logo
ಕನ್ನಡ ಸುದ್ದಿ  /  ಮನರಂಜನೆ  /  Yash: ಅಭಿಮಾನಿಯ ಕಾಲಿನ ಮೇಲೆ ಹರಿದ ನಟ ಯಶ್‌ ಬೆಂಗಾವಲು ವಾಹನ; ಬಳ್ಳಾರಿ ಅಮೃತೇಶ್ವರ ದೇಗುಲಕ್ಕೆ ಕೆಜಿಎಫ್‌ ನಟ ಆಗಮಿಸಿದಾಗ ಅವಘಡ

Yash: ಅಭಿಮಾನಿಯ ಕಾಲಿನ ಮೇಲೆ ಹರಿದ ನಟ ಯಶ್‌ ಬೆಂಗಾವಲು ವಾಹನ; ಬಳ್ಳಾರಿ ಅಮೃತೇಶ್ವರ ದೇಗುಲಕ್ಕೆ ಕೆಜಿಎಫ್‌ ನಟ ಆಗಮಿಸಿದಾಗ ಅವಘಡ

Praveen Chandra B HT Kannada

Feb 29, 2024 03:53 PM IST

google News

ಬಳ್ಳಾರಿಯಲ್ಲಿ ಅಭಿಮಾನಿಯ ಕಾಲಿನ ಮೇಲೆ ಹರಿದ ನಟ ಯಶ್‌ ಬೆಂಗಾವಲು ವಾಹನ

    • Kannada Actor Yash: ಕನ್ನಡ ನಟ ಯಶ್‌ ಬಳ್ಳಾರಿ ಸಮೀಪದ ತಾಳೂರಿನ ಅಮೃತೇಶ್ವರ ದೇಗುಲ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಿದ ಸಂದರ್ಭದಲ್ಲಿ ಯಶ್‌ ಬೆಂಗಾವಲು ವಾಹನದ ಚಕ್ರವು ಅಭಿಮಾನಿಯೊಬ್ಬರ ಕಾಲಿನ ಮೇಲೆ ಹರಿದಿದೆ.
ಬಳ್ಳಾರಿಯಲ್ಲಿ ಅಭಿಮಾನಿಯ ಕಾಲಿನ ಮೇಲೆ ಹರಿದ ನಟ ಯಶ್‌ ಬೆಂಗಾವಲು ವಾಹನ
ಬಳ್ಳಾರಿಯಲ್ಲಿ ಅಭಿಮಾನಿಯ ಕಾಲಿನ ಮೇಲೆ ಹರಿದ ನಟ ಯಶ್‌ ಬೆಂಗಾವಲು ವಾಹನ

ಬೆಂಗಳೂರು: ಕನ್ನಡ ಕೆಜಿಎಫ್‌ ನಟ ಯಶ್‌ ಅವರ ಬೆಂಗಾವಲು ವಾಹನದ ಚಕ್ರವು ಹರಿದ ಪರಿಣಾಮ ಅಭಿಮಾನಿಯೊಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಬಳ್ಳಾರಿ ಹೊರವಲಯದ ತಾಳೂರು ಸಮೀಪದ ಬಾಲಾಜಿ ನಗರ ಕ್ಯಾಂಪ್‌ ಬಳಿ ಅಮೃತೇಶ್ವರ ದೇಗುಲ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಯಶ್‌ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಯಶ್‌ ಅಭಿಮಾನಿಗಳು ನೆರೆದಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ವಸಂತ್‌ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ವಾಹನದ ಚಕ್ರ ಹರಿದಿದೆ. ವಸಂತ ಎಂಬ ಯುವಕ ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

ಬಳ್ಳಾರಿಗೆ ಆಗಮಿಸಿದ ಯಶ್‌

ಈಗ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಕೊರ್ರಪಾಟಿ ಸಾಯಿ ನಿರ್ಮಿಸಿದ ಅಮೃತೇಶ್ವರ ದೇವಾಲಯವು ಇಂದು ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ದೇಗುಲದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನಟ ಯಶ್‌ ಮತ್ತು ಇತರೆ ಗಣ್ಯರು ಆಗಮಿಸಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್‌ ಖ್ಯಾತಿಯ ಎಸ್‌ಎಸ್‌ ರಾಜಮೌಳಿ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಚಿವ ಬಿ ನಾಗೇಂದ್ರ ಕೂಡ ಆಗಮಿಸಿದ್ದರು.

ಯಶ್‌ ಅಭಿಮಾನಿಗಳ ದಂಡು

ಬಳ್ಳಾರಿ ದೇವಾಲಯದ ಪ್ರಾಣ ಪ್ರತಿಷ್ಠಾಪನೆಗೆ ನಟ ಯಶ್‌ ಬರುತ್ತಾರೆ ಎಂಬ ಸುದ್ದಿ ಕೇಳಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದಾರೆ. ಇಂದು ಬೆಳಗ್ಗಿನಿಂದಲೇ ದೇವಾಲಯದ ಸುತ್ತಮುತ್ತ ಅಭಿಮಾನಿಗಳದ ದಂಡೇ ನೆರೆದಿತ್ತು. ಈ ಸಂದರ್ಭದಲ್ಲಿ ಬಾಲಾಜಿ ನಗರ ಕ್ಯಾಂಪ್‌ಗೆ ಯಶ್‌ ತಲುಪಿದಾಗ ಒಂದಿಷ್ಟು ನೂಕುನುಗ್ಗಲಿನ ವಾತಾವರಣ ನಡೆಯಿತು. ಈ ಸಂದರ್ಭದಲ್ಲಿ ಯಶ್‌ ಬೆಂಗಾವಲು ಪಡೆಯ ವಾಹನದಡಿಗೆ ವಸಂತ್‌ ಎಂಬ ಅಭಿಮಾನಿಯ ಕಾಲು ಸಿಲುಕಿದೆ.

ಇತ್ತೀಚೆಗೆ ಯಶ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ವಿದ್ಯುತ್‌ ಆಘಾತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಮೃತರ ಕುಟುಂಬವನ್ನು ಭೇಟಿಯಾಗಲು ಬಂದಾಗ ಮತ್ತೊಬ್ಬ ಅಭಿಮಾನಿಯೂ ಬೆಂಗಾವಲು ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದನು. ಯಶ್‌ ಬೆಂಗಾವಲು ಪಡೆಯ ವಾಹನವನ್ನು ಹಿಂಬಾಲಿಸಿದ ನಿಖಿಲ್‌ ಎಂಬ ಯುವಕನೂ ಸ್ಕೂಟರ್‌ನಿಂದ ಬಿದ್ದು ಮೃತಪಟ್ಟಿದ್ದನು.

ಗದಗದ ಸೊರಣಗಿಯಲ್ಲಿ ಯಶ್‌ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಯುವಕರು ಬ್ಯಾನರ್‌ ಕಟ್ಟುತ್ತಿದ್ದಾಗ ಬ್ಯಾನರ್‌ ವಿದ್ಯುತ್‌ ತಂತಿಗೆ ತಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್‌ ಪ್ರವಹಿಸಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿಷಯ ತಿಳಿದ ತಕ್ಷಣ ಯಶ್‌ ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಗದಗಕ್ಕೆ ಆಗಮಿಸಿದ್ದರು. ಗದಗಕ್ಕೆ ಯಶ್‌ ಬರುತ್ತಾರೆ ಎಂಬ ಸುದ್ದಿ ತಿಳಿದು ಸಾಕಷ್ಟು ಅಭಿಮಾನಿಗಳು ನೆರೆದಿದ್ದರು. ಆ ಸಂದರ್ಭದಲ್ಲಿ ಸಾಕಷ್ಟು ಜನರು ಯಶ್‌ ವಾಹನವನ್ನು ಹಿಂಬಾಲಿಸುತ್ತಿದ್ದರು. ನಿಖಿಲ್‌ ಎಂಬ ಯುವಕ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದನು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ