logo
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ಈ ಚಿತ್ರದಲ್ಲಿರುವ ಪುಟಾಣಿಗಳು ಈಗ ಗಂಡ-ಹೆಂಡತಿ; ತಲೆಗೆ ಜುಟ್ಟು ಕಟ್ಟಿದ ಪುಟಾಣಿ ಕನ್ನಡದ ಪ್ರಖ್ಯಾತ ನಟ; ಸುಳಿವು- ಈಶ್ವರ

Movie Quiz: ಈ ಚಿತ್ರದಲ್ಲಿರುವ ಪುಟಾಣಿಗಳು ಈಗ ಗಂಡ-ಹೆಂಡತಿ; ತಲೆಗೆ ಜುಟ್ಟು ಕಟ್ಟಿದ ಪುಟಾಣಿ ಕನ್ನಡದ ಪ್ರಖ್ಯಾತ ನಟ; ಸುಳಿವು- ಈಶ್ವರ

Praveen Chandra B HT Kannada

Nov 15, 2023 07:16 AM IST

google News

ಇದು ಯಾರ ಬಾಲ್ಯದ ಫೋಟೋ, ಗೆಸ್‌ ಮಾಡಿ

    • Guess this Kannada Movie Actor name: ಕನ್ನಡದ ಪ್ರಖ್ಯಾತ ಸಿನಿಮಾ ನಟರು ಬಾಲ್ಯದಲ್ಲಿ ಹೇಗಿದ್ದರು ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಅಂದಹಾಗೆ ಈ ಚಿತ್ರದಲ್ಲಿರುವ ಪುಟ್ಟ ಮಗು ನೋಡಿದಾಗ ಈ ಮಗು ಕನ್ನಡದ ಯಾವ ನಟ ಎಂದು ಗುರುತಿಸಲು ಸಾಧ್ಯವೇ? ಗುರುತಿಸಲು ಸಾಧ್ಯವಾಗದೆ ಇದ್ದರೆ ವಿವಿಧ ಸುಳಿವುಗಳ ಆಧಾರದಲ್ಲಿ ಕಂಡುಹಿಡಿಯಲು ಪ್ರಯತ್ನಿಸಿ.
ಇದು ಯಾರ ಬಾಲ್ಯದ ಫೋಟೋ, ಗೆಸ್‌ ಮಾಡಿ
ಇದು ಯಾರ ಬಾಲ್ಯದ ಫೋಟೋ, ಗೆಸ್‌ ಮಾಡಿ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಿತ್ರಗಳಿಗೆ ಭರವಿಲ್ಲ. ಹಳೆಯ ಕನ್ನಡ ಹಾಸ್ಯ ಸಿನಿಮಾಗಳನ್ನು ನೋಡುವಾಗಲ ಈಗಲೂ ಹೊಟ್ಟೆ ಹುಣ್ಣಾಗುವಂತೆ ನಗುತ್ತೇವೆ. ಈ ರೀತಿ ಹಾಸ್ಯ ಪಾತ್ರಗಳ ಮೂಲಕ ನಮ್ಮನ್ನು ಸಾಕಷ್ಟು ಕಲಾವಿದರು ರಂಜಿಸಿದ್ದಾರೆ. ಈಗಲೂ ಸಾಕಷ್ಟು ಹಾಸ್ಯ ನಟರು ನಮ್ಮನ್ನು ರಂಜಿಸುತ್ತಿದ್ದಾರೆ. ಇವರಲ್ಲಿ ಕೆಲವರು ಖಳನಾಯಕನ ಪಾತ್ರದಲ್ಲೂ ಮಿಂಚಿದ್ದಾರೆ. ನಗಿಸಲು ಸೈ, ಫೈಟಿಂಗ್‌ಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಕೆಲವರು ನಾಯಕ ಪಾತ್ರದಲ್ಲೂ ಮಿಂಚಿದ್ದಾರೆ. ಆದರೆ, ಪ್ರೇಕ್ಷಕರಿಗೆ ಇಂತಹ ನಟರನ್ನು ಹಾಸ್ಯ ಪಾತ್ರದಲ್ಲಿ ನೋಡಲು ಇಷ್ಟವಾಗುತ್ತದೆ. ಈ ರೀತಿ ಹಾಸ್ಯ ಪಾತ್ರದಲ್ಲಿ ಮಿಂಚಿದವರು ಹೊರ ಜೀವನದಲ್ಲಿ ಗಂಭೀರವಾಗಿರಬಹುದು. ಆಗಾಗ ತರ್ಲೆ ಹೇಳಿಕೆಗಳನ್ನು ನೀಡುತ್ತ ಇರಬಹುದು. ದೇವರು, ಧರ್ಮ ಕಾರ್ಯಗಳಲ್ಲಿ ನಿರತರಾಗಿರಬಹುದು. ರಾಜಕೀಯದಲ್ಲೂ ಇರಬಹುದು. ಈ ರೀತಿ ಹಲವು ಹಾಸ್ಯ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತ ಬಂದಿದ್ದಾರೆ.

ಈ ವಿಷಯ ಇಲ್ಲೇ ಇರಲಿ, ಸದ್ಯ ಈ ಲೇಖನದ ಫೋಟೋದಲ್ಲಿರುವ ಪುಟಾಣಿಗಳನ್ನೊಮ್ಮೆ ನೋಡಿ. ಮೊದಲ ಫೋಟೋದಲ್ಲಿರುವ ಮಗು ಹೆಣ್ಣು ಮಗುವಿನಂತೆ ಕಂಡರೂ ಹೆಣ್ಣು ಮಗುವಲ್ಲ. ಒಂದು ವರ್ಷ ತುಂಬುವ ಮೊದಲೇ ತೆಗೆದ ಫೋಟೋ ಆಗಿರುವ ಕಾರಣ ಹೆಣ್ಣು ಮಗುವಿನಂತೆ ಕಾಣಿಸಬಹುದು. ಇವರು ಕನ್ನಡದ ಪ್ರಖ್ಯಾತ ಹಾಸ್ಯ ನಟ. ಸಾಕಷ್ಟು ಓದುಗರಿಗೆ ಈಗಾಗಲೇ ಇವರು ಯಾರೆಂದು ತಿಳಿದಿರಬಹುದು. ಇನ್ನೂ ತಿಳಿಯದವರಿಗೆ ಒಂದು ಸುಳಿವು ನೀಡೋಣ. ಇವರ ಬಗ್ಗೆ ನೀಡುವ ಸುಳಿವುಗಳು ಅಪಾಯಕಾರಿ, ಆ ಸುಳಿವುಗಳಲ್ಲಿ ನೀವು ಸುಲಭವಾಗಿ ಅವರು ಯಾರೆಂದು ಪತ್ತೆ ಹಚ್ಚುತ್ತೀರಿ. ಈ ನಟನನ್ನು ನೆನಪಿಸಿದರೆ ಒಂಬತ್ತು ಬಗೆಯ ಜ್ಯೂಸ್‌ ನೆನಪಾಗುತ್ತದೆ. ಒಂಬತ್ತು ಬಗೆಯ ಭಾವನೆ ನೆನಪಾಗುತ್ತದೆ. ಯಬ್ಬಾ, ಗೊತ್ತಾಯ್ತ.

ಇನ್ನೂ ಕೆಲವರಿಗೆ ಇವರು ಯಾರೆಂದು ತಿಳಿಯದೆ ಇರಬಹುದು. ಈಶ ಎಂಬ ಪದ ಇವರ ಹೆಸರಲಿದೆ. ಈಗ ನಿಮಗೆ ಇವರು ಯಾರೆಂದು ತಿಳಿಯಬಹುದು. ನೀರಿನ ಮಗ್‌ ಕೂಡ ನೆನಪಾಗಬಹುದು. ಈ ಸುಳಿವು ಯಾಕೋ ನಿಮಗೆ ಥಟ್‌ ಎಂದು ಉತ್ತರ ದೊರಕಿಸಿರಬಹುದು. ಹುಲಿ ಉಗುರು ಎಂದಾಗಲೂ ಈ ನಟ ನೆನಪಾಗಬಹುದು. ಆದರೆ, ಇವರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಲ್ಲ. ದರ್ಶನ್‌ ಹಾಸ್ಯ ನಟನೂ ಅಲ್ಲ. ಈ ನಟನ ಹೆಸರು ಕೇಳಿದಾಗ ನೀರ್‌ ದೋಸೆ ನೆನಪಾಗಬಹುದು. ಮಂತ್ರಾಲಯ ನೆನಪಾಗಬಹುದು. ಗುರು ರಾಘವೇಂದ್ರರು ನೆನಪಾಗಬಹುದು. ರಾಜಕೀಯ ನೆನಪಾಗಬಹುದು.

ಇಷ್ಟೆಲ್ಲ ಹಿಂಟ್‌ ಕೊಟ್ಟ ಮೇಲೆ ನಿಮಗೆ ಈ ಚಿತ್ರದಲ್ಲಿರುವ ಮಗು ಯಾರೆಂದು ತಿಳಿಯದೆ ಇರುತ್ತಾ? ಇವರು ಬೇರೆ ಯಾರೂ ಅಲ್ಲ. ನವರಸ ನಾಯಕ ಜಗ್ಗೇಶ್‌. ರಸ ಎಂಬ ಪದ ಹೇಳಿದ್ರೆ ನೀವು ಥಟ್‌ ಅಂತ ಕಂಡುಹಿಡಿಯುವಿರಿ ಎಂದು ಒಂಬತ್ತು ಬಗೆಯ ಜ್ಯೂಸ್‌ ಎಂಬ ಸುಳಿವು ನೀಡಲಾಗಿತ್ತು. ನವರಸ ನಾಯಕ ಜಗ್ಗೇಶ್‌ ಅವರು ಒಂಬತ್ತು ತಿಂಗಳ ಮಗುವಾಗಿದ್ದಾಗ ಹೀಗಿದ್ದರು. ಇವರ ಬಾಲ್ಯದ ಹೆಸರು ಈಶ್ವರ್‌ ಗೌಡ ಎಂದಾಗಿತ್ತು. ಅಂದಹಾಗೆ ಈ ಫೋಟೋದಲ್ಲಿರುವ ಇನ್ನೊಂದು ಮಗು ಪರಿಮಳ ಜಗ್ಗೇಶ್.‌ ಸುಮಾರು ಆರು ವರ್ಷದ ಹಿಂದೆ ತನ್ನ ಮತ್ತು ತನ್ನ ಪತಿಯ ಬಾಲ್ಯದ ಫೋಟೋಗಳನ್ನು ಪರಿಮಳ ಜಗ್ಗೇಶ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ನಟ ಜಗ್ಗೇಶ್‌ ಬಗ್ಗೆ

ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಎಂದೇ ಜನಪ್ರಿಯತೆ ಪಡೆದಿರುವ ಜಗ್ಗೇಶ್‌ ಅವರು ನಾಯಕನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರದ್ದು. ಶಿವಲಿಂಗಪ್ಪ ಮತ್ತು ನಂಜಮ್ಮ ಇವರ ಹೆತ್ತವರು. ಮಾರ್ಚ್‌ 17, 1963ರಂದು ಜನಿಸಿದರು. ಬಾಲ್ಯದ ಹೆಸರು- ಈಶ್ವರ ಗೌಡ ಎಂದಾಗಿತ್ತು. ಈಶ್ವರ ಹೆಸರು ಜಗದೀಶ- ಜಗ್ಗೇಶ್‌ ಆಗಿ ಬದಲಾಗಿತ್ತು. ಇವರು ತುಮಕೂರು ಜಿಲ್ಲೆಯ ಮಾಯಸಂದ್ರದವರು. ಜಡೆ ಮಾಯಸಂದ್ರ ಎಂದು ಜಗ್ಗೇಶ್‌ ಆಗಾಗ ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಇವರ ಸಹೋದರ ಕೋಮಲ್‌ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ಮತ್ತು ಹಾಸ್ಯ ನಟರಾಗಿ ಜನಪ್ರಿಯತೆ ಪಡೆದಿದ್ದಾರೆ.

ಜಗ್ಗೇಶ್‌ ಅವರು 1982ರಲ್ಲಿ ಸಹಾಯಕ ನಿರ್ದೇಶಕರಾಗಿ ಸಿನಿಮಾ ಕ್ಷೇತ್ರ ಪ್ರವೇಶಿಸಿದರು. ಪೋಷಕ ನಟನಾಗಿ, ಖಳನಾಯಕನಾಗಿ ಬಳಿಕ ಕೆಲವು ಚಿತ್ರಗಳಲ್ಲಿ ನಟಿಸಿದರು. ಭಂಡ ನನ್ನ ಗಂಡ ಚಿತ್ರದ ಮೂಲಕ ನಾಯಕ ನಟರಾದರು. ಇವರಿಗೆ ತರ್ಲೆ ನನ್ಮಗ ಚಿತ್ರ ಸಾಕಷ್ಟು ಜನಪ್ರಿಯತೆಯನ್ನು ನೀಡಿತು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ನಟಿಸುತ್ತ ಹೋದರು. `ಸರ್ವರ್ ಸೋಮಣ್ಣ',ರೂಪಾಯಿ ರಾಜ',`ಇಂದ್ರನ ಗೆದ್ದ ನರೇಂದ್ರ',`ಪಟೇಲ',ಕುಬೇರ' ಸೇರಿದಂತೆ ಹಲವು ಚಿತ್ರಗಳು ಸಾಕಷ್ಟು ಯಶಸ್ಸು ಪಡೆದಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ