logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kantara: ಪರಶುರಾಮನ ಸೃಷ್ಟಿಯ ಝಲಕ್‌ ನೀಡಿದ್ರ ರಿಷಬ್‌ ಶೆಟ್ಟಿ; ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ನಲ್ಲಿ ಹೀಗೊಂದು ಸಾಧ್ಯತೆ

Kantara: ಪರಶುರಾಮನ ಸೃಷ್ಟಿಯ ಝಲಕ್‌ ನೀಡಿದ್ರ ರಿಷಬ್‌ ಶೆಟ್ಟಿ; ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ನಲ್ಲಿ ಹೀಗೊಂದು ಸಾಧ್ಯತೆ

Nov 27, 2023 04:56 PM IST

Kantara A Legend Chapter-1 First Look: ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ 1ರ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ತ್ರಿಶೂಲಧಾರಿ ಸನ್ಯಾಸಿಯೊಬ್ಬರು ರಕ್ತಸಿಕ್ತವಾಗಿರುವಂತೆ ರಿಷಬ್‌ ಶೆಟ್ಟಿ ಘೋರವಾಗಿ ಈ ಫಸ್ಟ್‌ಲುಕ್‌ನಲ್ಲಿ ಕಾಣಿಸಿದ್ದಾರೆ. ಇದು ಪರಶುರಾಮನ ಸೃಷ್ಟಿಯ ತುಳುನಾಡಿನ ಸುಳಿವು ಆಗಿರಬಹುದು ಎನ್ನಲಾಗುತ್ತಿದೆ.

  • Kantara A Legend Chapter-1 First Look: ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ 1ರ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ತ್ರಿಶೂಲಧಾರಿ ಸನ್ಯಾಸಿಯೊಬ್ಬರು ರಕ್ತಸಿಕ್ತವಾಗಿರುವಂತೆ ರಿಷಬ್‌ ಶೆಟ್ಟಿ ಘೋರವಾಗಿ ಈ ಫಸ್ಟ್‌ಲುಕ್‌ನಲ್ಲಿ ಕಾಣಿಸಿದ್ದಾರೆ. ಇದು ಪರಶುರಾಮನ ಸೃಷ್ಟಿಯ ತುಳುನಾಡಿನ ಸುಳಿವು ಆಗಿರಬಹುದು ಎನ್ನಲಾಗುತ್ತಿದೆ.
ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡ ಭಯಾನಕ ಅವತಾರದಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಎಲ್ಲಾದರೂ ಇದು ಪರಶುರಾಮನ ಅವತಾರವೇ? ತುಳುನಾಡು ಪರಶುರಾಮನ ಸೃಷ್ಟಿ ಎಂಬಂತೆ ತೋರಿಸುವ ಒಂದು ದೃಶ್ಯವೇ ಎನ್ನುವುದನ್ನು ತಿಳಿಯಲು ಸಿನಿಮಾ ಬಿಡುಗಡೆಯಾಗುವವರೆಗೆ ಕಾದು ನೋಡಬೇಕಿದೆ.
(1 / 7)
ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡ ಭಯಾನಕ ಅವತಾರದಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಎಲ್ಲಾದರೂ ಇದು ಪರಶುರಾಮನ ಅವತಾರವೇ? ತುಳುನಾಡು ಪರಶುರಾಮನ ಸೃಷ್ಟಿ ಎಂಬಂತೆ ತೋರಿಸುವ ಒಂದು ದೃಶ್ಯವೇ ಎನ್ನುವುದನ್ನು ತಿಳಿಯಲು ಸಿನಿಮಾ ಬಿಡುಗಡೆಯಾಗುವವರೆಗೆ ಕಾದು ನೋಡಬೇಕಿದೆ.(Parasurama photo source google)
ಸಿನಿಮಾದ ಆರಂಭದಲ್ಲಿ ಇದು ಪರಶುರಾಮನ ಸೃಷ್ಟಿಯ ತುಳುನಾಡು ಎಂದು ತೋರಿಸುವ ದೃಶ್ಯ ಇದಾಗಿರಬಹುದು. ಇದಾದ ಬಳಿಕ ನಂತರದ ಇತಿಹಾಸಗಳು ತೆರೆದುಕೊಳ್ಳುವ ಸಾಧ್ಯತೆ ಇದೆ. ಇದು ಪರಶುರಾಮನ ಅವತಾರ ಅಲ್ಲದೆ ಇದ್ದರೆ ಯಾವುದೋ ಹೋರಾಟಗಾರ, ರಾಜನ ಅವತಾರವೂ ಆಗಿರಬಹುದು. ಕೈಯಲ್ಲಿ ಕೊಡಲಿ ಹಿಡಿದುಕೊಂಡು "ಬೆಳಕು" ನೋಡುತ್ತಿರುವ ಈ ಫಸ್ಟ್‌ಲುಕ್‌ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಿರುವುದು ಸುಳ್ಳಲ್ಲ.
(2 / 7)

ಯುದ್ಧರಂಗದಲ್ಲಿ ಹೋರಾಟ ಮಾಡುವ ದೃಶ್ಯವೂ ಇದಾಗಿರಬಹುದು. ಇದು ಕದಂಬರ ಕಾಲದ ಕತೆಯೋ ಎಂಬ ಸಂದೇಹವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ತುಳುನಾಡಿನ ಇತಿಹಾಸವನ್ನು ನೋಡುವುದಾದರೆ ಇದರಲ್ಲಿ ವಿಜಯನಗರದ ಇತಿಹಾಸವೂ ಸೇರಿಕೊಳ್ಳುತ್ತದೆ. ತುಳುವರು ವಿಜಯನಗರವನ್ನು ಆಳಿದ ಮೂರನೇ ರಾಜವಂಶವಾಗಿದೆ. 
(3 / 7)

ರಿಷಬ್‌ ಶೆಟ್ಟಿಯವರು ಕಾಂತಾರ ಚಾಪ್ಟರ್‌ 2ನಲ್ಲಿ ಇತಿಹಾಸದ ಕತೆ ಹೇಳುವರೋ, ಇತಿಹಾಸದ ಮಾಹಿತಿ ಆಧರಿಸಿ ಕಾಲ್ಪನಿಕ ಕತೆ ಹೇಳುತ್ತಾರೋ ಕಾದು ನೋಡಬೇಕಿದೆ. ಈ ಚಿತ್ರದ ಫಸ್ಟ್‌ಲುಕ್ಕೇ ಇಷ್ಟೊಂದು ರೋಮಾಂಚನಗೊಳಿಸಿದರೆ ಇನ್ನು ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
(4 / 7)

 ರಿಷಬ್‌ ಶೆಟ್ಟಿಯ ಹೊಸ ಲುಕ್‌ ಮಾತ್ರ ಭಯಾನಕ, ಘೋರ, ಅದ್ಭುತವಾಗಿದೆ. ಯೂಟ್ಯೂಬ್‌ನಲ್ಲಂತೂ ಇವರ ಹೊಸ ಲುಕ್‌ ನೋಡಿ ಸಾಕಷ್ಟು ಜನರು ಅಬ್ಬಾ ಎಂದಿದ್ದಾರೆ.
(5 / 7)

  ಸದ್ಯ ಬಿಡುಗಡೆಯಾದ ಫಸ್ಟ್‌ಲುಕ್‌ ಮಾತ್ರ ಹಲವು ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಾ ಸಾಗುತ್ತಿದೆ. ಇದು ಖಂಡಿತಾವಾಗಿಯೂ ಜಾಗತಿಕ ಮಟ್ಟದಲ್ಲಿ ಭಾರತದ ಸಿನಿರಂಗವನ್ನು ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. 
(6 / 7)

ಕಾಂತಾರ ಸಿನಿಮಾಕ್ಕೆ ಇಂದು ಮುಹೂರ್ತ ನಡೆದಿದೆ. ಕ್ರಿಶ 301-400 ಕಾಲದ ಕಥೆಯನ್ನು ಕಾಂತಾರ ಸಿನಿಮಾ ಹೊಂದಿರಲಿದೆ ಎಂದು ಹೇಳಲಾಗಿದೆ. ಫಸ್ಟ್‌ಲುಕ್‌ ಈಗ ಏಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿರುವುದರಿಂದ ಈ ಸಿನಿಮಾಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರೇಕ್ಷಕರು ದೊರಕುವ ಸಾಧ್ಯತೆಯಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು