ದರ್ಶನ್‌ಗೆ ಇರೋದು ಆ ಟೈಪ್ ಅಭಿಮಾನಿಗಳಲ್ಲ, ಅವರಿಗಿರೋದು ರಾಯಲ್ ಫ್ಯಾನ್ಸ್; ತರುಣ್ ಸುಧೀರ್ ಹೇಳಿದ್ಹೀಗೆ
Jan 17, 2024 10:31 AM IST
ದರ್ಶನ್ ಅಭಿಮಾನಿಗಳ ಕುರಿತು ತರುಣ್ ಸುಧೀರ್
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದೆ. ಇದೇ ಸಮಯದಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರು ಕಾಟೇರ ನಟ ದರ್ಶನ್ ಅಭಿಮಾನಿಗಳ ಕುರಿತು ಮಾತನಾಡಿರುವುದು ವೈರಲ್ ಆಗುತ್ತಿದೆ.
ಕಾಟೇರ ಅಂದರೆ ಸ್ಟ್ರಾಂಗ್. ಅವರಿಗೆ ಇರುವುದು ಶಿಫ್ಟಿಂಗ್ ಫ್ಯಾನ್ಸ್ ಅಲ್ಲ. ಅವರಿಗೆ ಇರುವುದು ರಾಯಲ್ ಫ್ಯಾನ್ಸ್. ಅವರು ಅಮೇಜಿಂಗ್ ಫರ್ಫಾಮರ್. ಅವರು ಯಾವುದೇ ಬಗೆಯ ಪಾತ್ರಗಳನ್ನು ಅಮೋಘವಾಗಿ ನಟಿಸುತ್ತಾರೆ ಎಂದು ದರ್ಶನ್ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಹೇಳಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಿ ಹಿಂದೂ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಬಗ್ಗೆ ತರುಣ್ ಸುಧೀರ್ ಮುಕ್ತವಾಗಿ ಮಾತನಾಡಿದ ವಿಡಿಯೋ ಇದಾಗಿದೆ. ಯಾವುದೇ ಕಾಸ್ಟ್ಯುಮ್ ಹಾಕಿದರೂ ದರ್ಶನ್ ಅಮೋಘವಾಗಿ ಕಾಣಿಸ್ತಾರೆ. ಈ ಚಿತ್ರದ ಯಶಸ್ಸಿಗೆ ತಂಡದ ಎಲ್ಲರ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ದರ್ಶನ್ ಸರ್‌ಗೆ ಆಕ್ಷನ್ ಚೆನ್ನಾಗಿ ಮಾಡ್ತಾರೆ. ಡ್ಯಾನ್ಸ್ ಕೂಡ ಮಾಡ್ತಾರೆ. ಕಮರ್ಷಿಯಲ್ ಎಲಿಮೆಂಟ್ ಚೆನ್ನಾಗಿ ಮಾಡ್ತಾರೆ. ಈಗ ಬಂದಿರುವ ರೆಸ್ಪಾನ್ಸ್ ನೋಡಿದ್ರೆ ಅವರಿಗೆ ಸೂಕ್ತವಾದ ಸ್ಕ್ರಿಪ್ಟ್ ಮಾಡುವಲ್ಲಿ ಈ ಹಿಂದೆ ತುಸು ಎಡವಿದ್ದೇವೋ ಎಂದೆನಿಸುತ್ತದೆ. ರಾಬರ್ಟ್‌ನಲ್ಲೂ ನಾನು ಕೂಡ ಸೇಫ್ ಆಗಿ ವರ್ತಿಸಿದ್ದೆ. ಸಂಗೋಳ್ಳಿ ರಾಯಣ್ಣ, ಕುರುಕ್ಷೇತ್ರ ಯಶಸ್ವಿಯಾಗಲು ಕಾರಣ ಕೂಡ ಕಥೆ ಮತ್ತು ದರ್ಶನ್ ಪರ್ಫಾಮೆನ್ಸ್. ದರ್ಶನ್ ಬಳಿ ಒಂದು ಕೇಳಿದರೆ ಹತ್ತು ದೊರಕುತ್ತದೆ. ಅವರಲ್ಲಿ ಹತ್ತು ಕೇಳಿದರೆ ಕನಿಷ್ಠ ಐವತ್ತು ಕೊಡ್ತಾರೆ. ಸೀನ್‌ನಲ್ಲಿ ಏನೂ ಇಲ್ಲದೆ ಇದ್ದರೆ ಕಲಾವಿದರು ಏನು ನೀಡಲು ಸಾಧ್ಯ. ಇದು ಬಹುಶಃ ದರ್ಶನ್‌ಗೆ ಈ ಹಿಂದೆ ಹಿನ್ನೆಡೆಯಾಗಿರಬಹುದು ಎಂದು ತರುಣ್ ಸುಧೀರ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ದರ್ಶನ್ ಅತ್ಯುತ್ತಮ ನಟ. ಅವರಿಗೆ ಸರಿಯಾದ ವೇದಿಕೆ ದೊರಕಿದರೆ ಅವರು ಅಮೋಘವಾಗಿ ನಟಿಸುತ್ತಾರೆ" ಎಂದು ತರುಣ್ ಸುಧೀರ್ ಅಭಿಪ್ರಾಯಪಟ್ಟಿದ್ದಾರೆ.
ಕಾಟೇರ ಸಿನಿಮಾ ಯಶಸ್ವಿಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ರಾಯಲ್ ಫ್ಯಾನ್ಸ್ ಸಖತ್ ಆಕ್ಟೀವ್ ಆಗಿದ್ದಾರೆ. ದರ್ಶನ್ ಅವರ ಈ ಹಿಂದಿನ ಪ್ರಮುಖ ಸಿನಿಮಾಗಳ ಕ್ಲಿಪ್ಸ್ ಹಂಚುತ್ತ, ಕಾಟೇರ ಬಾಕ್ಸ್ ಆಫೀಸ್ ನಂಬರ್ಸ್ ಹಂಚಿಕೊಳ್ಳುತ್ತ ಸಂಭ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಕಾಟೇರ ಸಿನಿಮಾವು 200 ಕೋಟಿ ಕ್ಲಬ್‌ಗೆ ಸೇರುವ ಹಂತದಲ್ಲಿದೆ. ಈಗಾಗಲೇ ಕಾಟೇರ ಗಳಿಕೆ 190 ಕೋಟಿ ದಾಟಿದ್ದು, ಈ ವಾರ 200 ಕೋಟಿ ಕ್ಲಬ್‌ಗೆ ಸೇರಿ ಸಂಭ್ರಮಿಸುವ ಸೂಚನೆಗಳಿವೆ.
ಈ ವಾರ ಸಂಕ್ರಾಂತಿಯಂದು ಕಾಟೇರ ಸಿನಿಮಾ ಮತ್ತೆ ಹೌಸ್‌ಫುಲ್ ಆದಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಸಂಕ್ರಾಂತಿಗೆ ಯಾವುದೇ ಕನ್ನಡ ಸಿನಿಮಾ ಬಿಡುಗಡೆಯಾಗದೆ ಇದ್ದರೂ ಆ ನಿರ್ವಾತವನ್ನು ಕಾಟೇರ ತುಂಬಿತ್ತು. ಈಗಾಗಲೇ ಸಿನಿಮಾ ನೋಡಿರುವ ದರ್ಶನ್ ರಾಯಲ್ ಅಭಿಮಾನಿಗಳು ಮತ್ತೆಮತ್ತೆ ಕಾಟೇರ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಸಿನಿಮಾವೆಂದು ಥಿಯೇಟರ್‌ನಿಂದ ಆರಂಭದಲ್ಲಿ ದೂರವಿದ್ದವರೂ ಒಂದು ಸಾರಿ ನೋಡೇ ಬಿಡೋಣ ಎಂದು ಥಿಯೇಟರ್‌ನತ್ತ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಕಾಟೇರ ಸಿನಿಮಾದ ಕುರಿತು ಬಾಯ್ಮಾತಿನ ಪ್ರಚಾರವೂ ಜೋರಾಗಿದೆ. ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹರಡಿ ಚಿತ್ರದ ಜನಪ್ರಿಯತೆ ಹೆಚ್ಚಾಗುತ್ತಿದೆ. ಇಂತಹ ಹಲವು ಅಂಶಗಳು ಕಾಟೇರದ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುತ್ತಿವೆ ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.