logo
ಕನ್ನಡ ಸುದ್ದಿ  /  ಮನರಂಜನೆ  /  Kaatera: ನಿಮ್ಮ ಈ ಪ್ರೀತಿಗೆ ಮಾತು ಬರ್ತಿಲ್ಲ, ಧನ್ಯೋಸ್ಮಿ ನನ್ನ ಸೆಲೆಬ್ರಿಟಿಸ್‌; ‘ಕಾಟೇರ‌’ ಗೆಲ್ಲಿಸಿದ್ದಕ್ಕೆ ದರ್ಶನ್‌ ಕಡೆಯಿಂದ ಧನ್ಯವಾದ

Kaatera: ನಿಮ್ಮ ಈ ಪ್ರೀತಿಗೆ ಮಾತು ಬರ್ತಿಲ್ಲ, ಧನ್ಯೋಸ್ಮಿ ನನ್ನ ಸೆಲೆಬ್ರಿಟಿಸ್‌; ‘ಕಾಟೇರ‌’ ಗೆಲ್ಲಿಸಿದ್ದಕ್ಕೆ ದರ್ಶನ್‌ ಕಡೆಯಿಂದ ಧನ್ಯವಾದ

Dec 30, 2023 04:43 PM IST

google News

Kaatera: ನಿಮ್ಮ ಈ ಪ್ರೀತಿಗೆ ಮಾತು ಬರ್ತಿಲ್ಲ, ಧನ್ಯೋಸ್ಮಿ ನನ್ನ ಸೆಲೆಬ್ರಿಟಿಸ್‌; ‘ಕಾಟೇರ‌’ ಗೆಲ್ಲಿಸಿದ್ದಕ್ಕೆ ದರ್ಶನ್‌ ಕಡೆಯಿಂದ ಧನ್ಯವಾದ

    • ರಾಜ್ಯಾದ್ಯಂತ ಎಲ್ಲೆಡೆಯಿಂದ ಕಾಟೇರ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ದರ್ಶನ್‌, ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
Kaatera: ನಿಮ್ಮ ಈ ಪ್ರೀತಿಗೆ ಮಾತು ಬರ್ತಿಲ್ಲ, ಧನ್ಯೋಸ್ಮಿ ನನ್ನ ಸೆಲೆಬ್ರಿಟಿಸ್‌; ‘ಕಾಟೇರ‌’ ಗೆಲ್ಲಿಸಿದ್ದಕ್ಕೆ ದರ್ಶನ್‌ ಕಡೆಯಿಂದ ಧನ್ಯವಾದ
Kaatera: ನಿಮ್ಮ ಈ ಪ್ರೀತಿಗೆ ಮಾತು ಬರ್ತಿಲ್ಲ, ಧನ್ಯೋಸ್ಮಿ ನನ್ನ ಸೆಲೆಬ್ರಿಟಿಸ್‌; ‘ಕಾಟೇರ‌’ ಗೆಲ್ಲಿಸಿದ್ದಕ್ಕೆ ದರ್ಶನ್‌ ಕಡೆಯಿಂದ ಧನ್ಯವಾದ

Kaatera: ದರ್ಶನ್‌ ಮತ್ತು ತರುಣ್‌ ಸುಧೀರ್‌ ಜೋಡಿಯ ಎರಡನೇ ಸಿನಿಮಾ ಕಾಟೇರ ಶುಕ್ರವಾರ ಬಿಡುಗಡೆಯಾಗಿ ಹೊಸ ಮೈಲಿಗಲ್ಲುಗಳನ್ನು ತಲುಪಿದೆ. ಕರ್ನಾಟಕದಲ್ಲಷ್ಟೇ ರಿಲೀಸ್‌ ಆಗಿರುವ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯ ಜತೆಗೆ ಗಳಿಕೆ ವಿಚಾರದಲ್ಲೂ ಹಲವು ದಾಖಲೆಗಳನ್ನು ತೆಕ್ಕೆಗೆ ಪಡೆದುಕೊಂಡಿದೆ. ರಾಜ್ಯಾದ್ಯಂತ ಶುಕ್ರವಾರ ಮಧ್ಯರಾತ್ರಿಯಿಂದಲೇ ಕಾಟೇರ ಹಬ್ಬ ಶುರುವಾಗಿತ್ತು. ಅಭಿಮಾನಿಗಳು ಸಂಭ್ರಮದಿಂದಲೇ ನೆಚ್ಚಿನ ನಟನ ಸಿನಿಮಾವನ್ನು ಸ್ವಾಗತಿಸಿದ್ದರು. ಇದೀಗ ಸಿನಿಮಾ ಗೆಲ್ಲಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ ದರ್ಶನ್.

ಗಳಿಕೆಯಲ್ಲಿ ಕಹಳೆ ಮೊಳಗಿಸಿದ ಕಾಟೇರ

ಪ್ಯಾನ್‌ ಇಂಡಿಯಾ ಸಿನಿಮಾವಲ್ಲದೆ, ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಚಿತ್ರದ ಮೊದಲ ದಿನದ ಬಾಕ್ಸ್‌ ಆಫೀಸ್‌ ವರದಿಯೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಚಿತ್ರತಂಡವೇ ಈ ವಿಚಾರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಮೊದಲ ದಿನ ಅಂದರೆ ಶುಕ್ರವಾರ ಬರೋಬ್ಬರಿ 19.79 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಕರ್ನಾಟಕದ ಜನತೆ ಕಾಟೇರ ಚಿತ್ರವನ್ನು ಬಿಗಿದಪ್ಪಿದ್ದಾರೆ.

ಸೆಲೆಬ್ರಿಟೀಸ್‌ಗೆ ದಾಸನ ಧನ್ಯವಾದ

ರಾಜ್ಯಾದ್ಯಂತ ಎಲ್ಲೆಡೆಯಿಂದ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ದರ್ಶನ್‌ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. "ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ- ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ" ಎಂದು X ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕಾಟೇರ ಚಿತ್ರದ ಕಥೆ ಏನು?

ಇದು 1974ರಲ್ಲಿ ನಡೆಯುವ ಕಥೆ. ಭೀಮನಹಳ್ಳಿಯಲ್ಲಿ ಕುಲುಮೆ ಕೆಲಸ ಮಾಡುವ ಕಟ್ಟುಮಸ್ತು ದೇಹದ ಯುವಕ ಕಾಟೇರ. ಆತನಿಗೆ ತನ್ನ ಕೆಲಸವೇ ದೈವ. ದುಡಿಮೆನೇ ಆತನ ಮನೆದೇವ್ರು. ಇಂತ ಭೀಮನಹಳ್ಳಿಯಲ್ಲಿ ಜಮಿನ್ದಾರಿಕೆ ಪದ್ಧತಿ ಚಾಲ್ತಿಯಲ್ಲಿರುತ್ತದೆ. ಕೃಷಿ ಮಾಡೋ ಕೃಷಿಕರು ಒಂದೆಡೆಯಾದರೆ, ಅವರ ಮೇಲೆ ಕುಳಿತ ಉಳ್ಳವರ ದಬ್ಬಾಳಿಕೆ ಮತ್ತೊಂದು ಕಡೆ. ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದೆ, ಜಮಿನ್ದಾರನ ಹೊಟ್ಟೆ ಸೇರುತ್ತಿರುತ್ತದೆ. ಈ ಹೋರಾಟಕ್ಕೆ ಧುಮುಕುವ ಕಥಾನಾಯಕ ಕಾಟೇರ, ಆ ಸರ್ವಾಧಿಕಾರಿತನವನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಕಾಟೇರನ ಒನ್‌ ಲೈನ್‌ ಸ್ಟೋರಿ.

ರೋಚಕವಾಗಿದೆ ಸಿಂಪಲ್‌ ಎಳೆಯ ಕಥೆ

ಸಿಂಪಲ್‌ ಎಳೆಯನ್ನೇ ಅಷ್ಟೇ ಮಜಬೂತಾಗಿ ಕಟ್ಟಿಕೊಡುವ ಕೆಲಸ ಸಿನಿಮಾದಲ್ಲಾಗಿದೆ. 1970ರ ಕಾಲಘಟ್ಟವನ್ನು ಮರು ಸೃಷ್ಟಿಸಿ ಅಂದಿನ ದಿನಮಾನಗಳ ಸಣ್ಣ ಸಣ್ಣ ಏರಿಳಿತಗಳನ್ನೂ ತೆರೆಮೇಲೆ ಪ್ರಸೆಂಟ್‌ ಮಾಡುವಲ್ಲಿ ನಿರ್ದೇಶಕರ ಶ್ರಮ ಮೆಚ್ಚುವಂಥದ್ದು. ಆ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಪದ್ಧತಿಗಳನ್ನು ಕಣ್ಣಿಗೆ ಕಟ್ಟುವಂತೆ, ರೋಚಕತೆಯ ಒಗ್ಗರಣೆಯೊಂದಿಗೆ ಹದವಾಗಿ ನೋಡುಗನ ಎದೆಗೆ ನಾಟಿ ಮಾಡಿದ್ದಾರೆ ನಿರ್ದೇಶಕ ತರುಣ್‌ ಸುಧೀರ್.‌ ಪ್ರತಿ ಫ್ರೇಮ್‌ನಲ್ಲೂ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ