logo
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ, ಇದು ಯಾವ ಸಿನಿಮಾದ ಹಾಡು ಹೇಳಿನೋಡೋಣ, ಇಲ್ಲಿದೆ ಒಲವೇ ಒಲವೇ ಕನ್ನಡ ಸಾಂಗ್‌ ಲಿರಿಕ್ಸ್‌

Movie Quiz: ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ, ಇದು ಯಾವ ಸಿನಿಮಾದ ಹಾಡು ಹೇಳಿನೋಡೋಣ, ಇಲ್ಲಿದೆ ಒಲವೇ ಒಲವೇ ಕನ್ನಡ ಸಾಂಗ್‌ ಲಿರಿಕ್ಸ್‌

Praveen Chandra B HT Kannada

Nov 18, 2023 04:55 PM IST

google News

ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ ಹಾಡಿನ ಗಾಯಕ ಶ್ರೀಲಕ್ಷ್ಮಿ ಬೆಳ್ಮಣ್ಣು

    • Kannada Film Songs- Movie Quiz: ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ ಎಂಬ ಒಲವೇ ಒಲವೇ ಹಾಡು ಇತ್ತೀಚಿನ ದಿನಗಳಲ್ಲಿ ನಿಮ್ಮ ಕಿವಿಗೆ ಬಿದ್ದಿರಬಹುದು. ಈ ಹಾಡು ಯಾವ ಸಿನಿಮಾದ ಗೀತೆಯೆಂದು ಬಹುತೇಕರಿಗೆ ತಿಳಿದಿರಬಹುದು. ಇನ್ನೂ ಈ ಹಾಡು ಯಾವ ಸಿನಿಮಾದ್ದು ಎಂದು ತಿಳಿಯದವರಿಗೆ ಇಲ್ಲೊಂದಿಷ್ಟು ವಿವರವಿದೆ. ಒಲವೇ ಒಲವೇ ಹಾಡಿನ ಕನ್ನಡ ಲಿರಿಕ್ಸ್‌ ಕೂಡ ಇಲ್ಲಿದೆ.
ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ ಹಾಡಿನ ಗಾಯಕ ಶ್ರೀಲಕ್ಷ್ಮಿ ಬೆಳ್ಮಣ್ಣು
ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ ಹಾಡಿನ ಗಾಯಕ ಶ್ರೀಲಕ್ಷ್ಮಿ ಬೆಳ್ಮಣ್ಣು

Kannada Film Songs Lyrics: ಇತ್ತೀಚಿನ ಕನ್ನಡ ಚಿತ್ರಗೀತೆಗಳಲ್ಲಿ ಅರ್ಥವಿಲ್ಲ, ಕೇಳಲು ಖುಷಿಯಾಗುವುದಿಲ್ಲ ಎಂಬೆಲ್ಲ ದೂರುಗಳಿವೆ. ಆದರೆ, ಕಳೆದ ಕೆಲವು ತಿಂಗಳಲ್ಲಿ ಬಿಡುಗಡೆಯಾದ ಕೆಲವು ಸಿನಿಮಾಗಳನ್ನು ನೋಡಿದರೆ ಈ ನಂಬಿಕೆ ಸುಳ್ಳಾಗಬಹುದು. ಮತ್ತೆಮತ್ತೆ ಗುನುಗುವಂತಹ, ಮತ್ತೆಮತ್ತೆ ಕೇಳುವಂತಹ, ಕಾಡುವಂತಹ, ಹಾಡಬೇಕೆನಿಸುವ ಹಲವು ಚಿತ್ರಗೀತೆಗಳು ಬಿಡುಗಡೆಯಾಗಿವೆ. ಅಂತಹ ಚಿತ್ರಗೀತೆಗಳಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರದ ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ ಹಾಡು ಕೂಡ ಪ್ರಮುಖವಾದದ್ದು.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರದಲ್ಲಿ ಹಲವು ಹಾಡುಗಳು ಇವೆ. ಅವುಗಳಲ್ಲಿ ಒಲವೇ ಒಲವೇ ಹಾಡು ಕೂಡ ಪ್ರಮುಖವಾದ್ದು. ಈ ಹಾಡು ಪ್ರಾರಂಭವಾಗುವುದು "ತಂಗಾಳಿಯ ಆಲಾಪಲೇ ಪಿಸುಮಾತಿನ ಶೃಂಗಾರವೇ" ಎಂದಾಗಿದೆ. ಕೇಳಲು ಹಿತವೆನಿಸುವ ಹಾಡಿದು. ಈ ಹಾಡಿಗೆ ಸಂಗೀತ ಸಂಯೋಜನೆಯನ್ನು ಚರಣ್‌ರಾಜ್‌ ಎಂಆರ್‌ ಮಾಡಿದ್ದು, ಶ್ರೀಲಕ್ಷ್ಮಿ ಬೆಳ್ಮಣ್ಣು ಮಧುರ ಕಂಠದಲ್ಲಿ ಹಾಡಿದ್ದಾರೆ. ಈ ಹಾಡನ್ನು ಬಿಆರ್‌ ಸುವರ್ಣ ಶರ್ಮಾ ರಚಿಸಿದ್ದಾರೆ. ಸುನಿಲ್‌ ಸಿಲ್ವರಸ್ಟರ್‌ ಗಿಟಾರ್‌, ಶೃತಿ ರಾಜ್‌ ತಬಲ, ಭವನಿ ಶಂಕರ್‌ ಸ್ಲೈಡ್‌ ಗಿಟರ್‌ ನುಡಿಸಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ "ಒಲವೇ ಒಲವೇ" ಹಾಡಿನ ಲಿರಿಕ್ಸ್‌ (Olave Olave sapta sagaradaache ello lyrics)

ಈ ಹಾಡನ್ನು ಈಗಾಗಲೇ ಹಲವು ಬಾರಿ ನೀವು ಕೇಳಿರಬಹುದು. ನೀವು ಕೂಡ ಹಾಡಲು ಪ್ರಯತ್ನಿಸಿರಬಹುದು. ಈ ಹಾಡಿನ ಪೂರ್ತಿ ಲಿರಿಕ್ಸ್‌ ಬೇಕೆನ್ನುವವರಿಗೆ ಉಸಿರೇ ಉಸಿರೇ ಹಾಡಿನ ಪೂರ್ಣ ಲಿರಿಕ್ಸ್‌ ಅನ್ನು ಇಲ್ಲಿ ನೀಡಲಾಗಿದೆ. ಓದಿ, ಹಾಡಿ, ಎಂಜಾಯ್‌ ಮಾಡಿ.

ತಂಗಾಳಿಯ ಆಲಾಪವೇ

ಪಿಸುಮಾತಿನ ಶೃಂಗಾರವೇ

ಆಕಾಶದಾಚೆ ನಾ ನವಿಲಾಗಿ ಕುಣಿದೆ

ನನ್ನ ಹೆಜ್ಜೆಗೆ ನೀ ತಾಳವಲ್ಲವೇ

ಮನದಾಳದಿ ಗುನುಗೋ ಸಿಹಿಯಾದ ಸ್ವರದ

ನನ್ನ ಹಾಡಿನ ಶೃತಿ ನೀನೇ ಅಲ್ಲವೇ

ಒಲವೇ ಒಲವೇ ಒಲವೇ ಈ ನದಿಗೆ ಕಡಲಗಿರುವೆ.

ಒಲವೇ ಒಲವೇ ಒಲವೇ

ನನ್ನ ಈ ಜೀವನ ಮುಡಿಪಾಗಿಡುವೆ

ಆಆಆಆಆಆಆಆಆ..

ಬೆಟ್ಟ ಈ ನೋಟದಲಿ

ಸಾವಿರ ಮಾತಾಡುವೆ

ಕಂಗಳ ಈ ಬೆಳಕಿನಲಿ

ಚಿಮ್ಮುವ ಖುಷಿಯಾಗುವೆ

ಹಾರಡುವ ಈ ನನ್ನಯ ಸಂಭ್ರಮ ನೀನಾದೆ

ಈ ಭಾವದ ಅಂತರದ ಮಾಧುರ್ಯ ನೀನಾದೆ..

ಸಂಜೆಯ ಈ ರಾಗಕ್ಕೆ ಬಂದಿಹ ಬೆಳದಿಂಗಳೆ

ಮನದಾಳದಿ ಗುನುಗೋ ಸಿಹಿಯಾದ ಸ್ವರದ

ನನ್ನ ಹಾಡಿನ ಶೃತಿ ನೀನೇ ಅಲ್ಲವೇ

ಒಲವೇ ಒಲವೇ ಒಲವೇ ಈ ನಾಡಿಗೆ ಕಡಲಗಿರುವೆ..

ಒಲವೇ ಒಲವೇ ಒಲವೇ ನನ್ನ ಈ ಜೀವನ ಮುಡಿಪಾಗಿಡುವೆ.

ಆಆಆಆಆಆಆಆ

(ಹಾಡು ಚೆನ್ನಾಗಿದೆ ಅಲ್ವಾ, ಹಾಗಾದ್ರೆ ನೀವೊಮ್ಮೆ ಹಾಡಿ ನೋಡೋಣ).

ಒಲವೇ ಒಲವೇ ಹಾಡು ಇಲ್ಲಿದೆ ಕೇಳಿ

ಒಲವೇ ಒಲವೇ ಹಾಡು ಮಾತ್ರವಲ್ಲದೆ ಇನ್ನೂ ಹಲವು ಕಾಡುವ ಹಾಡುಗಳು ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿದೆ. ಸೈಡ್‌ ಬಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಎಂಬ ಟೈಟಲ್‌ ಟ್ರ್ಯಾಕ್‌ ಕೂಡ ಸಖತ್‌ ಹಿಟ್‌ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎಯಲ್ಲಿ ಕಡಲನ್ನು, ಕಾಲಾ ಕಾಯಿಸೊ, ಕಣ್ಮರೆಯ ಕಾಡೆ, ಸಾಗರದಾಚೆ ಇತ್ಯಾದಿ ಹಲವು ಹಾಡುಗಳಿವೆ. ಇದನ್ನು ಓದಿ: Movie Quiz: ಈ ಚಿತ್ರದಲ್ಲಿರುವ ಕುಮಾರ್‌ ಯಾರೆಂದು ಥಟ್‌ ಅಂತ ಹೇಳಿ; ಇವರ ಕನ್ನಡದ ಪ್ರಸಿದ್ಧ ನಟ, ಸುಳಿವು- ಐಶ್ವರ್ಯದ ಸಮಾನಾರ್ಥಕ ಪದ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ