logo
ಕನ್ನಡ ಸುದ್ದಿ  /  ಮನರಂಜನೆ  /  Biffes 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭ; 50 ದೇಶಗಳ 180 ಸಿನಿಮಾಗಳ ಪ್ರದರ್ಶನ

BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭ; 50 ದೇಶಗಳ 180 ಸಿನಿಮಾಗಳ ಪ್ರದರ್ಶನ

Praveen Chandra B HT Kannada

Feb 29, 2024 03:08 PM IST

google News

BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆಯಿಂದ ಆರಂಭ; 50 ದೇಶಗಳ 180 ಸಿನಿಮಾಗಳ ಪ್ರದರ್ಶನ

    • Bengaluru International film festival 2024:  ಫೆಬ್ರವರಿ 19ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಫೆಬ್ರವರಿ 29ರಿಂದ ಮಾರ್ಚ್ 7ರವರೆಗೆ ಸುಮಾರು 50 ದೇಶಗಳ 300 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆಯಿಂದ ಆರಂಭ; 50 ದೇಶಗಳ 180 ಸಿನಿಮಾಗಳ ಪ್ರದರ್ಶನ
BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆಯಿಂದ ಆರಂಭ; 50 ದೇಶಗಳ 180 ಸಿನಿಮಾಗಳ ಪ್ರದರ್ಶನ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯು ಗುರುವಾರ ಫೆಬ್ರವರಿ 29ರಿಂದ ಆರಂಭವಾಗಲಿದೆ. 50 ದೇಶಗಳ ಸುಮಾರು 180 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

30 ಕನ್ನಡ ಸಿನಿಮಾಗಳ ಪ್ರದರ್ಶನ

ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಳ್ಳುವ ಸಮಯದಲ್ಲಿ ಈ ಸಿನಿಮೋತ್ಸವ ನಡೆಯಲಿದೆ. ಕರ್ನಾಟಕ ರಾಜ್ಯದ ಹೆಸರು ಬದಲಾವಣೆಯಾಗಿ 50 ವರ್ಷ ಸಂದ ಸಂಭ್ರಮದ ಸಮಯದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ನಾಳೆಯಿಂದ ಹಲವು ಕನ್ನಡ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅಮರಶಿಲ್ಪಿ ಜಕಣಾಚಾರಿ, ಬೆಳ್ಳಿಮೋಡ, ಒಂದಾನೊಂದು ಕಾಲದಲ್ಲಿ, ಅಂಥ, ಮಯೂರ, ತಾಯಿ ಸಾಹೇಬ, ಕಾಟೇರ, ಟಗರು ಪಲ್ಯ, ಕೌಶಲ್ಯ ಸುಪ್ರಜಾ ರಾಮಾ, ಸಪ್ತ ಸಾಗರದಾಚೆ ಎಲ್ಲೋ ಮುಂತಾದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ಪಡೆದ ಬೆಂಗಾಲಿ ನಿರ್ದೇಶಕರ ಮೃಣಾಲ್‌ ಸೇನ್‌ರ ಸಿನಿಮಾ, ಇರಾನಿ ಸಿನಿಮಾ ನಿರ್ದೇಶಕ ಅಬ್ಬಾಸ್‌ ಕಿಯಾರೊಟಮಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಬೆಂಗಳೂರು ಚಲನಚಿತ್ರೋತ್ಸವ ಎಲ್ಲೆಲ್ಲಿ?

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಜ್‌ ಕುಮಾರ್‌ ಕಲಾಭವನ, ಸುಚಿತ್ರಾ ಫಿಲ್ಮ್‌ ಸೊಸೈಟಿ ಬನಶಂಕರಿ, ಓರಿಯನ್‌ ಮಾಲ್‌, ಡಾ. ರಾಜ್‌ಕುಮಾರ್‌ ಭವನ ಮತ್ತು ಸುಚಿತ್ರ ಅಕಾಡೆಮಿಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೋ, ರಭ, ಸಂತಾಲಿಯಂತಹ ಹೆಚ್ಚು ತಿಳಿದಿಲ್ಲದ ಭಾರತೀಯ ಭಾಷೆಗಳ ಚಲನಚಿತ್ರಗಳಿಗೂ ಈ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಂಘಟಕರು ವೇದಿಕೆ ಒದಗಿಸಿದ್ದಾರೆ. ಮಾನವ ಘನತೆ, ಸಾಮಾಜಿಕ ನ್ಯಾಯ, ಪರಿಸರ ಕಾಳಜಿ ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಬಗ್ಗೆ ಮಾತನಾಡುವ 15 ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸಗಳು ನಡೆಯಲಿವೆ.

ಸಿನಿಮೋತ್ಸವ ಟಿಕೆಟ್‌ ಎಲ್ಲಿ ದೊರಕುತ್ತದೆ?

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಪ್ರತಿನಿಧಿಗಳ ನೋಂದಣಿ ಮಾಡಬೇಕು. ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ ಹೋಗಿ, ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಚಿತ್ರೋತ್ಸವದ ಪ್ರತಿನಿಧಿ ಪಾಸ್ / ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ 800 ರೂಪಾಯಿ. ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 400 ರೂಪಾಯಿ ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: biffes.org

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ