logo
ಕನ್ನಡ ಸುದ್ದಿ  /  ಮನರಂಜನೆ  /  ದೇವ್ರಂದ್ರೆ ಯಾರು, ಅವನು ಕಾಣಿಸ್ತಾನಾ, ದೇವರು ಏಕೆ ಒಳ್ಳೆಯವನು? ಸತ್ಯ ಮಿಥ್ಯದ ಸುತ್ತ ಕಿಶೋರ್‌ ‘ನಂಬಿಕೆ’ಯ ಮಾತು

ದೇವ್ರಂದ್ರೆ ಯಾರು, ಅವನು ಕಾಣಿಸ್ತಾನಾ, ದೇವರು ಏಕೆ ಒಳ್ಳೆಯವನು? ಸತ್ಯ ಮಿಥ್ಯದ ಸುತ್ತ ಕಿಶೋರ್‌ ‘ನಂಬಿಕೆ’ಯ ಮಾತು

Jul 17, 2024 06:33 PM IST

google News

ದೇವ್ರಂದ್ರೆ ಯಾರು, ಅವನು ಕಾಣಿಸ್ತಾನಾ, ದೇವರು ಏಕೆ ಒಳ್ಳೆಯವನು? ಸತ್ಯ ಮಿಥ್ಯದ ಸುತ್ತ ಕಿಶೋರ್‌ ‘ನಂಬಿಕೆ’ಯ ಮಾತು

    • ಬಹುಭಾಷಾ ನಟ ಕಿಶೋರ್‌ ದೇವರ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಅಷ್ಟೂ ದೇವರಿದ್ದಾನಾ? ಕಿಶೋರ್‌ ಪ್ರಕಾರ ದೇವರೆಂದರೆ ಯಾರು? ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ದೇವ್ರಂದ್ರೆ ಯಾರು, ಅವನು ಕಾಣಿಸ್ತಾನಾ, ದೇವರು ಏಕೆ ಒಳ್ಳೆಯವನು? ಸತ್ಯ ಮಿಥ್ಯದ ಸುತ್ತ ಕಿಶೋರ್‌ ‘ನಂಬಿಕೆ’ಯ ಮಾತು
ದೇವ್ರಂದ್ರೆ ಯಾರು, ಅವನು ಕಾಣಿಸ್ತಾನಾ, ದೇವರು ಏಕೆ ಒಳ್ಳೆಯವನು? ಸತ್ಯ ಮಿಥ್ಯದ ಸುತ್ತ ಕಿಶೋರ್‌ ‘ನಂಬಿಕೆ’ಯ ಮಾತು

Actor Kishore about God: ಬಹುಭಾಷಾ ನಟ ಕಿಶೋರ್‌, ತಮ್ಮ ನಟನೆಯ ಮೂಲಕವೇ ಕನ್ನಡದ ಜತೆಗೆ ಪರಭಾಷೆಗಳಲ್ಲಿಯೂ ಹೆಚ್ಚು ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾ ಹೊರತುಪಡಿಸಿ, ರಾಜಕೀಯ, ಪ್ರಸ್ತುತ ಘಟನಾವಳಿಗಳ ಬಗ್ಗೆಯೂ ಉದ್ದುದ್ದ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತದ ಬಗ್ಗೆಯೂ ಕೊಂಚ ಕಟುವಾಗಿಯೇ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಇದೀಗ ನಾನೊಬ್ಬ ನಾಸ್ತಿಕ, ದೇವರಿದ್ದಾನೆ ಎಂಬುದನ್ನು ನಾನು ನಂಬುವುದಿಲ್ಲ ಎಂದೂ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೀಗಿದೆ ದೇವರ ಬಗ್ಗೆ ಕಿಶೋರ್‌ ವ್ಯಾಖ್ಯಾನ.

ಸಾಕಷ್ಟು ಅನ್ಯಾಯ ನೋಡಿಕೊಂಡು ಬಂದಿದ್ದೇನೆ..

"ನನಗೆ ಕಾಣುವ ದೇವರೆಂದರೆ ಅದು ಮನುಷ್ಯ ಮಾತ್ರ. ದೇವರನ್ನು ಹುಡುಕಿಕೊಂಡು ಹೋಗೋದಕ್ಕಿಂತ ಮನುಷ್ಯನಲ್ಲಿ ದೇವರನ್ನು ಕಾಣ್ತಿನಿ. ಅಮ್ಮ ದೇವರ ಪೂಜೆಯನ್ನು ಒಂದು ಹಂತದವರೆಗೆ ಮಾಡಿ ಬಿಟ್ರು. ನಮ್ಮ ಅಪ್ಪ ಕೊಡ್ತಿರೋ ಕಾಟಕ್ಕೆ ದೇವರ ಮೇಲಿನ ನಂಬಿಕೆ ಹೋಗಿರಬಹುದು. ಚಿಕ್ಕಂದಿನಿಂದಲೇ ನಮಗೆ ಈ ಪೂಜೆ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಮನೆಯಲ್ಲಿ ಅಥವಾ ಹೊರಗಡೆ ನಡೆಯುವಂಥ ಸಾಕಷ್ಟು ಅನ್ಯಾಯಗಳನ್ನು ನೋಡಿಕೊಂಡೇ ಬಂದವನು ನಾನು".

ನಂಬಿಕೆಯೇ ನನ್ನ ಪ್ರಕಾರ ದೇವರು..

"ದೇವರು ಎಂದರೆ ಸುಂದರ ಕಲ್ಪನೆ. ದೇವರ ಮೇಲಿಟ್ಟ ನಂಬಿಕೆಯನ್ನು ಕಲ್ಲಿನ ಮೇಲಿಟ್ಟರೂ, ಮಣ್ಣಿನ ಮೇಲಿಟ್ಟರೂ, ಪ್ರಾಣಿಯ ಮೇಲಿಟ್ಟರೂ ನಂಬಿಕೆಯೇ. ನಾಯಿ ನಿಮ್ಮ ಜೀವ ಉಳಿಸಿದ್ರೆ ಅದೇ ದೇವರು. ಆ ನಂಬಿಕೆಯೇ ದೇವರು. ನೋಡ್ತಾ ನೋಡ್ತಾ ಇದೆಲ್ಲವೂ ಅನಿಸುತ್ತಾ ಹೋಯಿತು. ಹೊರಗಿನ ಸ್ಥಿತಿ ಅರಿತ ಮೇಲೆ ಇದೆಲ್ಲ ನಿಜ ಅನಿಸಲು ಶುರುವಾಯ್ತು. ಅಷ್ಟಕ್ಕೂ ದೇವರು ಇದ್ದಾನೆ ಅನ್ನೋದಕ್ಕೆ ಯಾವುದೇ ಕುರುಹುಗಳಿಲ್ಲ. ದೇವರು ಒಳ್ಳೆಯವನು ಅನ್ನೋದು ಕಾಣಿಸ್ತಿಲ್ಲ".

"ನಾವು ಒಂಟಿ ಎಂದಾಗ, ವೀಕ್ನೆಸ್‌ ಶುರುವಾಗುತ್ತದೆ. ಭಯ ಶುರುವಾಗುತ್ತದೆ. ಯಾರೂ ಇಲ್ಲ ಅನ್ನೋ ಒಂಟಿತನ ಕಾಡುತ್ತದೆ. ಆಗ ನಗೆ ಗೊತ್ತಿಲ್ಲದ ಯಾವುದೋ ಇಂದು ಶಕ್ತಿ ನನ್ನ ಜತೆ ಇದೆ ಎಂದುಕೊಳ್ಳುವ ನಂಬಿಕೆಯೇ ನನಗೆ ಶಕ್ತಿ. ಹಾಗಂತ ನಾನು ದೇವರನ್ನು ವಿರೋಧಿಸುವುದಿಲ್ಲ. ನನ್ನ ಮಟ್ಟಿಗೆ ದೇವರಿಲ್ಲ. ನನ್ನ ಪಾಲಿಗೆ ಎಲ್ಲರಲ್ಲಿನ ಒಳ್ಳೆಗುಣಗಳಷ್ಟೇ ದೇವರು. ನಾನು ಅವರ ಮೇಲಿಟ್ಟ ನಂಬಿಕೆಯೇ ದೇವರು. ಪತ್ನಿಯೂ ಮೊದಲೆಲ್ಲ ಅವರ ಅಪ್ಪನ ಮನೆಯಲ್ಲಿ ಪೂಜೆ ಮಾಡ್ತಿದ್ರು. ನನ್ನ ಜತೆ ಸೇರಿದಾಗ ಇಬ್ಬರೂ ಅದೇ ಹಾದಿಯಲ್ಲಿ ಹೋಗ್ತಿದ್ದೇವೆ. ನನ್ನ ಪ್ರಕಾರ ದೇವರಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಂತೂ ಇಲ್ಲ. ಆಧಾರವೂ ಇಲ್ಲದಿದ್ದಾಗ ನನಗೆ ದೇವರ ಮೇಲೆ ನಂಬಿಕೆ ಇಲ್ಲ".

ದೇವರನ್ನೇ ಹಿಡಿತದಲ್ಲಿಟ್ಟುಕೊಳ್ಳುವ ಕೆಲಸ ನಡೆದಿದೆ..

"ಇನ್ನೊಬ್ಬರನ್ನು ದ್ವೇಷಿಸಬಾರದು ಎಂಬ ಕಾರಣಕ್ಕೆ ಕರ್ಮ ಪದ ಹುಟ್ಟಿತು. ಏನೇ ಆದರೂ ಪೂರ್ವ ಜನ್ಮದ ಕರ್ಮ ಇರಬೇಕು ಎಂದು ನಾವು ಸುಮ್ಮನಾಗ್ತಿವಿ. ಆದರೆ, ಇದೆಲ್ಲವನ್ನೂ ದೇವರೇ ಮಾಡ್ತಾನೆ ಎಂದು ಹೇಳ್ತಿವಿ. ದೇವರ ಹಿಡಿತಕ್ಕೆ ನಮ್ಮನ್ನು ತಂದು, ಆ ದೇವರನ ಹಿಡಿತದಲ್ಲಿ ಇಟ್ಕೋತಿದಾನೆ. ಸದ್ಯದ ವ್ಯವಸ್ಥೆ ಹೀಗೆಯೇ ಇದೆ. ರಾಜರು ದೇವಸ್ಥಾನ ಏಕೆ ಕಟ್ಟಿಸ್ತಿದ್ರು, ರಾಜಕಾರಣಿಗಳು ಏಕೆ ದೇವಸ್ಥಾನ ಕಟ್ಟಿಸ್ತಿದ್ದಾರೆ? ಜನರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಹೀಗೆಲ್ಲ ಮಾಡ್ತಿದ್ದಾರೆ. ಹಾಗಾಗಿ ನನ್ನ ಪಾಲಿಗೆ ಪ್ರಕೃತಿಯೇ ನಿಜವಾದ ದೇವರು" ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ