ನಮಗೂ ಸೆಲ್ಫ್ ರೆಸ್ಪೆಕ್ಟ್ ಇದೆ, ನನ್ನ ಮತ್ತು ದರ್ಶನ್ ನಡುವೆ ಮನಸ್ತಾಪ ಇರುವುದು ನಿಜ; ಮೌನ ಮುರಿದ ಧ್ರುವ ಸರ್ಜಾ
Oct 06, 2023 09:37 AM IST
Darshan Vs Dhruva Sarja: ನಮಗೂ ಸೆಲ್ಪ್ ರೆಸ್ಪೆಕ್ಟ್ ಇದೆ, ನನ್ನ ಮತ್ತು ದರ್ಶನ್ ನಡುವೆ ಮನಸ್ತಾಪ ಇರುವುದು ನಿಜ; ಮೌನ ಮುರಿದ ಧ್ರುವ ಸರ್ಜಾ
- Dhruva Sarja on Darshan: ನಟ ಧ್ರುವ ಸರ್ಜಾ ಮತ್ತು ದರ್ಶನ್ ನಡುವೆ ಮುನಿಸು ಮನೆ ಮಾಡಿದ ಎಂಬ ವಿಚಾರ ಕೆಲ ದಿನಗಳಿಂದ ಹರಿದಾಡಿತ್ತು. ಇದೀಗ ಅದು ನಿಜವಾಗಿದೆ. ಈ ಬಗ್ಗೆ ಸ್ವತಃ ಧ್ರುವ ಹೇಳಿಕೊಂಡಿದ್ದು, ನಮಗೂ ಸೆಲ್ಫ್ ರೆಸ್ಪೆಕ್ಟ್ ಇದೆ ಎಂದಿದ್ದಾರೆ.
ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಧ್ರುವ ಸರ್ಜಾ ಮುಖಾಮುಖಿಯಾದರೂ, ಒಬ್ಬರಿಗೊಬ್ಬರು ಮಾತನಾಡಿರಲಿಲ್ಲ. ಅಕ್ಕಪಕ್ಕದಲ್ಲಿದ್ದರೂ ಪರಸ್ಪರರ ನಡುವೆ ಒಂದು ಸಣ್ಣ ನಗುವೂ ವಿನಿಮಯವಾಗಿರಲಿಲ್ಲ. ಈ ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬಂಥ ಸುದ್ದಿಗಳೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದವು. ಅಭಿಮಾನಿವಲಯದಲ್ಲಿಯೂ ಈ ವಿಚಾರ ಚರ್ಚೆಗೆ ಕಾರಣವಾಗಿತ್ತು. ಆದರೆ, ಇಬ್ಬರಿಂದಲೂ ಈ ಬಗ್ಗೆ ಸ್ಪಷ್ಟನೆ ಮಾತ್ರ ಹೊರ ಬಿದ್ದಿರಲಿಲ್ಲ. ಇದೀಗ ನಟ ಧ್ರುವ ಮೌನ ಮುರಿದಿದ್ದಾರೆ.
ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ಧ್ರುವ ಸರ್ಜಾ ದರ್ಶನ್ ಜತೆಗೆ ಮಾತನಾಡದೇ ಇದ್ದಿದ್ದಕ್ಕೆ ನಟ ಪ್ರಥಮ್ ಬೇರೆಯ ಘಟನೆಯನ್ನು ನೆನಪಿಸಿಕೊಂಡಿದ್ದರು. ಅಭಿಮಾನಿಯ ಸಾವಿನಿಂದಾಗಿ ಧ್ರುವ ವೇದಿಕೆ ಮೇಲೆ ಮಂಕಾಗಿದ್ದರು. ಆ ಕಾರಣಕ್ಕೆ ಆವತ್ತು ಯಾರೊಂದಿಗೂ ಅವರು ಬೆರೆಯಲಿಲ್ಲ, ಮಾತನಾಡಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಅಸಲಿ ಕಾರಣವನ್ನು ಸ್ವತಃ ಧ್ರುವ ಹೇಳಿಕೊಂಡಿದ್ದಾರೆ. ಈ ಮೂಲಕ ನಮ್ಮಿಬ್ಬರ ನಡುವೆ ಕೆಲ ಕಾರಣಗಳಿಗೆ ಮುನಿಸಿದೆ ಎಂದಿದ್ದಾರೆ.
ಬರ್ತ್‌ಡೇ ನಿಮಿತ್ತ ಮನೆ ಬಳಿ ಆಗಮಿಸಿದ್ದ ಅಭಿಮಾನಿಗಳ ಜತೆಗೆ ಧ್ರು ಸರ್ಜಾ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿರುವ ಧ್ರುವ, ಮನಸಲ್ಲೊಂದು ಎದುರಗಡೆಯೊಂದು ನನಗೆ ಮಾತನಾಡೋಕೆ ಬರಲ್ಲ. ದರ್ಶನ್ ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ. ಅದನ್ನು ಅವರಿಂದಲೇ ಕೇಳಿ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.
ದರ್ಶನ್ ಅವರಿಗೆ ಪ್ರಶ್ನೆ ಕೇಳಬೇಕಿದೆ
“ನಟ ದರ್ಶನ್ ಅವರು ನಮ್ಮ ಸೀನಿಯರ್ ಆಕ್ಟರ್. ಅವರಿಗೆ ನಾವು ಯಾವತ್ತು ಮರ್ಯಾದೆ ಕೊಟ್ಟೇ ಕೊಡುತ್ತೇವೆ. ಅವರು ನಮ್ಮೆದುರು ಇದ್ದಾಗಷ್ಟೇ ಅಲ್ಲ, ಅವರ ಅಬ್ಸೆನ್ಸ್‌ನಲ್ಲೂ ಆ ಮರ್ಯಾದೆ ಕೊಟ್ಟೇ ಕೊಡುತ್ತೇವೆ. ಆದರೆ, ಅವರಿಗೆ ನಾನು ಒಂದಷ್ಟು ಪ್ರಶ್ನೆ ಕೇಳಬೇಕಿದೆ. ಅದನ್ನು ಕ್ಲಿಯರ್ ಮಾಡಿಕೊಳ್ಳದೇ, ಮನಸ್ಸಲ್ಲೊಂದು ಎದುರುಗಡೆಯೊಂದು ಮಾತಾಡೋಕೆ ಆಗಲ್ಲ” ಎಂದಿದ್ದಾರೆ ಧ್ರುವ.
ನಮಗೂ ಸೆಲ್ಪ್ ರೆಸ್ಪೆಕ್ಟ್ ಇರುತ್ತೆ ಅಲ್ವಾ?
ಮುಂದುವರಿದು ಮಾತನಾಡಿ, “ನಮ್ಮ ಸಿನಿಮಾಗಳಿಗೆ ದರ್ಶನ್ ಅವರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಅವರಿಂದಲೂ ನಮಗೆ ಎಷ್ಟೋ ಸಹಾಯ ಆಗಿದೆ. ಆದರೆ, ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅಗತ್ಯ ನನಗೆ ಇಲ್ಲ. ನಮಗೂ ಒಂದು ಸೆಲ್ಪ್ ರೆಸ್ಪೆಕ್ಟ್ ಇರುತ್ತೆ ಅಲ್ವಾ? ಹಾಗಾಗಿ ಅವರ ಬಳಿ ನನಗಿರುವ ಪ್ರಶ್ನೆ ಕೇಳಿ ಬಗೆಹರಿಸಿಕೊಳ್ಳುತ್ತೇನೆ. ಒಂದೊಮ್ಮೆ ಅವು ಬಗೆ ಹರಿಯದೆಯೂ ಇರಬಹುದು” ಎಂದಿದ್ದಾರೆ.
ಫೇಕ್ ಅಕೌಂಟ್ ಮೂಲಕ ಕೆಟ್ಟ ಕಾಮೆಂಟ್ ಬೇಡ
“ ವೇದಿಕೆ ಮೇಲೆ ಅವರ ಜತೆ ಮಾತನಾಡದೇ ಇದ್ದಾಗ ಆದ ಬೆಳವಣಿಗೆ ಬಳಿಕ ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ದಯವಿಟ್ಟು ಆ ರೀತಿ ಮಾಡಬೇಡಿ. ಅದು ಒಳ್ಳೆಯದಲ್ಲ” ಎಂದೂ ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(ಕಿರುತೆರೆ, ಒಟಿಟಿ, ಸಿನಿಮಾಗಳ ತಾಜಾ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' kannada.hindustantimes.com ವೆಬ್‌ಸೈಟ್ ನೋಡಿ)