logo
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ; ಇವರ ಕನ್ನಡದ ಪ್ರಸಿದ್ಧ ನಟ, ಸುಳಿವು- ಐಶ್ವರ್ಯದ ಸಮಾನಾರ್ಥಕ ಪದ

Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ; ಇವರ ಕನ್ನಡದ ಪ್ರಸಿದ್ಧ ನಟ, ಸುಳಿವು- ಐಶ್ವರ್ಯದ ಸಮಾನಾರ್ಥಕ ಪದ

Praveen Chandra B HT Kannada

Nov 13, 2023 10:59 AM IST

google News

Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ

    • Movie Quiz find actor name with photo: ಕನ್ನಡ ಸಿನಿತಾರೆಯರ ಬಾಲ್ಯದ ಫೋಟೋ ನೋಡಿದ ತಕ್ಷಣ ಸಾಕಷ್ಟು ಜನರು ಇದು ಇವರೇ ಎಂದು ಥಟ್‌ ಎಂದು ಹೇಳುತ್ತಾರೆ. ನಿಮಗೂ ಈ ಫೋಟೋ ನೋಡಿದಾಗ ಇದು ಯಾರೆಂದು ತಿಳಿಯಬಹುದು. ಹಾಗಾದರೆ, ಈ ಫೋಟೋದಲ್ಲಿರುವ ಮಗು ಯಾರೆಂದು ಹೇಳಿನೋಡೋಣ.
Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ
Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ (ಚಿತ್ರಕೃಪೆ: ಗೂಗಲ್‌)

ಬೆಂಗಳೂರು: ಈ ಫೋಟೋ ನೋಡಿದಾಗ ತಕ್ಷಣ ನಿಮಗೆ ಯಾರು ನೆನಪಾಗ್ತಾರೆ? ಎಲ್ಲೋ ನೋಡಿದ ನೆನಪಾಗುತ್ತಿದೆಯೇ? ಕನ್ನಡದ ಪ್ರಮುಖ ನಟರೊಬ್ಬರು ನೆನಪಾಗುತ್ತಾರೆಯೇ? ಯಾರಿದು? ಈ ಫೋಟೋ ಸಿನಿಮಾ ಕ್ಷೇತ್ರದ ಕುರಿತು ಸಾಕಷ್ಟು ಪರಿಚಯ ಇರುವವರಿಗೆ ತಿಳಿಯಬಹುದು. ಕನ್ನಡದ ಹಳೆಯ ಸಿನಿಮಾ ನೋಡುಗರಂತೂ ಇದು ಅವರೇ ಎಂದು ತಕ್ಷಣ ಹೇಳಿಬಿಡಬಹುದು. ಆದರೆ, ಸಿನಿಮಾ ಕ್ಷೇತ್ರದವರ ಕುರಿತು ಹೆಚ್ಚು ಗೊತ್ತಿಲ್ಲದವರಿಗೆ ತುಸು ಗೊಂದಲವಾಗಬಹುದು.

ಈ ಫೋಟೋ ಯಾರದ್ದು ಎಂದು ತಿಳಿಯುತ್ತಿಲ್ಲ. ಏನಾದರೂ ಸುಳಿವು ನೀಡಿ ಎಂದು ಹೇಳುವವರಿಗೆ ಒಂದು ಸುಳಿವು ನೀಡುತ್ತೇವೆ. ಇವರ ಹೆಸರು ಐಶ್ವರ್ಯದ ಸಮಾನಾರ್ಥಕ ಪದವಾಗಿದೆ. ಐಶ್ವರ್ಯದ ಸಮಾನಾರ್ಥಕ ಪದಗಳು ಯಾವುವು? ಆಸ್ತಿ, ಸ್ವತ್ತು, ಸಂಪತ್ತು ಇತ್ಯಾದಿಗಳು ಐಶ್ವರ್ಯದ ಸಮಾನಾರ್ಥಕ ಪದಗಳಾಗಿವೆ. ಈ ನಟ ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದರು. ಆದರೆ, ಅದು ಸುಳಿವಲ್ಲ. ಸ್ವತ್ತು ಕೂಡ ಸುಳಿವಲ್ಲ. ಸಂಪತ್ತು ಎನ್ನುವುದು ಪ್ರಮುಖ ಸುಳಿವು.

ನಿಮಗೆ ಸಂಪತ್‌ ಕುಮಾರ್‌ ಎಂದಾಗ ಈ ಮಗುವಿನ ಕುರಿತು ತಿಳಿಯಬಹುದು. ಸಂಪತ್‌ ಕುಮಾರ್‌ ಅವರು ಸೆಪ್ಟೆಂಬರ್‌ 18, 1950ರಲ್ಲಿ ಜನಿಸಿದರು. ಇವರ ತಂದೆ ಎಚ್‌ಎಲ್‌ ನಾರಾಯಣರಾವ್‌. ತಾಯಿ ಹೆಸರು ಕಾಮಾಕ್ಷಮ್ಮ. ಈಗ ಬಹುತೇಕರಿಗೆ ಈ ಸಂಪತ್‌ ಕುಮಾರ್‌ ಯಾರೆಂದು ತಿಳಿಯಬಹುದು. ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್‌ ಕಾಲೇಜಿನಲ್ಲಿ ಇವರು ಪದವಿ ವಿದ್ಯಾಭ್ಯಾಸ ಮಾಡಿದ್ದರು.

ಈಗ ಸಂಪತ್‌ ಕುಮಾರ್‌ ಯಾರೆಂದು ಶೇಕಡ 99ರಷ್ಟು ಓದುಗರಿಗೆ ತಿಳಿದುಬಂದಿರಬಹುದು. ಇನ್ನೂ ನಮಗೆ ತಿಳಿಯುತ್ತಿಲ್ಲ ಎಂದು ಹೇಳುವವರಿಗಾಗಿ ಈ ಸಂಪತ್‌ ಕುಮಾರ್‌ ಯಾರೆಂದು ತಿಳಿಸುತ್ತಿದ್ದೇವೆ. ಇವರು ಕನ್ನಡದ ಜನಪ್ರಿಯ ನಟ ದಿವಂಗತ ವಿಷ್ಣುವರ್ಧನ್‌. ಇವರ ಬಾಲ್ಯದ ಹೆಸರು ಸಂಪತ್‌ ಕುಮಾರ್‌ ಎಂದಾಗಿತ್ತು.

ವಿಷ್ಣುವರ್ಧನ್‌ ಅವರು 1955ರಲ್ಲಿ ಶಿವಶರಣ ನಂಬೆಯಕ್ಕ ಎಂಬ ಚಿತ್ರದಲ್ಲಿ ಬಾಲ ನಟನಾಗಿ ನಟಿಸಿದ್ದರು. ಇದು 28 ದಿನದಲ್ಲಿ ಶೂಟಿಂಗ್‌ ಆದ ಕನ್ನಡದ ಮೊದಲ ಸಿನಿಮಾವಾಗಿದೆ. ಶಂಕರ್‌ ಸಿಂಗ್‌ರ ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್‌ರನ್ನು ಪರಿಚಯಿಸಿತು. ಕೋಕಿಲವಾಣಿ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಎಸ್‌ಎಲ್‌ ಭೈರಪ್ಪರ ಕಾದಂಬರಿಯಾಧಾರಿತ ವಂಶವೃಕ್ಷದಲ್ಲೂ ವಿಷ್ಣುವರ್ಧನ್‌ ಸಣ್ಣ ಪಾತ್ರದಲ್ಲಿ ನಟಿಸಿದ್ದರು.

ಪುಟ್ಟಣ ಕಣಗಾಲ್‌ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಇವರು ನಾಯಕನಟನಾಗಿ ಕಾಣಿಸಿಕೊಂಡರು. 1972ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ನಟಿಸಿದಾಗ ಸಂಪತ್‌ ಕುಮಾರ್‌ ಹೆಸರನ್ನು ವಿಷ್ಣುವರ್ಧನ್‌ ಎಂದು ಬದಲಾಯಿಸಲಾಯಿತು. ಅಲ್ಲಿಂದ ಬಳಿಕ ನಡೆದದ್ದು ಇತಿಹಾಸ. ಮಾಲ್ಗುಡಿಡೇಸ್‌ ಎಂಬ ಕಿರುತೆರೆ ಸೀರೀಸ್‌ನಲ್ಲೂ ನಟಿಸಿದ್ದರು. ಇದಾದ ಬಳಿಕ ಇವರು ನಟಿಸಿದ ಹಲವು ಚಿತ್ರಗಳ ಕುರಿತು ನಿಮಗೆ ತಿಳಿದಿರಬಹುದು. ಆಪ್ತಮಿತ್ರ, ಆಪ್ತರಕ್ಷಕ ಮುಂತಾದ ಚಿತ್ರಗಳು ನೆನಪಿಗೆ ಬರಬಹುದು. ಕಿಲಾಡಿ ಕಿಟ್ಟು, ನಾಗ ಕಾಳಭೈರವ, ಸಾಹಸಸಿಂಹ ಮುಂತಾದ ಹಲವು ಚಿತ್ರಗಳಿಗೆ ವಿಷ್ಣುವರ್ಧನ್‌ ಹಿನ್ನೆಲೆ ಗಾಯನವನ್ನೂ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ವಿಷ್ಣುವರ್ಧನ್‌ ಅವರು 2009ರ ಡಿಸೆಂಬರ್‌ 30ರಂದು ವಿಧಿವಶರಾದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ