logo
ಕನ್ನಡ ಸುದ್ದಿ  /  ಮನರಂಜನೆ  /  Prakash Raj: ದೇಹಕ್ಕಾದ ಗಾಯ ಸುಮ್ಮನಿದ್ರೂ ವಾಸಿಯಾಗುತ್ತೆ, ಸಮಾಜಕ್ಕಾದ ಗಾಯ ಸುಮ್ಮನಿದಷ್ಟು ಹೆಚ್ಚಾಗುತ್ತೆ: ಪ್ರಕಾಶ್‌ ರಾಜ್‌

Prakash Raj: ದೇಹಕ್ಕಾದ ಗಾಯ ಸುಮ್ಮನಿದ್ರೂ ವಾಸಿಯಾಗುತ್ತೆ, ಸಮಾಜಕ್ಕಾದ ಗಾಯ ಸುಮ್ಮನಿದಷ್ಟು ಹೆಚ್ಚಾಗುತ್ತೆ: ಪ್ರಕಾಶ್‌ ರಾಜ್‌

Feb 22, 2024 04:55 PM IST

google News

Prakash Raj: ದೇಹಕ್ಕಾದ ಗಾಯ ಸುಮ್ಮನಿದ್ರೂ ವಾಸಿಯಾಗುತ್ತೆ, ಸಮಾಜಕ್ಕಾದ ಗಾಯ ಸುಮ್ಮನಿದಷ್ಟು ಹೆಚ್ಚಾಗುತ್ತೆ: ಪ್ರಕಾಶ್‌ ರಾಜ್‌

    • ಬಹುಭಾಷಾ ನಟ ಪ್ರಕಾಶ್‌ ರಾಜ್.‌ ಮೋದಿ ಸರ್ಕಾರದ ಲೋಪಗಳನ್ನೂ ಎತ್ತಿ ತೋರಿಸುತ್ತಿರುತ್ತಾರೆ. ಇದೆಲ್ಲದರ ಜತೆಗೆ ಎಂದಿನಂತೆ ಸಿನಿಮಾ, ನಟನೆ, ರಂಗಭೂಮಿ, ತೋಟ, ಕೃಷಿ, ಮಡಿದಿ ಮತ್ತು ಮಕ್ಕಳು.. ಹೀಗೆ ಆ ಕಡೆಗೂ ಗಮನ ಹರಿಸಿರುತ್ತಾರೆ. ಇದೀಗ ಸದ್ದಿಲ್ಲದೆ ಫೋಟೋ ಹೆಸರಿನ ಸಿನಿಮಾವನ್ನು ಮೆಚ್ಚಿ ಅದನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. 
Prakash Raj: ದೇಹಕ್ಕಾದ ಗಾಯ ಸುಮ್ಮನಿದ್ರೂ ವಾಸಿಯಾಗುತ್ತೆ, ಸಮಾಜಕ್ಕಾದ ಗಾಯ ಸುಮ್ಮನಿದಷ್ಟು ಹೆಚ್ಚಾಗುತ್ತೆ: ಪ್ರಕಾಶ್‌ ರಾಜ್‌
Prakash Raj: ದೇಹಕ್ಕಾದ ಗಾಯ ಸುಮ್ಮನಿದ್ರೂ ವಾಸಿಯಾಗುತ್ತೆ, ಸಮಾಜಕ್ಕಾದ ಗಾಯ ಸುಮ್ಮನಿದಷ್ಟು ಹೆಚ್ಚಾಗುತ್ತೆ: ಪ್ರಕಾಶ್‌ ರಾಜ್‌

Prakash Raj: ಪ್ರಸುತತೆಯ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ಆಗಾಗ ತಮ್ಮ ಕೋಪತಾಪವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹೊರಹಾಕುತ್ತಿರುತ್ತಾರೆ ಬಹುಭಾಷಾ ನಟ ಪ್ರಕಾಶ್‌ ರಾಜ್.‌ ಮೋದಿ ಸರ್ಕಾರದ ಲೋಪಗಳನ್ನೂ ಎತ್ತಿ ತೋರಿಸುತ್ತಿರುತ್ತಾರೆ. ಇದೆಲ್ಲದರ ಜತೆಗೆ ಎಂದಿನಂತೆ ಸಿನಿಮಾ, ನಟನೆ, ರಂಗಭೂಮಿ, ತೋಟ, ಕೃಷಿ, ಮಡಿದಿ ಮತ್ತು ಮಕ್ಕಳು.. ಹೀಗೆ ಆ ಕಡೆಗೂ ಗಮನ ಹರಿಸಿರುತ್ತಾರೆ. ಇದೀಗ ಸದ್ದಿಲ್ಲದೆ ಫೋಟೋ ಹೆಸರಿನ ಸಿನಿಮಾವನ್ನು ಮೆಚ್ಚಿ ಅದನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಬುಧವಾರವಷ್ಟೇ ಫೋಟೋ ಚಿತ್ರದ ಟ್ರೇಲರ್‌ ಸಹ ರಿಲೀಸ್‌ ಆಗಿದೆ.

ಡಾಲಿ ಧನಂಜಯ್‌, ನಿರ್ದೇಶಕ ಲೂಸಿಯಾ ಪವನ್‌ ಕುಮಾರ್‌ ಸೇರಿ ಇಡೀ ಮಾಧ್ಯಮ ಬಳಗ ಶ್ರೀರಂಗಪಟ್ಟಣದ ಪ್ರಕಾಶ್‌ ರಾಜ್‌ ಒಡೆತನದ ನಿರ್ದಿಗಂತ ಫಾರ್ಮ್‌ ಹೌಸ್‌ನಲ್ಲಿ ಬೀಡು ಬಿಟ್ಟಿತ್ತು. ಎಲ್ಲರ ಸಮ್ಮುಖದಲ್ಲಿ ಪೋಟೋ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಇದೇ ವೇಳೆ ನಟ ಪ್ರಕಾಶ್‌ ರಾಜ್‌ ಸಿನಿಮಾ ಮತ್ತು ಸಮಾಜ ಎರಡರ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಹೀಗಿದೆ ಅವರು ಆಡಿದ ಮಾತು.

ಕೋವಿಡ್‌ ಪ್ಯಾಂಡಮಿಕ್‌ ಹಿನ್ನೆಲೆಯ ಸಿನಿಮಾ

"ನಮ್ಮ ದೇಹಕ್ಕೆ ಆದ ಗಾಯಗಳು ಇದೆಯಲ್ಲ. ಅದು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಇದೆಯಲ್ಲ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ಈ ಸಿನಿಮಾದಲ್ಲೂ ಅದೇ ಕಥೆಯನ್ನು ನಾವು ನೋಡಬಹುದು. ನನಗೆ ಉತ್ಸವ್ ಸಿನಿಮಾನಾ ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬಿಜಿಯಾಗಿದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟೂ ದುಃಖ ಬಂತು.

ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇದ್ದೇವು. ಇಡೀ ಪ್ರಪಂಚ ಲಾಕ್ ಡೌನ್ ಆಗಿದೆ ಎಲ್ಲಿ ಹೋಗುವುದು ಗೊತ್ತಿಲ್ಲ. ಹೋಗಲು ದಾರಿ ಗೊತ್ತಿಲ್ಲ. ಇದು ನಾವು ಲಾಕ್ ಡೌನ್‌ನಲ್ಲಿ ನೋಡಿದ ನೈಜ ಸ್ಥಿತಿ. ಲಾಕ್ ಡೌನ್ ಸಮಯದಲ್ಲಿ ಒಬ್ಬರು ಲಾರಿ, ಬಸ್ ತೆಗೆದುಕೊಂಡು ಹೋಗಿ ಯಾರನ್ನೂ ಮನೆಗೆ ತಲುಪಿಸುವ ಯೋಚನೆ ಮಾಡಿಲ್ಲ. ಈ ನೋವುಗಳನ್ನು ದಾಖಲೆ ಮಾಡ್ಬೇಕು ಅಂತಾ 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣಾ ಎಂದು ಇದನ್ನು ರಿಲೀಸ್ ಮಾಡಲು ನಿಂತೆವು ಎಂದರು.

ಪ್ಯಾನ್‌ ಇಂಡಿಯಾ ಪರಿಕಲ್ಪನೆಗೆ ಪ್ರಕಾಶ್‌ ರಾಜ್‌ ಮಾತು

"ನಾವು ಸಿನಿಮಾ ಪ್ಯಾನ್‌ ಇಂಡಿಯಾ, ಪ್ಯಾನ್‌ ಇಂಡಿಯಾ ಎಂದೆಲ್ಲ ಮಾತನಾಡುತ್ತೇವೆ. ಆದರೆ, ಅದು ಹಾಗಲ್ಲ. ಅಷ್ಟಕ್ಕೂ ಜನ ಪ್ಯಾನ್‌ ಇಂಡಿಯಾ ಆಗಿದ್ದಾರೆ. ಪ್ರೇಕ್ಷಕರು ಒಂದು ಕಂಟೆಂಟ್‌ ಅನ್ನು ಯಾವ ಭಾಷೆಯಲ್ಲಿದ್ದರೂ ನೋಡುವಂಥ ಪಕ್ವತೆಗೆ ಬಂದಿದ್ದಾರೆ. ಪ್ಯಾಂಡಮಿಕ್‌ ಬಳಿಕ ಮಲಯಾಳಂ ಸಿನಿಮಾಗಳನ್ನೂ ಎಲ್ಲರೂ ನೋಡುತ್ತಿದ್ದಾರೆ. ಕನ್ನಡದಲ್ಲೂ ಈ ಥರದ ಸಿನಿಮಾಗಳು ಬರ್ತಿವೆ. ಪ್ಯಾನ್‌ ಇಂಡಿಯಾ ಅಂದುಕೊಂಡು ಬೇರೆ ಭಾಷೆಗೆ ಸಿನಿಮಾ ಮಾಡುವುದು ಬೇರೆ. ನನ್ನ ನಂಬಿಕೆ ಏನೆಂದರೆ, ಕರ್ನಾಟಕದಲ್ಲಿ ಈ ಥರದ ಸಿನಿಮಾ ಬರುತ್ತೆ. ಅದು ಹೊರಗಡೆಯವರನ್ನೂ ಸೆಳೆಯುತ್ತೆ. ಅದಕ್ಕೂ ಮುನ್ನ ಇಂಥ ಸಿನಿಮಾಗಳನ್ನು ನಾವು ಸಂಭ್ರಮಿಸಬೇಕು.

ಇದು ನಿಧಾನವಾಗಿ ಹರಡುವ ಸಿನಿಮಾ. ಇದನ್ನ ಮತ್ತೆ ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡುವ ಅವಶ್ಯಕತೆಯಿಲ್ಲ. ಈಗಂತೂ ಹೊಸ ಹೊಸ ಹೀರೋಗಳು ಕಂಟೆಂಟ್‌ ಮೂಲಕ ಹುಟ್ಟಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್‌ ಸಿಕ್ಕರೆ, ಒಟಿಟಿಯಲ್ಲೂ ನೋಡಿಸಿಕೊಳ್ಳುತ್ತದೆ. ಹಾಗಾಗಿ ಇದು ಪ್ಯಾನ್‌ ಇಂಡಿಯಾ ಅಲ್ಲ, ಪ್ಯಾನ್‌ ವರ್ಲ್ಡ್‌ ಸಿನಿಮಾ" ಎಂದರು ಪ್ರಕಾಶ್‌ ರಾಜ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ