ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತಾ? ವಿಜಯ ರಾಘವೇಂದ್ರ ಸಿನಿಮಾಕ್ಕೆ 31 ವರ್ಷ, ಚಿನ್ನಾರಿ ಮುತ್ತಾನ ನೆನಪಿಸಿಕೊಳ್ಳೋಣ
Jul 30, 2024 06:44 AM IST
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತಾ? ರಾಘವೇಂದ್ರ ರಾಜ್‌ಕುಮಾರ್ ಸಿನಿಮಾಕ್ಕೆ 31 ವರ್ಷ
- Chinnari Mutta Movie and Songs: ವಿಜಯ ರಾಘವೇಂದ್ರ ಬಾಲನಟನಾಗಿ ಅಭಿನಯಿಸಿದ ಚಿನ್ನಾರಿ ಮುತ್ತ ಸಿನಿಮಾಕ್ಕೆ ಈಗ 31 ವರ್ಷದ ಸಂಭ್ರಮ. ಈ ಸಿನಿಮಾದ ನೆನಪುಗಳೊಂದಿಗೆ ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು .., ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು ಕತ್ತಲ್ಲಿ ಇದ್ದನು ಬಂಗಾರ ಗೆದ್ದನು ಹಾಡನ್ನು ಗುನುಗೋಣ ಬನ್ನಿ.
ಬೆಂಗಳೂರು: ಚಿನ್ನಾರಿ ಮುತ್ತ ಹೆಸರು ಕೇಳಿದಾಕ್ಷಣ ಕನ್ನಡ ಸಿನಿಮಾ ಪ್ರೇಮಿಗಳ ಕಿವಿ ನಿಮುರುವುದು. "ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು, ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು, ಹೇಗಿದ್ದ ಹೇಗಾದ ಗೊತ್ತ ನಮ್ಮ ಚಿನ್ನಾರಿ ಮುತ್ತಾ" ಅಥವಾ "ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು" ಅಥವಾ "ರೆಕ್ಕೆ ಇದ್ದರೆ ಸಾಕೇ ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತಾ ತಾನು ಮ್ಯಾಲಿ ಹಾರೋಕೆ" ಹೀಗೆ ಎಷ್ಟೊಂದು ಹಾಡುಗಳು ನೆನಪಾಗಬಹುದು. ವಿಜಯ್ ರಾಘವೇಂದ್ರ ಬಾಲನಟನಾಗಿ ಅಭಿನಯಿಸಿದ ಚಿನ್ನಾರಿ ಮುತ್ತ ಸಿನಿಮಾ ಬಿಡುಗಡೆಯಾಗಿ 31 ವರ್ಷಗಳಾಗಿವೆ. ಈ ಸಮಯದಲ್ಲಿ ಈ ಸಿನಿಮಾದ ಕೆಲವೊಂದು ವಿವರಗಳನ್ನು ನೆನಪಿಸಿಕೊಳ್ಳೋಣ.
ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದಾದ ಚಿನ್ನಾರಿ ಸಿನಿಮಾಕ್ಕೆ ಟಿಎಸ್ ನಾಗಾಭರಣ ನಿರ್ದೇಶನವಿತ್ತು. "ನನಗೆ ಈ ಸಿನಿಮಾ ಬಹಳ ಸ್ಪೆಷಲ್. ನನಗೆ ಇಲ್ಲಿವರೆಗೆ ಸಿಕ್ಕಿರುವ ಮನ್ನಣೆ, ಜನರ ಪ್ರೀತಿ ಎಲ್ಲದಕ್ಕೂ ಕಾರಣ ಚಿನ್ನಾರಿ ಮುತ್ತಾ ಸಿನಿಮಾ. ನನಗೆ ಆ ಸಮಯದಲ್ಲಿ ನಾಗಭರಣ ಅಂಕಲ್ ನನಗೆ ಆ ಪಾತ್ರ ನೀಡಿರುವುದೇ ಇದಕ್ಕೆಲ್ಲ ಕಾರಣ" ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಚಿನ್ನಾರಿ ಮುತ್ತ ಸಿನಿಮಾವು 1993ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಎಚ್‌ಜಿ ದತ್ತಾತ್ರೆಯ ಮತ್ತು ಮಾಸ್ಟರ್ ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 41ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿತ್ತು. 4 ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ದೊರಕಿತ್ತು. ಅತ್ಯುತ್ತಮ ಮಕ್ಕಳ ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಕ (ಸಿ ಅಶ್ವತ್), ಅತ್ಯುತ್ತಮ ಬಾಲ ಕಲಾವಿದ (ವಿಜಯ ರಾಘವೇಂದ್ರ) ಮತ್ತು ಅತ್ಯುತ್ತಮ ಮಹಿಳಾ ಹಿನ್ನಲೆ ಗಾಯಕಿ (ಮಂಜುಳಾ ಗುರುರಾಜ್) ಪ್ರಶಸ್ತಿಗಳನ್ನು ಪಡೆದಿತ್ತು.
ಚಿನ್ನಾರಿ ಮುತ್ತಾ ಸಿನಿಮಾದ ಜನಪ್ರಿಯ ಹಾಡುಗಳು
ಮಣ್ಣಲ್ಲಿ ಬಿದ್ದನೋ, ರೆಕ್ಕೆ ಇದ್ದರೆ ಸಾಕೇ, ನಾವು ಇರುವಾಗ, ಮಾರಿಷ ಮಾರಿಷ, ಒಂದು ಎರಡು ಮೂರು, ಓದುವ ಸಿರಿ ಓಡುವ, ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ, ಹಳ್ಳಿ ಮುಖ ಮುತ್ತು, ಚಂದ್ರ ನಿಂಗೆ, ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು, ಚಿನ್ನಾರಿ ಮುತ್ತಾ ಹಾಡುಗಳಿದ್ದವು. ಇವುಗಳಲ್ಲಿ ಕೆಲವು ಹಾಡುಗಳಂತೂ ಈಗಲೂ ಜನಪ್ರಿಯತೆ ಉಳಿಸಿಕೊಂಡಿವೆ.
ಚಿನ್ನಾರಿ ಮುತ್ತಾ "ರೆಕ್ಕೆ ಇದ್ದರೆ ಸಾಕೇ" ಹಾಡಿನ ಲಿರಿಕ್ಸ್
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ ರೆಕ್ಕೆ ಇದ್ದರೆ ಸಾಕೆ
ಹೂವೊಂದಿದ್ದರೆ ಸಾಕೆ ಬ್ಯಾಡವೇ ಗಾಳಿ ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತವ ಬ್ಯಾಡವೇ ಹೂವ ಜೇನ ಹೀರೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ನೀರೊಂದಿದ್ದರೆ ಸಾಕೆ ಬ್ಯಾಡವೇ ಹಳ್ಳ ಬಲ್ಲವಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೇ ಸಾಕೆ ಬ್ಯಾಡವೇ ಭೂಮಿ ಹೇಳಿ ಸ್ವಾಮಿ ಮಳೆಯೂ ಸುರಿಯೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಷ್ಟೊಂದಿದರೆ ಸಾಕೆ ಬ್ಯಾಡವೇ ಮಂಡೇ ಕಣ್ಣಿನಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೇ ಹಾಡು ಎಲ್ಲರ ಜೋಡಿ ಕೂಡಿ ಹಾಡೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ ರೆಕ್ಕೆ ಇದ್ದರೆ ಸಾಕೆ
ಚಿನ್ನಾರಿ ಮುತ್ತಾ "ಮಣ್ಣಲ್ಲಿ ಬಿದ್ದೊನು ಹಾಡಿನ ಲಿರಿಕ್ಸ್
ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು ಕತ್ತಲ್ಲಿ ಇದ್ದನು ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ.. ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮೆಟ್ಟಿದ್ದ ಕದ್ದೋನು ಕದ್ದೊಡುತ್ತಿದ್ದೊನು ಮನಮನ ಕದ್ದನು ನಾಡನ್ನೆ ಗೆದ್ದನು …
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಬೀದಿಲಿ ಸಿಕ್ಕೋನು ಏಕಾಂಗಿ ಬಿಕ್ಕೋನು ನಮಗಿನ್ನು ಸಿಕ್ಕನು ಬಾನಲ್ಲಿ ನಕ್ಕನು…
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಇಲ್ಲಿದೆ ಹಾಡೊಣಾ ಹಾಡಿ ಕೊಂಡಾಡೊಣಾ ಚಂದಿರ ರಾಮನ ಚಂದಾವಾ ನೋಡೋಣಾ
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ