logo
ಕನ್ನಡ ಸುದ್ದಿ  /  ಮನರಂಜನೆ  /  ಸಂಘರ್ಷದ ಕಥೆ ಹೇಳಲು ಬರ್ತಿದ್ದಾರೆ ನಿರೂಪ್‌, ಸಾಯಿಕುಮಾರ್;‌ ಸತ್ಯ ಸನ್ ಆಫ್ ಹರಿಶ್ಚಂದ್ರ ಶೀರ್ಷಿಕೆ ಫಸ್ಟ್‌ ಲುಕ್‌ ರಿಲೀಸ್‌

ಸಂಘರ್ಷದ ಕಥೆ ಹೇಳಲು ಬರ್ತಿದ್ದಾರೆ ನಿರೂಪ್‌, ಸಾಯಿಕುಮಾರ್;‌ ಸತ್ಯ ಸನ್ ಆಫ್ ಹರಿಶ್ಚಂದ್ರ ಶೀರ್ಷಿಕೆ ಫಸ್ಟ್‌ ಲುಕ್‌ ರಿಲೀಸ್‌

Feb 07, 2024 04:34 PM IST

google News

ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದಲ್ಲಿ ರಂಗಿತರಂಗ ಜೋಡಿ; ನಿರೂಪ್‌ಗೆ ತಂದೆಯಾದ ಸಾಯಿಕುಮಾರ್‌

    • ರಂಗಿತರಂಗ ಸಿನಿಮಾದಲ್ಲಿ ಮೋಡಿ ಮಾಡಿದ್ದ ನಿರೂಪ್‌ ಭಂಡಾರಿ ಮತ್ತು ಸಾಯಿಕುಮಾರ್‌, ಸುಮಾರು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಈ ಜೋಡಿಯ ಚಿತ್ರಕ್ಕೆ ಸತ್ಯ ಸನ್ ಆಫ್ ಹರಿಶ್ಚಂದ್ರ ಎಂಬ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಶೂಟಿಂಗ್‌ ಸಹ ಶುರುವಾಗಿದ್ದು, ಇದೀಗ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. 
ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದಲ್ಲಿ ರಂಗಿತರಂಗ ಜೋಡಿ; ನಿರೂಪ್‌ಗೆ ತಂದೆಯಾದ ಸಾಯಿಕುಮಾರ್‌
ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದಲ್ಲಿ ರಂಗಿತರಂಗ ಜೋಡಿ; ನಿರೂಪ್‌ಗೆ ತಂದೆಯಾದ ಸಾಯಿಕುಮಾರ್‌

Sathya Son of Harishchandra: ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿತ್ತು ನಿರ್ದೇಶಕ ಅನೂಪ್‌ ಭಂಡಾರಿ ಅವರ ರಂಗಿತರಂಗ ಸಿನಿಮಾ. ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ನಾಯಕನಾದರೆ, ಸಾಯಿಕುಮಾರ್‌ ಮಗದೊಂದು ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಇದೇ ಜೋಡಿ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದೆ. ಆ ಚಿತ್ರದ ಶೀರ್ಷಿಕೆಯೂ ಬಹಿರಂಗವಾಗಿದ್ದು, ಸತ್ಯ ಸನ್ ಆಫ್ ಹರಿಶ್ಚಂದ್ರ ಎಂಬ ಟೈಟಲ್‌ ಇಡಲಾಗಿದೆ.

‘ಅಂಕಿತ್ ಸಿನಿಮಾಸ್’ ನಿರ್ಮಾಣದ ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದ ಟೈಟಲ್ ಮತ್ತು ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ. ಸತ್ಯ ಸನ್ ಆಫ್ ಹರಿಶ್ಚಂದ್ರ ಈ ಚಿತ್ರದ ಶೀರ್ಷಿಕೆ. ಫಸ್ಟ್‌ ಲುಕ್‌ನಲ್ಲಿ ಮಗನಾಗಿ ನಿರೂಪ್ ಭಂಡಾರಿ, ಅಪ್ಪನಾಗಿ ಸಾಯಿ ಕುಮಾರ್ ಅವರ ಗತ್ತು ಕಂಡಿದೆ. ಈ ಫಸ್ಟ್ ಲುಕ್‌ನಲ್ಲಿ “ನನ್ನ ತಂದೆಯೇ ನನ್ನ ವಿಲನ್” ಅಡಿಬರಹವೂ ಇದೆ. ಅಂದಹಾಗೆ ಈ ಚಿತ್ರವನ್ನು ಸಚಿನ್ ನಿರ್ದೇಶನ ಮಾಡಲಿದ್ದಾರೆ.

ತಂದೆ ಮತ್ತು ಮಗನ ಕಥಾ ಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ಕನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಬಿಡುಗಡೆ ಮಾಡಿದ್ದಾರೆ. ಸತ್ಯ ಮತ್ತು ಸುಳ್ಳಿನ ಮಧ್ಯ ನಡೆಯುವ ಸಂಘರ್ಷದ ಕಥಾ ಹಂದರ ಹೊಂದಿರುವ ಸತ್ಯ ಸನ್ ಆಫ್ ಹರಿಶ್ಚಂದ್ರ ಸಿನಿಮಾ ಹಾಸ್ಯದ ಜತೆ ಹಾಗೂ ಸಾಂಸಾರಿಕ ಕಥಾವಸ್ತುವನ್ನು ಹೊಂದಿದ್ದು, ತೀರ್ಥಹಳ್ಳಿ ಮತ್ತು ಚನ್ನಗಿರಿಯ ಸುತ್ತಮುತ್ತಲು ಈ ಸಿನಿಮಾದ ಚಿತ್ರೀಕರಣವೂ ನಡೆಯುತ್ತಿದೆ. ಈ ಸಿನಿಮಾದ ತಾರಾಗಣದಲ್ಲಿ ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್, ಎಂ ಕೆ ಮಠ, ಚೇತನ್ ದುರ್ಗಾ ಮುಂತಾದವರು ನಟಿಸುತ್ತಿದ್ದಾರೆ.

ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರವನ್ನು ಸಚಿನ್ ವಾಲಿ ನಿರ್ದೇಶಿಸುತ್ತಿದ್ದು ಅಂಕಿತ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿದ್ದಾರೆ. ಮೂಲತಃ ಪುಣೆಯವರಾದ ಅಂಕಿತ್, ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಉಜ್ವಲ್ ಚಂದ್ರ ಸಂಕಲನ, ಜೋಹ ಕಬೀರ್ ವಸ್ತ್ರ ವಿನ್ಯಾಸ ಹಾಗೂ ಉಲ್ಲಾಸ್ ಹೈದೂರ್ ಕಲಾ ನಿರ್ದೇಶನವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ