Pavan Wadeyar: ಧಮ್ ಬಗ್ಗೆ ಮಾತನಾಡಬೇಡಿ, ಕನ್ನಡಿಗರಿಗೆ ಅದು ಹುಟ್ಟಿನಿಂದಲೇ ಇರುತ್ತೆ; ಮತ್ತೆ ಅಸಮಾಧಾನ ಹೊರಹಾಕಿದ ಪವನ್ ಒಡೆಯರ್
May 18, 2023 08:30 PM IST
ಧಮ್ ಬಗ್ಗೆ ಮಾತನಾಡಬೇಡಿ, ಕನ್ನಡಿಗರಿಗೆ ಅದು ಹುಟ್ಟಿನಿಂದಲೇ ಬಂದಿರುತ್ತೆ; ಮತ್ತೆ ಅಸಮಾಧಾನ ಹೊರಹಾಕಿದ ಪವನ್ ಒಡೆಯರ್
- ನಿರ್ದೇಶಕ ಪವನ್ ಒಡೆಯರ್ ಬಸವರಾಜ್ ಬೊಮ್ಮಾಯಿ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಅವರಿಂದ ಸ್ಪಷ್ಟನೆ ಹೊರಬಂದಿದೆ.
Pavan Wadeyar: ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ಪವನ್ ಒಡೆಯರ್ ಇತ್ತೀಚಿನ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ; ಡೊಳ್ಳು(Dollu) ಸಿನಿಮಾ. ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ (BJP) ಸರ್ಕಾರ ಸೋತು ಸುಣ್ಣವಾಗಿ, ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ, ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ (Basavaraj Bommai) ಬಗ್ಗೆ ನಿರ್ದೇಶಕ ಪವನ್ ಅಸಮಾಧಾನ ಹೊರಹಾಕಿದ್ದರು. ಡೊಳ್ಳು ಸಿನಿಮಾ ವಿಚಾರದಲ್ಲಿ ಬೊಮ್ಮಾಯಿ ಮಾಮ ತೋರಿದ ದುರಂಹಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೇ ಇದೆ ಎಂದು ಟ್ವಿಟ್ ಮಾಡಿದ್ದರು. ಹೀಗೆ ಟ್ವಿಟ್ ಮಾಡುತ್ತಿದ್ದಂತೆ ಹಲವರು ಪವನ್ ನಡೆಯನ್ನು ಪ್ರಶ್ನಿಸಿದ್ದರು.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಪವನ್‌ಗೆ ಟೀಕೆಗಳ ಸುರಿಮಳೆಯೇ ಹರಿದು ಬರುತ್ತಿದ್ದಂತೆ, ಮತ್ತೊಂದು ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ ವಿಡಿಯೋ ತುಣುಕೊಂದನ್ನು ಶೇರ್ ಮಾಡಿ, ಧಮ್ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇಷ್ಟು ದಿನ ತುಟಿ ಬಿಚ್ಚದ ನೀವು ಇದೀಗ ಒಮ್ಮಿಂದೊಮ್ಮೆ ಹೀಗೇಕೆ ಮಾತನಾಡುತ್ತಿದ್ದೀರಿ ಎಂದು ಪವನ್‌ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಪವನ್‌ಗೆ ಮನಸೋ ಇಚ್ಛೇ ಟೀಕೆ ಮಾಡಿದ್ದಾರೆ.
ಕನ್ನಡಿಗರಿಗೆ ಧಮ್ಮು ಹುಟ್ಟಿನಿಂದಲೇ ಇರುತ್ತೆ..
ಈ ಬಗ್ಗೆ ಟ್ವೀಟ್‌ನಲ್ಲಿ ಮತ್ತೆ ಪ್ರತಿಕ್ರಿಯಿಸಿದ ಪವನ್, ಹಲವಾರು ಮುಗ್ಧ ಸ್ನೇಹಿತರು, ಈ ವಿಷಯವನ್ನು ಅಂದೇ ಹೇಳಬಹುದಿತ್ತಲ್ಲ, ಧೈರ್ಯ ಇರ್ಲಿಲ್ವ, ಈಗ ಧಮ್ಮು ಬಂತಾ ಅಂದವರಿಗೆ, ಈ ಕೆಳಗಿನ ಲಿಂಕ್ ನೋಡಿ, ಅಂದು ನಾನು ನನ್ನ ಚಿತ್ರಕ್ಕೆ ಮಾತ್ರ ಅಲ್ಲ ತಲೆದಂಡ ಚಿತ್ರ ನಾದದ ನವನೀತಾ ಡಾಕ್ಯುಮೆಂಟರಿ ಚಿತ್ರಕ್ಕೂ ದನಿ ಎತ್ತಿದ್ದೆ. ಕನ್ನಡಿಗರಿಗೆ "ಧಮ್ಮು"ಹುಟ್ಟಿನಿಂದಲೇ ಇರುತ್ತೆ" ಎಂದಿದ್ದಾರೆ.
ಮೊದಲ ಟ್ವಿಟ್ ಹೀಗಿತ್ತು
ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ "ಡೊಳ್ಳು"ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ, ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ. ಕನ್ನಡಿಗರು ಮುಟ್ಟಾಳರಲ್ಲ" ಎಂದಿದ್ದರು.
ಡೊಳ್ಳಿಗೆ ರಾಷ್ಟ್ರಪ್ರಶಸ್ತಿ
ಕಳೆದ ವರ್ಷ ಡೊಳ್ಳು ಚಿತ್ರಕ್ಕೆ 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಹಾಗೂ ಶರಣ್ ಸುರೇಶ್ ಹಾಗೂ ಇನ್ನಿತರರು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.