ್‌ ಅಲ್ವ" ಎಂದಾಗ ಅಜ್ಜಮ್ಮ "ಅಂದರೆ, ಅವಳಿಗೆ ಯುಜಮಾನಿಯಾಗುವ ಎಲ್ಲಾ ಅರ್ಹತೆ ಇದೆ ಅನ್ನು" ಎನ್ನುತ್ತಾರೆ. ಈಗ ಶಕುಂತಲಾರಿಗೆ ದಿಗಿಲುಗೊಳ್ಳುವ ಸಮಯ. "ಮುದುಕಿ ಕೊಟ್ಲಲ್ವ ಟ್ವಿಸ್ಟು" ಎಂದುಕೊಳ್ಳುತ್ತಾನೆ ಶಕುಂತಲಾ ಸಹೋದರ. ಬಲವಂತವಾಗಿ ಶಕುಂತಲಾ ಅಜ್ಜಮ್ಮನ ಮಾತಿಗೆ ತಲೆಯಾಡಿಸುತ್ತಾಳೆ. "ಭೂಮಿಕಾ ಸ್ವಲ್ಪ ಸಮಯದಲ್ಲೇ ಎಲ್ಲರ ಮನಸ್ಸನ್ನು ಗೆದ್ದುಬಿಟ್ಟಿದ್ದಾಳೆ. ಒಂದು ಮನೆಯನ್ನು ನಡೆಸಬೇಕಾದ ಗತ್ತು, ಗಾಂಭಿರ್ಯ ಎಲ್ಲ ಅವಳಲ್ಲಿ ಇದೆ. ಅವಳು ಭೂಮಿ ತೂಕದವಳು. ಅವಳಿಗೆ ತೂಗೋದು ಗೊತ್ತು, ಸಮಯ ಬಂದ್ರೆ ತಟ್ಟೋದು ಗೊತ್ತು" ಎಂದು ಅಜ್ಜಮ್ಮ ಹೇಳುತ್ತಾರೆ.

"ಭೂಮಿಕಾ ಗುಂಡುಗೆ ಮಾತ್ರ ಒಳ್ಳೆಯ ಹೆಂಡತಿಯಲ್ಲ. ಈ ಮನೆಗೂ ಒಳ್ಳೆಯ ಯುಜಮಾನಿ. ಹೀಗಾಗಿ, ಈ ಮನೆಗೆ ಇವಳೇ ಯುಜಮಾನಿಯಾಗಬೇಕೆಂದು ನನ್ನ ಆಸೆ" ಎಂದು ಹೇಳಿದಾಗ ಶಕುಂತಲಾ ಮತ್ತು ಆಕೆಯ ಟೀಮ್‌ಗೆ ಟೆನ್ಷನ್‌ ಆಗುತ್ತದೆ. ಮಲ್ಲಿ, ಪಾರ್ಥನ ಮುಖದಲ್ಲಿ ನಗು ಕಾಣಿಸುತ್ತದೆ. ಜೈದೇವ್‌ ತಲೆಮೇಲೆ ಕೈಯಿಟ್ಟುಕೊಳ್ಳುತ್ತಾನೆ. "ನನ್ನ ಈ ಅಭಿಪ್ರಾಯಕ್ಕೆ ನೀನು ಏನು ಹೇಳುವಿ ಶಕುಂತಲಾ" ಎಂದು ಅಜ್ಜಮ್ಮ ಕೇಳಿದಾಗ ಶಕುಂತಲಾ ಬೆಬ್ಬೆಬ್ಬೆ ಆಗುತ್ತಾರೆ. "ಭೂಮಿ ಯುಜಮಾನಿಯಾಗ್ಲಿ. ಅವಳೇ ನಿಭಾಯಿಸ್ಲಿಅನ್ನೋದು ನನ್ನ ಆಸೆ ಕೂಡ" ಎಂದು ಹೇಳುತ್ತಾಳೆ. ನನಗಂತೂ ಆಕೆಯನ್ನು ಯುಜಮಾನಿಯಾಗಿ ಆಯ್ಕೆ ಮಾಡಿದ್ದು ತುಂಬಾ ಖುಷಿನೇ ಅತ್ತೆ ಎಂದು ಹೇಳುತ್ತಾಳೆ ಶಕುಂತಲಾ. ಗೌತಮ್‌ ಮುಖದಲ್ಲಿ ಏನೋ ಕಸಿವಿಸಿ.

"ಈಗ ನೀನೇ ಈ ತಿಜೋರಿ ಕೀನ ನಿನ್ನ ಸೊಸೆಗೆ ನೀಡು. ನೀನೇ ಮುಂದೆ ನಿಂತು ಪಟ್ಟಾಭಿಷೇಕ ಮಾಡು. ಅದಕ್ಕೆ ತಿಜೋರಿ ಕೀನ ನಿನಗೆ ನೀಡಿದು" ಎಂದು ಅಜ್ಜಮ್ಮ ಹೇಳಿ ಭೂಮಿಕಾಳನ್ನು ಕರೆಯುತ್ತಾರೆ. ಭೂಮಿಕಾ ಕೈ ಮುಗಿಯುತ್ತ "ಅಜ್ಜಿ ನನಗೆ ಇದೆಲ್ಲ ಬೇಡ" ಎಂದು ಹೇಳುತ್ತಾನೆ. ಇನ್ನು ನೀನು ಏನೂ ಮಾತನಾಡುವ ಹಾಗೇ ಇಲ್ಲ ಎಂದು ಅಜ್ಜಮ್ಮ ಆರ್ಡರ್‌ ಮಾಡುತ್ತಾರೆ. "ಈ ಮನೆಯ ಹಿರಿಯರಾದ ನಾವೆಲ್ಲ ತೀರ್ಮಾನ ಮಾಡಿಯಾಗಿದೆ. ಇನ್ನು ಮುಂದೆ ಈ ಮನೆಗೆ ನೀನೇ ಯುಜಮಾನಿ" ಎಂದು ಹೇಳುತ್ತಾರೆ. ಅನಿವಾರ್ಯವಾಗಿ ಶಕುಂತಲಾದೇವಿ ಭೂಮಿಕಾಳ ಕೈಗೆ ಅಧಿಕಾರ ಹಸ್ತಾಂತರ ಮಾಡುತ್ತಾಳೆ. ಜೈದೇವ್‌, ಅಶ್ವಿನಿ, ಅಶ್ವಿನಿ ಗಂಡ, ರಮಾಕಾಂತ್‌ ಎಲ್ಲರ ಮುಖದಲ್ಲೂ ಭೀತಿಯಾಗುತ್ತದೆ. ನಾಟಕೀಯವಾಗಿ ಇವರೆಲ್ಲ ಕಂಗ್ರಾಟ್ಸ್‌ ಹೇಳುತ್ತಾರೆ. ಯಾಕೆ ಇವರು ಹೀಗೆ ಇದ್ದಾರೆ. ನನ್ನನ್ನು ಯುಜಮಾನಿ ಮಾಡಿದ್ದು ಇವರಿಗೆ ಇಷ್ಟ ಆಗಿಲ್ವ ಎಂದು ಭೂಮಿಕಾ ಗೌತಮ್‌ ಬಗ್ಗೆ ಯೋಚನೆ ಮಾಡುತ್ತಾಳೆ.

ಅಪೇಕ್ಷಾಳಿಗೆ ಈ ವಿಷಯವನ್ನು ಪಾರ್ಥ ತಿಳಿಸುತ್ತಾನೆ. ಈ ವಿಷಯವನ್ನು ಖುಷಿಯಿಂದ ಅಪೇಕ್ಷಾ ಮಂದಾಕಿನಿಗೆ ತಿಳಿಸುತ್ತಾಳೆ. "ಅಷ್ಟು ದೊಡ್ಡ ಮನೆಗೆ ಯುಜಮಾನಿಯಾಗೋದು ಅಂದ್ರೆ ಸುಮ್ಮನೆನಾ" ಎಂದು ಮಂದಾಕಿನಿ ಹೇಳುತ್ತಾರೆ. ಈ ವಿಷಯ ನಿನಗೆ ಹೇಗೆ ಗೊತ್ತಾಯ್ತು ಎಂದಾಗ ಅನಿವಾರ್ಯವಾಗಿ "ಭಾವ ಫೋನ್‌ ಮಾಡಿ ಹೇಳಿದ್ರು" ಎನ್ನುತ್ತಾಳೆ. ಇನ್ನೊಂದೆಡೆ ಶಕುಂತಲಾ ಮತ್ತು ಟೀಮ್‌ ಬೇಸರದ ಮಾತುಗಳು ನಡೆದಿದೆ. ನಾವೆಲ್ಲ ಆಕೆಯ ಮುಂದೆ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಜೈದೇವ್‌ ಕೂಡ ನೋವು ತೋಡಿಕೊಳ್ಳುತ್ತಾನೆ. "ಅಧಿಕಾರ ಸಿಕ್ತು ಎಂದರೆ ಅಧಿಕಾರ ಚಲಾಯಿಸಬಹುದು ಎಂದಲ್ಲ. ಆಕೆ ಈ ಮನೆಯ ಯುಜಮಾನಿಯಾಗಿ ಎಷ್ಟು ದಿನ ಇರ್ತಾಳೆ ನೋಡ್ತಿನಿ" ಎಂದು ಶಕುಂತಲಾ ಹೇಳುತ್ತಾಳೆ.

ಡುಮ್ಮ ಸಾರ್‌ ಕಂಗ್ರಾಟ್ಸ್‌ ಹೇಳಿಲ್ಲ ಯಾಕೆ?

ಇನ್ನೊಂದೆಡೆ ಗೌತಮ್‌ ಕೋಪದಲ್ಲಿ ಇರುವಂತೆ ನಾಟಕ ಮಾಡುತ್ತಾರೆ. ಅಲ್ಲಿಗೆ ಭೂಮಿಕಾ ಬರುತ್ತಾರೆ. ಆಗ ಮಂದಾಕಿನಿ ಕಾಲ್‌ ಮಾಡಿ ಭೂಮಿಕಾಗೆ ಅಭಿನಂದನೆ ತಿಳಿಸುತ್ತಾರೆ. ಈ ವಿಷಯ ಹೇಳಿದ್ದು ಅಪ್ಪಿ ಎಂದು ಭೂಮಿಕಾ ತಿಳಿದುಕೊಳ್ಳುತ್ತಾಳೆ. "ಅಮ್ಮ ನನ್ನ ದೊಡ್ಡಸ್ತಿಕೆ ಏನೂ ಇಲ್ಲ. ಎಲ್ಲಾ ನೀನು ಅಪ್ಪ ಕಲಿಸಿದ್ದು" ಎಂದು ಫೋನ್‌ನಲ್ಲಿ ಭೂಮಿಕಾ ಹೇಳಿದಾಗ ಹಿಂಬದಿಯಲ್ಲಿ ಗೌತಮ್‌ ಮುಖದಲ್ಲಿ ನಗು ಮೂಡುತ್ತದೆ. "ಗೌತಮ್‌ ಅವರೇ ನೀವು ಏನೂ ಹೇಳೇ ಇಲ್ಲ. ಯಾಕೆ ನೀವು ಒಂಥರ ಇದ್ದೀರಿ. ಅಜ್ಜಿ ನನ್ನನ್ನು ಯುಜಮಾನಿ ಮಾಡಿದ್ದು ನಿಮಗೆ ಇಷ್ಟ ಇಲ್ವ" ಎಂದು ಕೇಳುತ್ತಾಳೆ. "ನನಗೆ ಎಲ್ಲರ ಥರ ಕಂಗ್ರಾಟ್ಸ್‌ ಹೇಳಿ ವಿಷ್‌ ಮಾಡಲು ಇಷ್ಟ ಇಲ್ಲ. ಬೇರೆ ಥರ ವಿಷ್‌ ಮಾಡೋಣ" ಎನ್ನುತ್ತ ಹಗ್‌ ಮಾಡಿ ಪ್ರೀತಿ ತೋರಿಸ್ತಾರೆ ಡುಮ್ಮ ಸಾರ್‌.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ