logo
ಕನ್ನಡ ಸುದ್ದಿ  /  ಮನರಂಜನೆ  /  Ott Award: ಕನ್ನಡ ನಟ ರಕ್ಷಿತ್‌ ಶೆಟ್ಟಿಗೆ ಒಲಿದ ಒಟಿಟಿಪ್ಲೇ ಪ್ರಶಸ್ತಿ; ಪವನ್‌, ಹೇಮಂತ್‌ , ರಾಜ್‌, ರಿಷಬ್‌ಗೆ ಥ್ಯಾಂಕ್ಸ್‌ ಅಂದ್ರು ಶೆಟ್ರು

OTT Award: ಕನ್ನಡ ನಟ ರಕ್ಷಿತ್‌ ಶೆಟ್ಟಿಗೆ ಒಲಿದ ಒಟಿಟಿಪ್ಲೇ ಪ್ರಶಸ್ತಿ; ಪವನ್‌, ಹೇಮಂತ್‌ , ರಾಜ್‌, ರಿಷಬ್‌ಗೆ ಥ್ಯಾಂಕ್ಸ್‌ ಅಂದ್ರು ಶೆಟ್ರು

Praveen Chandra B HT Kannada

Oct 30, 2023 11:09 AM IST

google News

OTT Award: ಕನ್ನಡ ನಟ ರಕ್ಷಿತ್‌ ಶೆಟ್ಟಿಗೆ ಒಲಿದ ಒಟಿಟಿ ಪ್ಲೇ ಪ್ರಶಸ್ತಿ

    • ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿಗೆ ಪ್ರಶಸ್ತಿಯ ಸುರಿಮಳೆ ಮುಂದುವರೆದಿದೆ. ನಿನ್ನೆ ಮುಂಬೈನಲ್ಲಿ ನಡೆದ ಸುಂದರವಾದ ಕಾರ್ಯಕ್ರಮದಲ್ಲಿ ಕನ್ನಡ ನಟ ರಕ್ಷಿತ್‌ ಶೆಟ್ಟಿ ಅವರಿಗೆ ಒಟಿಟಿ ಪ್ಲೇ ಪ್ರಶಸ್ತಿ 2023 (OTTplay Awards 2023) ನೀಡಲಾಗಿದೆ. "ಹೊಸ ಅಲೆಯ ಸಿನಿಮಾಗಳನ್ನು ನೀಡಿರುವುದಕ್ಕೆ" ರಕ್ಷಿತ್‌ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
OTT Award: ಕನ್ನಡ ನಟ ರಕ್ಷಿತ್‌ ಶೆಟ್ಟಿಗೆ ಒಲಿದ ಒಟಿಟಿ ಪ್ಲೇ ಪ್ರಶಸ್ತಿ
OTT Award: ಕನ್ನಡ ನಟ ರಕ್ಷಿತ್‌ ಶೆಟ್ಟಿಗೆ ಒಲಿದ ಒಟಿಟಿ ಪ್ಲೇ ಪ್ರಶಸ್ತಿ

ಬೆಂಗಳೂರು: 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ, ಕಿರಿಕ್‌ ಪಾರ್ಟಿ, ಅವನ್ನೇ ಶ್ರೀಮನ್ನರಾಯಣ, ಉಳಿದವರು ಕಂಡಂತೆ ಮುಂತಾದ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ ರಕ್ಷಿತ್‌ ಶೆಟ್ಟಿಗೆ 2023ನೇ ಸಾಲಿನ ಒಟಿಟಿಪ್ಲೇ ಪ್ರಶಸ್ತಿ ದೊರಕಿದೆ. ಅಕ್ಟೋಬರ್‌ 29, 2023ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟಿಟಿ ಪ್ಲೇಯ ಸಹ ಸ್ಥಾಪಕರಾದ ಅವಿನಾಶ್‌ ಮೊದಲಿಯರ್‌ ಅವರು ಸ್ವತಃ ರಕ್ಷಿತ್‌ ಶೆಟ್ಟಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.

ಕನ್ನಡಿಗರಿಗೆ ಧನ್ಯವಾದ ಹೇಳಿದ ರಕ್ಷಿತ್‌ ಶೆಟ್ಟಿ

"ಸಿನಿಮಾ ನಿರ್ಮಾಣ ಜಗತ್ತಿನ ಅತ್ಯುತ್ತಮ ಉದ್ಯೋಗ. ನನಗೆ ಸಿನಿಮಾ ಮಾಡಲು ವೇದಿಕೆ ನೀಡಿದ ಕನ್ನಡ ಪ್ರೇಕ್ಷಕರಿಗೆ ನಾನು ಧನ್ಯವಾದ ತಿಳಿಸುವೆ. ಉದ್ಯಮದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಹೊಸ ಅಲೆ ತರಲು ಸಾಧ್ಯವಾಗದು. ಪವನ್‌ ಕುಮಾರ್‌, ಹೇಮಂತ್‌ ರಾವ್‌, ರಾಜ್‌ ಬಿ ಶೆಟ್ಟಿ, ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಕನ್ನಡ ಸಿನಿಮಾ ನಿರ್ದೇಶಕರಿಗೆ ಈ ಅಲೆಯ ಭಾಗವಾಗಿರುವುದಕ್ಕೆ ಧನ್ಯವಾದ ತಿಳಿಸುವೆ" ಎಂದು 40 ವರ್ಷದ ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ನಟರಾಗಿ ಮತ್ತು ಸಿರ್ಮಾಪಕರಾಗಿ ರಕ್ಷಿತ್‌ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ಇವರಿಗೆ ಪಯೋನಿರಿಂಗ್‌ ಕಾಂಟ್ರಿಬ್ಯೂಷನ್‌ ಟು ನ್ಯೂ ವೇವ್‌ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಒಟಿಟಿಪ್ಲೇಯು ಕನ್ನಡ ಕಲಾವಿದರಿಗೆ ಪ್ರಶಸ್ತಿ ನೀಡುವ ಎರಡನೇ ಸಂದರ್ಭ ಇದಾಗಿದೆ. 2022ರಲ್ಲಿ ಒಟಿಟಿಪ್ಲೇ ಪ್ರಶಸ್ತಿಗಳ ಉದ್ಘಾಟನಾ ಆವೃತ್ತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರಗಳನ್ನು ನೀಡಿರುವುದಕ್ಕೆ ರಕ್ಷಿತ್‌ ಅವರಂತೆ ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿಯನ್ನು ಗೌರವಿಸಲಾಗಿತ್ತು.

ಸುಮಾರು ಒಂದು ದಶಕದ ಹಿಂದೆ ಕನ್ನಡ ಚಿತ್ರರಂಗಕ್ಕೆ ನಟ ರಕ್ಷಿತ್‌ ಶೆಟ್ಟಿ ಪದಾರ್ಪಣೆ ಮಾಡಿದ್ದರು. ಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿಂಪಲ್‌ ಲವ್‌ ಸ್ಟೋರಿಯು ಸಾಕಷ್ಟು ಜನಪ್ರಿಯತೆ ಪಡೆದಿತ್ತು. 2013ರ ಉಳಿದವರು ಕಂಡಂತೆ ಚಿತ್ರದಲ್ಲಿ ಇವರು ಸಾಕಷ್ಟು ಗಮನ ಸೆಳೆದಿದ್ದರು. ರಕ್ಷಿತ್‌ ಶೆಟ್ಟಿ ಬರೆದು ನಿರ್ದೇಶಿಸಿದ ಉಳಿದವರು ಕಂಡಂತೆ ಚಿತ್ರದಿಂದ ಇವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ರಿಚ್ಚಿ ಪಾತ್ರದಲ್ಲಿ ಇವರು ಸೆಳೆದಿದ್ದರು.

ಇದಾದ ಬಳಿಕ ರಿಷಬ್‌ ಶೆಟ್ಟಿ ನಿರ್ದೇಶನದ 2016ರ ಕಿರಿಕ್‌ ಪಾರ್ಟಿ ಚಿತ್ರವು ರಕ್ಷಿತ್‌ ಶೆಟ್ಟಿಗೆ ದೊಡ್ಡ ಸಕ್ಸಸ್‌ ತಂದುಕೊಟ್ಟಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಬಳಿಕ ರಕ್ಷಿತ್‌ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಂಡರು. ಅವರು ತನ್ನ ಸ್ವಂತ ನಿರ್ಮಾಣ ಸಂಸ್ಥೆಯಾದ ಪರಂವಾ ಮೂಲಕವೂ ಹಲವು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.

2022ರಲ್ಲಿ ಬಿಡುಗಡೆಗೊಂಡ 77 ಚಾರ್ಲಿ ಸಿನಿಮಾವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಗಳಿಸಿತ್ತು. ಕಿರಣರಾಜ್‌ ಕೆ ಚಿತ್ರವು 69ನೇಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡ ಅತ್ಯುತ್ತಮ ಚಲನಚಿತ್ರ ಎಂದು ಗುರುತಿಸಲ್ಪಟ್ಟಿತ್ತು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಭಾಗ 1 ಬಿಡುಗಡೆಯಾಗಿದ್ದು, ಸೈಡ್‌ ಬಿ ಇದೇ ನವೆಂಬರ್‌ 17ರಂದು ಬಿಡುಗಡೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ