logo
ಕನ್ನಡ ಸುದ್ದಿ  /  ಮನರಂಜನೆ  /  ವಯಸ್ಸು 48 ಆದರೇನಂತೆ ಈಗಲೂ ಮದುವೆ ಆಗಿ ಮಕ್ಕಳನ್ನು ಪಡೆಯುವ ಆಸೆ ಇದೆ;ಕುರುಬನ ರಾಣಿ ನಟಿ ನಗ್ಮಾ

ವಯಸ್ಸು 48 ಆದರೇನಂತೆ ಈಗಲೂ ಮದುವೆ ಆಗಿ ಮಕ್ಕಳನ್ನು ಪಡೆಯುವ ಆಸೆ ಇದೆ;ಕುರುಬನ ರಾಣಿ ನಟಿ ನಗ್ಮಾ

HT Kannada Desk HT Kannada

Sep 01, 2023 08:32 AM IST

google News

ಮದುವೆ ಬಗ್ಗೆ ನಟಿ ನಗ್ಮಾ ಪ್ರತಿಕ್ರಿಯೆ

  • ಸಮಯ ಕೈಗೂಡಿ ಬಂದರೆ ಖಂಡಿತ ಮದುವೆ ಆಗುತ್ತೇನೆ. ಅದು ನನಗೂ ಖುಷಿಯ ವಿಚಾರವೇ'' ಎಂದು ನಗ್ಮಾ ಉತ್ತರಿಸಿದ್ದಾರೆ. ನಗ್ಮಾ ಉತ್ತರ ಕೇಳಿದವರು, ಆದಷ್ಟು ಬೇಗ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತಿದ್ದಾರೆ.

ಮದುವೆ ಬಗ್ಗೆ ನಟಿ ನಗ್ಮಾ ಪ್ರತಿಕ್ರಿಯೆ
ಮದುವೆ ಬಗ್ಗೆ ನಟಿ ನಗ್ಮಾ ಪ್ರತಿಕ್ರಿಯೆ

ವಯಸ್ಸು 40 ದಾಟಿದರೂ ಇನ್ನೂ ಮದುವೆ ಆಗದ ಎಷ್ಟೋ ನಟ-ನಟಿಯರು ಚಿತ್ರರಂಗದಲ್ಲಿದ್ದಾರೆ. ಮದುವೆ ಬಗ್ಗೆ ಆಸಕ್ತಿ ಇಲ್ಲದ ಕಾರಣವೋ, ಇನ್ನೂ ಸೂಕ್ತ ಸಂಗಾತಿ ದೊರೆಯದೆ ಕಾರಣದಿಂದಲೋ ಕೆಲವರು ಇನ್ನೂ ಒಂಟಿಯಾಗಿದ್ದಾರೆ. ಅವರಲ್ಲಿ ಬಹುಭಾಷಾ ನಟಿ ನಗ್ಮಾ ಕೂಡಾ ಒಬ್ಬರು.

ರಾಜಕೀಯದಲ್ಲಿ ಬ್ಯುಸಿ

ನಗ್ಮಾ ಒಂದು ಕಾಲದಲ್ಲಿ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ ಸೌಂದರ್ಯ ಹಾಗೂ ನಟನೆಯಿಂದಲೇ ನಗ್ಮಾ ಯುವ ಮನಸ್ಸುಗಳ ಹೃದಯ ಗೆದ್ದ ಚೆಲುವೆ. ಸಿನಿಮಾ ರಂಗದಲ್ಲಿ ಟಾಪ್‌ ನಟಿಯಾಗಿದ್ದ ನಗ್ಮಾ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. 2008ರ ನಂತರ ನಗ್ಮಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಸದ್ಯಕ್ಕೆ ನಗ್ಮಾ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಮತ್ತೆ ನಟಿಸುವಂತೆ ಅಭಿಮಾನಿಗಳು ಎಷ್ಟು ಒತ್ತಾಯಿಸುತ್ತಿದ್ದರೂ ಈ ಬ್ಯೂಟಿ ಮಾತ್ರ ಮನಸ್ಸು ಮಾಡಿಲ್ಲ. ಅಂದ ಹಾಗೆ ನಗ್ಮಾಗೆ ಈಗ 48 ವರ್ಷ ವಯಸ್ಸು. ನಗ್ಮಾ ಸಹೋದರಿಯರಾದ ಜ್ಯೋತಿಕಾ ಹಾಗೂ ರೋಷ್ನಿ ಮದುವೆ ಆಗಿ ಸೆಟಲ್‌ ಆಗಿದ್ದರೂ ಹಿರಿಯಕ್ಕ ಮಾತ್ರ ಇನ್ನೂ ಮದುವೆ ಆಗದೆ ಉಳಿದಿದ್ದಾರೆ.

ಈಗಲೂ ಮದುವೆ ಆಗುವ ಆಸೆ ಇದೆ

ನಗ್ಮಾ ಎಲ್ಲಿ ಹೋದರೂ ಆಕೆಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕೂಡಾ ಅಭಿಮಾನಿಗಳು ನಗ್ಮಾಗೆ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. 48 ವರ್ಷವಾದರೂ ಇನ್ನೂ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ, ''ಮದುವೆ ಆಗಬಾರದು ಎಂದು ನನಗೂ ಯಾವತ್ತೂ ಅನ್ನಿಸಲಿಲ್ಲ, ಹಾಗೇ ನಾನು ಯೋಚನೆ ಕೂಡಾ ಮಾಡಿಲ್ಲ. ನನಗೂ ಸಂಗಾತಿ ಬೇಕು, ಮಕ್ಕಳನ್ನು ಹೆರಬೇಕೆಂಬ ಆಸೆ ಇದೆ. ಸಮಯ ಕೈಗೂಡಿ ಬಂದರೆ ಖಂಡಿತ ಮದುವೆ ಆಗುತ್ತೇನೆ. ಅದು ನನಗೂ ಖುಷಿಯ ವಿಚಾರವೇ'' ಎಂದು ನಗ್ಮಾ ಉತ್ತರಿಸಿದ್ದಾರೆ. ನಗ್ಮಾ ಉತ್ತರ ಕೇಳಿದವರು, ಆದಷ್ಟು ಬೇಗ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತಿದ್ದಾರೆ.

1990ರಲ್ಲಿ ಚಿತ್ರರಂಗಕ್ಕೆ ಬಂದ ಚೆಲುವೆ

ನಗ್ಮಾ ಮೊದಲ ಹೆಸರು ನಂದಿತಾ ಅರವಿಂದ ಮೊರಾರ್ಜಿ. ನಗ್ಮಾ ತಂದೆ ಹಿಂದು , ತಾಯಿ ಮುಸ್ಲಿಂ. 25 ಡಿಸೆಂಬರ್‌ 1974ರಲ್ಲಿ ನಗ್ಮಾ ಜನಿಸಿದರು. ಮುಂಬೈನಲ್ಲಿ ಓದು ಮುಗಿಸಿದ ನಗ್ಮಾ ಸಲ್ಮಾನ್‌ ಖಾನ್‌ ಜೊತೆ ಬಾಘಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 1990ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಇದಾದ ನಂತರ ಆಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಹಿಂದಿ ನಂತರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ ಭಾಷೆಗಳ ಸಿನಿಮಾಗಳಲ್ಲಿ ನಗ್ಮಾ ನಟಿಸಿದರು.

ಕನ್ನಡದ 3 ಸಿನಿಮಾಗಳಲ್ಲಿ ನಟನೆ

ಶಿವರಾಜ್‌ಕುಮಾರ್‌ ಜೊತೆ 'ಕುರುಬನ ರಾಣಿ' ಚಿತ್ರದಲ್ಲಿ ನಟಿಸುವ ಮೂಲಕ ನಗ್ಮಾ ಕನ್ನಡಕ್ಕೆ ಬಂದರು. ಈ ಚಿತ್ರದ ಟೈಟಲ್‌ ಸಾಂಗ್‌ ಇಂದಿಗೂ ಫೇಮಸ್‌, ರವಿಚಂದ್ರನ್‌ ಜೊತೆ 'ರವಿಮಾಮ', ಡಾ. ವಿಷ್ಣುವರ್ಧನ್‌ ಜೊತೆ 'ಹೃದಯವಂತ' ಸಿನಿಮಾಗಳಲ್ಲಿ ನಗ್ಮಾ ನಟಿಸಿದ್ದಾರೆ. 2008ರಲ್ಲಿ ತೆರೆ ಕಂಡ 'ಥೇಲಾ ನಂ 501' ಭೋಜ್‌ಪುರಿ ಸಿನಿಮಾ ನಂತರ ಆಕೆ ಬೇರೆ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ಸದ್ಯಕ್ಕೆ ನಗ್ಮಾ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ