logo
ಕನ್ನಡ ಸುದ್ದಿ  /  ಮನರಂಜನೆ  /  ಕೋಟಿ ಸಿನಿಮಾ ವಿಮರ್ಶೆ: ಡಾಲಿ ಧನಂಜಯ್‌- ರಮೇಶ್‌ ಇಂದಿರಾ ನಟನೆಗೆ ಜೈ; ಕಾಮನ್‌ಮ್ಯಾನ್‌ನ ಕಥೆಗೆ ಬೇಕಿತ್ತು ಇನ್ನಷ್ಟು ವೇಗ

ಕೋಟಿ ಸಿನಿಮಾ ವಿಮರ್ಶೆ: ಡಾಲಿ ಧನಂಜಯ್‌- ರಮೇಶ್‌ ಇಂದಿರಾ ನಟನೆಗೆ ಜೈ; ಕಾಮನ್‌ಮ್ಯಾನ್‌ನ ಕಥೆಗೆ ಬೇಕಿತ್ತು ಇನ್ನಷ್ಟು ವೇಗ

Praveen Chandra B HT Kannada

Jun 14, 2024 03:41 PM IST

google News

ಕೋಟಿ ಸಿನಿಮಾ ವಿಮರ್ಶೆ

    • Kotee movie review: ಕೋಟಿ (ಡಾಲಿ ಧನಂಜಯ್‌) ಪ್ರಾಮಾಣಿಕ ವ್ಯಕ್ತಿ. ದೀನೂ ಸಾವ್ಕಾರ್‌ (ರಮೇಶ್ ಇಂದಿರಾ) ಇಲ್ಲಿ ವಿಲನ್‌. ಇವರಿಬ್ಬರ ನಟನೆಯೇ ಈ ಚಿತ್ರದ ಪ್ರಮುಖ ಹೈಲೈಟ್ಸ್‌. ಸೀರಿಯಲ್‌ ಕಥೆಯನ್ನೇ ಕುಗ್ಗಿಸಿ ಸಿನಿಮಾ ಕಥೆ ಮಾಡಲಾಯಿತೇ? ಎಂಬ ಸಂದೇಹ ವೀಕ್ಷಕರಿಗೆ ಬಂದರೆ ಅಚ್ಚರಿಯಿಲ್ಲ.
ಕೋಟಿ ಸಿನಿಮಾ ವಿಮರ್ಶೆ
ಕೋಟಿ ಸಿನಿಮಾ ವಿಮರ್ಶೆ

Kotee movie review: ಮೂವರು ಒಡಹುಟ್ಟಿದವರಲ್ಲಿ ಕೋಟಿ (ಧನಂಜಯ್‌) ಹಿರಿಯವನು. ಆತ ಅತ್ಯಂತ ಕಷ್ಟಪಟ್ಟು ದುಡಿಯುವ ವ್ಯಕ್ತಿ. ನಾಳೆಯ ಕುರಿತು ಸುಂದರವಾದ ಕನಸು ಹೊಂದಿದ್ದಾನೆ. ಆ ಕನಸು ಈಡೇರಿಸಲು ಕಷ್ಟಪಡುವ ವ್ಯಕ್ತಿ. ಕೋಟಿ ಮತ್ತು ಆಟನ ಕುಟುಂಬ ಜನತಾ ನಗರದ ನಿವಾಸಿಗಳು. ಆ ನಗರ ಕೊಲೆಗಡುಕ ದಿನೂ ಸಾವ್ಕಾರ್‌ (ರಮೇಶ್‌ ಇಂದಿರಾ) ನಿಯಂತ್ರಣದಲ್ಲಿದೆ. ಕೋಟಿ ಈ ಸಾಹುಕಾರನಿಂದ ಟ್ರಕ್‌ ಬಾಡಿಗೆಗೆ ಪಡೆದು ಸಣ್ಣ ಮೂವರ್ಸ್‌ ಮತ್ತು ಪ್ಯಾಕರ್ಸ್‌ ಬಿಸ್ನೆಸ್‌ ನಡೆಸುತ್ತಾನೆ. ಈ ಬಿಸ್ನೆಸ್‌ ಇಲ್ಲದೆ ಇರುವಾಗ ಕ್ಯಾಬ್‌ ಡ್ರೈವರ್‌ ಆಗಿಯೂ ದುಡಿಯುತ್ತಾನೆ. ಆದರೆ, ಈತನ ಕಷ್ಟಕ್ಕೆ ಈ ಹಣ ಸಾಕಾಗುವುದಿಲ್ಲ. ಮನಸ್ಸಿಲ್ಲದೇ ಇದ್ದರೂ ಸಾಹುಕಾರನಿಂದ ಸಾಲ ಪಡೆಯುತ್ತಾನೆ. ಈ ಸಾಲ ಕೆಲವೇ ಸಮಯದಲ್ಲಿ ಈತನನನು ಮುಳುಗಿಸಲು ರೆಡಿಯಾಗುತ್ತದೆ. ಕೋಟಿ ಬದುಕನ್ನು ತೋರಿಸುತ್ತ ತುಸು ಮಂದ ವೇಗದಲ್ಲಿ ಸಾಗುತ್ತಿದ್ದ ಸಿನಿಮಾ ವೇಗ ಪಡೆದುಕೊಳ್ಳುತ್ತದೆ.

ಈ ತೊಂದರೆಯಿಂದ ಪಾರಾಗಲು ಇರಲು ಏಕೈಕ ಮಾರ್ಗ ಸಾಹುಕಾರ ನೀಡಿದ ಕೆಲಸ ಮಾಡುವುದು. ಆದರೆ, ಕೋಟಿ ತುಂಬಾ ಪ್ರಾಮಾಣಿಕ ವ್ಯಕ್ತಿ. ಹಾಗಾದರೆ, ತನಗೆ ಅಗತ್ಯವಿರುವ ಅಷ್ಟೊಂದು ಲಕ್ಷ ರೂಪಾಯಿ ಹಣ ಹೇಗೆ ಹೊಂದಿಸುತ್ತಾನೆ. ಈ ಸಾಹುಕಾರ ನೀಡುವ ತೊಂದರೆಗಳಿಂದ ಪಾರಾಗಬಹುದೇ?

ಕೋಟಿ ಸಿನಿಮಾ ವಿಮರ್ಶೆ

ಕನ್ನಡ ಮನರಂಜನಾ ವಾಹಿನಿಯನ್ನು ಹಲವು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿದ ವ್ಯಕ್ತಿ ಪರಮೇಶ್ವರ್‌ ಗುಂಡ್ಕಲ್‌. ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಇದೇ ಸಮಯದಲ್ಲಿ ಡಾಲಿ ಧನಂಜಯ್‌ ಎಂಬ ನಟ ರಾಕ್ಷಸ ಈ ಸಿನಿಮಾದ ಹೀರೋ. ಹೀಗಾಗಿ ಕೋಟಿ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇತ್ತು. ಈ ಚಿತ್ರದ ಕುರಿತು ಸಾಕಷ್ಟು ಹಿಂದೆಯೇ ಕೆಲಸ ಆರಂಭಿಸಲಾಗಿತ್ತು. ಆದರೆ, ಟೀಸರ್‌ ಮತ್ತು ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ತನಕ ಈ ಚಲನಚಿತ್ರದ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು.

ದಿನನಿತ್ಯದ ಜಂಜಾಟವನ್ನು ತೋರಿಸುವ ಕಾಮನ್‌ ಮ್ಯಾನ್‌ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಅಂತಹ ಕತೆಯನ್ನು ಪರಮ್‌ ಅವರು ಡಾಲಿ ಮೂಲಕ ಮಾಡಿಸಿದರು. ಕೋಟಿ ಎಂಬ ಪಾತ್ರ ನಮ್ಮ ಸುತ್ತಮುತ್ತಲು ಕಾಣುವ ಜನರಂತೆ ಕಾಮನ್‌ ಮ್ಯಾನ್‌. ಇದಕ್ಕೆ ತಕ್ಕಂತೆ ಕೆಳ ಮಧ್ಯಮ ವರ್ಗದ ಸೆಟ್ಟಿಂಗ್‌, ಅವರ ದೊಡ್ಡ ಕನಸುಗಳು ಎಲ್ಲವೂ ಜನಸಾಮಾನ್ಯರ ಕನಸುಗಳಿಗೆ ಹೊಂದಿಕೆಯಾಗುತ್ತದೆ. ಇದು ಪ್ರೇಕ್ಷಕರಿಗೆ ನಮ್ಮದೇ ಕತೆ ಎಂದೆನಿಸಬಹುದು.

ಆದರೆ, ಚಿತ್ರ ಎಲ್ಲಿ ಫೇಲ್‌ ಆಯ್ತು ಎನ್ನುವಿರಾ? ಈ ಕಥೆಯನ್ನು ಸುಮಾರು ಎರಡೂವರೆ ಮೂರು ಗಂಟೆಗಳ ರನ್‌ ಟೈಮ್‌ನಲ್ಲಿ ಹೇಳುವ ಸವಾಲಿಗೆ ಸಂಬಂಧಪಟ್ಟದ್ದು. ಟೀವಿ ಚಾನೆಲ್‌ಗೆ ಪರಮೇಶ್ವರ್‌ ಗುಂಡ್ಕಲ್‌ ಮಾಡಿರುವ ಧಾರಾವಾಹಿ ಕಥೆಯಂತೆ ಆಗಿದೆ ಎಂದರೆ ತಪ್ಪಾಗದು. ಸಿನಿಮಾಕ್ಕಾಗಿ ಧಾರಾವಾಹಿಯನ್ನು ಒಂದಿಷ್ಟು ಕುಗ್ಗಿಸಿರಬಹುದು. ಕುಟುಂಬಕ್ಕಾಗಿ ಯಾವುದೇ ಅತಿರೇಕಕ್ಕೆ ಹೋಗಲು ಸಿದ್ಧವಿರುವ ವ್ಯಕ್ತಿಯಾಗಿ ಕೋಟಿಯನ್ನು ಬಿಂಬಿಸುವ ಪ್ರಯತ್ನ ಮೆಲೋಡ್ರಾಮಾದಂತೆ ಭಾಸವಾಗುತ್ತದೆ. ಕೋಟಿಯ ತಂದೆಯಾಗಿ ದುನಿಯಾ ವಿಜಯ್‌ ಅತಿಥಿ ಪಾತ್ರದಲ್ಲಿ ಎಂಟ್ರಿ ನೀಡುತ್ತಾರೆ. ಆದರೆ, ಇವರ ಪ್ರವೇಶವೂ ಭಾವನಾತ್ಮಕವಾಗಿ ಏನೂ ಟಚ್‌ ಆಗುವುದಿಲ್ಲ. ಕೋಟಿ ಸಿನಿಮಾ ಸ್ಲ್ಯಾಫ್‌ಫೆಸ್ಟ್‌, ಧಾರಾವಾಹಿಯ ಟ್ರೋಪ್‌ ಗುಣಗಳನ್ನು ಹೊಂದಿದೆ.

ಧನಂಜಯ್‌ ಮತ್ತು ರಮೇಶ್‌ ಇಂದಿರಾ ನಟನೆಗೆ ಜೈ

ಧನಂಜಯ ಮತ್ತು ಸ್ವಲ್ಪ ಮಟ್ಟಿಗೆ ರಮೇಶ್ ಇಂದಿರಾ ಅವರ ಕಾರಣದಿಂದ ಚಿತ್ರ ಬೇಸರ ತರಿಸದು. ಧನಂಜಯ್‌ ಅವರ ದೇಹ ಭಾಷೆಯಲ್ಲಾಗಲೀ ಅಥವಾ ಮಾತನಾಡುವ ರೀತಿಯಲ್ಲಿ ಎಲ್ಲೂ ನಾಟಕೀಯತೆ ಕಾಣಿಸುವುದಿಲ್ಲ. ಕೋಟಿ ಪಾತ್ರದಲ್ಲಿ ಅವರು ಜೀವಿಸಿದ್ದಾರೆ ಎನ್ನಬಹುದು. ಮತ್ತೊಂದೆಡೆ ರಮೇಶ್‌ ಇಂದಿರಾ ಅವರು ಸಾಹುಕಾರನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ತನಗೆ ಸಿಕ್ಕ ಪಾತ್ರದಲ್ಲಿ ಇರುವ ಅವಕಾಶಗಳನ್ನೆಲ್ಲ ಬಳಸಿಕೊಂಡಿದ್ದಾರೆ.

ಉಳಿದ ಪಾತ್ರಗಳ ಕುರಿತು ಹೆಚ್ಚು ಹೇಳಲು ಏನೂ ಇಲ್ಲ. ಉದಾಹರಣೆಗೆ, ಪೃಥ್ವಿ ಶಾಮನೂರು, ಕೋಟಿಯ ಸಹೋದರ ನಚ್ಚಿಯಾಗಿ, ಕುತ್ತಿಗೆ ಅಥವಾ ಕಿವಿಯ ಮೇಲೆ ಹೆಡ್‌ಫೋನ್‌ ಹಾಕಿಕೊಂಡು ಸದಾ ಸಂಗೀತ ಕೇಳುತ್ತಾ ಇರುತ್ತಾರೆ. ತನುಜಾ ವೆಂಕಟೇಶ್ ಅವರು ಕೋಟಿಯ ಸಹೋದರಿ ಮಹತಿ ಪಾತ್ರದಲ್ಲಿ ಸ್ವಲ್ಪ ಉತ್ತಮವಾಗಿ ನಟಿಸಿದ್ದಾರೆ. ಚಿತ್ರದ ನಾಯಕಿ ಮೋಕ್ಷಾ ಕುಶಾಲ್‌ ಸುಂದರಿ ಮಾತ್ರವಲ್ಲ, ತನಗೆ ಸಿಕ್ಕ ಪಾತ್ರದಲ್ಲಿ ಶ್ರದ್ಧೆಯಿಂದ ನಟಿಸಿದ್ದಾರೆ.

ಕೋಟಿ ಚಲನಚಿತ್ರದ ಕುರಿತು ಅಂತಿಮ ಅಭಿಪ್ರಾಯ

ಇಷ್ಟೆಲ್ಲ ವಿಮರ್ಶೆ ಓದಿದ ಬಳಿಕ ಈ ಸಿನಿಮಾ ನೋಡಬೇಕೇ ಬೇಡವೇ ಎಂಬ ಸಂದೇಹ ನಿಮಗೆ ಬರಬಹುದು. ಸೀರಿಯಲ್‌ ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಬಹುದು. ಸುಮಾರು ಮೂರು ಗಂಟೆಯ ಚಿತ್ರವಾಗಿರುವುದರಿಂದ ಈ ಸಿನಿಮಾ ಇನ್ನೂ ಏಕೆ ಮುಗಿದಿಲ್ಲ ಎಂಬ ಪ್ರಶ್ನೆ ತಲೆಯಲ್ಲಿ ಓಡಬಹುದು. ಕುಟುಂಬ ಸಮೇತ ಮೆಲೋಡ್ರಾಮಾ ಸಿನಿಮಾ ಇಷ್ಟಪಡುವವರಿಗೆ ಈ ಚಿತ್ರ ಖಂಡಿತಾ ಇಷ್ಟವಾಗಬಹುದು.

ಚಿತ್ರ ವಿಮರ್ಶೆ: ಪ್ರತಿಭಾ ಜಾಯ್‌, ಒಟಿಟಿ ಪ್ಲೇ,

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ