logo
ಕನ್ನಡ ಸುದ್ದಿ  /  ಮನರಂಜನೆ  /  Movie Quiz: ಈ ಮುದ್ದು ಕಂದ ಯಾರೆಂದು ಬಲ್ಲಿರೇನು? ಇವರು ಕನ್ನಡದ ಪ್ರಸಿದ್ಧ ನಟ, ಸುಳಿವು- ಇವರ ಹೆಸರಲ್ಲಿ ಹಣತೆ ಇದೆ

Movie Quiz: ಈ ಮುದ್ದು ಕಂದ ಯಾರೆಂದು ಬಲ್ಲಿರೇನು? ಇವರು ಕನ್ನಡದ ಪ್ರಸಿದ್ಧ ನಟ, ಸುಳಿವು- ಇವರ ಹೆಸರಲ್ಲಿ ಹಣತೆ ಇದೆ

Praveen Chandra B HT Kannada

Nov 13, 2023 11:00 AM IST

google News

Movie Quiz: ಈ ಮುದ್ದು ಕಂದ ಯಾರೆಂದು ಬಲ್ಲಿರೇನು? ಇವರು ಕನ್ನಡದ ಪ್ರಸಿದ್ಧ ನಟ, ಸುಳಿವು- ಇವರ ಹೆಸರಲ್ಲಿ ಹಣತೆ ಇದೆ

    • Rare Photos of Sandalwood Actors: ಈ ಚಿತ್ರದಲ್ಲಿರುವ ಮುದ್ದು ಮಗುವಿನ ಫೋಟೋ ನೋಡಿದಾಗ ಇದು ಯಾರೆಂದು ನಿಮಗೆ ತಿಳಿದುಬಂದರೆ ನೀವು ನಿಜಕ್ಕೂ ಗ್ರೇಟ್‌. ಇವರ ಹೆಸರಲ್ಲಿ ಸವಾಲು ಇದೆ, ಇವರ ಹೆಸರಲ್ಲಿ ಬೆಳಕು ಇದೆ, ಇವರ ಹೆಸರಲ್ಲಿ ಉಯ್ಯಾಲೆ ಇದೆ, ಇವರು ಕನ್ನಡದ ಈಗಿನ ಪ್ರಮುಖ ನಟ. ಯಾರೆಂದು ಹೇಳಿ ನೋಡೋಣ.
Movie Quiz: ಈ ಮುದ್ದು ಕಂದ ಯಾರೆಂದು ಬಲ್ಲಿರೇನು? ಇವರು ಕನ್ನಡದ ಪ್ರಸಿದ್ಧ ನಟ, ಸುಳಿವು- ಇವರ ಹೆಸರಲ್ಲಿ ಹಣತೆ ಇದೆ
Movie Quiz: ಈ ಮುದ್ದು ಕಂದ ಯಾರೆಂದು ಬಲ್ಲಿರೇನು? ಇವರು ಕನ್ನಡದ ಪ್ರಸಿದ್ಧ ನಟ, ಸುಳಿವು- ಇವರ ಹೆಸರಲ್ಲಿ ಹಣತೆ ಇದೆ

ಬೆಂಗಳೂರು: ಕನ್ನಡ ಚಿತ್ರ ಕಲಾವಿದರ ಬಾಲ್ಯದ ಫೋಟೋಗಳನ್ನು ನೋಡುವಾಗ ಓ ಇವರೇ ಅವರಾ ಎಂದು ಅಚ್ಚರಿಯಾಗುತ್ತದೆ. ಕೆಲವೊಂದು ಫೋಟೋಗಳನ್ನು ನೋಡಿದ ತಕ್ಷಣ ಆ ಫೋಟೋದಲ್ಲಿ ಈಗಿನ ಯಾವುದಾದರೂ ಚಹರೆ ಕಾಣಿಸುತ್ತದೆ. ಇನ್ನು ಕೆಲವು ಫೋಟೋಗಳಲ್ಲಿ ಅಂತಹ ಲಕ್ಷಣ ಸುಲಭವಾಗಿ ಗೋಚರವಾಗದು. ಕನ್ನಡ ಸಿನಿಮಾ ಸುದ್ದಿ, ಮಾಹಿತಿ ತಿಳಿದಿರುವವರಿಗೆ ಸ್ಯಾಂಡಲ್‌ವುಡ್‌ ಕಲಾವಿದರ ಬಾಲ್ಯದ ಫೋಟೋಗಳನ್ನು ನೋಡುವಾಗ ತಕ್ಷಣ ಇವರು ಇದೇ ನಟ ಅಥವಾ ನಟಿ ಎಂದು ಗೊತ್ತಾಗಿ ಬಿಡುತ್ತದೆ. ಹಾಗಾದರೆ, ಈ ಚಿತ್ರದಲ್ಲಿರುವ ಮಗು ಯಾರು?

ಈ ಚಿತ್ರದಲ್ಲಿರುವ ಮುದ್ದಾದ ಮಗು ಯಾರೆಂದು ನಿಮಗೆ ಗೊತ್ತಾಗಿರಬಹುದು. ಅವರು ನಟಿಸಿದ ಹೊಸ ಚಿತ್ರ ಯಾವಾಗ ಬರುತ್ತದೆ ಎಂದು ಕಾಯುತ್ತಿರಬಹುದು. ಇದೇ ರೀತಿ ಇತ್ತೀಚೆಗೆ ಬಿಡುಗಡೆಯಾದ ಚಿತ್ರದಲ್ಲಿ ಇವರು ಅತಿಥಿ ಪಾತ್ರದಲ್ಲಿ ನಟಿಸಿದ್ದೂ ನಿಮಗೆ ನೆನಪಾಗಬಹುದು. ಆದರೆ, ಇವರು ಯಾರೆಂದು ತಿಳಿಯದೆ ಇರುವವರಿಗೆ ಹಲವು ಹೆಸರುಗಳು ನೆನಪಿಗೆ ಬರಬಹುದು. ಈ ಚಿತ್ರದಲ್ಲಿರುವ ಮಗು ಯಾರೆಂದು ಗೊತ್ತಿದೆ ಎನ್ನುವವರಿಗೆ ಮೊದಲಿಗೆ ನಮ್ಮ ಕಡೆಯಿಂದ ಶಹಬ್ಬಾಸ್‌. ಗೊತ್ತಿಲ್ಲದೆ ತಲೆ ಕೆಡಿಸಿಕೊಳ್ಳುವವರಿಗೆ ಸುಳಿವು ನೀಡೋಣ ಬನ್ನಿ.

ಈ ಲೇಖನದ ಹೆಡ್‌ಲೈನ್‌ನಲ್ಲಿ ತಿಳಿಸಿದಂತೆ ಇವರ ಹೆಸರಲ್ಲಿ ಹಣತೆ ಇದೆ. ಈ ದೀಪಾವಳಿ ಹಬ್ಬದ ಸಮಯದಲ್ಲಿ ಹಣತೆ ಎಂದಾಗ ಹಲವು ವಿಷಯಗಳು ನೆನಪಾಗಬಹುದು. ಹಣತೆ ಎಂದಾಕ್ಷಣ ಬೆಳಕು ನೆನಪಾಗಬಹುದು, ಲೈಟ್ಸ್‌ ನೆನಪಾಗಬಹುದು. ದೀಪಾವಳಿ ಹಬ್ಬದ ಗೂಡು ದೀಪ ನೆನಪಾಗಬಹುದು. ಅಯ್ಯೋ ಈ ಗೂಡು ದೀಪ ಸುಳಿವು ನೋಡಿದ ತಕ್ಷಣ ಆ ವ್ಯಕ್ತಿ ಯಾರೆಂದು ನೆನಪಾಗಿರಬಹುದು. ಇನ್ನೂ ಈ ಸುಳಿವಿನಲ್ಲೂ ನೆನಪಾಗದೆ ಇದ್ರೆ ಬೇಸರ ಮಾಡ್ಕೊಬೇಡಿ. ಇನ್ನಷ್ಟು ಸುಳಿವು ನೋಡೋಣ.

ಇವರ ಹೆಸರಲ್ಲಿ ಉಯ್ಯಾಲೆ ಇದೆ ಎಂದು ಈಗಾಗಲೇ ಹೇಳಿದ್ದೇವೆ. ಉಯ್ಯಾಲೆ ಎಂದರೆ ತೂಗುವ ಆಟಿಕೆ. ಮಕ್ಕಳಿಗೆ ತುಂಬಾ ಇಷ್ಟದ ವಸ್ತು. ಈ ರೀತಿ ಸುಳಿವು ನೀಡುವಾಗಲೇ ಅವರ ಹೆಸರಿನ ಒಂದು ಭಾಗ ಹೇಳಿಬಿಟ್ವಿ. ಆದರೂ ಗೊತ್ತಾಗಿಲ್ವ? ಇನ್ನೊಂದು ಸುಳಿವು ನೀಡುತ್ತೇವೆ. ಇದು ಅಂತಿಮ ಸುಳಿವು. ಇದಕ್ಕಿಂತ ಹೆಚ್ಚು ಸುಳಿವು ನಾವು ನೀಡೋದಿಲ್ಲ. ನಾವೇ ಉತ್ತರ ಹೇಳಿಬಿಡ್ತೇವೆ. ಅದಕ್ಕಿಂತ ಮೊದಲೇ ನೀವು ಉತ್ತರ ಹೇಳಬೇಕು. ಗೊತ್ತಾಯ್ತ. ಮುಂದಿನ ಸುಳಿವು, ಇವರ ಹೆಸರಿನಲ್ಲಿ ಸವಾಲು ಇದೆ. ಸವಾಲು ಎಂದಾಕ್ಷಣ ನಿಮಗೆ ಇಂಗ್ಲಿಷ್‌ ಪದ ಚಾಲೆಂಜ್‌ ನೆನಪಾದರೆ ಒಳ್ಳೆಯದು.

ಇಲ್ಲಿಗೆ ಸುಳಿವುಗಳು ಮುಗಿದಿವೆ. ಉತ್ತರ ಗೊತ್ತಾದವರಿಗೆ ಧನ್ಯವಾದಗಳು. ಇನ್ನೂ ಉತ್ತರ ತಿಳಿಯದವರು ನಿಮ್ಮಲ್ಲಿ ಯಾರೂ ಇರಲಿಕ್ಕಿಲ್ಲ. ಇವರ ಹೆಸರಲ್ಲಿ ಬೆಳಕು, ಹಣತೆ ಇದೆ ಎಂದಾಗ ನಿಮಗೆ ದೀಪ ನೆನಪಾಗಿದ್ರೆ ನಮ್ಮ ಸುಳಿವು ಸಾರ್ಥಕ. ಉಯ್ಯಾಲೆ ಅಂದಾಗ ನೆನಪಾಗದೆ ಇರಲಿಕ್ಕಿಲ್ಲ. ಉಯ್ಯಾಲೆ ಎಂದರೆ ತೂಗುವ ಆಟಿಕೆ ಅಂದ್ವಿ. ಅಲ್ಲಿ ತೂಗು ಇದೆ. ಮೊದಲಿನ ಸುಳಿವಿನಲ್ಲಿ ದೀಪವಿದೆ. ತೂಗುದೀಪ ಎಂದಾಕ್ಷಣ ನೆನಪಾಗದೆ ಇರುವುದೇ. ಇನ್ನೊಂದು ಸುಳಿವು ಸವಾಲು. ಚಾಲೆಂಜ್‌ ಎಂದಾಗ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ತೂಗುದೀಪ ನೆನಪಾಗದೆ ಇರುವರೇ.

ಹೌದು, ಇದು ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ತೂಗುದೀಪ ಅವರ ಬಾಲ್ಯದ ಫೋಟೋ. ಇವರು ತೂಗುದೀಪ್‌ ಶ್ರೀನಿವಾಸ್‌ ಹಿರಿಯ ಪುತ್ರ. 1977ರ ಫೆಬ್ರವರಿ 16ರಂದು ಪೊನ್ನಂಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ಜನಿಸಿದರು. ಇವರ ತಾಯಿ ಹೆಸರು ಮೀನಾ. ಇವರ ಬಾಲ್ಯದ ಹೆಸರು ಹೇಮಂತ್‌ ಕುಮಾರ್‌. ಇವರಿಗೂ ವಿಜಯಲಕ್ಷ್ಮಿಯವರಿಗೂ 2003ರಲ್ಲಿ ವಿವಾಹವಾಯಿತು. ಪುತ್ರನ ಹೆಸರು ವಿನೀಶ್‌. ದರ್ಶನ್‌ ಆರಂಭದಲ್ಲಿ ನೀನಾಸಂನಲ್ಲಿ ಅಭಿನಯದ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದರು. ಆರಂಭದಲ್ಲಿ ಲೈಟ್‌ಬಾಯ್‌ ಆಗಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಬಳಿಕ ಗೌರಿಶಂಕರ್‌ ಅವರ ಸಹಾಯಕನಾಗಿ, ಅಸಿಸ್ಟೆಂಟ್‌ ಕ್ಯಾಮರಾಮೆನ್‌ ಆಗಿ ಕಾರ್ಯನಿರ್ವಹಿಸಿದರು. 1997ರಲ್ಲಿ ಎಸ್‌ ನಾರಾಯಣ್‌ರ ಮಹಭಾರತ ಚಿತ್ರದಲ್ಲಿ ನಟಿಸಿದರು. ಬಳಿಕ ಡಿಟೆಕ್ಟಿವ್‌ ಚಂದ್ರಕಾಂತ ಎಂಬ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅಂಬಿಕಾ ಧಾರಾವಾಹಿಯಲ್ಲಿ ಇವರು ಜನಪ್ರಿಯತೆ ಪಡೆದರು. 2002ರಲ್ಲಿ ಮೆಜೆಸ್ಟಿಕ್‌ ಚಿತ್ರದ ಮೂಲಕ ದರ್ಶನ್‌ ನಾಯಕನಟನಾಗಿ ಕಾಣಿಸಿಕೊಂಡರು. ನಂತರದ್ದು ಇತಿಹಾಸ. ಈಗ ಚಾಲೆಂಜಿಂಗ್‌ ಸ್ಟಾರ್‌, ದಾಸ, ಡಿಬಾಸ್‌ ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್‌ ಕನ್ನಡದ ಪ್ರಮುಖ ನಟ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ