Sandalwood News: ನಟ ಸೂರಜ್ಗೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ 4 ದಿನಗಳ ನಂತರ ಹೇಳಲಾಯ್ತು; ಮಣಿಪಾಲ್ ಆಸ್ಪತ್ರೆ ವೈದ್ಯರು
Jul 02, 2023 12:20 PM IST
ಅಪಘಾತದಲ್ಲಿ ಮೊಣಕಾಲು ಕಳೆದುಕೊಂಡ ಧ್ರುವನ್
ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಸೂರಜ್ ಅವರ ಮೊಣಕಾಲನ್ನು ತೆಗೆಯಬೇಕಾಯ್ತು ಎಂದು ಆಸ್ಪತ್ರೆ ವೈದ್ಯ ಅಜಯ್ ಹೆಗಡೆ ಮಾಹಿತಿ ನೀಡಿದ್ದರು. ಅಲ್ಲದೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ ನಾಲ್ಕು ದಿನಗಳ ನಂತರ ಹೇಳಲಾಯ್ತು ಎಂದು ವೈದ್ಯರು ಅಪ್ಡೇಟ್ ನೀಡಿದ್ದಾರೆ.
ಇತ್ತೀಚೆಗೆ ಊಟಿಗೆ ಪ್ರವಾಸಕ್ಕೆ ತೆರಳುತ್ತಿದ್ದ ನಟ ಸೂರಜ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದರು. ಅವರ ಕಾಲಿಗೆ ದೊಡ್ಡ ಪೆಟ್ಟು ಬಿದ್ದಿದ್ದರಿಂದ ಅವರಿಗೆ ಕಾಲು ತೆಗೆಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ವೈದ್ಯರು ಹೇಳಿದ್ದರು. ಇದೀಗ ಆಸ್ಪತ್ರೆಯ ವೈದ್ಯರು ಸೂರಜ್ ಆರೋಗ್ಯದ ವಿಚಾರವಾಗಿ ಮತ್ತೊಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಸೂರಜ್ ಬುಲೆಟ್ನಲ್ಲಿ ಊಟಿಗೆ ಪ್ರವಾಸ ತೆರಳುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಟ್ರಾಕ್ಟರನ್ನು ಹಿಂದಿಕ್ಕಿ ಮುಂದೆ ಚಲಿಸುವಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಸೂರಜ್ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಅವರ ಕಾಲಿನ ಮೇಲೆ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದರು.
ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಸೂರಜ್ ಅವರ ಕಾಲನ್ನು ತೆಗೆಯಬೇಕಾಯ್ತು ಎಂದು ಆಸ್ಪತ್ರೆ ವೈದ್ಯ ಅಜಯ್ ಹೆಗಡೆ ಮಾಹಿತಿ ನೀಡಿದ್ದರು. ಅಲ್ಲದೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ ನಾಲ್ಕು ದಿನಗಳ ನಂತರ ಹೇಳಲಾಯ್ತು ಎಂದು ಅಪ್ಡೇಟ್ ನೀಡಿದ್ದಾರೆ. ಅಪಘಾತವಾದ ಕಾಲಿನ ಭಾಗದಲ್ಲಿ 6 ಇಂಚಿನಷ್ಟು ಮೂಳೆ ಹಾಗೂ ನರಗಳೇ ಇರಲಿಲ್ಲ, ಆದ್ದರಿಂದ ಕಾಲು ತೆಗೆಯುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಮೊಣಕಾಲನ್ನು ಕತ್ತರಿಸಿದ್ದನ್ನು ಅವರಿಗೆ 4 ದಿನಗಳ ನಂತರ ಹೇಳಲಾಯ್ತು. ಅವರಿಗೆ ಇನ್ನೂ ಚಿಕಿತ್ಸೆ ಅವಶ್ಯಕತೆ ಇದೆ. ಆದರೆ ಸೂರಜ್ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸೂರಜ್, ಪಾರ್ವತಮ್ಮ ರಾಜ್ಕುಮಾರ್ ಸಹೋದರನ ಮಗ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ಮೂಲಕ ಸೂರಜ್ ಧ್ರುವನ್ ಎಂದು ಹೆಸರು ಬದಲಿಸಿಕೊಂಡು ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟಿದ್ದರು. ಆದರೆ ಆ ಸಿನಿಮಾ ಬಿಡುಗಡೆಗೂ ಮುನ್ನವೇ ಸೂರಜ್ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವುದು ಬೇಸರದ ಸಂಗತಿ. ಘಟನೆಗೆ ಸಂಬಂಧಿಸಿದಂತೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳು
ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್ ಇನ್ನಿಲ್ಲ;30ನೇ ವಯಸ್ಸಿಗೆ ಸಾವನ್ನಪ್ಪಿದ ಬಾಡಿ ಬಿಲ್ಡರ್
ಜರ್ಮನಿ ಮೂಲದ ಜೋ ಲಿಂಡ್ನರ್ ಥಾಯ್ಲೆಂಡ್ನಲ್ಲಿ ನೆಲೆಸಿದ್ದರು. ಬಾಡಿ ಬಿಲ್ಡರ್ ಆಗಿದ್ದ ಈತ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕೂಡಾ ಗುರುತಿಸಿಕೊಂಡಿದ್ದರು. ಫ್ಯಾಷನ್ಗೆ ಕೂಡಾ ಇವರು ಹೆಸರಾಗಿದ್ದರು. ಆದರೆ ಕೇವಲ 30ನೇ ವಯಸ್ಸಿಗೆ ಅವರು ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಶ್ರೀದೇವಿ ರೇಖಾ ಕಾಸ್ಮೆಟಿಕ್ ಸುಂದರಿಯರು ಎಂದ ಮಮತಾ ಕುಲಕರ್ಣಿ; ನೀವೂ ಬೆತ್ತಲೆ ಫೋಟೋಶೂಟ್ ಮಾಡಿಸಿದ್ರಲ್ಲ ಎಂದ ನೆಟಿಜನ್ಸ್
ಮಮತಾ ಕುಲಕರ್ಣಿ ಈಗ ಸಿನಿಮಾಗಳಿಂದ ದೂರ ಉಳಿದಿದ್ದರೂ ಆಕೆಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ಕೆಲವು ದಿನಗಳಿಂದ ಅವರ ಹಳೆ ವಿಡಿಯೋವೊಂದು ವೈರಲ್ ಕೂಡಾ ಆಗುತ್ತಿದೆ. ಈ ವಿಡಿಯೋದಲ್ಲಿ ಮಮತಾ ಶ್ರೀದೇವಿ ಹಾಗೂ ರೇಖಾ ಕಾಸ್ಮೆಟಿಕ್ ಬ್ಯೂಟಿಗಳು ಎಂದು ಹೇಳಿರುವುದು ಈಗ ಭಾರೀ ಚರ್ಚೆಗೆ ಒಳಗಾಗುತ್ತಿದೆ. ಮಮತಾ ಕುಲಕರ್ಣಿ ಬಹಳ ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ವಿಡಿಯೋ ತುಣುಕಾಗಿದೆ. ಮಮತಾ ಕುಲಕರ್ಣಿ ಸ್ಟೋರಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.