Sonu Gowda: ಹಾಫ್ ಮರ್ಡರ್, ಫುಲ್ ಮರ್ಡರ್ ಮಾಡಿರೋರ ಜತೆ ಇದ್ದೆ; ಜೈಲು ಅನುಭವ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ
Apr 13, 2024 05:38 PM IST
Sonu Gowda: ಜೈಲು ಅನುಭವ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ
- Sonu Srinivas Gowda: ಬಾಲಕಿ ದತ್ತು ಪಡೆದ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಜೈಲಿಂದ ಬಿಡುಗಡೆಯಾಗಿದ್ದರು. ಇದೀಗ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಜೈಲು ಅನುಭವದ ಕುರಿತು ಮಾತನಾಡಿದ್ದಾರೆ.
ಬೆಂಗಳೂರು: ಅಕ್ರಮವಾಗಿ ಬಾಲಕಿಯನ್ನು ದತ್ತು ಪಡೆದ ಆರೋಪದಡಿ ಜೈಲು ಸೇರಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಯೂಟ್ಯೂಬ್ ವಿಡಿಯೋ ಮೂಲಕ ತಾನು ಜೈಲಿನಲ್ಲಿ ಕಳೆದ ಅನುಭವನ್ನು ಬಿಚ್ಚಿಟ್ಟಿದ್ದಾರೆ. ಹದಿನಾಲ್ಕು ದಿನಗಳ ಕಾಲ ಇವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೇ ಏಪ್ರಿಲ್ 6ರಂದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಇದೀಗ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಜೈಲಿನ ಅನುಭವದ ಕುರಿತು ಒಂದಿಷ್ಟು ವಿವರ ನೀಡಿದ್ದಾರೆ.
ನನಗೆ ಇವೆಲ್ಲ ಬೇಕಿತ್ತ ಅನಿಸಿತು
"ನನ್ನ ಮೊದಲು ಲೀಗಲ್ ಆಗಿ ಎನ್‌ಕ್ವಯರಿ ಮಾಡಿದ್ರು. ಅದಾದ ಬಳಿಕ ಜೈಲಿಗೆ ಹಾಕಿದ್ರು. ಜೈಲಿಗೆ ಹೋದಾಗ ನನಗೆ ನಿಜಕ್ಕೂ ಬ್ಯಾಡ್ ಅನಿಸಿತ್ತು. ಈ 23-24 ವಯಸ್ಸಲ್ಲಿ ಜೈಲಿಗೆ ಹೋದೆ ಅಂತ ಬೇಜಾರಾಯ್ತು. ಆ ಒಂದು ನಾಲ್ಕು ಗೋಡೆ ನಡುವೆ ಇದ್ದೆ ಅಂತ ಬೇಸರವಾಯಿತು. ಅಲ್ಲಿರುವ ಜನಗಳು, ಅಲ್ಲಿನ ವಾತಾವರಣ, ಅಲ್ಲಿನ ಪ್ಲೇಸ್, ಇವನ್ನೆಲ್ಲ ನೋಡ್ತಾ ಇದ್ರೆ ನನಗೆ ಯಾಕೆ ಇವೆಲ್ಲ ಬೇಕಿತ್ತು ಅಂತ ಅನಿಸಿತು" ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ವಿವಿಧ ಅಪರಾಧಿಗಳ ಜತೆ ಇದ್ದೆ
"ನನ್ನ ತರಹನೇ ಬೇರೆಯವರೂ ಇರುತ್ತಾರೆ. ಏನೇನೋ ಕೇಸ್ ಇರುತ್ತದೆ. ಹಾಫ್ ಮರ್ಡರ್, ಫುಲ್ ಮರ್ಡರ್, ಏನೇನೋ ಕೇಸ್‌ಗಳಿರುತ್ತವೆ. ಅವರೆಲ್ಲರ ಮಧ್ಯೆ ನಾನು ಇದ್ದೆ ಅನ್ನೋದೇ ಅದನ್ನು ಏನೆಂದು ಹೇಳಲಾಗದು. ಅಲ್ಲಿ ಮೂರು ದಿನಕ್ಕೊಮ್ಮೆ ಫೋನ್ ಕೊಡ್ತಾರೆ. ನಿಮ್ಮ ಫ್ಯಾಮಿಲಿ ಜತೆ ಮಾತನಾಡಬಹುದು. ಅಡ್ವೋಕೇಟ್ ಅಥವಾ ಯಾರ ಜತೆಯಾದ್ರೂ ಮಾತನಾಡಬಹುದು. ಕೆಲವು ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ನನ್ನ ಫೋನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ಸ್ ಇತ್ತು. ಎಲ್ಲವೂ ಇತ್ತು. ಆದರೆ, ಮಾತನಾಡುವಂತೆ ಇರಲಿಲ್ಲ. ಒಬ್ಬ ವ್ಯಕ್ತಿಯ ವ್ಯಾಲ್ಯೂ ಇದರಿಂದ ನಮಗೆ ಅರ್ಥ ಆಗುತ್ತದೆ. ನಾಲ್ಕು ಗೋಡೆಯ ನಡುವೆ ಇದ್ದಾಗ ನಮಗೆ ಎಲ್ಲವೂ ಅರ್ಥ ಆಗುತ್ತದೆ. ನನ್ನ ಲೈಫ್‌ನಲ್ಲಿ ಯಾಕೆ ಹೀಗಾಯ್ತು ಎಂದೆಲ್ಲ ಯೋಚಿಸಲು ಸಾಧ್ಯವಾಗುತ್ತದೆ" ಎಂದು ಅವರು ತನ್ನ ಅನುಭವ ಬಿಚ್ಚಿಕೊಂಡಿದ್ದಾರೆ.
ಅಯ್ಯೋ ನನ್ನ ಲೈಫ್ ಮತ್ತೆ ನೆಗೆಟಿವ್ ಆಗಿಬಿಡ್ತಾ?
ಪೊಲೀಸ್ ಸ್ಟೇಷನ್‌ನಲ್ಲಿದ್ದಾಗ ಉಳಿದವರ ಮೊಬೈಲ್ ಫೋನ್ ನೋಡಿದ್ದೆ. ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಇತ್ತು. ಅಯ್ಯೋ ಮತ್ತೆ ನನ್ನ ಲೈಫ್ ನೆಗೆಟೀವ್ ಆಗಿಯೇ ಹೋಗಿ ಬಿಡುತ್ತಾ ಅಂತ ಯೋಚಿಸಿದ್ದೆ. ಹದಿನೈದು ದಿನ ಫೋನ್ ಇಲ್ಲದೆ, ಫೇವರಿಟ್ ಫುಡ್ ಇಲ್ಲದೆ, ಫ್ಯಾಮಿಲಿ ಇಲ್ಲದೆ, ನನ್ನ ಪೆಟ್ಸ್ ಇಲ್ಲದೆ ಹೇಗೆ ಜೀವನ ಕಳೆದೆ ಎಂದು ಹೇಳಲಾಗುತ್ತಿಲ್ಲ. ನನಗೆ ಸಪೋರ್ಟ್ ಮಾಡಿದ್ದ ಎಲ್ಲರಿಗೂ ಧನ್ಯವಾದ. ನಾನು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಯಾವುದೇ ನಿರೀಕ್ಷೆ ಇಲ್ಲದೆ ಇದ್ದಾಗಲೂ ಸಹಾಯ ಸಿಗ್ತು. ಕಿರಿಕ್ ಕೀರ್ತಿ ಸಪೋರ್ಟ್ ಇತ್ತು. ಸ್ನೇಹಿತ್ ರಾಕೇಶ್ ಅಡಿಗ ಬೆಂಬಲ ನೀಡಿದ್ರು. ಕುಟುಂಬದವರು ಸಹಕರಿಸಿದ್ರು. ಎಲ್ಲರಿಗೂ ಧನ್ಯವಾದ. ಮೊದಲಿನಂತೆ ಬ್ಲಾಗ್, ವಿಡಿಯೋ ಮಾಡ್ತಿನಿ. ಜೈಲಲ್ಲಿ ತುಂಬಾ ಸೊಳ್ಳೆ ಇತ್ತು. ನನ್ನ ಫ್ಯಾಮಿಲಿ, ನಂಬಿದವರ ಪ್ರಯತ್ನದಿಂದಾಗಿ ಬೇಗ ಹೊರಗೆ ಬಂದೆ. ಕ್ಲಾರಿಟಿ ಕೊಡಿ ಎಂದು ಕೇಳುವಿರಿ. ನಾನು ಏನೂ ಹೇಳುವ ಹಾಗೆ ಇಲ್ಲ. ಮುಂದೆ ಎಲ್ಲಾ ಕ್ಲಿಯರ್ ಆಗಿ ಹೇಳುವೆ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.