logo
ಕನ್ನಡ ಸುದ್ದಿ  /  ಮನರಂಜನೆ  /  ಕುಡಿತದಿಂದ ಜೀವ ಕಳೆದುಕೊಂಡ ಖಳನಟ ರಘುವರನ್‌ ಪತ್ನಿಯೂ ಖ್ಯಾತ ನಟಿ, ಅಪ್ಪನನ್ನೇ ಮೀರಿಸಿದ ಮಗ ರಿಷಿವರನ್‌ ಈಗ ಏನ್ಮಾಡ್ತಿದ್ದಾರೆ?

ಕುಡಿತದಿಂದ ಜೀವ ಕಳೆದುಕೊಂಡ ಖಳನಟ ರಘುವರನ್‌ ಪತ್ನಿಯೂ ಖ್ಯಾತ ನಟಿ, ಅಪ್ಪನನ್ನೇ ಮೀರಿಸಿದ ಮಗ ರಿಷಿವರನ್‌ ಈಗ ಏನ್ಮಾಡ್ತಿದ್ದಾರೆ?

Jun 02, 2024 10:48 AM IST

google News

ಕುಡಿತದಿಂದ ಜೀವ ಕಳೆದುಕೊಂಡ ಖಳನಟ ರಘುವರನ್‌ ಪತ್ನಿಯೂ ಖ್ಯಾತ ನಟಿ, ಅಪ್ಪನನ್ನೇ ಮೀರಿಸಿದ ಮಗ ರಿಷಿವರನ್‌ ಈಗ ಏನ್ಮಾಡ್ತಿದ್ದಾರೆ?

    • ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಕುಡಿತಕ್ಕೆ ದಾಸರಾಗಿ, ತಮ್ಮ 50ನೇ ವಯಸ್ಸಿಗೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಖ್ಯಾತ ಖಳನಟ ರಘುವರನ್ ಅವರ ಪತ್ನಿಯೂ ಖ್ಯಾತ ನಟಿ. ಇವರಿಗೆ ಒಬ್ಬ ಮಗನೂ ಇದ್ದಾನೆ. ಥೇಟ್‌ ಅಪ್ಪನ ಛಾಯೆಯೂ ಅವರಲ್ಲಿದೆ. 
ಕುಡಿತದಿಂದ ಜೀವ ಕಳೆದುಕೊಂಡ ಖಳನಟ ರಘುವರನ್‌ ಪತ್ನಿಯೂ ಖ್ಯಾತ ನಟಿ, ಅಪ್ಪನನ್ನೇ ಮೀರಿಸಿದ ಮಗ ರಿಷಿವರನ್‌ ಈಗ ಏನ್ಮಾಡ್ತಿದ್ದಾರೆ?
ಕುಡಿತದಿಂದ ಜೀವ ಕಳೆದುಕೊಂಡ ಖಳನಟ ರಘುವರನ್‌ ಪತ್ನಿಯೂ ಖ್ಯಾತ ನಟಿ, ಅಪ್ಪನನ್ನೇ ಮೀರಿಸಿದ ಮಗ ರಿಷಿವರನ್‌ ಈಗ ಏನ್ಮಾಡ್ತಿದ್ದಾರೆ?

Raghuvaran family: ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮದೇ ಆದ ನಟನೆ, ಗತ್ತಿನಿಂದಲೇ ಸಿನಿಮಾ ಪ್ರೇಮಿಗಳ ಮನದಲ್ಲಿ ಸಾವಿರಾರು ಕಲಾವಿದರು ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಆ ಪೈಕಿ ಖಳನಟನಾಗಿ ಗುರುತಿಸಿಕೊಂಡ ನಟ ರಘುವರನ್‌ ಸಹ ನೆಗೆಟಿವ್‌ ಶೇಡ್‌ ಪಾತ್ರಗಳ ಮೂಲಕವೇ ತೆರೆಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದರು. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ರಘುವರನ್‌ (Raghuvaran Velayuthan Nair) ಅವರದ್ದು ದೊಡ್ಡ ಹೆಸರು. 80-90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಮೋಸ್ಟ್ ವಿಲನ್ ಎಂದು ಹೆಸರು ಮಾಡಿದ್ದರು ರಘುವರನ್‌.

ಆಗಿನ ಸಮಯದಲ್ಲಿ ಸ್ಟಾರ್‌ ನಟರ ಸಿನಿಮಾಗಳಲ್ಲಿ ಖಡಕ್‌ ಖಳನಾಗಿ ನಟಿಸಿದ್ದರೂ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಪವನ್ ಕಲ್ಯಾಣ್ ಹೀರೋಗಳಿಗೆ ಸರಿಸಮಾನವಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಕನ್ನಡದಲ್ಲಿಯೂ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದ ರಘುವರನ್‌, 1996ರಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದರು. ಅದಾದ ಲಿಕ ಕಲಾವಿದ, ಜೈ ಹಿಂದ್‌, ಗವರ್ನಮೆಂಟ್‌, ಸಾರಿ, ಪ್ರತ್ಯರ್ಥ, ಅಸುರ, ದುರ್ಗಿ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿಮಾ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು ರಘುವರನ್.‌

ಖಳನಾಟನಾಗಿಯೇ ಮಿಂಚು

ಕೇರಳ ಮೂಲದ ರಘುವರನ್‌, 1982ರಲ್ಲಿ ಮಲಯಾಳಂ ಕಕ್ಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದ್ದರು. ಮೂಲ ಮಲಯಾಳಿಯಾದರೂ, ಕೇವಲ 11 ಮಲಯಾಳಂ ಸಿನಿಮಾಗಳಲ್ಲಷ್ಟೇ ಅವರು ನಟಿಸಿದ್ದರು. ತೆಲುಗಿನಲ್ಲೂ ಎರಡಂಕಿಯ ಸಿನಿಮಾಗಳಲ್ಲಿ ನಟಿಸಿದರೆ, ಅವರಿಗೆ ದೊಡ್ಡ ಮಟ್ಟದ ಮಾರ್ಕೆಟ್‌ ಇದ್ದದ್ದು ತಮಿಳಿನಲ್ಲಿ. ಕಾಲಿವುಡ್‌ನಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಳನಟನಾಗಿ ಮಾತ್ರವಲ್ಲದೆ, ತಂದೆಯಾಗಿ, ಅಣ್ಣನಾಗಿಯೂ ನಟಿಸಿದ್ದಾರೆ. ಪೋಷಕ ಪಾತ್ರಗಳನ್ನೂ ನಿರ್ವಹಿಸಿದ್ದಾರೆ.

ಅತಿಯಾದ ಕುಡಿತ; 2008ರಲ್ಲಿ ನಿಧನ

ಹಿಂದಿಯ ಹಲವು ಸಿನಿಮಾಗಳಲ್ಲೂ ನಟಿಸಿರುವ ರಘುವರನ್‌, ತಮ್ಮ ಕೆರಿಯರ್‌ನಲ್ಲಿ ಖಳನಾಗಿಯೇ ನಟಿಸಿದ್ದು ಹೆಚ್ಚು. ಒಟ್ಟಾರೆ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ರಘುವರನ್‌, ಸಂಗೀತ ಪ್ರೇಮಿಯೂ ಹೌದು. 2008ರಲ್ಲಿ ತಮಿಳಿನ ತೋಡಕ್ಕಮ್‌ ಸಿನಿಮಾದಲ್ಲಿನ ಹಾಡಿಗೂ ಧ್ವನಿ ನೀಡಿ, ಹಾಡುಗಾರ ಎಂದೂ ಗುರುತಿಸಿಕೊಂಡಿದ್ದರು. ಆದರೆ, ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಕುಡಿತಕ್ಕೆ ದಾಸರಾಗಿ, ತಮ್ಮ 50ನೇ ವಯಸ್ಸಿಗೆ (2008ರಲ್ಲಿ)ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ರಘುವರನ್‌ ಅವರ ಪತ್ನಿಯೂ ಖ್ಯಾತ ನಟಿ. ಇವರಿಗೆ ಒಬ್ಬ ಮಗನೂ ಇದ್ದಾನೆ.

ನಟಿ ರೋಹಿಣಿ ಜತೆ ಮದುವೆ, ವಿಚ್ಛೇದನ..

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್‌ ತಾಯಿಯಾಗಿ ನಟಿಸಿದ್ದ ರೋಹಿಣಿ ಮೊಲ್ಲೇಟಿ ಜತೆಗೆ 1996ರಲ್ಲಿ ರಘುವರನ್ ಮದುವೆಯಾಯಿತು. 1998ರಲ್ಲಿ ಈ ದಂಪತಿಗೆ ರಿಶಿವರನ್ ಎಂಬ ಮಗನನ್ನೂ ಪಡೆದರು. ಆದರೆ, ಒಂದಷ್ಟು ಕಾರಣಗಳಿಂದ ದಾಂಪತ್ಯ ಜೀವನದಲ್ಲಿ ಏರಿಳಿತ ಎದುರಾದವು. ತುಂಬಾ ಆತ್ಮೀಯರಾಗಿದ್ದ ಈ ಜೋಡಿ 2004ರಲ್ಲಿ ವಿಚ್ಛೇದನ ಪಡೆದು ದೂರವಾದರು. ಮಗ ರಿಷಿವರನ್‌ ಅಮ್ಮನ ಆರೈಕೆಯಲ್ಲಿಯೇ ಬೆಳೆದರು. ವಿಚ್ಛೇದನ ಬಳಿಕ ಸಿನಿಮಾಗಳಲ್ಲಿಯೇ ಮುಂದುವರಿದ ರೋಹಿಣಿ, ಇಂದಿಗೂ ಸೌತ್‌ನ ಖ್ಯಾತ ಪೋಷಕ ನಟಿಯಲ್ಲೊಬ್ಬರು.

ಥೇಟ್‌ ಅಪ್ಪನಂತೆಯೇ ಮಗ

ಇನ್ನು ನಟ ರಘುವರನ್‌ ಪುತ್ರ 26 ವರ್ಷದ ರಿಷಿವರನ್‌, ಥೇಟ್‌ ಅಪ್ಪನಂತೆಯೇ ನೀಳಕಾಯದ ಚೆಲುವ. ಅಪ್ಪ ಅಮ್ಮನಂತೆ ಸಿನಿಮಾರಂಗಕ್ಕೆ ಬಾರದ ರಿಶಿವರನ್‌, ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಇಂಗ್ಲಿಷ್‌ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ರಘುವರನ್‌ ಸಹ ಸಂಗೀತದಲ್ಲಿಯೇ ಹೆಚ್ಚು ಆಸಕ್ತಿ ಹೊಂದಿದ್ದರು. ಸಿನಿಮಾ ಅವಕಾಶಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಟನೆಯಲ್ಲಿಯೇ ಹೆಚ್ಚು ಬಿಜಿಯಾದರು. ಇದೀಗ ಅಪ್ಪನಂತೆಯೇ ಮಗ ಕೂಡ ಸಂಗೀತದಲ್ಲಿಯೇ ಮುಂದುವರಿಯುತ್ತಿದ್ದಾರೆ.

ಮಗ ರಿಷಿವರನ್‌ ಜತೆಗೆ ರೋಹಿಣಿ ಯೋಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ