logo
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ಗಾಗಿ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿದ್ರ ರಕ್ಷಕ್‌ ಬುಲೆಟ್‌; ನಿನ್ನ ಅಪ್ಪ ಒಳ್ಳೆಯವರು, ಆದರೆ, ಡಿ ಬಾಸ್‌ ಫ್ಯಾನ್ಸ್‌ ಹೀಗಂದ್ರು

ದರ್ಶನ್‌ಗಾಗಿ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿದ್ರ ರಕ್ಷಕ್‌ ಬುಲೆಟ್‌; ನಿನ್ನ ಅಪ್ಪ ಒಳ್ಳೆಯವರು, ಆದರೆ, ಡಿ ಬಾಸ್‌ ಫ್ಯಾನ್ಸ್‌ ಹೀಗಂದ್ರು

Praveen Chandra B HT Kannada

Jun 17, 2024 10:08 AM IST

google News

ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಂ ಪೋಸ್ಟ್‌

    • ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ದಿ. ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ತನ್ನ ಹುಟ್ಟುಹಬ್ಬದ ಕುರಿತು ಅಪ್‌ಡೇಟ್‌ ನೀಡಿದ್ದಾರೆ. "ನಮ್ಮ ಮನಸ್ಸಿಗೆ ಹತ್ತಿರವಾಗಿರುವವರು ಕಷ್ಟ ಅನುಭವಿಸುತ್ತ ಇರುವಾಗ... ಹುಟ್ಟುಹಬ್ಬ ಆಚರಿಸಿಕೊಳ್ಳಲಾರೆ" ಎಂದಿದ್ದಾರೆ. ಈನಿರ್ಧಾರಕ್ಕೆ ಡಿ ಬಾಸ್‌ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಂ ಪೋಸ್ಟ್‌
ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಂ ಪೋಸ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಎ2 ಆರೋಪಿಯಾಗಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬುಲೆಟ್‌ ರಕ್ಷಕ್‌ ತನ್ನ ಹುಟ್ಟುಹಬ್ಬ ಈ ವರ್ಷ ಆಚರಿಸುವುದಿಲ್ಲ ಎಂದಿದ್ದಾರೆ. "ನಮ್ಮ ಮನಸ್ಸಿಗೆ ಹತ್ತಿರವಾಗಿರುವವರು ಕಷ್ಟ ಅನುಭವಿಸುತ್ತ ಇರುವಾಗ... ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲಾರೆ" ಎಂದಿದ್ದಾರೆ. ಈ ಯುವ ನಟನ ನಿರ್ಧಾರಕ್ಕೆ ಡಿ ಬಾಸ್‌ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. "ನಿನ್ನ ಅಪ್ಪ ಒಳ್ಳೆಯವರು. ನಿನ್ನ ಮನಸ್ಸು ಅಪ್ಪನಂತೆ ತುಂಬಾ ಉತ್ತಮವಾಗಿದೆ" ಎಂದು ಡಿಬಾಸ್‌ ಅಭಿಮಾನಿಗಳು ಹೇಳಿದ್ದಾರೆ. ಫಾದರ್ಸ್‌ ಡೇ ಸಮಯದಲ್ಲಿ ತನ್ನ ತಂದೆ ದಿವಂಗತ ಬುಲೆಟ್‌ ಪ್ರಕಾಶ್‌ ಮತ್ತು ದರ್ಶನ್‌ ಜತೆಯಾಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ ರಕ್ಷಕ್‌.

ರಕ್ಷಕ್‌ ಬುಲೆಟ್‌ ಸೋಷಿಯಲ್‌ ಮೀಡಿಯಾ ಪೋಸ್ಟ್‌

ಭಾನುವಾರ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಕ್ಷಕ್‌ ಬುಲೆಟ್‌ ಈ ರೀತಿ ಪೋಸ್ಟ್‌ ಮಾಡಿದ್ದಾರೆ. "ಎಲ್ಲಿರಿಗೂ ನಮಸ್ಕಾರ. ಫಾದರ್ಸ್‌ ಡೇ ಶುಭಾಶಯಗಳು. ಇವತ್ತು ಬೆಳಗ್ಗೆಯಿಂದ ನನ್ನ ತಂದೆಯ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೋ. ಹೀರೋ ಅಷ್ಟೇ ಅಲ್ಲ, ಒಳ್ಳೆಯ ಮಾರ್ಗದರ್ಶಕರು. ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ" ಎಂದು ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಂ ಸ್ಟೇಟಸ್‌

"ಇತ್ತೀಚಿನ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ. ನಮ್ಮ ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಅನ್ನುವುದು ನನ್ನ ಭಾವನೆ. ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಮುಂದಿನ ವರ್ಷದ ಹುಟ್ಟುಹಬ್ಬ ಮಾಡುವಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ, ಆಗ ಎಲ್ಲರೂ ನನ್ನ ಸ್ನೇಹಿತರು, ಗುರು ಹಿರಿಯರು, ಪ್ರೀತಿಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ. ಎಲ್ಲರಿಗೂ ಧನ್ಯವಾದ" ಎಂದು ರಕ್ಷಕ್‌ ಬುಲೆಟ್‌ ಹೇಳಿದ್ದಾರೆ.

ರಕ್ಷಕ್‌ ಪೋಸ್ಟ್‌ಗೆ ಡಿಬಾಸ್‌ ಫ್ಯಾನ್ಸ್‌ ಹರ್ಷ

"ಬುಲೆಟ್‌ ಮತ್ತು ಡಿಬಾಸ್‌ ಸ್ನೇಹ ಬೆಲೆಕಟ್ಟಲಾಗದು" "ಸೂಪರ್‌ ಬ್ರೋ ನಿಮ್ಮಂತಹ ಅಭಿಮಾನಿಗಳೇ ನಮಗೆ ಧೈರ್ಯ. ನಾವು ನಮ್ಮ ದೇವರಾದ ಡಿಬಾಸ್‌ ಬಿಡೋ ಮಾತೇ ಇಲ್ಲ" ನಿಮ್ಮ ಹೃದಯ ವೈಶ್ಯಾಲತೆಗೆ ಜೈ" "ನಿಮ್ಮ ತಂದೆ ತುಂಬಾ ಒಳ್ಳೆಯ ಮನುಷ್ಯರು. ನಿಮ್ಮ ಆಲೋಚನೆ ಮತ್ತು ನಿಮ್ಮ ತಂದೆಯ ಆಲೋಚನೆ ಒಂದೇ ರೀತಿ ಇದೆ. ವಿಶ್ರಾಂತಿ ಪಡೆಯದೆ ಸಾಧನೆ ಮಾಡಿ" ಎಂದೆಲ್ಲ ನೂರಾರು ಕಾಮೆಂಟ್‌ಗಳನ್ನು ಡಿಬಾಸ್‌ ಅಭಿಮಾನಿಗಳು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಜನರು ರಕ್ಷಕ್‌ ಬುಲೆಟ್‌ ಅಭಿಪ್ರಾಯಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿಗೆ ನ್ಯಾಯ ದೊರಕಿಸುವ ಕುರಿತು ಮಾತನಾಡಿ ಎಂದಿದ್ದಾರೆ.

ದರ್ಶನ್‌ ಪ್ರಕರಣ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ದರ್ಶನ್‌ ಸೇರಿದಂತೆ 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾ ಸ್ವಾಮಿಗೆ ಕರೆಂಟ್‌ ಶಾಕ್‌ ನೀಡಿ ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪದಲ್ಲಿ ಇದೀಗ ರಾಜು ಅಲಿಯಾಸ್‌ ಧನರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ರಾಜು ಎಂಬಾತನ್ನನು ಬಂಧಿಸಲಾಗಿದೆ. ಮೆಗ್ಗರ್‌ ಮೆಷಿನ್‌ ಬಳಸಿ ರೇಣುಕಾಸ್ವಾಮಿಗೆ ಈತ ಕರೆಂಟ್‌ ಶಾಕ್‌ ನೀಡಿದ್ದಾನೆ ಎನ್ನಲಾಗಿದೆ. ಈತನನ್ನು ಪೊಲೀಸರು ಎಫ್‌ಐಆರ್‌ನಲ್ಲಿ ಎ9 ಆರೋಪಿಯಾಗಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ