logo
ಕನ್ನಡ ಸುದ್ದಿ  /  ಮನರಂಜನೆ  /  Darshan Case Timeline: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಏನೇನಾಯ್ತು? ಇಲ್ಲಿದೆ ದರ್ಶನ್‌ ಬಂಧನದ ಟೈಮ್‌ಲೈನ್‌

Darshan Case Timeline: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಏನೇನಾಯ್ತು? ಇಲ್ಲಿದೆ ದರ್ಶನ್‌ ಬಂಧನದ ಟೈಮ್‌ಲೈನ್‌

Praveen Chandra B HT Kannada

Jun 13, 2024 06:46 AM IST

google News

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ, ದರ್ಶನ್‌ ಬಂಧನ, ಇಲ್ಲಿಯವರೆಗಿನ ಟೈಮ್‌ಲೈನ್‌

  • Darshan arrest Timeline: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ನಟ ದರ್ಶನ್‌ ತೂಗುದೀಪ ಮತ್ತು ಪವಿತ್ರಾ ಗೌಡ ಹಾಗೂ ಇನ್ನಿತರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಏನೇನಾಯ್ತು? ಎಂಬ ವಿವರ ಇಲ್ಲಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ, ದರ್ಶನ್‌ ಬಂಧನ, ಇಲ್ಲಿಯವರೆಗಿನ ಟೈಮ್‌ಲೈನ್‌
ರೇಣುಕಾ ಸ್ವಾಮಿ ಹತ್ಯೆ ಪ್ರಕರಣ, ದರ್ಶನ್‌ ಬಂಧನ, ಇಲ್ಲಿಯವರೆಗಿನ ಟೈಮ್‌ಲೈನ್‌

ಬೆಂಗಳೂರು: ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಅವರನ್ನು ಜೂನ್ 17 ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದಂಪತಿಯನ್ನು ಜೂನ್ 11 ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗಿನ ಘಟನೆಗಳ ಟೈಮ್ ಲೈನ್ ಇಲ್ಲಿದೆ.

ಜೂನ್ 8: ದರ್ಶನ್ ಅಭಿಮಾನಿಯಾಗಿರುವ 33 ವರ್ಷದ ಫಾರ್ಮಾಸಿಸ್ಟ್ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ. ದರ್ಶನ್‌ ಜತೆಗೆ ಪವಿತ್ರಾ ದಶಕದ ಸಂಬಂಧವನ್ನು ಬಹಿರಂಗಪಡಿಸಿದ ನಂತರ ಇನ್‌ಸ್ಟಾಗ್ರಾಂನಲ್ಲಿ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ದರ್ಶನ್ 2003 ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರು. ಆದರೆ ಪವಿತ್ರಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು.

ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕುರಿತು ದರ್ಶನ್‌ ಮತ್ತು ಟೀಮ್‌ ಮಾಹಿತಿ ಕಲೆ ಹಾಕುತ್ತದೆ. ಬೆಂಗಳೂರಿನಿಂದ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಇರುವುದು ತಿಳಿಯುತ್ತದೆ. ದರ್ಶನ್ ಅವರು ತಮ್ಮ ಅಭಿಮಾನಿ ಬಳಗದ ಮುಖ್ಯಸ್ಥ ರಾಘವೇಂದ್ರ ಅವರನ್ನು ಸಂಪರ್ಕಿಸಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಂತೆ ಕೇಳಿಕೊಳ್ಳುತ್ತಾರೆ.

"ದರ್ಶನ್ ರೇಣುಕಾಸ್ವಾಮಿಗೆ ಬೆಲ್ಟ್ ನಿಂದ ಹೊಡೆದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ರೇಣುಕಾಸ್ವಾಮಿಗೆ ದರ್ಶನ್‌ ಸಹಚರರು ಹಿಗ್ಗಾಮುಗ್ಗಾ ಥಳಿಸಿದ್ದಾರೆ" ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜೂನ್ 9: ಬೀದಿ ನಾಯಿಗಳ ಶವವನ್ನು ಕಚ್ಚಿವೆ. ಶವ ನೋಡಿದ ಅಪಾರ್ಟ್‌ಮೆಂಟ್‌ ಸೆಕ್ಯುರಿಟಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ದೇಹದ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ನಂತರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಜೂನ್ 10: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಬಳಿಯ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಇಬ್ಬರು ಆರೋಪಿಗಳು ದೂರು ನೀಡಿದ್ದಾರೆ. ಪೊಲೀಸರು ಕರೆ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಈ ಘಟನೆಗೂ ನಟ ದರ್ಶನ್‌ಗೂ ಸಂಬಂಧ ಇರುವುದು ತಿಳಿದುಬರುತ್ತದೆ. ದರ್ಶನ್‌ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿದುಕೊಳ್ಳುತ್ತಾರೆ.

ಜೂನ್ 11: ಮೈಸೂರಿನ ಹೋಟೆಲ್‌ವೊಂದರಲ್ಲಿ ಮಂಗಳವಾರ ಬೆಳಿಗ್ಗೆ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆತನನ್ನು ವಿಚಾರಣೆಗಾಗಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತರಲಾಯಿತು. ಪವಿತ್ರಾ ಅವರನ್ನು ಆರ್ ಆರ್ ನಗರ ಬಳಿಯ ಅವರ ನಿವಾಸದಿಂದ ಪೊಲೀಸರು ಕರೆದೊಯ್ಯುತ್ತಾರೆ. ದರ್ಶನ್‌ ಬಿಡುಗಡೆಗಾಗಿ ಕೇಕೆ ಹಾಕುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪೊಲೀಸ್ ಠಾಣೆಯ ಸುತ್ತಲೂ ಬ್ಯಾರಿಕೇಡ್ಗಳನ್ನು ಹಾಕಬೇಕಾಯಿತು.

ಕೆ.ಪವನ್, ನಂದೀಶ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯ್ಕ್, ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ಎಂ.ಲಕ್ಷ್ಮಣ, ರಾಘವೇಂದ್ರ ಅಲಿಯಾಸ್ ರಘು, ಆರ್.ನಾಗರಾಜು, ಎಂ.ದೀಪಕ್ ಕುಮಾರ್ ಬಂಧಿತ ಆರೋಪಿಗಳು.

ವೈದ್ಯಕೀಯ ಪರೀಕ್ಷೆಯ ನಂತರ, ಎಲ್ಲಾ ಆರೋಪಿಗಳಾದ ಪವಿತ್ರಾ ಅವರನ್ನು ಎ 1 ಮತ್ತು ದರ್ಶನ್ ಅವರನ್ನು ಎ 2 ಎಂದು ಪಟ್ಟಿ ಮಾಡಲಾಗಿದೆ. ನ್ಯಾಯಾಧೀಶರು ಈ ಆರೋಪಿಗಳನ್ನು ಜೂನ್ 17 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ರಾತ್ರಿ ಊಟಕ್ಕೆ 10 ಕ್ಕೂ ಹೆಚ್ಚು ಡೊನ್ನೆ ಬಿರಿಯಾನಿ ಪ್ಯಾಕೆಟ್‌ಗಳನ್ನು ತರಲಾಯಿತು. ಇದರ ಕುರಿತು ಸಾರ್ವಜನಿಕರ ಆಕ್ಷೇಪವೂ ವ್ಯಕ್ತವಾಗಿದೆ.

ಜೂನ್ 12: ದರ್ಶನ್ ಗೆ ಸೇರಿದ ಜೀಪ್ ಸೇರಿದಂತೆ ಕೊಲೆಗೆ ಬಳಸಿದ ಕಾರುಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡರು. ಅಪರಾಧದ ಸ್ಥಳ ಮಹಜರು ನಡೆಸಲು ಪೊಲೀಸರು ನಾಲ್ವರು ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದರು. ನಟ ದರ್ಶನ್ ವಿರುದ್ಧದ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ದರ್ಶನ್‌ ಬಂಧನಕ್ಕೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ