logo
ಕನ್ನಡ ಸುದ್ದಿ  /  ಮನರಂಜನೆ  /  Actor Jaggesh: ಇನ್ನೊಬ್ಬರ ಲೈಫ್‌ ಹಾಳು ಮಾಡುತ್ತಾರೆ, ಎಲ್ಲರೂ ಚೆನ್ನಾಗಿರಲಿ; ಚಿತ್ರರಂಗ ನೆನೆದು ಕಣ್ಣೀರಿಟ್ಟ ಹಿರಿಯ ನಟ ಜಗ್ಗೇಶ್‌

Actor Jaggesh: ಇನ್ನೊಬ್ಬರ ಲೈಫ್‌ ಹಾಳು ಮಾಡುತ್ತಾರೆ, ಎಲ್ಲರೂ ಚೆನ್ನಾಗಿರಲಿ; ಚಿತ್ರರಂಗ ನೆನೆದು ಕಣ್ಣೀರಿಟ್ಟ ಹಿರಿಯ ನಟ ಜಗ್ಗೇಶ್‌

Praveen Chandra B HT Kannada

Aug 01, 2024 07:23 AM IST

google News

ಚಿತ್ರರಂಗ ನೆನೆದು ಕಣ್ಣೀರಿಟ್ಟ ಹಿರಿಯ ನಟ ಜಗ್ಗೇಶ್‌

    • Kannada Actor Jaggesh: ಕನ್ನಡ ಚಿತ್ರರಂಗ, ಭಾರತೀಯ ಚಿತ್ರರಂಗದ ಈಗಿನ ಪರಿಸ್ಥಿತಿ ನೆನೆದು ನಟ ಜಗ್ಗೇಶ್‌ ಭಾವುಕರಾಗಿದ್ದಾರೆ. ಜನರು ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ. 200 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ಮಾತ್ರ ಗೆಲ್ಲೋದ್ಯಾಕೆ, ಒಳ್ಳೆಯ ಕಥೆ ಇರುವ ಸಿನಿಮಾಗಳು ಸೋಲೋದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಚಿತ್ರರಂಗ ನೆನೆದು ಕಣ್ಣೀರಿಟ್ಟ ಹಿರಿಯ ನಟ ಜಗ್ಗೇಶ್‌
ಚಿತ್ರರಂಗ ನೆನೆದು ಕಣ್ಣೀರಿಟ್ಟ ಹಿರಿಯ ನಟ ಜಗ್ಗೇಶ್‌

ಬೆಂಗಳೂರು: ಕನ್ನಡದ ಹಿರಿಯ ನಟ, ಹಾಸ್ಯ ನಟ, ರಾಜಕಾರಣಿ ಜಗ್ಗೇಶ್‌ ಅವರು ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಝೀ ಕನ್ನಡ ರಿಯಾಲಿಟಿ ಶೋ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಈಗಿನ ದುಸ್ಥಿತಿ ನೆನೆದು ದುಃಖಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಈಗ ಹೇಗಿದೆ ಎಂದು ಹೇಳಿದ್ದಾರೆ. ಇವರ ಭಾವುಕ ಮಾತುಗಳಿಗೆ ಕೇಳುಗರ ಕಣ್ಣಲ್ಲೂ ಹನಿ ಜಿನುಗಿದೆ. "ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡಿಸಾಸ್ಟರ್‌ ಸಂಭವಿಸಿದೆ" ಎಂದು ಅವರು ಹೇಳಿದ್ದಾರೆ.

ನಟ ಜಗ್ಗೇಶ್‌ ಹೇಳಿದ್ದೇನು?

ಕಳೆದ 3-4 ವರ್ಷಗಳಿಂದ ಚಿತ್ರರಂಗದಲ್ಲಿ ಅನಾಹುತ ಸಂಭವಿಸಿದೆ. ಎಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಯಾರೂ ಕೆಟ್ಟ ಚಿತ್ರಗಳನ್ನು ಮಾಡುತ್ತಿಲ್ಲ. ಪೇಪರ್‌ನಲ್ಲಿ ಜಾಹೀರಾತು ನೀಡುತ್ತಾರೆ. ಟೀವಿಯಲ್ಲಿ ಜಾಹೀರಾತು ನೀಡುತ್ತಾರೆ. ಎಲ್ಲವನ್ನೂ ಮಾಡುತ್ತಾರೆ. ಆದರೆ, ಥಿಯೇಟರ್‌ಗೆ ಬಂದಾಗ ಜನವೇ ಇಲ್ಲಾ ಎಂದಾಗ ಆಶ್ಚರ್ಯವಾಗುತ್ತದೆ. ಯಾಕೆ ಹೀಗಾಯ್ತು ಎಂದು ಬೇಸರವಾಗುತ್ತದೆ" ಎಂದು ನಟ ಜಗ್ಗೇಶ್‌ ಹೇಳಿದ್ದಾರೆ.

"ಯಾಕೆ ಹೀಗಾಯ್ತು ಎಂದು ಯೋಚಿಸಿದಾಗ ಕನ್ನಡವೇ ಹಿಂಗೆ ಎಂದು ಯೋಚಿಸುತ್ತೇವೆ. ಹಾಗಲ್ಲ ವಿಷಯ. ಯಾಕೆ ಇಂಡಸ್ಟ್ರಿಗೆ ಹೀಗೆ ಆಗ್ತಾ ಇದೆ. ಏನಾಗುತ್ತಿದೆ. ಜನರು ಯಾಕೆ ಬರುತ್ತಿಲ್ಲ ಎಂದು ಯೋಚಿಸಿದಾಗ ಬೇಸರವಾಗುತ್ತದೆ. ಕನ್ನಡದ ಪರಿಸ್ಥಿತಿ ಮಾತ್ರವಲ್ಲ. ಅಕ್ಷಯ್‌ ಕುಮಾರ್‌ ಕೋಟ್ಯಂತರ ರೂಪಾಯಿ ಹಾಕಿ ಫಿಕ್ಚರ್‌ ಮಾಡಿದ್ದಾರೆ. ಅವರಿಗೂ ಡಿಸಾಸ್ಟರ್‌ ಆಯಿತು. ಇಡೀ ಭಾರತದ ಚಿತ್ರರಂಗ ಕೊಚ್ಚಿ ಹೋಗಿದೆ. ಈಗ ಪರಿಸ್ಥಿತಿ ಏನಾಗಿದೆ ಅಂದ್ರೆ, ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡ್ತಾರೋ ಅದು ಸಿನಿಮಾ ಆಗಿದೆ. ಉಳಿದವು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಉಂಟಾಗಿದೆ" ಎಂದು ಜಗ್ಗೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

"ಯಾರು 200 ಕೋಟಿ ಹಾಕಿ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಂತಾಗಿದೆ. ಯಾರು ಒಳ್ಳೆ ಕಥೆ ಹಾಕಿ ಸಣ್ಣ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಇದೆ. "ನನ್ನ ಬಾಂಧವರು, ಒಡಹುಟ್ಟಿದವರು, ನನ್ನವರು ನನ್ನ ಪಿಕ್ಚರ್‌ ರಿಲೀಸ್‌ ಆದಾಗ ಇದು ದರಿದ್ರ ಪಿಚ್ಚರು, ಇದು ಕೆಟ್ಟ ಸಿನಿಮಾ ಎಂದು ತಮ್ಮ ಶ್ರಮ ಹಾಕಿ ಇನ್ನೊಬ್ಬರ ಲೈಫ್‌ ಹಾಳು ಮಾಡುತ್ತಾರೆ. ಎಲ್ಲರೂ ಚೆನ್ನಾಗಿರಲಿ, ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡ" ಎಂದು ಸಿನಿಮಾ ಟ್ರೋಲ್‌ ಮಾಡುವವರ ವಿರುದ್ಧವೂ ಜಗ್ಗೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

"ನೀವು ಬೈದರೂ ಬೇಜಾರಿಲ್ಲ. ನಿಮಗೆ ಬೇಸರವಾದಗ ಯೂಟ್ಯೂಬ್‌ನಲ್ಲಿ ಒಂದು ಸಿನಿಮಾದ ಸೀನ್‌ ನೋಡ್ತಿರಿ. ಅದು ಮೈ ಸಿನಿಮಾ. ನಾನು ಸ್ವಲ್ಪ ಭಾವುಕನಾದೆ. ಯಾಕೆಂದ್ರೆ ನನ್ನ ಅಣು, ರೇಣು, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ, ನನ್ನ ಊಟ ಎಲ್ಲವೂ ಸಿನಿಮಾ ಕೊಟ್ಟಿದ್ದು. ಹಾಗಾಗಿ ನಾನು ಸಿನಿಮಾವನ್ನು ತಾಯಿ ತರಹ ಪ್ರೀತಿಸ್ತೀನಿ" ಎಂದು ಜಗ್ಗೇಶ್‌ ಹೇಳಿದಾಗ ಝೀ ಕನ್ನಡ ವೇದಿಕೆಯಲ್ಲಿದ್ದ ಅನುಶ್ರೀ ಮತ್ತು ಇತರರು ಭಾವುಕರಾದರು.

 

ಇತ್ತೀಚೆಗೆ ಜಗ್ಗೇಶ್‌ ಅಭಿನಯದ ರಂಗನಾಯಕ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ, ಚಿತ್ರ ಬಿಡುಗಡೆಯಾದ ಬಳಿಕ ನೆಗೆಟಿವ್‌ ಪ್ರಚಾರ ಪಡೆಯಿತು. ಸಿನಿಮಾ ಏನೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯದಿಂದ ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಎದ್ದೇಳು ಮಂಜುನಾಥ ಎಂಬ ಯಶಸ್ವಿ ಸಿನಿಮಾ ನೀಡಿರುವ ಗುರುಪ್ರಸಾದ್‌ ನಿರ್ದೇಶಿಸಿದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಕೆಲವು ಲಕ್ಷ ರೂಪಾಯಿ ಗಳಿಕೆಗೆ ಸೀಮಿತವಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ