logo
ಕನ್ನಡ ಸುದ್ದಿ  /  ಮನರಂಜನೆ  /  Puneeth Rajkumar: ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅಪ್ಪು ಮಾಮನ ಆತ್ಮ ನೆಲೆಸಿದೆ; ಪುನೀತ್‌ ಬಗ್ಗೆ ವಿಜಯ್‌ ರಾಘವೇಂದ್ರ ಮಾತು

Puneeth Rajkumar: ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅಪ್ಪು ಮಾಮನ ಆತ್ಮ ನೆಲೆಸಿದೆ; ಪುನೀತ್‌ ಬಗ್ಗೆ ವಿಜಯ್‌ ರಾಘವೇಂದ್ರ ಮಾತು

Oct 29, 2023 11:38 AM IST

google News

Puneeth Rajkumar: ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅಪ್ಪು ಮಾಮನ ಆತ್ಮ ನೆಲೆಸಿದೆ; ಪುನೀತ್‌ ಬಗ್ಗೆ ವಿಜಯ್‌ ರಾಘವೇಂದ್ರ ಮಾತು

    • Puneeth Rajkumar Death Anniversary: ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಇಂದಿಗೆ (ಅ. 29) ಎರಡು ವರ್ಷ ಗತಿಸಿದವು. ಇದೀಗ ಇದೇ ಅಪ್ಪು ಮಾಮನ ಬಗ್ಗೆ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ ವಿಜಯ್‌ ರಾಘವೇಂದ್ರ. 
Puneeth Rajkumar: ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅಪ್ಪು ಮಾಮನ ಆತ್ಮ ನೆಲೆಸಿದೆ; ಪುನೀತ್‌ ಬಗ್ಗೆ ವಿಜಯ್‌ ರಾಘವೇಂದ್ರ ಮಾತು
Puneeth Rajkumar: ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅಪ್ಪು ಮಾಮನ ಆತ್ಮ ನೆಲೆಸಿದೆ; ಪುನೀತ್‌ ಬಗ್ಗೆ ವಿಜಯ್‌ ರಾಘವೇಂದ್ರ ಮಾತು

Puneeth Rajkumar: ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಬಾಲ ನಟನಾಗಿ, ನಾಯಕನಾಗಿ, ಗಾಯಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ, ಸಣ್ಣ ಮುನ್ಸೂಚನೆ ಕೊಡದೆ, ಒಂದು ಮುಂಜಾವು ಅಕಾಲಿಕವಾಗಿ ನಮ್ಮನ್ನೆಲ್ಲ ಬಿಟ್ಟು ಅಗಲಿದರು. ನಮ್ಮ ನಡುವೆ ಇಲ್ಲವಾಗಿ ಇಂದಿಗೆ ಎರಡು ವರ್ಷಗಳು ಉರುಳಿದವು. ದೈಹಿಕವಾಗಿ ಇಲ್ಲವಾದರೂ, ಮಾನಸಿಕವಾಗಿ ಕರುನಾಡ ಮನೆಮಂದಿಯ ಮನಗಳಲ್ಲಿ ಅವರು ಶಾಶ್ವತ. ಇದೇ ಅಪ್ಪು ಬಗ್ಗೆ ಅವರ ಜತೆಗೆ ಆಡಿ ಬೆಳೆದ ವಿಜಯ್‌ ರಾಘವೇಂದ್ರ ಮಾತನಾಡಿದ್ದಾರೆ.

ವಿಜಯ್‌ ರಾಘವೇಂದ್ರ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಮಾವನ ಮಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೊಡ್ಡ ಕುಟುಂಬ, ಹತ್ತಾರು ಮಕ್ಕಳು, ಒಟ್ಟಿಗೆ ಆಟ, ಒಟ್ಟಿಗೇ ಊಟ. ಪುನೀತ್‌ ಅವರನ್ನು ಚಿಕ್ಕಂದಿನಿಂದಲೇ ತುಂಬ ಹತ್ತಿರದಿಂದ ನೋಡಿದವರು ವಿಜಯ್‌ ರಾಘವೇಂದ್ರ, ಇದೀಗ ಎರಡನೇ ಪುಣ್ಯ ಸ್ಮರಣೆ ನಿಮಿತ್ತ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದ ಆಯ್ದ ಬರಹ ಇಲ್ಲಿದೆ.

ನೃತ್ಯಕ್ಕೆ ಮಾರ್ಗದರ್ಶನ

ನಟ ವಿಜಯ್‌ ರಾಘವೇಂದ್ರ ನಟನಾಗಿ ಮಾತ್ರವಲ್ಲದೆ, ಡಾನ್ಸ್‌ ಮತ್ತು ಸಂಗೀತದಲ್ಲೂ ಗುರುತಿಸಿಕೊಂಡಿದ್ದಾರೆ. ಇಂದಿಗೂ ಆಗಾಗ ಹಾಡನ್ನು ಗುನುಗುತ್ತಿರುತ್ತಾರೆ. ಡಾನ್ಸ್‌ ಶೋನ ತೀರ್ಪುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, "ಚಿಕ್ಕಂದಿನಿಂದಲೂ ನಾನು ಸಿನಿಮಾ, ಸಂಗೀತ ಮತ್ತು ಡಾನ್ಸ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಇದೆಲ್ಲದಕ್ಕೂ ನನಗೆ ಅಪ್ಪು ಮಾಮ ಅವರೇ ಪ್ರೇರಣೆ. ನನಗೆ ವೆಸ್ಟರ್ನ್‌ ಸಂಗೀತ ಮತ್ತು ಬ್ರೇಕ್‌ಡ್ಯಾನ್ಸ್ ಜಗತ್ತಿಗೆ ಪರಿಚಯಿಸಿದ್ದೇ ಪುನೀತ್ ಮಾಮ" ಎಂದಿದ್ದಾರೆ.

"ನಾನು ಪುನೀತ್ ರಾಜ್‌ಕುಮಾರ್ ಅವರ ಎಷ್ಟೋ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿದ ಅಸಂಖ್ಯಾತ ಸಂದರ್ಭಗಳಿವೆ. ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅದೃಷ್ಟವೂ ನನಗೆ ಸಿಕ್ಕಿದೆ. ಒಂದು ನಿರ್ದಿಷ್ಟ ಘಟನೆ ನನ್ನ ಹೃದಯದಲ್ಲಿ ಉಳಿದಿದೆ. ಅದು ದುಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ. ರಾಜಕುಮಾರ ಸಿನಿಮಾದ ಡ್ಯಾನ್ಸ್ ಅಪ್ಪು ಡ್ಯಾನ್ಸ್ ಹಾಡಿನ ಸಿಗ್ನೆಚರ್‌ ಸ್ಟೇಪ್ಸ್‌ ಹೇಳಿಕೊಡುವಂತೆ ವೇದಿಕೆ ಮೇಲೆಯೇ ಅವರನ್ನು ಕೇಳಿದ್ದೆ. ಇಬ್ಬರೂ ಒಟ್ಟಿಗೆ ಆ ಹಾಡಿಗೆ ಹೆಜ್ಜೆ ಹಾಕಿದ್ವಿ. ಅವರ ಪವರ್‌ಗೆ ಅವರೇ ಸರಿಸಾಟಿ. ಆ ಹಾಡಿನ ಸಿಗ್ನೇಚರ್‌ ಸ್ಟೇಪ್‌ ಹಾಕುವುದು ಅಷ್ಟು ಸುಲಭವೂ ಆಗಿರಲಿಲ್ಲ. ಅದು ನಿಜಕ್ಕೂ ಒಂದು ಸವಾಲು. ಆ ನೆನಪು ಇಂದಿಗೂ ಹಸಿರಾಗಿದೆ" ಎಂದಿದ್ದಾರೆ.

ನಮ್ಮ ಒಳ್ಳೇ ಕೆಲಸದಲ್ಲಿ ಅವರಿದ್ದಾರೆ

ಪುನೀತ್‌ ರಾಜ್‌ಕುಮಾರ್‌ ಎಲ್ಲರೆದೆಯಲ್ಲೂ ಸದಾ ಜೀವಂತ ಎಂದಿರುವ ವಿಜಯ್ ರಾಘವೇಂದ್ರ, “ಪುನೀತ್ ಮಾಮ ಜತೆ ಕಳೆದ ಪ್ರತಿ ಕ್ಷಣವೂ ನನ್ನ ನೆನಪಿನಲ್ಲಿ ಹಸಿರಾಗಿದೆ. ಅವರು ನನ್ನ ನೃತ್ಯ ಪಯಣದ ಶಾಶ್ವತ ಸ್ಫೂರ್ತಿ. ಅವರು ದೈಹಿಕವಾಗಿ ನಮ್ಮ ಜತೆಗಿಲ್ಲ ಅನಿಸುವುದೇ ಇಲ್ಲ. ನನ್ನ ದೈನಂದಿನ ಜೀವನದಲ್ಲಿ ಬೆರೆತಿದ್ದಾರೆ. ನಾವು ಮಾಡುವ ಪ್ರತಿ ಒಳ್ಳೇ ಕಾರ್ಯದಲ್ಲೂ ಅವರ ಆತ್ಮ ನೆಲೆಸಿದೆ” ಎಂದು ಹೇಳಿಕೊಂಡಿದ್ದಾರೆ ವಿಜಯ್.‌ 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ