logo
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಹಾಯ್ ನಾನ್ನ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್;‌ ಅಣ್ಣನಿಗೆ ಥ್ಯಾಂಕ್‌ ಯೂ ಹೇಳಿದ ನಾನಿ

Kichcha Sudeep: ಹಾಯ್ ನಾನ್ನ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್;‌ ಅಣ್ಣನಿಗೆ ಥ್ಯಾಂಕ್‌ ಯೂ ಹೇಳಿದ ನಾನಿ

Oct 07, 2023 09:20 AM IST

google News

Kichcha Sudeep: ಹಾಯ್ ನಾನ್ನ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್;‌ ಅಣ್ಣನಿಗೆ ಥ್ಯಾಂಕ್‌ ಯೂ ಹೇಳಿದ ನಾನಿ

    • Hi Nanna Song Release: ತೆಲುಗಿನ ನಟ ನಾನಿ ಅಭಿನಯದ ಹಾಯ್‌ ನಾನ್ನ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಅದಕ್ಕೂ ಮೊದಲು ಇದೇ ಚಿತ್ರದ ಮಗಳಲ್ಲ.. ಕನ್ನಡ ಹಾಡನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ.
Kichcha Sudeep: ಹಾಯ್ ನಾನ್ನ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್;‌ ಅಣ್ಣನಿಗೆ ಥ್ಯಾಂಕ್‌ ಯೂ ಹೇಳಿದ ನಾನಿ
Kichcha Sudeep: ಹಾಯ್ ನಾನ್ನ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್;‌ ಅಣ್ಣನಿಗೆ ಥ್ಯಾಂಕ್‌ ಯೂ ಹೇಳಿದ ನಾನಿ

Kichcha Sudeep: ಟಾಲಿವುಡ್‌ನಲ್ಲಿ ಹಾಯ್‌ ನಾನ್ನ ಸಿನಿಮಾ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ ನ್ಯಾಚುರಲ್‌ ಸ್ಟಾರ್‌ ನಾನಿ. ಕಳೆದ ವರ್ಷ ದಸರಾ ಅನ್ನೋ ಬ್ಲಾಬ್‌ ಬಸ್ಟರ್‌ ಹಿಟ್‌ ಸಿನಿಮಾ ನೀಡಿದ್ದ ನಾನಿ, ಇದೀಗ ಪಕ್ಕಾ ಫ್ಯಾಮಿಲಿ ಮ್ಯಾನ್‌ ಆಗಿ ಆಗಮಿಸಿದ್ದಾರೆ. ಹಾಯ್‌ ನಾನ್ನ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಆ ನಿಮಿತ್ತ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದೆ ಸಿನಿಮಾ ತಂಡ. ಈ ಸಿನಿಮಾಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ.

ದಸರಾ ಸಿನಿಮಾ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನನ್ನಾ. ಟೀಸರ್ ಹಾಗೂ ಒಂದು ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹಾಯ್ ನನ್ನಾ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ, ವಿವರಣೆ ಬೇಕಿಲ್ಲ.. ಎಂಬ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ, ಮಗಳಲ್ಲ ನೀ ನನ್ನ ಅಮ್ಮ.. ಎಂಬ ಕನ್ನಡದ ಹಾಡನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ನಾನಿಯ ಚಿತ್ರಕ್ಕೆ ಶುಭ ಸಾಥ್ ನೀಡಿದ್ದಾರೆ.

ಮಗಳಲ್ಲ ನೀ ನನ್ನ ಅಮ್ಮ.. ಹಾಡು ಅಪ್ಪ ಮಗಳ ನಡುವಿನ ಬಾಂಧವ್ಯದ ಗೀತೆಯಾಗಿದೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿರುವ ಹಾಡಿಗೆ ಹೃದಯ್ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿ, ಅವರೇ ಹಾಡಿದ್ದಾರೆ. ಸುದೀಪ್‌ ಹೀಗೆ ಈ ಸಿನಿಮಾದ ಹಾಡನ್ನು ರಿಲೀಸ್‌ ಮಾಡುತ್ತಿದ್ದಂತೆ, ಅತ್ತ ಕಡೆಯಿಂದ ನಾನಿ ಥ್ಯಾಂಕ್ಸ್‌ ಅಣ್ಣ ಎಂದಿದ್ದಾರೆ.

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ. ನಾನಿಗೆ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ಜೋಡಿಯಾಗಿದ್ದಾರೆ.

ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಎಡಿಟಿಂಗ್‌ ಜವಾಬ್ದಾರಿ ಹೊತ್ತಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ