logo
ಕನ್ನಡ ಸುದ್ದಿ  /  ಮನರಂಜನೆ  /  Dwapara Lyrics: ಟ್ರೆಂಡಿಂಗ್‌ನಲ್ಲಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು; ಇಲ್ಲಿದೆ ಅಚ್ಚಕನ್ನಡದ ದ್ವಾಪರ ಹಾಡಿನ ಲಿರಿಕ್ಸ್‌

Dwapara Lyrics: ಟ್ರೆಂಡಿಂಗ್‌ನಲ್ಲಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು; ಇಲ್ಲಿದೆ ಅಚ್ಚಕನ್ನಡದ ದ್ವಾಪರ ಹಾಡಿನ ಲಿರಿಕ್ಸ್‌

Praveen Chandra B HT Kannada

Jul 29, 2024 01:41 PM IST

google News

Dwapara Lyrics: ಟ್ರೆಂಡಿಂಗ್‌ನಲ್ಲಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು

    • Dwapara Song Kannada Lyrics: ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿದೆ.
Dwapara Lyrics: ಟ್ರೆಂಡಿಂಗ್‌ನಲ್ಲಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು
Dwapara Lyrics: ಟ್ರೆಂಡಿಂಗ್‌ನಲ್ಲಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು

Dwapara Song Kannada Lyrics: ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ನನ್ನನ್ನೇ ನೋಡಲು ಬಂದ ರಾಧಿಕೆ ಎಂಬ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಿಂದೆ ಚಿನ್ನಮ್ಮ ಹಾಡು ಟ್ರೆಂಡ್‌ ಆಗಿತ್ತು. ಇದೀಗ ದ್ವಾಪರ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ರೀಲ್ಸ್‌ ಮಾಡುವವರೂ ಹೆಚ್ಚಾಗಿದ್ದಾರೆ. ಇದೇ ಆಗಸ್ಟ್‌ 15ರಂದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದ್ವಾಪರ ದಾಟುತ ಹಾಡಿನ ಕನ್ನಡ ಲಿರಿಕ್ಸ್‌ ಅನ್ನು ಇಲ್ಲಿ ಅಕ್ಷರ ರೂಪದಲ್ಲಿ ನೀಡಲಾಗಿದೆ. ಸಾಹಿತ್ಯ ಪ್ರೇಮಿಗಳು ಈ ಹಾಡಿನ ಸಾಲನ್ನು ಗುನುಗುತ್ತ ಈ ಮಳೆಗಾಲವನ್ನು ಎಂಜಾಯ್‌ ಮಾಡಬಹುದು. ದ್ವಾಪರ ದಾಟುತ ಹಾಡಿನ ಲಿರಿಕಲ್‌ ವಿಡಿಯೋ ಕೂಡ ಇಲ್ಲಿದೆ.

ಸಿನಿಮಾದ ಹೆಸರು: ಕೃಷ್ಣಂ ಪ್ರಣಯ ಸಖಿ

ಹಾಡು: ದ್ವಾಪರ

ಸಂಗೀತ: ಅರ್ಜುನ್‌ ಜನ್ಯ

ಸಾಹಿತ್ಯ: ಡಾ. ವಿ. ನಾಗೇಂದ್ರ ಪ್ರಸಾದ್‌

ಗಾಯಕ: ಜಸ್‌ಕರಣ್‌ ಸಿಂಗ್‌

ದ್ವಾಪರ ದಾಟುತ ಹಾಡಿನ ಲಿರಿಕ್ಸ್‌ (Dwapara Song Kannada Lyrics)

ದ್ವಾಪರ ದಾಟುತ ನನ್ನನೇ ನೋಡಲು
ನನ್ನನೇ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮಾತಲಿ ಹೇಳಲು

ಸಾಧ್ಯವೇ ಇಲ್ಲದ ರಾಗ ಮಾಲಿಕೆ
ಸಖಿ ಸಖಿ ನನ್ನ ರೂಪಸಿ
ಸಖಿ ಸಖಿ ನಿನ್ನ ಮೋಹಿಸಿ
ನೀನೇ ನನ್ನ ಪ್ರೇಯಸಿ

ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ
ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ

ಬೇರೆ ದಾರೀನು ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ

ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ
ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ

ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು
ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗೂ ಕೊರಳು
ಬಲು ವಿಸ್ಮಯ ನಿನ್ನ ಕೊರಳು

ಸೌಂದರ್ಯದಲ್ಲಿ ಗಾಂಭೀರ್ಯವಂತೆ
ಆಂತರ್ಯದಲ್ಲಿ ಔದಾರ್ಯವಂತೆ
ನೀನೇ ನನ್ನ ಪ್ರೇಯಸಿ

ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ
ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ
ನಾನು ಶ್ರೀಕೃಷ್ಣ ನೀನೇ ನನ ಭಾಮೆ ಮೂಡಿದೆ ಪ್ರೀತಿಯು
ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು

ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ
ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ

ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ
ಬ್ರಹ್ಮನಿಗೂನು ಬೆರಗು ನೀನೆಂದರೆ

ಬೆರಗಿಗೂ ಬೆರಗು ಬರೆದರೆ ಮುಗಿಯದು ಪದದಲ್ಲಿ
ಸಿಗದು ರತಿಯರಿಗಿಂತ ಸೊಬಗು
ಮೈ ಮಾಟವೆ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೇ ನನ್ನ ಪ್ರೇಯಸಿ
ಇದನ್ನೂ ಓದಿ: ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು? ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ ಲಿರಿಕ್ಸ್‌

ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ ಇಳಿದೋಳೆ
ಜೀವ ಝಲ್ ಎಂದಿದೆ

ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ
ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ

ದ್ವಾಪರ ಹಾಡಿನ ವಿಡಿಯೋ ಲಿರಿಕ್ಸ್‌

 

 

ದ್ವಾಪರ ಹಾಡಿಗೆ ಅಭಿಮಾನಿಗಳು ಖುಷಿಗೊಂಡಿದ್ದಾರೆ. ವಿಶೇಷವಾಗಿ ಈ ಹಾಡಿನ ಸಾಹಿತ್ಯ ಇಷ್ಟಪಟ್ಟಿದ್ದಾರೆ. "ಒಂದೇ ಒಂದು ಪರ ಬಾಷೆ ಬಳಸದೆ ಬಂದಂತ ಅದ್ಬುತ ಕನ್ನಡ ಸಾಹಿತ್ಯದ ಹಾಡು" "ನಮ್ಮ" ಕನ್ನಡ ಭಾಷೆ, ಶಬ್ದ ಸಂಪತ್ತಿನ ಗಣಿ". .... ಬಗೆದಷ್ಟು ಬಂಗಾರ, ಕೇಳಿದಷ್ಟು ಇಂಚರ, ಸಾಹಿತ್ಯ ಸಾಗರ" "ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. ಸದ್ದಿಕ್ಜೆ 100 ಬಾರಿ ಕೇಳಿರಬಹುದು ಅನ್ಸುತ್ತೆ ಗುರು" "ಬಹಳ ದಿನಗಳ ನಂತರ ಕನ್ನಡ ಸಿನಿಮಾ ದಲ್ಲಿ ಇಂತಹ ಅದ್ಬುತ ಸಾಹಿತ್ಯ ಕೇಳಿ ಬಹಳ ರೋಮಾಂಚನವಾಯಿತು" ಎಂದೆಲ್ಲ ಅಭಿಮಾನಿಗಳು ಈ ಹಾಡನ್ನು ಮೆಚ್ಚಿ ಯೂಟ್ಯೂಬ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ